ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲಿರುವ ದುನಿಯಾ ವಿಜಿ.

0
518

ಆಸಕ್ತಿ ಹಾಗೂ ನಂಬಿಕೆ ಇದ್ದರೆ ಏನು ಬೇಕಾದ್ರು ಮಾಡಬಹುದು. ಹೌದು. ಯಾವುದೇ ಕೆಲಸ ಮಾಡಬೇಕು ಎಂದರೆ, ಮೊದಲು ಅದಕ್ಕೆ ಆಸಕ್ತಿ ಇರಬೇಕು. ನಂತರ ನಾನು ಗೆದ್ದೇ ಗೆಲ್ಲುತ್ತೇನೆ ಅನ್ನೋ ನಂಬಿಕೆ ಇರಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಅದೇ ರೀತಿ, ತಮ್ಮ ನಂಬಿಕೆಯಿಂದ, ಆಸಕ್ತಿ ವಹಿಸಿ, ಕೆಲಸ ಮಾಡಿ ಗೆದ್ದಿರುವವರು ನಮ್ಮಲ್ಲಿ ಹಲವರಿದ್ದಾರೆ. ಅದು ಯಾವ ರಂಗದಲ್ಲಿಯಾದರು ಆಗಿರಬಹುದು.

ಸಾಮಾನ್ಯವಾಗಿ ನಾವು ನೋಡಬಹುದು. ಮೊದಲೆಲ್ಲಾ ನಮ್ಮ ನಟರು ಸಿನಿಮಾ ಮಾಡೋಕೆ ಮಾತ್ರ ಆಸಕ್ತಿ ತೋರಿಸುತ್ತಿದ್ರು. ಅದರಲ್ಲಿ ಎಲ್ಲೋ ಕೆಲವ್ರು ತಮ್ಮ ಕಂಠ ಚೆನ್ನಾಗಿದ್ರೆ, ಸಿನಿಮಾಗಳಲ್ಲಿ ಹಾಡುಗಳನ್ನ ಹೇಳುತ್ತಿದ್ರು. ಆದ್ರೆ ಈಗ ಏನಾಗಿದೆ ಅಂದ್ರೆ, ನಮ್ಮ ನಾಯಕರು, ನಟನಾಗಿ ನಟಿಸುವುದರ ಜೊತೆಗೆ, ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಲು ಮುಂದಾಗುತ್ತಿದ್ದಾರೆ. ಇದು ಈಗಿನ ಹೊಸ ಟ್ರೆಂಡ್ ಆಗಿದೆ ಅಂತಾನೆ ಹೇಳಬಹುದು. ಅದರಲ್ಲೂ ಅವರೇ ನಟಿಸುವ ಸಿನಿಮಾಗೆ, ಅವರೇ ನಿರ್ದೇಶನ ಮಾಡಲು ಮುಂದಾಗುತ್ತಿದ್ದಾರೆ. ಈಗ ಇದರ ಸಲಿಗೆ ದುನಿಯಾ ವಿಜಯ್ ಕೂಡ ಸೇರುತ್ತಿದ್ದಾರೆ.

ತಮ್ಮ ಚಿತ್ರಕ್ಕೆ ತಾವೇ, ನಿರ್ದೇಶನ ಮಾಡುತ್ತಿರುವ ದುನಿಯಾ ವಿಜಿ

ಕರಿಚಿರತೆ ನಿಜಕ್ಕೂ ಒಬ್ಬ ಅದ್ಬುತ ಕಲಾವಿದ. ದುನಿಯಾ ಸಿನಿಮಾ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ವಿಜಿ, ಈಗ ಸ್ಯಾಂಡಲ್ ವುಡ್ ನ, ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಇವರಿಗೆ ಸಿನಿಮಾ ಮಾಡೋ ಬಗೆಗಿನ ಹುಚ್ಚು ಹೆಚ್ಚಾಗಿದೆ. ಹಾಗಾಗಿ ಯಾವುದೊ ಒಂದು ಕಾಲದಲ್ಲೇ, ಸಿನಿಮಾ ನಿರ್ದೇಶನ ಮಾಡಬೇಕು ಎಂದುಕೊಂಡಿದ್ದರು. ಆದ್ರೆ ಕೆಲವು ವೈಯಕ್ತಿಕ ಕಾರಣಗಳಿಂದ, ಅವರ ಆಸೆ ಫುಲ್ ಫಿಲ್ ಆಗಿರಲಿಲ್ಲ. ಆದ್ರೆ ಈಗ ತಮ್ಮ ಆಸೆಯನ್ನ ಪೂರ್ಣಗೊಳಿಸಿಕೊಳ್ಳಲು ಮುಂದಾಗಿದ್ದಾರೆ. ಹೌದು. ವಿಜಿ, ತಾನು ನಟಿಸುತ್ತಿರುವ ಮುಂದಿನ ಸಿನಿಮಾಗೆ, ಅವರೇ ಡೈರೆಕ್ಟ್ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಈ ಚಿತ್ರಕ್ಕೆ, ಹಲವು ನಿರ್ದೇಶಕರ ಹೆಸರು ಕೇಳಿಬಂತು. ಆದ್ರೆ ಆ ಎಲ್ಲಾ ಹೆಸರುಗಳು ಈಗ ಹಿಂದಕ್ಕೆ ಸರಿದಿದೆ. ಯಾಕಂದ್ರೆ, ಆ ಸಿನಿಮಾಗೆ ವಿಜಿಯೇ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಸಲಗ ಕ್ಕೆ ಆಕ್ಷನ್ ಕಟ್ ಹೇಳಲಿರುವ ವಿಜಿ

ಸಲಗ ಚಿತ್ರಕ್ಕೆ ರಾಘು ಶಿವಮೊಗ್ಗ ಅವರು, ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಎಲ್ಲರು ಅದನ್ನ ನಿಜ ಎಂದು ನಂಬಿದ್ದರು. ಆದ್ರೆ ಈಗ ಅದು ಸುಳ್ಳಾಗಿದೆ. ಯಾಕಂದ್ರೆ, ಸಲಗ ಚಿತ್ರಕ್ಕೆ ವಿಜಿಯೇ ನಿರ್ದೇಶನ ಮಾಡುತ್ತಿದ್ದಾರೆ. ಹೌದು. ಈ ಚಿತ್ರದ ಕಥೆ ಬರೆದದ್ದು ಕೂಡ, ವಿಜಿಯೇ. ಹಾಗಾಗಿ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನ ತಾನೇ ಮಾಡುವುದಾಗಿ ನಿರ್ಧಾರ ಮಾಡಿದ್ದರು. ಆದ್ರೆ ನಿರ್ಮಾಣ ಕೆಪಿ ಶ್ರೀಕಾಂತ್‌ ತಂಡಕ್ಕೆ ನೀಡಿದ್ದಾರೆ. ಆದ್ರೆ ನಿರ್ದೇಶನ ಕೂಡ, ರಾಘು ಮಾಡುತ್ತಾರೆ ಎಂದು ತಿಳಿದಿದ್ದ, ಜನರಿಗೆ ವಿಜಿ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಯಾಕಂದ್ರೆ, ವಿಜಿ ಇದುವರೆಗೂ ಯಾವ ಸಿನಿಮಾವನ್ನು ನಿರ್ದೇಶನ ಮಾಡಿಲ್ಲ. ಅಲ್ಲದೆ, ಯಾರೊಬ್ಬರಿಗೂ ಅವರ ನಿರ್ದೇಶನದ ಬಗ್ಗೆ ಗೊತ್ತಿಲ್ಲ. ಹೀಗಿರುವಾಗ, ಒಂದೇ ಸರಿ ವಿಜಿ ಡೈರೆಕ್ಟ್ ಮಾಡುವ ವಿಷಯ ತಿಳಿದ ಅಭಿಮಾನಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದೊಡ್ಮನೆಯಲ್ಲಿ ಅಣ್ಣಾವ್ರ ಆಶೀರ್ವಾದ ಪಡೆದ ಕರಿಚಿರತೆ

ಇದು ವಿಜಿಯ ಮೊದಲ ನಿರ್ದೇಶನದ ಸಿನಿಮಾ ಆಗಿರೋದ್ರಿಂದ, ಶಿವರಾಜ್‌ಕುಮಾರ್‌ ಮನೆಗೆ ಭೇಟಿ ನೀಡಿ ಶಿವಣ್ಣ ಸಮ್ಮುಖದಲ್ಲಿ ಡಾ ರಾಜ್‌ಕುಮಾರ್‌ ಅವರ ಅಶೀರ್ವಾದ ಪಡೆದುಕೊಂಡಿದ್ದಾರೆ. ಇನ್ನೂ ಚಿತ್ರದ ಉತ್ತಮ ನಟರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಟಗರು ತಂಡವೇ ಚಿತ್ರದಲ್ಲಿ ಇರೋದ್ರಿಂದ, ನಿರೀಕ್ಷೆ ಹೆಚ್ಚಾಗಿಯೇ ಹೊತ್ತಿದ್ದಾರೆ ವಿಜಿ. ಇನ್ನೇನು ಜೂನ್‌ 6 ರಂದು ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆದು, ಅಂದಿನಿಂದಲೇ ‘ಸಲಗ’ ಚಿತ್ರಕ್ಕೆ ಶೂಟಿಂಗ್‌ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಒಟ್ಟಿನಲ್ಲಿ ನಮ್ಮ ನಟರೆಲ್ಲಾ ನಿರ್ದೇಶನ ಮಾಡೋಕೆ ಶುರುಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಇವರು ನಟರಾಗಿ ಉಳಿಯುತ್ತಾರಾ? ಅಥವಾ ನಿರ್ದೇಶಕರಾಗಿ, ತಮ್ಮ ಸಿನಿಮಾ ಜೀವನ ನಡೆಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here