ಪೊಲೀಸ್ ಆಗಿ ಕೈಯಲ್ಲಿ ಮಚ್ಚು ಹಿಡಿದಿರೋ ‘ರುಸ್ತುಂ’ ಟ್ರೈಲರ್ ನಲ್ಲಿ ಮನದಾಳದ ಮಾತು ಹಂಚಿಕೊಂಡ ಶಿವಣ್ಣ..

0
623

ನಮ್ಮ ಚಂದನವನ ಮೊದಲಿನಿಂದಲೂ, ಉದಾರ ಮನಸ್ಸಿರುವಂತಹದ್ದು. ಯಾಕಂದ್ರೆ ಸಿನಿಮಾ ಮಾಡಬೇಕು ಅಂತ ಬಂದವರ ಕಲೆ ನೋಡಿ, ತನ್ನ ಕೈಯಲ್ಲಿ ಆದಂತ ಸಹಾಯ ಮಾಡುತ್ತಿದೆ. ಹಾಗಾಗಿ ನಮ್ಮ ಸ್ಯಾಂಡಲ್ ವುಡ್ ಗೆ ಅನೇಕ ನಟರು, ನಟಿಯರು ಹಾಗೂ ಕಲಾವಿದರು ಎಂಟ್ರಿ ಕೊಡುತ್ತಿದ್ದಾರೆ. ತಾನು ಏನು ಅಲ್ಲ ಅಂತ ಬಂದು ಸಿನಿಮಾ ರಂಗಕ್ಕೆ ಕಾಲಿಟ್ಟವರು, ಈಗ ಜಗತ್ತೇ ತಲೆ ಎತ್ತಿ ನೋಡುವಂತೆ ಮಾಡಿದ್ದಾರೆ.

ಇಂತ ಕಲಾವಿದರನ್ನ ಒಳಗೊಂಡ ನಮ್ಮ ಸ್ಯಾಂಡಲ್ ವುಡ್ ವಾರವಾದರೇ ಸಾಕು ಚಿತ್ರಗಳ ಮೇಲೆ ಚಿತ್ರಗಳನ್ನ ಬಿಡುಗಡೆ ಮಾಡುತ್ತಿದೆ. ಇನ್ನು ನಮ್ಮ ನೆಚ್ಚಿನ ನಾಯಕರ ಸಿನಿಮಾ ಅಂದ್ರೆ ಎಲ್ಲ ಕೆಲಸ ಬಿಟ್ಟು ಥಿಯೇಟರ್ ಮುಂದೆ ಹೋಗಿ ಕಾಯುತ್ತೀವಿ. ಈಗ ಅದೇ ರೀತಿ ಜನರ ನೆಚ್ಚಿನ ನಾಯಕನಾಗಿರೋ ನಮ್ಮ ಹ್ಯಾಟ್ರಿಕ್ ಹೀರೊ ಶಿವಣ್ಣ ಅವರ ಸಿನಿಮಾಗಳು ಈಗ ಒಂದರ ಹಿಂದೆ ಒಂದು ರಿಲೀಸ್ ಆಗುತ್ತಿವೆ. ಕವಚ ತೆರೆ ಮೇಲೆ ಬಂದಿದ್ದೆ ತಡ, ಈಗ ಮತ್ತೊಂದು ಸಿನಿಮಾ ಟ್ರೈಲರ್ ಬಿಡುಗಡೆ ಮಾಡ್ತಿದ್ದಾರೆ.

ರುಸ್ತುಂ ಚಿತ್ರಕ್ಕೆ ಲಗ್ಗೆ ಇಡುತ್ತಿದ್ದಾರೆ ಶಿವಣ್ಣ

ಹೌದು. ಮೊನ್ನೆ ತಾನೇ ನಮ್ಮ ಶಿವಣ್ಣ ಅವರ ಕವಚ ಚಿತ್ರ ಬಿಡುಗಡೆಯಾಗಿದೆ. ಅಭಿಮಾನಿಗಳ ಮನಸಲ್ಲಿ ಕವಚ ಉಳಿದುಕೊಳ್ಳುವಂತಾಗಿದೆ. ಈಗ ಅದರ ಹಿಂದೆಯೇ ರುಸ್ತುಂ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿದ್ದಾರೆ. ಹೌದು. ಇಂದು ಆನಂದ್‌ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್‌ ಚಾನೆಲ್‌ ಮೂಲಕ ಟ್ರೇಲರ್‌ ಲಾಂಚ್‌ ಆಗುತ್ತಿದೆ. ಈ ಸಿನಿಮಾ ನಿಜಕ್ಕೂ ನಮ್ಮ ಶಿವಣ್ಣನಿಗೆ ತುಂಬಾ ವಿಶೇಷವಾಗಿದೆ. ಯಾಕಂದ್ರೆ ಚಿತ್ರದ ಕಥೆಯೇ ಒಂದು ರೀತಿ ವಿಭಿನ್ನವಾಗಿದೆ. ಹಾಗಾಗಿ ಇವತ್ತು ಕುತೂಹಲದಿಂದ ಈ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ. ಇನ್ನು ಟ್ರೈಲರ್ ಲಾಂಚ್ ಗೆ ಗಣ್ಯ ವ್ಯಕ್ತಿಗಳು ಹಾಗೂ ಸಿನಿಮಾ ರಂಗದವರು ಭಾಗವಹಿಸಿದ್ದಾರೆ.

ಮಚ್ಚು ಹಿಡಿದಿರುವ ಶಿವಣ್ಣ

ಶಿವರಾಜ್ ಕುಮಾರ್ ಮಚ್ಚು ಹಿಡಿದರೆ ಸಾಕು, ಸಿನಿಮಾ ಹಿಟ್ ಆದಂತೆ ಎನ್ನುವ ಮಾತು ಗಾಂಧಿ ನಗರದ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಈ ಬಾರಿ ಅವರು ಮತ್ತೆ ಮಚ್ಚು ಹಿಡಿದಿದ್ದಾರೆ. ಹಾಗಂತ ರೌಡಿಯಾಗಿ ಅಲ್ಲ. ಖಡಕ್ ಪೊಲೀಸರ ಆಫೀಸರ್ ಆಗಿ. ಇನ್ನೂ ಚಿತ್ರದಲ್ಲಿ ಖಡಕ್ ಡೈಲಾಗ್ ಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ. ಡೈಲಾಗ್ ಗಳಿಗೆ ಅಭಿಮಾನಿಗಳು ನಿಜಕ್ಕೂ ಫಿದಾ ಆಗೋದಂತು ಪಕ್ಕ. ಯಾಕಂದ್ರೆ ಟ್ರೈಲರ್ ನಲ್ಲಿ ಬರುವ ಡೈಲಾಗ್ ಗಳಿಗೆ ಅಭಿಮಾನಿಗಳು ಈ ರೇಂಜ್ ಗೆ ಶಿಳ್ಳೆ ಹೊಡಿತಿದ್ದಾರೆ ಅಂದ್ರೆ ಇನ್ನೂ ಸಿನಿಮಾ ಅಭಿಮಾನಿಗಳ ಮನಸಲ್ಲಿ ಯಾವ ರೀತಿ ಉಳಿಯಬಹುದು ಅನ್ನೋದು ನಿಜಕ್ಕೂ ಆಶ್ಚರ್ಯವಾಗಿದೆ. “ತುಂಬಾ ದಿನದ ಹಿಂದೇನೆ ಕಾಂಟ್ರಾಕ್ಟ್ ತೆಗೆದುಕೊಂಡವನು ನಾನು, ಬೇಜಾರಾಗಿ ಪಾರ್ಟ್ ಟೈಮ್ ಕೆಲಸಕ್ಕೆ ಬಂದಿದ್ದೀನಿಟ್ರೈಲರ್ ನಲ್ಲಿ ಈ ಡೈಲಾಗ್ ಅಂತೂ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ.

ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ರವಿ ವರ್ಮಾ

ಫೈಟ್ ಮಾಸ್ಟರ್ ರವಿ ವರ್ಮಾ ಇದೆ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ಭರಪೂರ ಆಕ್ಷನ್ ದೃಶ್ಯಗಳಿರಲಿವೆ ಎಂಬುದು ಪ್ರೇಕ್ಷಕರ ನಿರೀಕ್ಷೆಯಾಗಿತ್ತು. ಈ ನಿರೀಕ್ಷೆ ಸುಳ್ಳಾಗುವುದಿಲ್ಲ ಎಂಬುದಕ್ಕೆ ಟ್ರೈಲರ್ ಸಾಕ್ಷಿಯಾಗಿದೆ. ಚಿತ್ರದಲ್ಲಿ ತುಂಬಾನೇ ಗಮನ ಸೆಳೆಯುವುದು ಶಿವರಾಜ್ ಕುಮಾರ್ ಅವರ ಸ್ಟೈಲ್. ಅವರು ಹಿಂದೆಂದೂ ಕಾಣಿಸಿಕೊಳ್ಳದ ಅವತಾರ ತಾಳಿದ್ದಾರೆ. ಶಿವಣ್ಣ ಸೈಕಲ್ ನಲ್ಲಿ ರೌಡಿಗಳನ್ನ ಬೆನ್ನಟ್ಟುತ್ತಾರೆ. ಎನ್ಕೌಂಟರ್ ಮಾಡುವ ಮೂಲಕ ರೌಡಿಗಳ ಮನದಲ್ಲಿ ನಡುಕ ಹುಟ್ಟಿಸುತ್ತಾರೆ. ಕೈಯಲ್ಲಿ ಮಚ್ಚು ಹಿಡಿದು ಸಕತ್ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ರುಸ್ತುಂ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿವೇಕ್ ಒಬೆರಾಯ್

ರುಸ್ತುಂ’ನಲ್ಲಿ ವಿವಿವೇಕ್ ಒಬೆರಾಯ್ ನಟಿಸಿದ್ದಾರೆ. ಅವರ ಪಾತ್ರ ಭಿನ್ನವಾಗಿರಲಿದೆ ಎಂಬ ವಿಚಾರವನ್ನು ಟ್ರೈಲರ್ ನಲ್ಲೇ ಅನಾವರಣ ಮಾಡಿದ್ದಾರೆ ರವಿ ವರ್ಮ.ಈ ಚಿತ್ರದಲ್ಲಿ ಇವರ ನಟನೆ ಬಹಳ ವಿಶೇಷವಾಗಿದೆ. ಇನ್ನೂ ಶಿವಣ್ಣನಿಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ. ಜೊತೆಗೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಿದ್ದೂ, ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಒಟ್ಟಿನಲ್ಲಿ ಒಂದು ಮಾಸ್ ಲುಕ್ ಗೆಟಪ್ ನಲ್ಲಿ ನಮ್ಮ ಶಿವಣ್ಣ ರುಸ್ತುಂ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯಾಗಿ, ಕೈಯಲ್ಲಿ ಲಾಂಗ್ ಹಿಡಿದಿರುವುದು ಬಹಳ ವಿಶೇಷವಾಗಿದೆ. ಹಾಗಾಗಿ ಚಿತ್ರ ಟ್ರೈಲರ್ ಮೂಲಕವೇ ಜನರ ಮನಸ್ಸನ್ನ ಗೆದ್ದಿದೆ. ಹಾಗಾದ್ರೆ ಇನ್ನೂ ಸಿನಿಮಾ ಬಿಡುಗಡೆಯಾದಾಗ ಅಭಿಮಾನಿಗಳು ಯಾವ ರೀತಿ ಪ್ರೋತ್ಸಾಹ ನೀಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here