ಬಣ್ಣದಲ್ಲಿ ಮಿಂದೆದ್ದ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ತಾರೆಯರು

0
1666

ಮಾರ್ಚ್ ತಿಂಗಳು ಬಂತು ಅಂದ್ರೆ ಸಾಕು ನಮ್ಮ ಪಡ್ಡೆ ಹುಡುಗರು ಫುಲ್ ದಿಲ್ ಖುಷ್ ಆಗಿ ಇರ್ತಾರೆ. ಯಾಕಂದ್ರೆ ಇದೆ ತಿಂಗಳಲ್ಲಿ ಹೋಳಿ ಬರೋದು. ಹಾಗಾಗಿ ಅವರು ಆ ದಿನಕ್ಕೋಸ್ಕರ ಕಾಯ್ತಾ ಇರ್ತಾರೆ. ಅದ್ರಲ್ಲೂ ಕಾಲೇಜು ವಿದ್ಯಾರ್ಥಿಗಳಂತೂ ಕೇಳೋದೇ ಬೇಡ. ಹೊಲಿಯನ್ನ ತಮ್ಮ ಪಾಲಿನ ದೊಡ್ಡ ಹಬ್ಬದಂತೆ ಆಚರಿಸ್ತಾರೆ. ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಹೋಳಿ ಹಾಕ್ಕೊಂಡು ಮಸ್ತ್ ಮಜಾ ಮಾಡ್ತಾರೆ.

ನಮ್ಮ ಪಡ್ಡೆ ಹುಡುಗರು ಮಾತ್ರ ಈ ಹೋಳಿಯನ್ನ ಆಚರಿಸೋಲ್ಲ. ಎಲ್ಲರೂ ಇದನ್ನ ಖುಷಿ ಖುಷಿಯಿಂದ ಆಚರಿಸ್ತಾರೆ. ಆದ್ರೆ ಈ ಬಾರಿ ನಮ್ಮ ಚಂದನವನದ ತಾರೆಗಳು ಹೋಳಿ ಆಡಿ, ಸಂಪೂರ್ಣವಾಗಿ ಬಣ್ಣದಲ್ಲಿ ಮುಳುಗಿದ್ದಾರೆ.

ಚನ್ನೈನಲ್ಲಿ ಹೋಳಿ ಆಚರಿಸಿದ ಸಂಜನಾ ಗಲ್ರಾಣಿ

ನಮ್ಮ ಚಂದನವನದ ನಾಯಕಿ ಮೊನ್ನೆ ತಮಿಳು ವೆಬ್ ಸಿರೀಸ್ ಶೂಟಿಂಗ್ ಗೆ ಅಂತ ಚನ್ನೈ ಗೆ ಹೋಗಿದ್ರು. ಆದ್ರೆ ಅಲ್ಲಿ ಶೂಟಿಂಗ್ ಮುಗಿದ ಬಳಿಕ ಚನ್ನೈ ನಲ್ಲೆ ತಮ್ಮ ಹೋಳಿ ಹಬ್ಬ ಆಚರಿಸಿದ್ದಾರೆ. ಅಲ್ಲಿ ಹೋಳಿ ಆಡಿ ತಮ್ಮ ಸಂತೋಷವನ್ನ ಎಲ್ಲರ ಜೊತೆ ಹಂಚಿಕೊಂಡ ಸಂಜನಾ ಅಲ್ಲಿಂದ ಮುಂಬೈ ಗೆ ಹೊರಟಿದ್ದಾರೆ. ನಂತರ ಮುಂಬೈನಲ್ಲೂ ತಮ್ಮ ಹೋಳಿ ಆಚರಿಸಿದ್ದಾರೆ. ಇದನ್ನೆಲ್ಲಾ ನೋಡೋದಾದ್ರೆ ಸಂಜನಾ ಅವರಿಗೆ ಹೋಳಿ ಹಬ್ಬ ಎಷ್ಟು ಅಚ್ಚು ಮೆಚ್ಚು ಅಂತ ಗೊತ್ತಾಗುತ್ತೆ. ತಮ್ಮ ಹೋಳಿ ಬಗ್ಗೆ ಮಾತನಾಡಿದ ಸಂಜನಾ, ಎಲ್ಲ ವರ್ಷಕ್ಕಿಂತ ಈ ವರ್ಷ ನನಗೆ ತುಂಬಾ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

 

 

 

 

ಸಂಭ್ರಮದಿಂದ ಹೋಳಿ ಆಚರಿಸಿದ ಶ್ರೀ ಮುರುಳಿ ಹಾಗೂ ಪವನ್ ಒಡೆಯರ್

ನಮ್ಮ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರು ತಮ್ಮ ಕುಟುಂಬದೊಂದಿಗೆ ಈ ಬಾರಿ ಹೋಳಿ ಹಬ್ಬವನ್ನ ಆಚರಿಸಿದ್ದಾರೆ. ತಮ್ಮ ಪತ್ನಿ ವಿದ್ಯಾ ಶ್ರೀಮುರುಳಿ ಹಾಗೂ ತಮ್ಮ ಮಕ್ಕಳೊಂದಿಗೆ ಅದ್ದೂರಿಯಾಗಿ ಬಣ್ಣದೋಕುಳಿ ಆಡಿದ್ದಾರೆ. ಮುರುಳಿ ತಮ್ಮ ಭರಾಟೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರೋದ್ರಿಂದ, ಬರೀ ತಮ್ಮ ಹೆಂಡತಿ, ಮಕ್ಕಳೊಂದಿಗೆ ಹೋಳಿ ಆಡಿದ್ದಾರೆ. ಇತ್ತ ನಮ್ಮ ನಿರ್ದೇಶಕ ಪವನ್ ಒಡೆಯರ್ ಸಹ ತಮ್ಮ ಪತ್ನಿಯೊಂದಿಗೆ ಹೋಳಿ ಆಚರಿಸಿದ್ದಾರೆ. ಅವರಿಗೆ ಈ ಹೋಳಿ ಬಹಳ ವಿಶೇಷವಾಗಿದೆ. ಯಾಕಂದ್ರೆ ಮದುವೆಯಾದ ಮೇಲೆ ಅವರಿಗೆ ಇದು ಮೊದಲ ಹೋಳಿಯಾಗಿದೆ. ಹಾಗಾಗಿ ತಮ್ಮ ಪತ್ನಿ ಅಪೇಕ್ಷಾ ಜೊತೆ ತುಂಬಾ ಸಂತೋಷದಿಂದ ಹೋಳಿ ಸಂಭ್ರಮಿಸಿದ್ದಾರೆ.

 

ಬಣ್ಣ ಹಚ್ಚಿಕೊಂಡ ಶಾನ್ವಿ ಹಾಗೂ ಪ್ರಿಯಾವಾರಿಯರ್

ನಟಿ ಶಾನ್ವಿ ಶ್ರೀ ವಾಸ್ತವ್ ತಮ್ಮ ಈ ಬಾರಿ ಹೋಳಿಯನ್ನ ಬಹಳ ಕಲರ್ ಫುಲ್ ಆಗಿ ಆಚರಿಸಿದ್ದಾರೆ. ಹೌದು ತಮ್ಮ ಮನೆಯವರು ಹಾಗೂ ಸ್ನೇಹಿತರೊಂದಿಗೆ ಹೋಳಿ ಆಚರಿಸಿರುವ ಶಾನ್ವಿ ತಮ್ಮ ಬಣ್ಣದ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಇನ್ನು ಕಣ್ಣು ಮಿಟುಕಿಸಿ ನಮ್ಮ ಇಡೀ ದೇಶದ ಪಡ್ಡೆ ಹುಡುಗರನ್ನ ಸೆಳೆದಿದ್ದ ಪ್ರಿಯಾ ವಾರಿಯರ್ ಕೂಡ ತಮ್ಮ ಹೋಳಿಯನ್ನ ತುಂಬಾ ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದಾರೆ.

ಬಾಲಿವುಡ್ ನಲ್ಲಂತೂ ಸಂಭ್ರಮವೋ ಸಂಭ್ರಮ

ಬಾಲಿವುಡ್ ನಲ್ಲಿ ನಟ, ನಟಿಯರು ಪ್ರತಿ ವರ್ಷವೂ ಹೋಳಿ ಹಬ್ಬವನ್ನ ತುಂಬಾ ಅದ್ದೂರಿಯಾಗಿ ಆಚರಿಸ್ತಾರೆ. ಅದರಂತೆ ಈ ವರ್ಷವೂ ಸಹ ತಮ್ಮ ಹೋಳಿಯನ್ನ ಬಹಳ ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ. ನಟಿ ಕಾಜೋಲ್, ಐಶ್ವರ್ಯ ರೈ, ಕತ್ರೀನಾ ಕೈಫ್ ಹಾಗೂ ರಣ್ ದೀಪ್ ಸೇರಿದಂತೆ ಎಲ್ಲರೂ ತಮ್ಮ ಹೋಳಿಯನ್ನ ಆಚರಿಸಿದ್ದಾರೆ.

ಅಂತೂ ಇಂತೂ ಈ ಬಾರಿ ಹೋಳಿ ಹಬ್ಬವನ್ನ ನಮ್ಮ ಸಿನಿಮಾ ತಾರೆಯರು ಬಹಳಷ್ಟು ಕಲರ್ ಫುಲ್ ಆಗಿ ಆಚರಿಸಿದ್ದಾರೆ.

LEAVE A REPLY

Please enter your comment!
Please enter your name here