ನದಿಗಳ ಮಿಲನದಿಂದ ಆಗುವ ಲಾಭವೇನು ನಷ್ಟವೇನು? ಇಲ್ಲಿದೆ ಮಾಹಿತಿ

0
483

ಪ್ರಕೃತಿಯ ವಿಪೋಕಕ್ಕೆ ಇಡಿ ರಾಜ್ಯವೆ ಕೊಚ್ಚಿಕೊಂಡು ಹೋಗುತ್ತಿದೆ. ಜಲ ಪ್ರವಾಹಗಳನ್ನು ನಿಯಂತ್ರಿಸಲು ನದಿ ಜೋಡಣೆಯೇ ಶಾಶ್ವತವಾದ ಪರಿಹಾರವೆಂದು ಈ ಹಿಂದೆ ಸರ್ಕಾರ ಬಹಿರಂಗ ಪಡಿಸಿದ್ದರು. ಭಾರತ ದೇಶದಲ್ಲಿ ನದಿ ಜೋಡಣೆ ಮಾಡಬೇಕೆನ್ನುವ ವಿಚಾರ ನಿನ್ನೆ ಮೊನ್ನೆ ಎದ್ದಿದ್ದಲ್ಲ . 1858 ರ ಇಸವಿಯಲ್ಲಿ ನದಿಗಳನ್ನು ಸೇರಿಸಬೇಕೆನ್ನುವ ಚಿಂತನೆ ಹುಟ್ಟುಕೊಂಡಿತ್ತು. ಸರ್ ಆರ್ಥರ್ ಥಾಮಸ್ ಎನ್ನುವ ವ್ಯಕ್ತಿ ಇದರ ಬಗ್ಗೆ ಸಂಶೋಧನೆಯನ್ನು ಮಾಡುವ ಮೂಲಕ ನದಿಗಳ ಪ್ರವಾಹಕ್ಕೆ ಸುಲಭವಾದ ಉಪಾಯವನ್ನು ಪ್ರಸ್ತಾಪ ಪಡಿಸಿದ್ದರು. ಸ್ವಲ್ಪ ವರ್ಷಗಳ ಕೆಳಗೆ ಕೇಂದ್ರ ಸರ್ಕಾರದವರು ಗೋದಾವರಿ ಮತ್ತು ಕೃಷ್ಣ ನದಿಯನ್ನು ಒಟ್ಟುಗೂಡಿಸಬೇಕೆನ್ನುವ ಯೋಜನೆಯನ್ನು ಹಾಕಿಕೊಂಡಿದ್ದರು.

ದೊಡ್ಡ ಮಟ್ಟದ ಯೋಜನೆಗೆ ಆರ್ಥಿಕ ನೆರವು ಹೆಚ್ಚು ಬೇಕಾಗುತ್ತದೆ

ಪ್ಲಾನ್ ಪ್ರಕಾರ ಆ ಯೋಜನೆಯನ್ನು ಪೂರ್ಣಗೊಳಿಸಿದ್ದರು. ನದಿ ಜೋಡಣೆಗಳಿಂದ ಆಗುವ ಉಪಯೋಗಗಳು ಮತ್ತು ಅದರಿಂದ ಆಗುವ ನಷ್ಟಗಳ ಬಗ್ಗೆ ನೋಡೋಣ ಬನ್ನಿ. ನದಿಗಳ ಮಿಲನದ ಪ್ರಾಜೆಕ್ಟ್ ಗೆ ಆಗುವ ಖರ್ಚಾದರೂ ಎಷ್ಟು? ಇದರಿಂದ ಮೀನುಗಾರಿಕೆಯ ಕೇಂದ್ರಗಳಿಗೆ ತೊಂದರೆಯಾಗುತ್ತದಾ ಇಂತಹ ಹತ್ತು ಹಲವಾರು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ. ನದಿಗಳನ್ನು ಜೋಡಿಸುವುದರಿಂದ ನೀರಿನ php ವ್ಯಾಲ್ಯೂ ಅಧಿಕವಾಗುತ್ತದೆ. ಈ ರೀತಿಯಾದ ದೊಡ್ಡ ಮಟ್ಟದ ಯೋಜನೆಗೆ ಆರ್ಥಿಕ ನೆರವು ಹೆಚ್ಚು ಬೇಕಾಗುತ್ತದೆ. ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಗೊಳಿಸಬೇಕು. ಅಂತರ್ಜಲ ವ್ಯವಸ್ಥೆಯನ್ನು ರೂಪಿಸಲು ಸರ್ಕಾರದಿಂದ ಹಣವು ಇನ್ವೆಸ್ಟ್ ಆಗಬೇಕಿದೆ.

ಅರಣ್ಯ ಪ್ರದೇಶಗಳಿಗೆ ಮತ್ತು ಸಮುದ್ರಕ್ಕೆ ಹಾನಿ

ನದಿಗಳ ಮಿಲನವನ್ನು ಮಾಡಿದರೆ ನಾವು ಅರಣ್ಯ ಪ್ರದೇಶವನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ಪಡೆದುಕೊಳ್ಳಬೇಕಾದರೆ ಮತ್ತೊಂದನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಕೆರೆ ಮತ್ತು ನದಿಗಳನ್ನು ಉದ್ಧರಿಸುವ ಒಂದು ಕಾರ್ಯಾಚರಣೆಯಲ್ಲಿ ವಿಸ್ತಾರವಾದ ಅರಣ್ಯ ಪ್ರದೇಶದ ಜಾಗಗಳಿಗೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತದೆ. ಈ ರೀತಿ ಮಾಡುವದರಿಂದ ಜಾಸ್ತಿ ಮಳೆಯಾಗುವುದಿಲ್ಲ, ಕಾಡಿನ ಪ್ರಾಣಿಗಳಿಗೆ ಅನಾವಶ್ಯಕವಾಗಿ ತೊಂದರೆ ಕೊಟ್ಟಂತೆ ಆಗುತ್ತದೆ. ಪ್ರಾಣಿಗಳು ನೀರಿನ ಅಭಾವದಿಂದ ಪರದಾಡಬೇಕಾಗುತ್ತದೆ. ಬರಗಾಲ ಉಂಟಾಗುವ ಮೂಲಕ ತೊಟ್ಟು ನೀರಿಗಾಗಿ ಒದ್ದಾಡಬೇಕಾಗುತ್ತದೆ. ಸಂಶೋಧನೆ ಪ್ರಕಾರ ನೂರು ವರ್ಷಕೊಮ್ಮೆ ನದಿಗಳು ಹರಡುವ ದಾರಿಯಲ್ಲಿ ಬದಲಾವಣೆಯಾಗುತ್ತದೆ. ನದಿ ಜೋಡಣೆಯಾದ ಮೇಲೆ ಮಾರ್ಗದಲ್ಲಿ ವ್ಯತ್ಯಾಸ ಉಂಟಾದರೆ ಕಡಿಮೆ ಅವಧಿಯಲ್ಲಿ ಯೋಜನೆ ವೈಫಲ್ಯವಾಗುತ್ತದೆ. ನಾವು ಅಂದು ಕೊಂಡ ಹಾಗೆ ಕಾರ್ಯಸಾಧನೆಯಾಗುವುದಿಲ್ಲ.

ಸಮುದ್ರದಲ್ಲಿ ಬದಲಾವಣೆಯಾಗುತ್ತದೆ

ಕಾಲುವೆ ಮತ್ತು ಜಲಾಶಯಗಳನ್ನು ನಿರ್ಮಿಸಲು ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಜನರಿಗೆ ಹೊಸ ಜಾಗವನ್ನು ಕೊಡಬೇಕಾಗುತ್ತದೆ, ಬಹಳ ಹಣ ಇದಕ್ಕಾಗಿಯೆ ಮೀಸಲಿಡಬೇಕಾಗುತ್ತದೆ. ನೈಸರ್ಗಿಕವಾಗಿ ನದಿಗಳಿಂದ ಹರಡುವ ಸಿಹಿ ನೀರಿನ ಪ್ರಾಮಾಣ ಕುಗ್ಗುತ್ತದೆ. ಇದರಿಂದಾಗಿ ಸಮುದ್ರದಲ್ಲಿ ವಾಸಿಸುತ್ತಿರುವ ಜೀವಚರಗಳಿಗೆ ಅಪಾಯವಾಗಬಹುದು.

ಪ್ರತಿಯೊಂದು ನದಿಗೂ ತನ್ನದೆಯಾದ ಒಂದು php ವ್ಯಾಲ್ಯೂ ಇರುತ್ತದೆ. ಇದರಲ್ಲಿ ಏರು ಪೇರು ಆದರೆ ನೈಸರ್ಗಿಕವಾಗಿ ಇರುವ ಸಮುದ್ರದ ವಾತಾವರಣವೆ ಅಲ್ಲೋಲ ಕಲ್ಲೋಲವಾಗುತ್ತದೆ. ಸಮುದ್ರದಲ್ಲಿ ಜೀವಿಸುತ್ತಿರುವ ಜೀವ ರಾಶಿಗಳ ಪ್ರಾಣ ಉಳಿಯುವುದಿಲ್ಲ. ನದಿಗಳ ಯೋಜನೆಯಿಂದ ಪ್ರಕೃತಿ ವಿನಾಶವಾಗುತ್ತದೆ. ಆದ್ದರಿಂದ ಇದನ್ನು ಕೈಬಿಡಲಾಗಿತ್ತು ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here