ಪಾಕ್ ಪತ್ರಕರ್ತರ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಹಿಟ್ ಮ್ಯಾನ್

0
721

ನಿನ್ನೆ ಭಾರತ, ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದು ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತದ ಆಟಗಾರರ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿತ್ತು. ರೋಹಿತ್ ಶರ್ಮಾ ಶತಕವನ್ನು ಭಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಕರ್ನಾಟಕದ ಆಟಗಾರ ಕೆ‌ಎಲ್ ರಾಹುಲ್ ಅವರು ಸಹ ಅರ್ಧ ಶತಕವನ್ನು ಭಾರಿಸಿದ್ದಾರೆ. 336 ರನ್ಸ್ ಗಳ ಟಾರ್ಗೆಟ್ ಭಾರತ ಪಾಕಿಸ್ತಾನಕ್ಕೆ ನೀಡುತ್ತಾರೆ. ಭಾರತದ ಬೌಲರ್ಸ್ ಪಾಕಿಸ್ತಾನದ ವಿಕೆಟ್ಸ್ ಬಹಳ ಬೇಗನೆ ಪಡೆದುಕೊಳ್ಳುತ್ತಾರೆ. ಆನಂತರ ಮಳೆ ಬಂದಿರುವ ಕಾರಣದಿಂದಾಗಿ, ಡೆಕ್ವರ್ಸ್ ರೂಲ್ಸ್ ಪ್ರಕಾರ ಪಾಕಿಸ್ತಾನ ಸೋಲುತ್ತಾರೆ. ಭಾರತ ಗೆದ್ದಿರುವ ಕಾರಣದಿಂದಾಗಿ ಅನೇಕ ಸಿನಿಮಾ ಕಲಾವಿದರು ಶುಭಾಶಯಗಳನ್ನು ಕೋರಿದ್ದಾರೆ. ಸ್ಯಾಂಡಲ್ ವುಡ್ ನ ನಟಿ ಪಾರುಲ್ ಯಾದವ್ ಅವರು ವೀಡಿಯೋ ಮಾಡುವುದರ ಮೂಲಕ ಭಾರತ ವಿಶ್ವ ಕಪ್ ಗೆದ್ದೆ ಗೆಲ್ಲುತ್ತದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಸರ್ಫರಾಜ್ ಒಬ್ಬ ಶತ ಮೂರ್ಖ

ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಖಾನ್ ಅವರನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ದೂರಿದ್ದಾರೆ. ನಾನು ಹೇಳಿದ್ದೆ ಒಂದು ನೀನು ಮಾಡಿದ್ದೆ ಇನ್ನೊಂದು ಎಂದು ಹೇಳಿದ್ದಾರೆ. ನಾನು ನಿನಗೆ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದ್ದೆ, ಆದರೆ ನೀನು ಫೀಲ್ಡಿಂಗ್ ಯಾಕೆ ಆಯ್ಕೆ ಮಾಡಿಕೊಂಡಿದೀಯಾ ಎಂದು ಹರಿ ಹಾಯ್ದಿದ್ದಾರೆ. ಪಾಕಿಸ್ತಾನ ತಂಡದ ವೇಗದ ಬೌಲರ್ ಎಂದೆ ಗುರುತಿಸಿಕೊಂಡ ಶೋಯಬ್ ಅಕ್ತರ್ ಅವರು ಸಹ ಸರ್ಫರಾಜ್ ತಲೆಯಲ್ಲಿ ಬುದ್ದಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಮುಖ್ಯ ಶಕ್ತಿಯೆ ಬೌಲಿಂಗ್. ನಮ್ಮ ಬ್ಯಾಟಿಂಗ್ ಲೈನ್ ಅಪ್ ಅಷ್ಟು ಚೆನ್ನಾಗಿಲ್ಲ ,ಎಂದು ತಿಳಿದಿದ್ದರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ದೇಶದ ಬ್ಯಾಟಿಂಗ್ ಆರ್ಡರ್ ಚೆನ್ನಾಗಿದೆ, ಆದ್ದರಿಂದ ಅವರಿಗೆ ಚೇಸಿಂಗ್ ಆಪ್ಶನ್ ನೀಡಬಹುದಾಗಿತ್ತು. ಸರ್ಫರಾಜ್ ಒಬ್ಬ ಶತ ಮೂರ್ಖ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕ್ ಪತ್ರಕರ್ತರು ಸುದ್ದಿಗೋಷ್ಠಿ ನಡೆಸಿದ್ದರು

ಇನ್ನು ವಿಶ್ವ ಕಪ್ ಪಂದ್ಯಗಳಲ್ಲಿ ರೋಹಿತ್ ಶರ್ಮ ಅಮೋಘವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ಹಿಟ್ ಮ್ಯಾನ್ ಶತಕವನ್ನು ಬಾರಿಸಿದ್ದರು. ಆಸ್ಟ್ರೇಲಿಯ ವಿರುದ್ಧ ಅರ್ಧ ಶತಕ ಬಾರಿಸಿದ್ದು, ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಶತಕವನ್ನು ಬಾರಿಸುವ ಮೂಲಕ ವಿಶ್ವ ಕಪ್ ಟೋರ್ನಮೆಂಟ್ ನಲ್ಲಿ ಡಬಲ್ ಹಂಡ್ರೆಡ್ ರನ್ಸ್ ಗಳನ್ನು ಪೂರ್ಣಗೊಳಿಸಿರುವ ಕನ್ಶಿಸ್ಟೆಂಟ್ ಬಾಟ್ಸ್ ಮ್ಯಾನ್ ಎಂದು ನಿರೂಪಿಸಿದ್ದಾರೆ. ಮೊನ್ನೆ ನಡೆದ ಮ್ಯಾಚ್ ನಲ್ಲಿ ರೋಹಿತ್ ಶರ್ಮ 140 ರನ್ಸ್ ಗಳನ್ನು ಹೊಡೆದಿದ್ದಾರೆ. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸಹ ಇವರು ಪಡೆದುಕೊಂಡಿದ್ದಾರೆ. ಇನ್ನು ಪಂದ್ಯ ಮುಗಿದ ನಂತರ ಪಾಕ್ ಪತ್ರಕರ್ತರು ಸುದ್ದಿಗೋಷ್ಠಿ ನಡೆಸಿದ್ದರು.

ನಾನು ಪಾಕಿಸ್ತಾನ್ ತಂಡದ ಕೋಚ್ ಆಗಿದ್ದರೆ ಹೇಳುತ್ತಿದ್ದೆ 

ಸುದ್ದಿ ಗೋಷ್ಠಿಯಲ್ಲಿ ಒಬ್ಬ ಪತ್ರಕರ್ತ ನೀವು ಪಾಕ್ ಬ್ಯಾಟ್ಸ್ ಮೆನ್ ಗಳಿಗೆ ಏನು ಸಲಹೆ ನೀಡುತ್ತಿರಾ ಎನ್ನುವ ಪ್ರಶ್ನೆಯನ್ನು ರೋಹಿತ್ ಶರ್ಮಾ ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ರೋಹಿತ್ ಹಾಸ್ಯಮಯವಾಗಿ ಉತ್ತರವನ್ನು ನೀಡಿದ್ದಾರೆ. ನಾನು ಪಾಕಿಸ್ತಾನ್ ತಂಡದ ಕೋಚ್ ಆಗಿದ್ದರೆ ಹೇಳುತ್ತಿದ್ದೆ, ಈಗ ನಾನು ಏನು ಹೇಳಲಿ ಎಂದು ಉತ್ತರ ಕೊಟ್ಟಿದ್ದಾರೆ. ಇದನ್ನು ಕೇಳಿದ ಅನೇಕ ಪತ್ರಕರ್ತರು ಜೋರಾಗಿ ನಕ್ಕು ಸುದ್ದಿ ಗೋಷ್ಟಿಯನ್ನು ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ ಶತ್ರು ದೇಶವನ್ನು ಬಗ್ಗು ಬಡೆದಿರುವದರಿಂದ ಬಹಳಷ್ಟು ಭಾರತೀಯರಿಗೆ ಮತ್ತು ಯೋಧರಿಗೆ ಖುಷಿಯಾಗಿದೆ. ಭಾರತ ಹೀಗೆ ಅದ್ಬುತವಾಗಿ ಆಟವನ್ನು ಆಡಿ ವಿಶ್ವ ಕಪ್ ಪಡೆದುಕೊಳ್ಳಬೇಕೆನ್ನುವುದೇ ಭಾರತೀಯರ ಬಯಕೆಯಾಗಿದೆ.

LEAVE A REPLY

Please enter your comment!
Please enter your name here