ಗಾನ ಕೋಗಿಲೆ ಎಸ್ ಜಾನಕಿ ಅವರ ಆರೋಗ್ಯದಲ್ಲಿ ಏರುಪೇರು. ಆಸ್ಪತ್ರೆಗೆ ದಾಖಲು.

0
637

ಸಂಗೀತ, ಕಲೆ ಅನ್ನೋದು ಅಷ್ಟೊಂದು ಸುಲಭವಾಗಿ ಯಾರಿಗು ಒಲಿಯಲ್ಲ. ಅದನ್ನ ಒಲಿಸಿಕೊಳ್ಳೋಕೆ ಮಹಾನ್ ಸಾಧನೆ ಮಾಡಬೇಕು. ಹೌದು. ಸಂಗೀತ, ನೃತ್ಯ ಇವೆಲ್ಲವೂ ತಪಸ್ಸಿನ ರೀತಿ. ಒಂದೆರಡು ದಿನದಲ್ಲಿ ಅಥವಾ ಒಂದೆರಡು ತಿಂಗಳುಗಳಲ್ಲಿ ಇವುಗಳನ್ನ ಕಲಿಯೋಕೆ ಆಗಲ್ಲ. ವರ್ಷಾನು, ವರ್ಷಗಳ ವರೆಗೆ ಕಲಿಯಬೇಕು. ಆಗ ಮಾತ್ರ ಇವುಗಳ ಒಂದೊಂದು ಸಣ್ಣ ತುಣುಕುಗಳನ್ನ ಕಲಿಯೋಕೆ ಆಗುತ್ತೆ. ಒಂದು ದಿನದಲ್ಲಿ ಕಲಿಯುತ್ತೇನೆ ಅನ್ನೋದು ಸುಳ್ಳು. ಅದೇ ರೀತಿ ಇಲ್ಲೊಬ್ಬರು ಗಾನ ಕೋಗಿಲೆಯಿದ್ದಾರೆ. ಇವರು ಆ ಬಿರುದನ್ನ ಪಡೆದರೂ, ನಾನಿನ್ನು ಸಂಗೀತ ಕಲಿಯುತ್ತಲೇ ಇದ್ದೇನೆ ಅಂತ ತಿಳಿಸುತ್ತಾರೆ.

ಹೌದು. ಈ ಗಾಯಕಿಯ ಸಂಗೀತವನ್ನ ಇಷ್ಟ ಪಡದಿರುವವರೇ ಯಾರು ಇಲ್ಲ. ಯಾಕಂದ್ರೆ ತಮ್ಮ ಕಂಠಸಿರಿಯಿಂದ, ಎಲ್ಲರ ಮನಸ್ಸನ್ನ ಸೂರೆಯಾಗುವಂತೆ ಮಾಡಿದ್ದಾರೆ. ಇವರು ಸುಮಾರು 48 ಸಾವಿರಕ್ಕಿಂತಲೂ ಹೆಚ್ಚಿನ ಹಾಡುಗಳನ್ನ ಹಾಡಿದ್ದಾರೆ. ಯಾವ ಭಾಷೆಯಲ್ಲಿ ಬೇಕಾದರೂ, ಹಾಡುವ ಸಾಮರ್ಥ್ಯ ಹೊಂದಿದ್ದಾರೆ ಈ ಗಾಯಕಿ. ಆದರೆ ಇಂಥ ಗಾಯಕಿಯೂ ಈಗ ಅನಾರೋಗ್ಯ ಸ್ಥಿತಿಯಲ್ಲಿದ್ದಾರೆ. ಹಾಗಾದ್ರೆ ಅವರಿಗೆ ಆಗಿರೋದಾದ್ರೂ ಏನು ಅಂತ ನೀವೇ ನೋಡಿ.

ಗಾನ ಕೋಗಿಲೆ ಎಸ್. ಜಾನಕಿ ಆಸ್ಪತ್ರೆಗೆ ದಾಖಲು

ಎಸ್. ಜಾನಕಿ ಅವರ ಸಂಗೀತ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟ. ಯಾಕಂದ್ರೆ, ತನ್ನ ಧ್ವನಿಯಿಂದ ಎಲ್ಲರನ್ನ, ತನ್ನತ್ತ ಸೆಳೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಎಲ್ಲಿ ನೋಡಿದರು, ಇವರದ್ದೇ ಹಾಡುಗಳು. 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ.ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಅದು ಇಡೀ ಕರ್ನಾಟಕಕ್ಕೆ ಹೆಸರು ವಾಸಿಯಾಗಿತ್ತು. ಆದರೆ ಇಂಥ ಗಾನ ಕೋಗಿಲೆ, ಆಸ್ಪತ್ರೆಗೆ ದಾಖಲಾಗಿರೋದು, ಅವರ ಕುಟುಂಬದವರಿಗೆ ಆತಂಕ ತರಿಸಿದೆ.

ಸೊಂಟ ಮುರಿದು ಆಸ್ಪತ್ರೆಗೆ ದಾಖಲು

ಎಸ್. ಜಾನಕಿ ಅವರು ಸೊಂಟ ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು. ಕಳೆದ ಕೆಲವು ದಿನಗಳ ಹಿಂದೆ, ಅವರು ತಮ್ಮ ಸಂಬಂಧಿಕರ ಮನೆಗೆಂದು ಮೈಸೂರಿಗೆ ಹೋಗಿದ್ದರು. ಆದರೆ ಯಾವುದೊ ಸಮಯದಲ್ಲಿ, ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. 3 ದಿನಗಳ ಹಿಂದೆಯೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಬಿದ್ದಿರೋದ್ರಿಂದ, ನೋವಾಗಿರಬೇಕೆಂದು ಮನೆಯವರು ತಿಳಿದಿದ್ದಾರೆ. ಆದ್ರೆ ಹೆಚ್ಚಾಗಿ ಪೆಟ್ಟಾಗಿರೋದ್ರಿಂದ ವೈದ್ಯರು 3 ದಿನಗಳಿಂದಲೂ ಚಿಕಿತ್ಸೆ ನೀಡುತ್ತಲೇ ಇದ್ದಾರೆ.

ಚಿಕಿತ್ಸೆ ಮುಂದುವರೆಸಿರುವ ವೈದ್ಯರು

ಬಿದ್ದಿರುವ ಪೆಟ್ಟು ಹೆಚ್ಚಾಗಿರೋದ್ರಿಂದ ವೈದ್ಯರು 3 ದಿನಗಳಿಂದ ಚಿಕಿತ್ಸೆ ನೀಡುತ್ತಲೇ ಇದ್ದಾರೆ. ಆದರೆ ಯಾವುದೇ ರೀತಿಯಲ್ಲಿ ಗುಣಮುಖವಾಗಿಲ್ಲ. ಹಾಗಾಗಿ ಇನ್ನೂ ಚಿಕಿತ್ಸೆ ನೀಡಲೇ ಬೇಕು ಎಂದು ತಿಳಿಸಿದ್ದಾರೆ. ಯಾಕಂದ್ರೆ, ಸ್ವಲ್ಪವೂ ಎದ್ದು ಓಡಾಡಲು ಆಗುತ್ತಿಲ್ಲ. ಜೊತೆಗೆ ಹಾಸಿಗೆಯ ಮೇಲೆಯೇ ಜಾನಕಿ ಅವರಿಗೆ ಕೂರಲು ಆಗುತ್ತಿಲ್ಲವಂತೆ. ಹಾಗಾಗಿ ಅವರಿಗೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಅವರ ಕುಟುಂಬದವರಿಗೆ ತಿಳಿಸಿದ್ದಾರಂತೆ. ಜೊತೆಗೆ ಈಗಾಗಲೇ ಜಾನಕಿ ಅವರಿಗೆ 80 ವರ್ಷ ವಯಸ್ಸಾಗಿದೆ. ಹಾಗಾಗಿ ಸೊಂಟದ ಭಾಗ, ತುಂಬ ಮೆದುವಾಗಿರೋದ್ರಿಂದ, ನೋವು ಹೆಚ್ಚಾಗಿ ಆಗಿದೆ. ಯಾಕಂದ್ರೆ, ವಯಸ್ಸಾದ ಮೇಲೆ ದೇಹದ ಭಾಗಗಳು ಮೆದುವಾಗುವುದು ಸಾಮಾನ್ಯ. ಹಾಗಾಗಿ ಅವರಿಗೆ ಪಟ್ಟು ಜೋರಾಗಿ ಬಿದ್ದಿದೆ ಎಂದು ತಿಳಿಸಿದ್ದಾರೆ.

ನಿಜಕ್ಕೂ ನೆಚ್ಚಿನ ಕಲಾವಿದರಿಗೆ ಈ ರೀತಿ ಆದರೆ ಯಾರಿಂದಲೂ ಸಹಿಸಲು ಆಗುವುದಿಲ್ಲ. ಯಾಕಂದ್ರೆ, ಇವರ ಕಂಠಕ್ಕೆ ಮರುಳಾಗದವರೇ ಯಾರು ಇಲ್ಲ. ಅದಕ್ಕೋಸ್ಕರ ಇವರು 4 ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇಂಥ ವ್ಯಕ್ತಿಗಳಿಗೆ ಈ ರೀತಿ ಆದ್ರೆ, ಬೇಸರವಾಗುತ್ತದೆ. ಆದಷ್ಟು ಬೇಗ ಜಾನಕಿಯ ಅವರ ಅರೋಗ್ಯ ಸುಧಾರಿಸಲಿ ಅನ್ನೋದು ನಮ್ಮ ಆಸೆ ಕೂಡ.

LEAVE A REPLY

Please enter your comment!
Please enter your name here