ಸಲ್ಲು ಗೆ ಆಕ್ಷನ್ ಕಟ್ ಹೇಳಲಿದ್ದಾರಾ ಪ್ರೇಮ್? ರಹಸ್ಯ ಬಿಚ್ಚಿಟ್ಟ ಕಿಚ್ಚ

0
1071
sallu and prem

ಇತ್ತೀಚಿಗೆ ನಮ್ಮ ಸ್ಯಾಂಡಲ್ ವುಡ್ ಕಲಾವಿದರಿಗೆ ಬೇಡಿಕೆ ಎಷ್ಟು ಹೆಚ್ಚಾಗುತ್ತಿದೆ ಅಂದ್ರೆ, ಬಾಲಿವುಡ್ ನಿಂದಲೂ ಕರೆ ಬರುತ್ತಿದೆ. ಹೌದು. ಈ ಹಿಂದೆಯೂ ಸಹ ಇತ್ತು. ಆದ್ರೆ ನಮ್ಮ ಕಲಾವಿದರೇ ಸ್ವಲ್ಪ ಯೋಚಿಸುತ್ತಿದ್ರು. ಆದ್ರೆ ಈಗ ಎಲ್ಲರಿಗೂ ಬೆಳೆಯಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಹಾಗಾಗಿ ಅವಕಾಶ ಸಿಕ್ಕಿದಾಗ ಉಪಯೋಗಿಸಿಕೊಳ್ಳಬೇಕು ಅಂತ, ವಿವಿಧ ಭಾಷೆಯಲ್ಲಿ ನಟನೆ ಮಾಡುತ್ತಿದ್ದಾರೆ.

ಅದೇ ರೀತಿ ಈಗ ನಮ್ಮ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಎಂದು ಕರೆಸಿಕೊಂಡಿರೋ ಕಿಚ್ಚ ಸುದೀಪ್ ಅವರು, ಬಾಲಿವುಡ್ ಗೆ ಎಂಟ್ರಿ ಕೊಟ್ಟಿರೋ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಹೌದು. ಬಾಲಿವುಡ್ ನ ಬ್ಯಾಡ್ ಬಾಯ್ ಆಗಿರೋ ಸಲ್ಲು ಅಭಿನಯದ ದಬಾಂಗ್ 3ರಲ್ಲಿ ನಮ್ಮ ಕಿಚ್ಚ ಅಭಿನಯಿಸಲಿದ್ದಾರೆ. ಆದ್ರೆ ಈಗ ಇದರಲ್ಲಿ ಮತ್ತೊಂದು ಹೊಸ ವಿಷಯ ಹುಟ್ಟಿಕೊಂಡಿದೆ. ಹಾಗಾದ್ರೆ, ಆ ವಿಷಯದ ಬಗ್ಗೆ ತಿಳಿಸ್ತೀವಿ ನೀವೇ ನೋಡಿ.

ಕಿಚ್ಚನ ಜೊತೆ ಬಾಲಿವುಡ್ ಗೆ ಹೋಗಿರೋ ಜೋಗಿ ಪ್ರೇಮ್

ಕಳೆದ ಕೆಲವು ದಿನಗಳ ಹಿಂದೆಯೇ, ಕಿಚ್ಚ ಬಾಲಿವುಡ್ ಗೆ ಹೋಗಿದ್ದಾರೆ. ಹೌದು. ಸಲ್ಲು ಅಭಿನಯದ ದಬಾಂಗ್ 3ರಲ್ಲಿ ಕಿಚ್ಚನೇ ಅಭಿನಯಿಸಬೇಕು ಅನ್ನೋದು ಚಿತ್ರತಂಡದ ಆಸೆಯಾಗಿತ್ತು. ಹಾಗಾಗಿ ಕಿಚ್ಚನನ್ನ ದಬಾಂಗ್ 3ರಲ್ಲಿ ನಟಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪಿಕೊಂಡ ಕಿಚ್ಚ ಬಾಲಿವುಡ್ ಗೆ ಹೋಗಿದ್ದಾರೆ. ಆದ್ರೆ ಹೋಗುವಾಗ ಜೊತೆಯಲ್ಲಿ ತಮ್ಮ ಆತ್ಮೀಯ ಗೆಳಯನಾಗಿರುವ ಜೋಗಿ ಪ್ರೇಮ್ ಅವರನ್ನ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಈಗ ಒಂದು ಸುದ್ದಿ ಕೇಳಿಬರುತ್ತಿದೆ. ಸಲ್ಲು ಗೆ, ಪ್ರೇಮ್ ನಿರ್ದೇಶನ ಮಾಡಲಿದ್ದಾರಾ? ಎಂದು. ಹೌದು. ಅದಕ್ಕೆ ಪೂರಕವಾಗಿ ಅವರಿಬ್ಬರು ಒಟ್ಟಿಗೆ ತೆಗೆಸಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಲ್ಲು ಗೆ ಆಕ್ಷನ್ ಕಟ್ ಹೇಳುತ್ತಾರ ಪ್ರೇಮ್?

ಕಿಚ್ಚ ಬಾಲಿವುಡ್ ಗೆ ಹೋಗುವಾಗ ಪ್ರೇಮ್ ಅವರನ್ನ ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿರ್ತಾರೆ. ಆ ಸಮಯದಲ್ಲಿ ಪ್ರೇಮ್ ಹಾಗೂ ಸಲ್ಲು ಇಬ್ಬರು ಒಟ್ಟಿಗೆ ನಿಂತು, ಒಂದು ಫೋಟೋ ತೆಗೆಸಿಕೊಳ್ತಾರೆ. ಆ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಪೋಸ್ಟ್ ಮಾಡಿದ ಕೂಡಲೇ, ನೋಡಿದವರು ಒಂದು ಕ್ಷಣದಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, ಪ್ರೇಮ್, ಸಲ್ಲು ಜೊತೆಗಿನ ಫೋಟೋ ನೋಡಿ, ಸಲ್ಲುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಜೊತೆಗೆ ಎಲ್ಲೆಡೆ ಅದೇ ಸುದ್ದಿಯೇ ಹರಿದಾಡಿತ್ತು. ಜೊತೆಗೆ ಗೊಂದಲವು ಸೃಷ್ಟಿಯಾಗಿತ್ತು. ಆದ್ರೆ ಈಗ ಕಿಚ್ಚ ಆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಗೊಂದಲಕ್ಕೆ ತೆರೆ ಎಳೆದ ಕಿಚ್ಚ

ಸಲ್ಲು ಹಾಗೂ ಪ್ರೇಮ್ ಅವರ ಫೋಟೋವನ್ನ ನೋಡಿದ ಅಭಿಮಾನಿಗಳು ಸಿನಿಮಾ ಮಾಡುತ್ತಿದ್ದಾರೆ ಅಂತ ತಿಳಿದಿದ್ದರು. ಜೊತೆಗೆ ಗೊಂದಲದ ಮನೆ ಮಾಡಿಕೊಂಡಿದ್ದರು. ಆದ್ರೆ ಈಗ ಆ ಗೊಂದಲಕ್ಕೆ ಕಿಚ್ಚ ತೆರೆ ಎಳೆದಿದ್ದಾರೆ. ಹೌದು. ಸುದೀಪ್ ಅವರು, ಆ ಫೋಟೋ ಬಗೆಗಿನ ನಿಜಾಂಶ ತಿಳಿಸಿದ್ದಾರೆ. ಪ್ರೇಮ್ ಹಾಗೂ ಸಲ್ಮಾನ್ ಖಾನ್ ಅವರು, ಯಾವುದೇ ಸಿನಿಮಾ ಮಾಡುತ್ತಿಲ್ಲ. ಸುಮ್ನೆ, ಜೊತೆಗೆ ಫೋಟೋ ಹಾಕಿದ್ದಾರೆ ಅಷ್ಟೇ. ಯಾವುದೇ ಸಿನಿಮಾ ಮಾಡುತ್ತಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳಿಗಿದ್ದ ಗೊಂದಲಕ್ಕೆ ಅಂತೂ ಇಂತೂ ಕಿಚ್ಚ ತೆರೆ ಎಳೆದಿದ್ದಾರೆ. ಪ್ರೇಮ್ ಅವರು ಕೇವಲ ನನ್ನ ಜೊತೆ ಬಂದು ಸಲ್ಮಾನ್ ಖಾನ್ ಅವರನ್ನ ಭೇಟಿಯಾಗಿದ್ದಾರೆ. ಅದು ಅಲ್ಲಿಗೆ ಕೊನೆ ಆಗಿದೆ” ಎಂದು ಹೇಳುವ ಮೂಲಕ ಸುಳ್ಳುಸುದ್ದಿಗೆ ಬ್ರೇಕ್ ಹಾಕಿದ್ದಾರೆ ಕಿಚ್ಚ. ಆದ್ರೆ ಮುಂದಿನ ದಿನಗಳಲ್ಲಿ ಏನಾದ್ರು ಸಿನಿಮಾ ಮಾಡ್ತಾರ ಅಂತ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here