ಕಾರಿನಲ್ಲೇ ಕಣ್ಣೀರು ಹಾಕಿದ ಶಂಕರ್ ಅಶ್ವಥ್ ತಂದೆಯನ್ನು ನೆನೆಯುತ್ತ ಮಾತನಾಡಿದ್ದಾರೆ

0
385

ಕನ್ನಡ ಚಿತ್ರರಂಗದಲ್ಲಿ ಸಿ ಅಶ್ವಥ್ ಅವರು ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದರು. ನಾಗರಹಾವು ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಇವರು ನಟಿಸಿದ್ದು, ಇಂದಿಗೂ ಸಹ ಆ ಪಾತ್ರವು ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ ಎಂದರೆ ತಪ್ಪಾಗಲಾರದು. ಇನ್ನು ಇವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಚಿತ್ರರಂಗದ ಮೇರು ಕಲಾವಿದರ ಸಾಲಿನಲ್ಲಿ ಇವರ ಸಿ ಅಶ್ವಥ್ ಅವರ ಹೆಸರು ಸಹ ಸೇರ್ಪಡೆಯಾಗುತ್ತದೆ. ಸಿ ಅಶ್ವಥ್ ಅವರ ಮಗನಾದ ಶಂಕರ್ ಅಶ್ವಥ್ ಬಹಳ ಏಳು ಬೀಳುಗಳ ನಂತರ ಮತ್ತೊಮ್ಮೆ ಸಿನಿಜಗತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇವರು ಊಬರ್ ಕಾರ್ ಡ್ರೈವರ್ ಕೆಲಸವನ್ನು ಮಾಡುತ್ತಿದ್ದು, ಕಾರ್ ನಲ್ಲಿಯೆ ಬಹಳ ಮನನೊಂದು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ

ನನಗೆ ರಾಜ, ಭಗವಂತ ಎಲ್ಲ ನಮ್ಮ ತಂದೆಯೇ ಆಗಿದ್ದರು

ಶಂಕರ್ ಅಶ್ವಥ್ ಇಂದಿಗೂ ಸಹ ಅಪ್ಪನ ಮಾರ್ಗದರ್ಶನವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ತಮ್ಮ ಕಾರ್ ನಲ್ಲಿ ತಂದೆಯ ಫೋಟೋ ಅನ್ನು ಹಾಕಿಕೊಂಡಿದ್ದು, ಇಂದಿಗೂ ಅವರನ್ನು ಆರಾಧಿಸುತ್ತಾರೆ. ಪ್ರತಿನಿತ್ಯ ಬೆಳಿಗ್ಗೆ ಎದ್ದು ಅಪ್ಪನ ಫೋಟೋ ನೋಡಿದ ನಂತರ ತಮ್ಮ ಕೆಲಸವನ್ನು ಶುರು ಮಾಡುತ್ತಾರೆ. ಆದರೆ ಅಪ್ಪನನ್ನು ನೆನೆದು ಕೊಂಚ ಭಾವುಕರಾಗಿದ್ದರು. ರಾಜನನ್ನು ಪ್ರಜೆಗಳು ದೇವರೆಂದು ಕರೆಯುತ್ತಾರೆ. ಆದರೆ ನನಗೆ ರಾಜ, ಭಗವಂತ ಎಲ್ಲ ನಮ್ಮ ತಂದೆಯೇ ಆಗಿದ್ದರು. ಅಂಗಡಿಯೆಲ್ಲಾ ಕಳೆದುಕೊಂಡಿರುವ ಸಂದರ್ಭದಲ್ಲಿ ನನ್ನ ಹತ್ತಿರ ಒಂದು ನಯಾ ಪೈಸಾ ಸಹ ಇರಲಿಲ್ಲ.

ಕಣ್ಣೀರನ್ನು ಹಾಕಿದರು ಶಂಕರ್ ಅಶ್ವಥ್

ಸ್ನೇಹಿತರಿಂದ ಹಿಡಿದು ಪ್ರತಿಯೊಬ್ಬರೂ ಸಹ ನನ್ನನ್ನು ಕೀಳು ಮಟ್ಟದಲ್ಲಿ ನೋಡಲು ಶುರು ಮಾಡಿದ್ದು, ನನ್ನನ್ನು ಅವಮಾನಿಸಿದ್ದರು. ಇವರ ತಂದೆ ಮಾತ್ರ ಒಂದು ಮಾತನ್ನು ಸಹ ಬೈದಿರಲಿಲ್ಲವಂತೆ. ನಾನು ನಿನಗೆ ಭಾರವಾಗಿದ್ದೀನಾ ಅಪ್ಪ ಎಂದು ಕೇಳಿದಾಗ? ಯಾಕೋ ಈ ರೀತಿ ಅಂದುಕೊಳ್ಳುತ್ತೀಯಾ ಅಂತ ಭರವಸೆ ನೀಡಿ, ಧೈರ್ಯ ತುಂಬಿ ಜೀವನವನ್ನು ಹೇಗೆ ನಡೆಸಬೇಕೆಂದು ಹೇಳಿಕೊಟ್ಟಿದ್ದರಂತೆ. ಆದ್ದರಿಂದ ಇಂದಿಗೂ ನನಗೆ ಅವರೇ ದೇವರು ಎಂದು ಹೇಳುವ ಮೂಲಕ ಕಣ್ಣೀರನ್ನು ಹಾಕಿದರು ಶಂಕರ್ ಅಶ್ವಥ್.

ಮಾದ್ಯಮದವರು ಮತ್ತು ಚಿತ್ರರಂಗದ ಕಲಾವಿದರು ಪ್ರೋತ್ಸಾಹಿಸಿದ್ದರು

ಕನ್ನಡ ಚಿತ್ರರಂಗದಲ್ಲಿ ಶಂಕರ್ ಅಶ್ವಥ್ ಕಾಣಿಸಿಕೊಳ್ಳದೆ ಬಹಳ ವರ್ಷಗಳೇ ಕಳೆದುಹೋಗಿತ್ತು. ಇವರು ಯಾವಾಗ ಸಾಮಾಜಿಕ ಜಾಲ ತಾಣಗಳಲ್ಲಿ ಓಲಾ ಕ್ಯಾಬ್ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರೋ ಆಗ ಮಾದ್ಯಮದವರು ಮತ್ತು ಚಿತ್ರರಂಗದ ಕಲಾವಿದರು ಇವರನ್ನು ಪ್ರೋತ್ಸಾಹಿಸಿದ್ದರು. ಇದಾದ ಬಳಿಕ ನನಗೆ ಸಿನಿಮಾಗಳಲ್ಲಿ ಹೆಚ್ಚು ನಟಿಸುವ ಅವಕಾಶ ಸಿಕ್ಕಿದ್ದು ಎಂದು ಶಂಕರ್ ಅಶ್ವಥ್ ಅವರು ಹೇಳಿದ್ದಾರೆ.

ನನ್ನ ಜೀವನಕ್ಕೆ ನಾನೆ ಹೊಣೆ

ನಾನು ಕ್ಯಾಬ್ ಓಡುಸುತ್ತಿರೋ ವಿಷಯ ಬೆಳಕಿಗೆ ಬಂದ ಮೇಲೆ ಮಾದ್ಯಮದವರು ತೋರಿದ ಗೌರವವನ್ನು ನಾನು ಮರೆಯೋದಿಲ್ಲ. ಸಿನಿಮಾ ಇಂಡಸ್ಟ್ರಿ ಅವರನ್ನು ಸಹ ನಾನು ದೂರುವುದಿಲ್ಲ. ನನ್ನ ಜೀವನಕ್ಕೆ ನಾನೆ ಹೊಣೆ. ಸಿನಿಮಾ ರಂಗಕ್ಕೆ ಬಂದು 30 ವರ್ಷ ಆಗುತ್ತ ಬಂತು. ಸ್ಯಾಂಡಲ್ ವುಡ್ ನಲ್ಲಿ ಲಾಂಗೆಸ್ಟ್ ಪಿರಿಯಡ್ ಇದ್ದಿದ್ದು ಅಂದ್ರೆ ಈಗ ಎಂದು ಹೇಳುವ ಮೂಲಕ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here