ತಮ್ಮ ಸ್ನೇಹದ ಗುರುತಿಗಾಗಿ ಕಿಚ್ಚನಿಗೆ ದುಬಾರಿ ಬೆಲೆಯ ಗಿಫ್ಟ್ ನೀಡಿದ ಸಲ್ಲು

0
889
salman car gift sudeep

ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಅಂದ್ರೆ ಇರೋ ಬೆಲೆನೇ ಬೇರೆ. ಯಾಕಂದ್ರೆ ಕಿಚ್ಚ ತಮ್ಮ ಗುಣ ಹಾಗು ಸ್ವಭಾವದಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಗೆ ತಮ್ಮ ಚಿತ್ರಗಳನ್ನು ಸಹ ಅಭಿಮಾನಿಗಳ ಮನ ಮುಟ್ಟುವಂತೆ ಮಾಡುತ್ತಾರೆ. ಹೀಗಾಗಿ ಕಿಚ್ಚ ಅಂದ್ರೆ ಸಾಮಾನ್ಯವಾಗಿ ಎಲ್ಲರು ಇಷ್ಟ ಪಡುತ್ತಾರೆ. ಆದ್ರೆ ಅವರು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಹೆಸರು ಪಡೆದಿಲ್ಲ. ಬದಲಿಗೆ ಹೊರ ದೇಶದಲ್ಲಿಯೂ ಸಹ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಈಗ ಒಬ್ಬ ಸ್ಟಾರ್ ನಟ, ಕಿಚ್ಚನಿಗೆ ಫ್ಯಾನ್ ಆಗಿದ್ದಾರೆ. ಹೌದು. ಬಾಲಿವುಡ್ ಬ್ಯಾಡ್ ಬಾಯ್ ಆದ ಸಲ್ಲುಗೆ ಕಿಚ್ಚ ಅಂದ್ರೆ ಬಹಳ ಇಷ್ಟವಂತೆ. ಅಲ್ಲದೆ ಇವರಿಬ್ಬರು ಒಳ್ಳೆಯ ಸ್ನೇಹಿತರು ಸಹ ಆಗಿದ್ದಾರೆ. ಹಾಗಾಗಿ ತಮ್ಮ ಸ್ನೇಹದ ಗುರುತಿಗಾಗಿ ಕಿಚ್ಚನಿಗೆ ದುಬಾರಿ ಉಡುಗೊರೆಯನ್ನು ಸಲ್ಲು ನೀಡಿದ್ದಾರೆ.

ಕಿಚ್ಚನಿಗೆ ದುಬಾರಿ ಬೆಲೆಯ ಉಡುಗೊರೆ ನೀಡಿದ ಸಲ್ಲು

ಕಿಚ್ಚ ಹಾಗು ಸಲ್ಲು. ಒಂದು ಕಾಲದಲ್ಲಿ ಇವರಿಬ್ಬರ ಹೆಸರು ಎಂದೂ ಒಟ್ಟಿಗೆ ಕೇಳಿರಲಿಲ್ಲ. ಆದ್ರೆ ಈಗ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ನೋಡಿದರು ಇವರ ಹೆಸರೇ ಕೇಳುತ್ತದೆ. ಯಾಕಂದ್ರೆ ಇವರಿಬ್ಬರ ಸ್ನೇಹ ಅಷ್ಟರ ಮಟ್ಟಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಹೌದು. ಸುದೀಪ್ ಯಾವಾಗ ದಬಾಂಗ್ 3ರಲ್ಲಿ ನಟಿಸಿದರೋ, ಆಗಿಂದ ಇವರಿಬ್ಬರ ಸ್ನೇಹ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಎಲವೂ ಮಾತು, ಫೋಟೋ ಸಾಕ್ಷಿಯಾಗಿದ್ದವು. ಅದಾದ ಬಳಿಕ ಸಲ್ಲು, ಸುದೀಪ್ ಗೆ ಬಟ್ಟೆಯನ್ನು ಸಹ ಕೊಡಿಸಿದ್ದರು. ಆದರೆ ಈಗ ಬಿಎಂಡಬ್ಲ್ಯು 5ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಲ್ಮಾನ್ ಭೇಟಿ ನಂತರ ನನ್ನ ಜೀವನವೇ ಬದಲಾಯಿತು

ಇನ್ನು ಸಲ್ಮಾನ್, ಸುದೀಪ್ ಗೆ ಸುಮಾರು 70 ಲಕ್ಷ ಬೆಲೆ ಬಾಳುವ ಬಿಎಂಡಬ್ಲ್ಯು 5ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು. ಕಾರ್ ಅನ್ನು ಸ್ವತಃ ಸಲ್ಮಾನ್ ಖಾನ್ ಅವರೇ ಡ್ರೈವ್ ಮಾಡಿಕೊಂಡು ಬಂದು ಕಿಚ್ಚನಿಗೆ ನೀಡಿದ್ದಾರೆ. ಇನ್ನು ಈ ಉಡುಗೊರೆಯನ್ನು ನೋಡಿದ ಕಿಚ್ಚನಿಗೆ ಮಾತೇ ಬಾರದಂತಾಗಿದೆ. ಜೊತೆಗೆ ತಮ್ಮ ಅನಿಸಿಕೆಯನ್ನು ಸಹ ತಿಳಿಸಿದ್ದಾರೆ. ಹೌದು. ಸಲ್ಮಾನ್ ಖಾನ್ ಅಷ್ಟು ಒಳ್ಳೆಯ ವ್ಯಕ್ತಿಯನ್ನು ನಾನು ನೋಡಲೇ ಇಲ್ಲ. ಯಾಕಂದ್ರೆ ಅವರು ಊಹೆಗೂ ಮೀರಿದ ಒಳ್ಳೆಯ ಗುಣಗಳನ್ನು ಹೊಂದಿರುವ ವ್ಯಕ್ತಿ. ಇನ್ನು ಅವರ ಪರಿಚಯ ನಂತರ ನನ್ನ ಜೀವನ ಸಂಪೂರ್ಣ ಬದಲಾಗಿದೆ. ಯಾಕಂದ್ರೆ ನನ್ನ ವೈಯಕ್ತಿಕ ಜೀವನ ಇರಬಹುದು ಅಥವಾ ಸಿನಿಮಾ ಕ್ಷೇತ್ರ ಇರಬಹುದು ಅದೆಲ್ಲದರಲ್ಲೂ ಸಂಪೂರ್ಣ ಬದಲಾಗಿದ್ದೇನೆ ಎಂದು ಕಿಚ್ಚ ಹೇಳಿದ್ದಾರೆ.

ಒಟ್ಟಿನಲ್ಲಿ ಸಲ್ಮಾನ್ ಹಾಗು ಕಿಚ್ಚನ ಸ್ನೇಹ ದಿನದಿಂದ ದಿನಕ್ಕೆ ಬಹಳಷ್ಟು ಗಟ್ಟಿಯಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಈಗ ಸಲ್ಮಾನ್ ಕಿಚ್ಚನಿಗೆ ನೀಡಿರುವ ದುಬಾರಿ ಉಡುಗೊರೆಯೇ ಆಗಿದೆ. ಇನ್ನು ಇವರಿಬ್ಬರ ಸ್ನೇಹ ಇದೆ ರೀತಿ ಮುಂದುವರೆಯಲಿ ಅನ್ನೋದೇ ನಮ್ಮ ಆಶಯ.

LEAVE A REPLY

Please enter your comment!
Please enter your name here