ಡಾ.ರಾಜ್ ಅವರಿಂದ ಪಡೆದ ಸಹಾಯದ ಗುಟ್ಟನ್ನು ಬಿಚ್ಚಿಟ್ಟ ಶಂಕರ್ ಅಶ್ವಥ್

0
672
raj and ashvath

ಕನ್ನಡ ಚಿತ್ರರಂಗದಲ್ಲಿ ಸದಾಕಾಲ ನೆನಪಿನಲ್ಲಿರುವ ಹೆಸರು ಅಂದ್ರೆ ಅದು ಡಾ.ರಾಜ್ ಕುಮಾರ್ ಅವರದ್ದು. ಯಾಕಂದ್ರೆ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲದೆ, ತಮ್ಮಲ್ಲಿರುವ ವಿಶೇಷ ಗುಣಗಳಿಂದ ಅವರು ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೌದು. ಅಣ್ಣಾವ್ರು ಅಂದ್ರೆ ಸಿನಿಮಾ ಮಾಡುವುದರಲ್ಲಿ ಮಾತ್ರ ಮೊದಲಿಗರಲ್ಲ. ಸಹಾಯ ಮಾಡುವುದರಲ್ಲೂ ಸಹ ಅವರು ಎತ್ತಿದ ಕೈ. ಆದ್ರೆ ಅದಕ್ಕೆ ಪುರಾವೆಗಳಿರುವುದು ಕಡಿಮೆ. ಯಾಕಂದ್ರೆ ಅಣ್ಣಾವ್ರಿಗೆ ಸಹಾಯ ಮಾಡುವ ಮನಸ್ಸು ಎಷ್ಟಿತ್ತೊ, ಆ ವಿಷಯ ಯಾರಿಗೂ ತಿಳಿಯಬಾರದು ಎನ್ನುವುವುದು ಸಹ ಗೊತ್ತಿತ್ತು. ಯಾಕಂದ್ರೆ ಬಲಗೈಯಲ್ಲಿ ಮಾಡಿದ ದಾನ, ಎಡಗೈಗೂ ಗೊತ್ತಾಗಬಾರದು ಅನ್ನೋದು ಅಣ್ಣಾವ್ರ ಉದ್ದೇಶ. ಹಾಗಾಗಿ ತಾವು ಮಾಡಿದ ಸಹಾಯವನ್ನು ಎಲ್ಲಿಯು ಹೇಳುತ್ತಿರಲಿಲ್ಲ. ಆದ್ರೆ ಸಹಾಯ ಪಡೆದವರು ಸುಮ್ಮನಿರುತ್ತಾರಾ? ಖಂಡಿತ ಇಲ್ಲ. ಅದಕ್ಕೆ ತಾವು ಪಡೆದ ಸಹಾಯವನ್ನು ಜೋರು ದನಿಯಲ್ಲಿ ಕೂಗಿ ಹೇಳುತ್ತಾರೆ. ಅವರಲ್ಲಿ ಶಂಕರ್ ಅಶ್ವಥ್ ಕೂಡ ಒಬ್ಬರು.

ರಾಜ್ ಕುಟುಂಬದಿಂದ ಸಹಾಯ ಪಡೆದ ಶಂಕರ್ ಅಶ್ವಥ್

ಡಾ. ರಾಜ್ ಅವರು ಇಲ್ಲಿಯವರೆಗೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅದು ಸಿನಿಮಾ ರಂಗದವರಾದರು ಆಗಿದ್ದಾರೆ, ಜೊತೆಗೆ ಹೊರಗಿನವರು ಸಹ ಆಗಿದ್ದಾರೆ. ಆದ್ರೆ ಅವರು ಮಾಡಿದ ಸಹಾಯವನ್ನು ಮಾತ್ರ ಯಾರಿಗೂ ಹೇಳುತ್ತಿರಲಿಲ್ಲ. ಆದ್ರೆ ಅವರಿಂದ ಸಹಾಯ ಪಡೆದವರು ಮಾತ್ರ ಅದನ್ನು ಕೂಗಿ ಕೂಗಿ ಹೇಳುತ್ತಾರೆ. ಹಾಗಾಗಿ ರಾಜ್ ಏನು ಸಹಾಯ ಮಾಡಿದ್ದಾರೆ, ಏನು ಒಳ್ಳೆಯದನ್ನು ಮಾಡಿದ್ದಾರೆ ಎನ್ನುವವರಿಗೆ ಇವರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಯಾಕಂದ್ರೆ ತಾವು ಮಾಡಿದ ಕೆಲವು ಕೆಲಸಗಳು ಯಾರಿಗೂ ತಿಳಿಯಬಾರದು ಅಂದುಕೊಂಡಿದ್ದ ಅಣ್ಣಾವ್ರು ಯಾರಿಗೂ ಹೇಳುತ್ತಿರಲಿಲ್ಲ. ಆದ್ರೆ ಸಹಾಯ ಮಾತ್ರ ಎಲ್ಲಾ ಕಾಲಕ್ಕೂ ಅಜರಾಮರವಾಗುವಂತೆ ಮಾಡಿದ್ದಾರೆ. ಇವರ ಸಹಾಯವನ್ನು ಬಹಳಷ್ಟು ಜನ ಪಡೆದಿದ್ದಾರೆ. ಅದರಲ್ಲಿ ಹಿರಿಯ ಕಲಾವಿದ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಕೂಡ ಒಬ್ಬರು.

ನನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದು ಆ ಕುಟುಂಬ ಮಾತ್ರ

ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟ ಅಶ್ವಥ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಅವರ ಮಗ ಶಂಕರ್ ಅಶ್ವಥ್ ಕೂಡ ಸಿನಿಮಾ ರಂಗಕ್ಕೆ ಕಾಲಿಟ್ಟು, ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ ಕಾಲವಿದರು ಸಹ ಕಷ್ಟದಲ್ಲಿ ಜೀವನ ನಡೆಸುತ್ತಿರುತ್ತಾರೆ ಅನ್ನೋದು ಯಾರಿಗೂ ಗೊತ್ತಿರಲ್ಲ. ಯಾಕಂದ್ರೆ ತೆರೆ ಮೇಲೆ ಅಷ್ಟು ಚೆನ್ನಾಗಿ ಕಾಣಿಸೋ ಅವರು,ತೆರೆ ಹಿಂದೆ ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಹಾಗಾಗಿ ಶಂಕರ್ ಅಶ್ವಥ್ ಕೂಡ ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟಿರುವವರು. ಆದ್ರೆ ಅವರ ಕಷ್ಟ ಆ ಕಾಲಕ್ಕೆ ಯಾರ ಕಣ್ಣಿಗೂ ಕಾಣಲಿಲ್ಲವಂತೆ. ಆದ್ರೆ ಇವರ ಕಷ್ಟಗಳನ್ನೆಲ್ಲಾ ಅರಿತವರು ಮಾತ್ರ ಒಬ್ಬರು ಮಾತ್ರವಂತೆ. ಹೌದು. ಅದು ಬೇರೆ ಯಾರು ಅಲ್ಲ. ಡಾ. ರಾಜ್ ಕುಮಾರ್ ಅವರು. ಹೌದು. ಶಂಕರ್ ಅವರ ಕುಟುಂಬ ಕಷ್ಟದಲ್ಲಿ ನರಳುತ್ತಿರುವಾಗ ಅಣ್ಣಾವ್ರು ಮಾಡಿದ ಒಂದು ಸಹಾಯ, ಅವರನ್ನು ಕೈ ಹಿಡಿದು ಎತ್ತಿ ನಿಲ್ಲಿಸಿದಂತಾಗಿತ್ತಂತೆ. ಹಾಗಾಗಿ ನನ್ನ ಕಷ್ಟಕ್ಕೆ ನೆರವಾಗಿದ್ದು, ಆ ಕುಟುಂಬ ಮಾತ್ರ ಎಂದು ಅವರು ಹೇಳುತ್ತಾರೆ.

ಪಡೆದ ಸಹಾಯದ ಬಗ್ಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡ ಶಂಕರ್

ಇನ್ನೂ ರಾಜ್ ಕುಟುಂಬದಿಂದ ಸಹಾಯ ಪಡೆದ ಬಗ್ಗೆ ಶಂಕರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು. ನಾನು ಕಷ್ಟದಲ್ಲಿದ್ದಾಗ, ಕಣ್ಣೀರು ಹಾಕುತ್ತಿದ್ದ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತಿದ್ದ ಕುಟುಂಬ ಅಂದ್ರೆ ಅದು ರಾಜ್ ಕುಟುಂಬ. ಆ ಕಾಲದಲ್ಲಿ ನನ್ನ ಕಷ್ಟಕ್ಕೆ ಸ್ಪಂಧಿಸಿ ಸಹಾಯ ಮಾಡಿದವರು ಅಂದ್ರೆ ಅಣ್ಣಾವ್ರು. ಈಗ ಆ ಶಯದ ಕೆಲಸವನ್ನು ಅವರ ಮಕ್ಕಳು ಮುಂದೆ ನಿಂತು ಮಾಡುತ್ತಿದ್ದಾರೆ. ಹೌದು. ಅವರ ಅತ್ತಂದೆ ಹಾಕಿಕೊಟ್ಟ ದಾರಿಯಲ್ಲೇ ಮಕ್ಕಳು ಬೆಳೆಯುತ್ತಿದ್ದಾರೆ. ಹಾಗಾಗಿ ನನ್ನೆಲ್ಲ ಕಷ್ಟವನ್ನು ಅರ್ಥ ಮಾಡಿಕೊಂಡು ನನ್ನ ಸಹಾಯಕ್ಕೆ ನಿಂತವರು ಅಣ್ಣಾವ್ರು ಮಾತ್ರ ಎಂದು ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಜ್ ಕುಟುಂಬ ನೊಂದವರ ಪಾಲಿಗೆ ಹಾಗು ಕಷ್ಟದಲ್ಲಿರುವವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಆದ್ರೆ ಅದನ್ನು ಯಾರಿಗೂ ಕಾಣದಂತೆ ಬಹಿರಂಗವಾಗಿ ಮಾಡುತ್ತಿದ್ದಾರೆ. ಹಾಗಾಗಿ ಅವರು ಮಾಡಿದ ಸಹಾಯ ಯಾರಿಗೂ ತಿಳಿಯುತ್ತಿಲ್ಲ. ಆದರೆ ಅವರಿಂದ ಸಹಾಯ ಪಡೆದವರು ಮಾತ್ರ ಈ ರೀತಿ ಕೂಗಿ ಕೂಗಿ ಹೇಳುತ್ತಾರೆ.

LEAVE A REPLY

Please enter your comment!
Please enter your name here