ಇನ್ಮುಂದೆ ರಾಜ್ಯದ ಶಾಲೆಗಳಲ್ಲಿ ಸಾವಿತ್ರಿ ಬಾಯಿ ಫುಲೆ ಜಯಂತಿ ಆಚರಣೆಗೆ ಆದೇಶ

0
1148
savithri bayi phule

ಸಾಮಾನ್ಯವಾಗಿ ಈಗಿನ ಕಾಲದ ಶಾಲಾ ಮಕ್ಕಳಿಗೆ ಅನೇಕ ಸಾಧಕರ ಬಗ್ಗೆ ತಿಳಿದಿರುವುದಿಲ್ಲ. ಯಾಕಂದ್ರೆ ಯಾರೊಬ್ಬರೂ ಸಹ ಅವರ ಬಗ್ಗೆ ಮಾತನಾಡುವುದಿಲ್ಲ. ಜೊತೆಗೆ ಪುಸ್ತಕಗಳಲ್ಲಿಯೂ ಸಹ ಅನೇಕ ಸಾಧಕರು ಹಾಗು ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳಿಸುತ್ತಿಲ್ಲ. ಹಾಗಾಗಿ ಮಕ್ಕಳು ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳಿಯದಂತಾಗಿದ್ದಾರೆ. ಇನ್ನು ಇದನ್ನು ತಿಳಿದ ಸರ್ಕಾರ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಹೌದು. ಶಾಲೆಗಳಲ್ಲಿ ಇನ್ಮುಂದೆ ಮತ್ತೆ ಸಾವಿತ್ರಿ ಬಾಯಿ ಫುಲೆ ಅವರ ಅಜಯಂತಿ ಮಾಡುವಂತೆ ತಿಳಿಸಿದೆ. ಹೌದು. ಶಾಲೆಗಳಲ್ಲಿ ಯಾವೆಲ್ಲಾ ಜಯಂತಿ ಆಚರಿಸುತ್ತಾರೋ, ಅದರ ಜೊತೆಗೆ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲೇ ಬೇಕು ಎಂದು ಸರ್ಕಾರ ಆದೇಶಿಸಿದೆ.

ಸಾವಿತ್ರಿ ಬಾಯಿ ಫುಲೆ ಜಯಂತಿಗೆ ಆದೇಶ

ಶಾಲೆಗಳಲ್ಲಿ ಕೆಲವು ಪ್ರಮುಖವಾದ ಜಯಂತಿಗಳನ್ನು ಆಚರಿಸುತ್ತಾರೆ. ಅದರ ಜೊತೆಗೆ ಸಾವಿತ್ರಿ ಬಾಯಿ ಫುಲೆ ಜಯಂತಿಗೆ ಸರ್ಕಾರ ಆದೇಶ ನೀಡಿದೆ. ಹೌದು. ರಾಜ್ಯದ ಶಾಲೆಗಳಲ್ಲಿ ಇನ್ಮುಂದೆ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆಗೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಇನ್ನು ಈ ಜಯಂತಿಯನ್ನು 2020ರಿಂದಲೇ ಆಚರಿಸಲಾಗುತ್ತದೆಯಂತೆ. ಅಂದ್ರೆ, ಜನವರಿ 3ರಂದು ರಾಜ್ಯದ ಶಾಲೆಗಳಲ್ಲಿ ಸಾವಿತ್ರಿ ಬಾಯಿ ಫುಲೆ ಜಯಂತಿ ಆಚರಿಸಲಾಗುತ್ತದೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಭಾರತದ ಮೊದಲ ಮಹಿಳಾ ಶಿಕ್ಷಕಿ

ಇನ್ನು ಸಾವಿತ್ರಿ ಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದರು. 1831 ಜನವರಿ 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟವರು. ಮನೆಯಲ್ಲೆ ಶಾಲೆ ತೆರೆದು ಅಕ್ಷರ ಕ್ರಾಂತಿ ಕಹಳೆ ಊದಿದರು. ಬ್ರಿಟಿಷರಿಂದಲೇ ಅತ್ಯುತ್ತಮ ಶಿಕ್ಷಕಿ ಎಂದು ಬಿರುದು ಪಡೆದರು. ಅಲ್ಲದೆ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂಬ ಬಿರುದನ್ನೂ ಸಹ ಅವರು ಪಡೆದಿದ್ದರು. ಆದರೆ ಇಷ್ಟು ದಿನ ಅವರ ಜಯಂತಿ ಮಾಡುವುದರ ಬಗ್ಗೆ ಯಾವುದೇ ಚಿಂತೆ ನಡೆದಿರಲಿಲ್ಲ. ಆದರೆ ಇನ್ಮುಂದೆ ಅವರ ಜಯಂತಿ ನಡೆಸುವಂತೆ ಸರ್ಕಾರ ತಿಳಿಸಿದೆ.

ಒಟ್ಟಿನಲ್ಲಿ ಇನ್ಮುಂದೆ ರಾಜ್ಯದ ಎಲ್ಲ ಶಾಲೆಗಳಲ್ಲೂ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಇನ್ನು ಈ ರೀತಿಯ ಜಯಂತಿಗಳಿಂದ ಮಕ್ಕಳಿಗೆ ಪ್ರಮುಖ ವ್ಯಕ್ತಿಗಳು ಹಾಗು ಸಾಧಕರ ಬಗ್ಗೆ ತಿಳಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here