ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆ ಹಾರಿಸಿದ ಪುಟ್ಟ ಕನ್ನಡಿಗ

0
497
sadhaneya balaka

ಚಿಕ್ಕ ಮಕ್ಕಳು ಅಂದ್ರೆ ಸಾಮಾನ್ಯವಾಗಿ ಆಟ ಆಡಿಕೊಂಡು ಕಾಲ ಕಳೆಯುತ್ತಾರೆ. ಯಾಕಂದ್ರೆ ಅವರದ್ದು ಕನಸು ಕಾಣುವ ವಯಸ್ಸು ಅಲ್ಲ, ಚಿಂತಿಸುವ ಶಕ್ತಿಯು ಅವರಿಗಿರುವುದಿಲ್ಲ. ಹಾಗಾಗಿ ಯಾವ ರೀತಿಯ ಯೋಚನೆಯಿಲ್ಲದೆ ತಾವಾಯ್ತು, ತಮ್ಮ ತಿಂಡಿ ಹಾಗು ಆಟ ಆಯಿತು ಅಂತ ಇರ್ತಾರೆ. ಇನ್ನೊಂದೆಡೆ ಸ್ಕೂಲ್, ಹೋಮ್ ವರ್ಕ್ ಅಂತ ಬ್ಯುಸಿಯಾಗಿರ್ತಾರೆ. ಇಂಥ ಮಕ್ಕಳಿಗೆ ದುಡ್ಡು, ಹಣ ಅನ್ನೋ ಯಾವುದರ ಚಿಂತೆಯು ಇರುವುದಿಲ್ಲ. ಯಾಕಂದ್ರೆ ತಮಗೆ ಇಷ್ಟವಾದ ತಿಂಡಿ ಕೊಡ್ಸಿದ್ರೆ ಸಾಕು ಅದೇ ಅವರಿಗೆ ಸ್ವರ್ಗ ಸಿಕ್ಕಿದಷ್ಟು ಖುಷಿಯಾಗಿರುತ್ತೆ. ಆದ್ರೆ ಇಲ್ಲೊಬ್ಬ ಪೋರ ತನ್ನ ಚಿಕ್ಕ ವಯಸ್ಸಿನಲ್ಲೇ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾನೆ. ಹೌದು. ತನ್ನ ಸಾಧನೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದಾನೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆ ಹಾರಿಸಿದ ಬಾಲಕ

ಈ ಬಾಲಕನಿಗೆ ನೋಡೋಕೆ ಮಾತ್ರ ಚಿಕ್ಕ ವಯಸ್ಸು. ಆದ್ರೆ ಎಂಥ ದೊಡ್ಡವರು ಮಾಡಲಾಗದ ಸಾಧನೆಯನ್ನು ಇವನು ಮಾಡಿದ್ದಾನೆ. ಹೌದು. ಈತನ ಹೆಸರು ನಿಶಾಂತ್. ಈತ ಮೂಲತಃ ಸಿಲಿಕಾನ್ ಸಿಟಿಯ ಬಾಗಲುಗುಂಟೆಯ ನಿವಾಸಿ. ಇನ್ನು ಇವನ ತಂದೆ ತಾಯಿ ಶಿವಲಿಂಗ ಮತ್ತು ಮಂಜುಳ. ಈಗ ಇವರ ಪುತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಹೌದು. ನಿಶಾಂತ್ ಗೆ ಚಿಕ್ಕ ವಯಸ್ಸಿನಿಂದಲೂ ಓದಿನ ಬಹಳ ಆಸಕ್ತಿ ಇತ್ತು. ಹಾಗಾಗಿ ಇವರ ಪೋಷಕರು ಆತನನ್ನು ಅಬಾಕಸ್ ತರಗತಿಗೆ ಸೇರಿಸಿದ್ದರು. ಹಾಗಾಗಿ ನಿಶಾಂತ್ ತನ್ನ ಚಿಕ್ಕ ವಯಸ್ಸಿನಿಂದಲೂ ಅಬಾಕಸ್ ತರಗತಿಯಲ್ಲೇ ಓದುತ್ತಾನೆ. ಈಗ ಅವನು ಅಬಾಕಸ್ ತರಗತಿಯಲ್ಲಿ ಓದಿರುವುದೇ ಅವನು ಇಡೀ ದೇಶಕ್ಕೆ ಚಿರ ಪರಿಚಿತನಾಗಲು ಕಾರಣವಾಗಿದೆ.

ಚೀನಾದಲ್ಲಿ ಆಯೋಜಿಸದ್ದ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ

ಇನ್ನು ಅಬಾಕಸ್ ತರಗತಿಯಲ್ಲಿ ಓದಿದ ಮಕ್ಕಳಿಗೆಲ್ಲ ಒಂದು ಸ್ಪರ್ಧೆ ಏರಪಡಿಸಲಾಗಿತ್ತು. ಅದರಲ್ಲಿ ನಿಶಾಂತ್ ಕೂಡ ಭಾಗವಹಿಸಿದ್ದ. ಹೌದು. ನಿಶಾಂತ್ ಅಬಾಕಸ್ ನಲ್ಲಿ ನಿಪರಿಣಿತಿ ಹೊಂದಿದ್ದು ಅಬಾಕಸ್ ಲೆವೆಲ್ ನಲ್ಲಿ ಶಾಲಾ ಮಟ್ಟ, ವಿಭಾಗ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ರಾಷ್ಟ್ರ ಮಟ್ಟವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾನೆ. ಹೌದು. ಚೀನಾದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಹಲವು ದೇಶದ ಪುಟಾಣಿಗಳು ಭಾಗವಹಿಸಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಶಾಂತ್ ತನ್ನ ಪರಿಣಿತಿಯ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.

ಕ್ಲಿಷ್ಟಕರ ಪ್ರಶ್ನೆ ಹಾಗು ಲೆಕ್ಕಗಳಿಗೆ ಸುಲಭವಾಗಿ ಉತ್ತರ ನೀಡಿದ್ದಾನೆ

ಇನ್ನು ಈ ಸ್ಪರ್ಧೆಯಲ್ಲಿ ಭಾರತ ಚೀನಾ, ಜಪಾನ್, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ 40 ದೇಶಗಳು ಭಾಗವಹಿಸಿದ್ದವು. ಈ 40 ದೇಶಗಳಿಂದ ಸುಮಾರು 1000 ಕ್ಕೂ ಹೆಚ್ಚು ಅಬಾಕಾಸ್ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಾಗಾಗಿ ಎಲ್ಲ ಮಕ್ಕಳಿಗೂ ಸ್ಪರ್ಧೆಯಲ್ಲಿ 80 ಹಂತದ ಲೆಕ್ಕಗಳನ್ನು ನೀಡಿ, 5 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಅಲ್ಲದೆ ಲೆಕ್ಕಗಳಿಗೆ ಉತ್ತರ ನೀಡಲು ಯಾವುದೇ ಉಪಕರಣಗಳನ್ನು ನೀಡಿರಲಿಲ್ಲ. ಬದಲಿಗೆ ತಮ್ಮ ಬೆರಳಿನಲ್ಲೇ ಲೆಕ್ಕ ಹಾಕಿ, ಉತ್ತರ ನೀಡಬೇಕಿತ್ತು. ಅದರಂತೆ. ನಿಶಾಂತ್ ಅಷ್ಟು ಲೆಕ್ಕಗಳಿಗೆ ಯಾವುದೇ ಉಪಕರಣಗಳಿಲ್ಲದೆ, ಕೇವಲ 3 ನಿಮಿಷದಲ್ಲಿ ಉತ್ತರ ನೀಡಿದ್ದಾನೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರ್ಯಾಂಡ್ ಚಾಂಪಿಯನ್ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಭಾರತದ ಕೀರ್ತಿ ಪತಾಕೆಯನ್ನ ಎತ್ತಿ ಹಿಡಿದಿದ್ದಾನೆ.

ಅಂತೂ ಇಂತೂ ನಿಶಾಂತ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಂತರಾಷ್ಟ್ತ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿರೋದಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here