ತನ್ನ ಕನಸುಗಳನ್ನೆಲ್ಲಾ ತೊರೆದು, 12ನೇ ವಯಸ್ಸಿಗೆ ಸನ್ಯಾಸಿಯಾಗಿರುವ ಬಾಲಕಿ

0
861
sanyasi

ಈಗಿನ ಕಾಲದ ಮಕ್ಕಳು ಎಷ್ಟು ಬುದ್ದಿವಂತರಾಗಿರ್ತಾರೆ ಅಂದ್ರೆ, ಚಿಕ್ಕಂದಿನಲ್ಲೇ ಅವರು ಕನಸು ಕಾಣೋಕೆ ಶುರು ಮಾಡ್ತಾರೆ. ಹೌದು. ನಾನು ದೊಡ್ಡವನಾದ ಮೇಲೆ, ಡಾಕ್ಟರ್ ಆಗ್ಬೇಕು, ಪೊಲೀಸ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಟೀಚರ್ ಆಗ್ಬೇಕು ಈ ರೀತಿ ಸಾವಿರ ಕನಸು ಕಾಣ್ತಾರೆ. ಆದ್ರೆ ಬೆಳೆಯುತ್ತಾ ಅವರ ಆಸೆಯಲ್ಲಿ ಕೊಂಚ ಬದಲಾವಣೆಗಳಾಗುತ್ತವೆ. ಯಾಕಂದ್ರೆ, ಪ್ರಪಂಚ ಅವರನ್ನ ಆ ರೀತಿ ಬದಲಾಯಿಸುತ್ತೆ. ಅವರ ಕನಸು ಎಲ್ಲಕ್ಕಿಂತ ಮೀರಿದ್ದಾಗಿರುತ್ತದೆ. ಅದನ್ನ ನನಸು ಮಾಡಿಕೊಳ್ಳಲು, ಕಷ್ಟ ಪಟ್ಟು ಓದುತ್ತಾರೆ. ಅವರಿಗೆ ಬೆನ್ನೆಲುಬಾಗಿ ಅವರ ತಂದೆ, ತಾಯಿ ನಿಂತಿರುತ್ತಾರೆ. ಯಾಕಂದ್ರೆ, ಎಲ್ಲಾ ತಂದೆ, ತಾಯಿಗೂ ಮಕ್ಕಳ ಆಸೆಯನ್ನ ಪೂರೈಸುವುದೇ ಆಗಿರುತ್ತೆ. ಹಾಗಾಗಿ ಅವರ ಆಸೆ ಕನಸುಗಳಿಗೆ ಅವರು ಪೋಷಿಸುತ್ತಾರೆ.

ಎಲ್ಲೋ ಕೆಲವು ಮಕ್ಕಳು ಮಾತ್ರ ತಮ್ಮ ಆಸೆ ಹಾಗೂ ಕನಸುಗಳಿಂದ ವಂಚಿತರಾಗ್ತಾರೆ. ಯಾಕಂದ್ರೆ, ಅವರ ಕನಸನ್ನ ಸಾಕಾರಗೊಳಿಸಲು ಅವರಿಗೆ ಬೆನ್ನೆಲುಬಾಗಿ ಯಾರು ಇರುವುದಿಲ್ಲ. ಇನ್ನೂ ಕೆಲವು ಮಕ್ಕಳಿಗೆ ಯಾವ ರೀತಿ ಆಸೆ ಇರುತ್ತೆ ಅಂದ್ರೆ, ಕೇಳಿದವರಿಗೆ ಒಂದು ಕ್ಷಣ ಆಶ್ಚರ್ಯವಾಗುವಂತೆ ಇರುತ್ತದೆ. ಹೌದು. ಕೆಲವು ಮಕ್ಕಳು ಚಿಕ್ಕಂದಿನಲ್ಲೇ ಆಧ್ಯಾತ್ಮದ ಕಡೆ ಗಮನ ನೀಡುತ್ತಾರೆ. ಸಾಧು, ಸಂತರಾಗಲು ಇಷ್ಟ ಪಡುತ್ತಾರೆ. ಇದೇ ರೀತಿ ನಮ್ಮಲ್ಲಿ ಹಲವು ಉದಾಹರಣೆಗಳಿವೆ. ಈಗ ಅದೇ ರೀತಿ ಈ ಬಾಲಕಿ, ತನ್ನ ಆಸೆ ಕನಸನ್ನೆಲ್ಲಾ ತ್ಯಜಿಸಿ, ಎಲ್ಲವೂ ದೇವರ ಸೇವೆಯಲ್ಲೇ ಕಾಣುತ್ತೇನೆ ಎಂದು ಸನ್ಯಾಸಿಯಾಗಿದ್ದಾಳೆ.

12 ನೇ ವಯಸ್ಸಿಗೆ ಸನ್ಯಾಸಿಯಾದ ಬಾಲಕಿ

ಎಲ್ಲಾ ಮಕ್ಕಳು ಚೆನ್ನಾಗಿ ಓದಿ, ಒಳ್ಳೆ ಕೆಲಸ ಪಡೆದು, ಜೀವನದಲ್ಲಿ ಚೆನ್ನಾಗಿರಬೇಕು ಅಂತ ಸಾಮಾನ್ಯವಾಗಿ ಇಷ್ಟ ಪಡ್ತಾರೆ. ಅದಕ್ಕೆ ಅವರ ತಂದೆ, ತಾಯಿ ಸಹ ಸಹಾಯ ಮಾಡುತ್ತಾರೆ. ಆದ್ರೆ ಈ ಬಾಲಕಿಗೆ ಈ ರೀತಿ ಯಾವ ಆಸೆಯೂ ಇಲ್ಲ. ಬದಲಿಗೆ ಸನ್ಯಾಸಿಯಾಗಿ ನನ್ನ ಜೀವನ ಕಳೆಯಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಹಾಗಾಗಿ ತನ್ನ 12ನೇ ವಯಸ್ಸಿಗೆ ದೀಕ್ಷೆ ಸ್ವೀಕರಿಸುತ್ತಿದ್ದಾಳೆ. ಇದಕ್ಕೆ ಇವರ ತಂದೆ, ತಾಯಿ ಸಹ ಸಮ್ಮತಿ ನೀಡಿದ್ದಾರೆ.

ಬಾಲಕಿಯಾದ್ರು ಯಾರು?

ಈಕೆಯ ಹೆಸರು ಖುಷಿ ಶಾ. ಇವಳು ಮೂಲತಃ ಸೂರತ್ ನವಳು. ಈಕೆಗೆ ಚಿಕ್ಕಂದಿನಿಂದಲೂ, ತಾನು ದೀಕ್ಷೆ ತೆಗೆದುಕೊಳ್ಳಬೇಕು ಅನ್ನೋ ಆಸೆ ಹೆಚ್ಚಾಗಿತ್ತು. ಹಾಗಾಗಿ 6ನೇ ತರಗತಿಗೆ ತನ್ನ ವಿದ್ಯಾಭ್ಯಾಸ ನಿಲ್ಲಿಸಿ, ಈಗ ದೀಕ್ಷೆ ಪಡೆದಿದ್ದಾಳೆ. ಇವರ ಮನೆಯಲ್ಲಿ ದೀಕ್ಷೆ ಪಡೆಯುವುದೇನು ಹೊಸದಲ್ಲ. ಈಗಾಗಲೇ ಇವರ ಕುಟುಂಬದಲ್ಲಿ ನಾಲ್ಕು ಜನ ದೀಕ್ಷೆ ಪಡೆದಿದ್ದಾರಂತೆ. ಹಾಗಾಗಿ ನನಗೆ ದೀಕ್ಷೆ ಪಡೆದು, ಜನರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವುದು ನನ್ನ ಉದ್ದೇಶ. ಹಾಗಾಗಿ ನಾನು ದೀಕ್ಷೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಇದಕ್ಕೆ ತನ್ನ ತಂದೆ, ತಾಯಿಯು ಸಹ ಒಪ್ಪಿದ್ದಾರೆ ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾಳೆ.

ಸಮ್ಮತಿ ನೀಡಿರುವ ತಂದೆ ತಾಯಿ

ಸರ್ಕಾರಿ ಉದ್ಯೋಗದಲ್ಲಿರುವ ಖುಷಿ ತಂದೆ, ಖುಷಿಯ ಬಗ್ಗೆ ದೊಡ್ಡ ದೊಡ್ಡ ಕನಸು ಕಂಡಿದ್ದರು. ಅಲ್ಲದೆ, ಅವರ ತಾಯಿ, ಖುಷಿಯನ್ನ ಡಾಕ್ಟರ್ ಮಾಡಬೇಕೆಂದುಕೊಂಡಿದ್ದರು. ಆದ್ರೆ ತಮ್ಮ ಮಗಳು ದೀಕ್ಷೆ ಪಡೆಯುತ್ತೇನೆ ಎಂದಾಗ, ಆ ಕ್ಷಣಕ್ಕೆ ಸ್ವಲ್ಪ ಬೇಸರವಾದರೂ, ನಮ್ಮ ಮಗಳು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ನಮಗೆ ಅನಿಸಿದೆ. ಅಲ್ಲದೆ ನಮ್ಮ ಮಗಳು ಚಿಕ್ಕ ವಯಸ್ಸಿನಲ್ಲೇ ತನ್ನ ಆಂತರ್ಯದ ಬಗ್ಗೆ ತಿಳಿದುಕೊಂಡಿದ್ದಾಳೆ. ಇದು ಎಲ್ಲ ಮಕ್ಕಳಲ್ಲಿ ಬರುವುದಿಲ್ಲ. ನಮ್ಮ ಮಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಆಕೆ ಸನ್ಯಾಸಿಯಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ತರಲಿ ಎಂದು ಮಗಳ ನಿರ್ಧಾರಕ್ಕೆ ತಂದೆ-ತಾಯಿ ಶುಭ ಹಾರೈಸಿದರು.

ನಿಜಕ್ಕೂ ಇಂತಹ ನಿರ್ಧಾರ ತೆಗೆದುಕೊಳ್ಳುವ ಮಕ್ಕಳು ಸಿಗೋದು ಅಪರೂಪ. ಯಾಕಂದ್ರೆ ಜೀವನದಲ್ಲಿ ವಿಭಿನ್ನವಾಗಿ ಬದುಕಬೇಕು ಅನ್ನೋ ಈ ಕಾಲದಲ್ಲಿ ಸನ್ಯಾಸಿಯಾಗುತ್ತೇನೆ ಅನ್ನೋರು ಕಡಿಮೆ. ಆದ್ರೆ ಈ ನಿರ್ಧಾರವನ್ನ ಖುಷಿ ತೆಗೆದುಕೊಂಡಿದ್ದಾರೆ. ನಾನು ಎಲ್ಲರ ಬಾಳಿನ ಬೆಳಕಾಗಬೇಕು ಅನ್ನೋದು ಇವರ ಆಸೆಯಾಗಿದೆ.

LEAVE A REPLY

Please enter your comment!
Please enter your name here