ವಿಶೇಷವಾದ ಕಾರಣಕ್ಕೆ ತಮ್ಮ ಸಂಭಾವನೆಯನ್ನು ಧಾನ ಮಾಡಿದ ಆಟಗಾರ

0
511

ಭಾರತ ದೇಶದಲ್ಲಿ ಕ್ರಿಕೆಟ್ ಕ್ರೀಡೆಗೆ ಬಹಳ ಬೇಡಿಕೆ ಇದೆ. ಐಪಿಎಲ್ ಎಂಬ ಒಂದು ವೇದಿಕೆ ಆಟಗಾರನ ಅದೃಷ್ಟವೆ ಬದಲಾಯಿಸುತ್ತದೆ. ಐಪಿಎಲ್ ಬಂದರೆ ಸಾಕು ಜನರಿಗೆ ಎಲ್ಲಿಲ್ಲದ ಕ್ರೇಜ್. ಐಪಿಎಲ್ ನಲ್ಲಿ ಆಟವಾಡಿ ಅದೆಷ್ಟೊ ಆಟಗಾರರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುತ್ತ ಮಿಂಚುತ್ತಿದ್ದಾರೆ. ಕೇವಲ ವೇದಿಕೆ ಒಂದೆ ಆಟಗಾರನ ಹಣೆಬರಹ ಬದಲಿಸುವುದಿಲ್ಲ, ಇದರ ಹಿಂದೆ ಅವರು ಪಟ್ಟ ಕಷ್ಟದ ಪರಿಶ್ರಮವು ಸಹ ಇರುತ್ತದೆ. ಐಪಿಎಲ್ ಪಂದ್ಯಾವಳಿಗಳಲ್ಲಿ ಆಡುತ್ತ ಹೊರ ಹೊಮ್ಮಿದ ಪ್ರತಿಭಾವಂತ ಆಟಗಾರರ ಸಾಲಿನಲ್ಲಿ ಸಂಜು ಸ್ಯಾಮ್ಸನ್ ಅವರ ಹೆಸರು ಸಹ ಸೇರ್ಪಡೆಯಾಗುತ್ತದೆ. ವಿಕೆಟ್ ಕೀಪರ್ ಹಾಗು ಬ್ಯಾಟ್ಸ್ ಮೆನ್ ಆಗಿ ಮೈದಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಮಾಡಿದ ಕೆಲಸವನ್ನು ಕೇಳಿದರೆ ನಿಜಕ್ಕು ವಾವ್ ಎಂತಿರಾ. ಮುಂದೆ ಓದಿ.

ಪಂದ್ಯದ ಸಂಭಾವನೆಯನ್ನು ಧಾನ ಮಾಡಿದ ಸ್ಯಾಮ್ಸನ್

ಭಾರತ ಎ ತಂಡ ದಕ್ಷಿಣ ಅಫ್ರಿಕಾ ವಿರುದ್ಧ ಏಕ ದಿನ ಸರಣಿಯನ್ನು ಕೈ ಗೊಂಡಿದ್ದು, 5 ನೇ ಪಂದ್ಯದಲ್ಲಿ ಸ್ಯಾಮ್ಸನ್ ಉತ್ತಮವಾದ ಪ್ರದರ್ಶನವನ್ನು ನೀಡುವ ಮೂಲ ಭಾರತಕ್ಕೆ ಗೆಲುವನ್ನು ತಂದು ಕೊಟ್ಟಿದ್ದರು. ತಿರುವನಂತಪುರಂ ನಾ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 48 ಎಸೆತಗಳಲ್ಲಿ 91 ರನ್ಸ್ ಹೊಡೆಯುವ ಮೂಲಕ ಸ್ಪೋಟಕ ಬ್ಯಾಟಿಂಗ್ ಅನ್ನು ಆಡಿದ್ದರು. ಭಾರತ ತಂಡ 36 ರನ್ಸ್ ಗಳಿಂದ ಗೆದ್ದು ವಿಜಯ ಪಟಾಕಿಯನ್ನು ಹಾರಿಸಿದರು. ಪಂದ್ಯ ಮುಗಿದ ನಂತರ ಸ್ಯಾಮ್ಸನ್ ತಮ್ಮ ಸಂಭಾವನೆಯನ್ನು ಧಾನ ಮಾಡಿದ್ದಾರೆ.

ಕ್ರೀಡಾಂಗಣದ ಸಿಬ್ಬಂದಿಗಳು ವಿಶೇಷ ಕಾಳಜಿಯನ್ನು ವಹಿಸಿದ್ದರು

ಭಾರತ ಎ ತಂಡದ ವಿರುದ್ಧ ದಕ್ಷಿಣ ಅಫ್ರಿಕಾ ಎ ತಂಡ ಆಡಿದ್ದು, ಇದು ಇದು ಪಂದ್ಯಗಳ ಏಕ ದಿನ ಸರಣಿವಾಗಿದೆ. ಇನ್ನು ಕೇರಳದ ರಾಜಧಾನಿಯಲ್ಲಿ ಭೀಕರ ಮಳೆಯಿಂದಾಗಿ ಆಟಕ್ಕೆ ತೊಂದರೆ ಉಂಟಾಗಿತ್ತು. ಆದ್ದರಿಂದ ಓವರ್ಸ್ ಗಳನ್ನೂ ಕಡಿಮೆ ಮಾಡಲಾಗಿತ್ತು. ನಾಲಕ್ಕನೆ ಪಂದ್ಯಕ್ಕೆ ಮಳೆರಾಯನ ಅಡ್ಡಿಯಿಂದ ಎರಡು ದಿನಗಳ ಕಾಲ ಕಾದಿದ್ದರು. ಮಳೆಯಿಂದಾಗಿ ಮೈದಾನಕ್ಕೆ ಮತ್ತು ಪಂದ್ಯಕ್ಕೆ ಅಡ್ಡಿ ಉಂಟಾಗಬಾರದೆಂದು ಕ್ರೀಡಾಂಗಣದ ಸಿಬ್ಬಂದಿಗಳು ವಿಶೇಷ ಕಾಳಜಿಯನ್ನು ವಹಿಸಿದ್ದರು. ಪಂದ್ಯ ರದ್ದಾಗದಂತೆ ನೋಡಿಕೊಂಡಿದ್ದರು. ಆದ್ದರಿಂದ ಸ್ಯಾಮ್ಸನ್ ಸಿಕ್ಕ 1.50 ಲಕ್ಷ ರೂಪಾಯಿಗಳನ್ನು ಸಿಬ್ಬಂದಿಗಳಿಗೆ ನೀಡಿದ್ದಾರೆ. ಸಿಬ್ಬಂದಿಗಳು ಪಟ್ಟ ಕಷ್ಟವನ್ನು ಗಮನಿಸಿದ ಸ್ಯಾಮ್ಸನ್ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

1.50 ಲಕ್ಷ ಸಂಭಾವನೆಯನ್ನು ಇಲ್ಲಿಯ ಸಿಬ್ಬಂದಿಗಳಿಗೆ ನೀಡುತ್ತಿದ್ದೇನೆ

ಈ ಸರಣಿ ಯಾವುದೆ ಅಡೆಚಣೆ ಇಲ್ಲದೆ ನಡೆಯಲು ಅಲ್ಲಿಯ ಗ್ರೌಂಡ್ಸ್ ಮೆನ್ ಗಳೇ ಮುಖ್ಯ ಕಾರಣರಾಗಿದ್ದಾರೆ. ಇವರಿಂದಾನೆ ಸರಣಿ ನಡೆಯಲು ಸಾದ್ಯವಾಗಿ ಗೆಲ್ಲಲು ಸಹಾಯವಾಯಿತು. ಮೈದಾನದಲ್ಲಿ ಸ್ವಲ್ಪ ಹಸಿ ಇದ್ದರು ಸಹ ಪಂದ್ಯ ನಡೆಯುತ್ತಿರಲಿಲ್ಲ. ಅವರಿಗೆ ಧನ್ಯವಾದ ಹೇಳಲೇಬೇಕಾಗಿದೆ. ಆದ್ದರಿಂದ ನನಗೆ ದೊರೆತ ಪಂದ್ಯದ 1.50 ಲಕ್ಷ ಸಂಭಾವನೆಯನ್ನು ಇಲ್ಲಿಯ ಸಿಬ್ಬಂದಿಗಳಿಗೆ ನೀಡುತ್ತಿದ್ದೇನೆ ಎಂದು ಸಂಜು ಸ್ಯಾಮ್ಸನ್ ಅವರು ತಿಳಿಸಿದ್ದಾರೆ. ಈ ನಿಲುವನ್ನು ಕಂಡು ಜನರು ಇವರನ್ನು ಹಾಡಿ ಹೊಗಳುತ್ತಿದ್ದಾರೆ

LEAVE A REPLY

Please enter your comment!
Please enter your name here