ಮತ್ತೊಂದು ಅವತಾರದಲ್ಲಿ ಬರುತ್ತಿರುವ ಪೂಜಾಗಾಂಧಿ.

0
525
samharini movie

ನಾನು ನಟಿಸುತ್ತೇನೆ. ನನಗೆ ಆ ಶಕ್ತಿ ಇದೆ. ಯಾವ ಪಾತ್ರವನ್ನಾದರೂ ಸರಿ ನಾನು ಮಾಡುತ್ತೇನೆ ಅಂತ ಹೇಳೋರು ಕಡಿಮೆ. ಯಾಕಂದ್ರೆ, ಎಲ್ಲರಿಂದಲೂ, ಎಲ್ಲ ಪಾತ್ರಗಳನ್ನ ಮಾಡಲು ಆಗುವುದಿಲ್ಲ. ಹೌದು. ಕೆಲವರು ಸೀಮಿತವಾಗಿ ಬದುಕುತ್ತಾರೆ. ಅಂದ್ರೆ, ನಾನು ಇದಕ್ಕೆ ಸೀಮಿತ, ಅಂದ್ರೆ, ಅದಕ್ಕೆ ಮಾತ್ರ ಸಿನಿಮಿತವಾಗಿರುತ್ತಾರೆ. ಬೇರೆ ಯಾವುದಕ್ಕೂ ಆಸಕ್ತಿ ತೋರಿಸುವುದಿಲ್ಲ. ಆದ್ರೆ ಇನ್ನೂ ಕೆಲವರಂತೂ, ಎಲ್ಲದರಲ್ಲೂ ಮುಂದಿರುತ್ತಾರೆ. ನನ್ನಿಂದ, ಆಗುತ್ತೋ ಅಥವಾ ಇಲ್ಲವೋ ಗೊತ್ತಿಲ್ಲ. ಆದ್ರೆ ಪ್ರಯತ್ನ ಅಂತೂ ಮಾಡ್ತೀನಿ ಅಂತ ಮುನ್ನುಗ್ಗಿ ಕೆಲಸ ಮಾಡ್ತಾರೆ.

ಆ ರೀತಿ ಇರುವ ಕಲಾವಿದರು ನಮಲ್ಲಿ ಹಲವರಿದ್ದಾರೆ. ಹೌದು. ಯಾವ ಪಾತ್ರವಾದರೂ ಸರಿ, ನಾನು ಮಾಡುತ್ತೇನೆ ಅನ್ನೋರು ತುಂಬ ಜನರಿದ್ದಾರೆ. ಉದಾ ನಮ್ಮಲ್ಲಿ, ಪುರುಷ ಕಲಾವಿದರು, ಮಹಿಳೆ ವೇಷ ಧರಿಸಿ ಪಾತ್ರ ಮಾಡೋಕೆ ಮುಂದಾಗ್ತಾರೆ. ಇನ್ನೂ ಮಹಿಳೆಯರು ಪುರುಷರ ವೇಷ ಧರಿಸಿ ನಟನೆ ಮಾಡುತ್ತಾರೆ. ವೇಷ, ಭೂಷಣದ ಬಗ್ಗೆ ಇವರಿಗೆ ಚಿಂತೆ ಇರುವುದಿಲ್ಲ. ನಾನೊಬ್ಬ ಕಲಾವಿದ, ನನ್ನ ಕೆಲಸ ನಟನೆ ಮಾಡೋದು ಅಂತ ಮಾತ್ರ ತಿಳಿದಿರುತ್ತಾರೆ. ಅದೇ ರೀತಿ ನಮ್ಮ ನಾಯಕಿಯರು ಸಹ, ಪುರುಷರ ತರ, ಸಾಹಸ ಕಥೆಗಳ ಸಿನಿಮಾಗಳಲ್ಲಿ ನಟಿಸುತ್ತಾರೆ. ಈಗ ಅದೇ ರೀತಿ ನಮ್ಮ ಸ್ಯಾಂಡಲ್ ವುಡ್ ನಾಯುಕಿಯು ಸಹ ಸಾಹಸ ಕಥೆಯೊಂದರಲ್ಲಿ ನಟಿಸಿದ್ದಾರೆ.

ಸಾಹಸ ಪ್ರಧಾನ ಸಿನಿಮಾದಲ್ಲಿ ನಟಿಸಿರುವ ಪೂಜಾಗಾಂಧಿ

ಪೂಜಾಗಾಂಧಿ ಅಂದ ಕೂಡಲೇ, ಎಲ್ಲರ ನೆನಪಿಗೆ ಬರೋದು ಅಂದ್ರೆ, ಅವರು ಅಭಿನಯಿಸಿರುವ ಎರಡು ಸಿನಿಮಾಗಳು. ಒಂದು ಮುಂಗಾರುಮಳೆ ಇನ್ನೊಂದು ದಂಡುಪಾಳ್ಯ. ಯಾಕಂದ್ರೆ, ಈಗಲೂ ಜನರ ಕಣ್ಮುಂದೆ ಹಾದು ಹೋಗುವ ಸಿನಿಮಾಗಳು ಅಂದ್ರೆ, ಮೊದಲಿಗೆ ಇವೆರಡು ಸೇರುತ್ತವೆ. ಹಾಗಾಗಿ ಈ ಸಿನಿಮಾಗಳು ಎಲ್ಲರ ನೆನಪಿಗೆ ಬೇಗ ಬರುತ್ತವೆ. ಅದರಲ್ಲೂ ಇವರ ದಂಡುಪಾಳ್ಯ ಸಿನಿಮಾ ಅಂತೂ ಯಾರಿಂದಲೂ ಮರೆಯಲಾಗುವುದಿಲ್ಲ. ಯಾಕಂದ್ರೆ, ಆ ಸಿನಿಮಾದಲ್ಲಿ ಪೂಜಾಗಾಂಧಿ, ನಿರ್ಭಯವಾಗಿ ಅಭಿನಯಿಸಿದ್ದರು. ನೋಡಿದವರಿಗೆ ಒಂದು ಕ್ಷಣ ಮೈ ರೋಮಾಂಚನವಾಗುತ್ತಿತ್ತು ಆ ತಂಡದ ನಟನೆಗೆ. ಈಗ ಅದೇ ರೀತಿ ಮತ್ತೊಂದು ಸಾಹಸ ಆಧಾರಿತ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಆ ಸಿನಿಮಾ ತೆರೆ ಮೇಲೆ ಬರಲಿದೆ.

‘ಸಂಹಾರಿಣಿ’ಯಾಗಿ ಬರುತ್ತಿರುವ ಪೂಜೆ ಗಾಂಧಿ

ಪೂಜಾಗಾಂಧಿ ಅವರು ಈಗ ಸಂಹಾರಿಣಿ ಯಾಗಿ ತೆರೆ ಮೇಲೆ ಬರಲಿದ್ದಾರೆ. ದಂಡುಪಾಳ್ಯದಲ್ಲಿ ಅಷ್ಟು ನಿರ್ಭಯವಾಗಿ ನಟಿಸಿದ್ದ, ಅವರು ಈಗ ಸಂಹರಿಣಿ ಯಾಗಿ ತೆರೆ ಮೇಲೆ ಬರಲಿದ್ದಾರೆ. ಅಂದ್ರೆ ಇವರ ಮುಂದಿನ ಸಿನಿಮಾ ಸಂಹಾರಿಣಿಯಾಗಿದೆ. ಚಿತ್ರದಲ್ಲಿ ಪೂಜಾಗಾಂಧಿ, ಸಂಪೂರ್ಣ ಮಾಸ್ ಲುಕ್ ನಲ್ಲಿ ಕಾಣಿಸಿದ್ದಾರೆ. ಜೊತೆಗೆ, ಚಿತ್ರದಲ್ಲಿ, ಕತ್ತಿ, ಮಚ್ಚು ಹಿಡಿಯುವುದರ ಮೂಲಕ, ಅಭಿಮಾನಿಗಳ ಕುತೂಹಲಕ್ಕೆ ಒಂದು ಹೆಜ್ಜೆ ಮುಂದಾಗಿದ್ದಾರೆ. ಇನ್ನೂ ಈ ಸಿನಿಮಾ 2 ಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ, ಕೆ ವಿ ಶಭರೀಶ್ ನಿರ್ಮಾಣ ಮಾಡಿದ್ದು, ಕೆ ಜವಾಹರ್ ನಿರ್ದೇಶನ ಮಾಡಿದ್ದಾರೆ.

ಬಾಲಿವುಡ್ ಖಳನಟರ ಪಾತ್ರವಿದೆ

ಬಾಲಿವುಡ್ ಸಿನಿಮಾಗಳ ಪ್ರಸಿದ್ಧ ಖಳ ನಟ ರಾಹುಲ್ ದೇವ್, ರವಿ ಕಾಳೆ, ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ನಟ ಕಿಶೋರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅರುಣ್ ಪೋಷಕ ಕಲಾವಿದರಾಗಿ ಅಭಿನಯಿಸಿದ್ದಾರೆ. ಇನ್ನೂ ಮಾಸ್ ಮಾದ ಸಾಹಸ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ವಿ 2 ಸಂಗೀತ ನಿರ್ದೇಶನ, ರಾಜೇಶ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಇನ್ನೂ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನ ಗಂಗಾಧರ್ ಹೊತ್ತಿದ್ದಾರೆ.

ಒಟ್ಟಿನಲ್ಲಿ ದಂಡುಪಾಳ್ಯದಲ್ಲಿ ನಿರ್ಭಯವಾಗಿ, ಮಾಸ್ ಲುಕ್ ನಲ್ಲಿ ನಟಿಸಿದ ನಟಿ, ಈಗ ಸಾಹಸ ಪ್ರಧಾನವಾಗಿರುವ ಸಂಹಾರಿಣಿ ಚಿತ್ರದಲ್ಲಿ ನಟಿಸಿದ್ದಾರೆ. ಹಾಗಾದ್ರೆ, ಈ ಸಾಹಸ ಕಥೆ ಎಷ್ಟರ ಮಟ್ಟಿಗೆ ಜನರಿಗೆ ಇಷ್ಟ ಆಗುತ್ತೆ ಅಂತ ಕಾದುನೋಡಬೇಕು

LEAVE A REPLY

Please enter your comment!
Please enter your name here