ಭಾರತಕ್ಕೆ ಎಚ್ಚರ ಕೊಟ್ಟ ಪಾಕ್ ಮಾಜಿ ಕ್ರಿಕೆಟ್ ಆಟಗಾರ

0
343

ನರೇಂದ್ರ ಮೋದಿ ಸಚಿವ ಸಂಪುಟ ಸಭೆಗೆ ಕರೆದಿದ್ದು, ಸಭೆಯಲ್ಲಿ ರಾಜಕಾರಣಿಗಳು ಮಹತ್ವವಾದ ನಿರ್ಣಯವನ್ನು ತೆಗೆದುಕೊಳ್ಳಬಹುದೆಂದು ಊಹಿಸಲಾಗಿತ್ತು. ಅದರಂತೆಯೆ ಆರ್ಟಿಕಲ್ 370 ಮತ್ತು 35ಎ ಅನುಸಾರ ಜಮ್ಮು ಕಾಶ್ಮೀರಕ್ಕೆ ಕೊಟ್ಟಿರುವ ವಿಶೇಷ ಸ್ಥಾನ ಮಾನವನ್ನು ಸಂವಿಧಾನದಿಂದ ತೆಗೆದು ಹಾಕಿದ್ದರು . ಜಮ್ಮು ಕಾಶ್ಮೀರವನ್ನು ಮೂರು ಭಾಗವಾಗಿ ವಿಭಜನೆ ಮಾಡಿದ್ದರು . ಅಮಿತ್ ಶಾ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದರು . ಕಾಲಂ 370 ವಿಚಾರದಲ್ಲಿ ತಡ ಮಾಡುವ ಮಾತೇ ಇಲ್ಲ ಎಂದು ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು.

ಜಮ್ಮು ಕಾಶ್ಮೀರ ಮೂರು ಭಾಗಗಳಾಗಿ ವಿಭಜನೆ ಮಾಡಲಾಗಿತ್ತು 

ಕಾಶ್ಮೀರದಲ್ಲಿ 2 ನೇ ಬಾವುಟ ಹಾರಾಟ ಮಾಡುವಂತಿಲ್ಲ. ಜಮ್ಮು ಕಾಶ್ಮೀರ ಮೂರು ಭಾಗಗಳಾಗಿ ವಿಭಜನೆ ಮಾಡಾಲಾಗಿತ್ತು . ಜಮ್ಮು ಮತ್ತು ಕಾಶ್ಮೀರ, ವಿಧಾನಸಭೆ ಎರಡು ಕೇಂದ್ರಾಡಳಿತ ಪ್ರದೇಶವಾಗಲಿದೆ. ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ ಅವಕಾಶಕ್ಕೆ ಎಲ್ಲರು ಅರ್ಹರು. ಮಹಿಳೆಯರು ಸಹ ಬೇರೆ ರಾಜ್ಯದವರನ್ನು ಮದುವೆಯಾಗಬಹುದಾಗಿದೆ.

ಒಂದೇ ಅಣು ಬಾಂಬ್ ನಿಂದ ಭಾರತ ಸ್ವಚ್ಛ

ಪಾಕಿಸ್ತಾನದಲ್ಲಿರುವ ಅಣು ಬಾಂಬ್ ಗಳ ಮೂಲಕ, ಭಾರತ ದೇಶವನ್ನು ಸರ್ವನಾಶ ಮಾಡಿ ಬಿಡುತ್ತೇವೆ ಎಂದು ಮಾಜಿ ಕ್ರಿಕೆಟ್ ಆಟಗಾರ ಬೆದರಿಕೆಯನ್ನು ಹಾಕಿದ್ದಾನೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನ ಮಾನವನ್ನು ರದ್ದು ಪಡಿಸಿರುವ ವಿಚಾರವನ್ನು ಖಂಡಿಸಿದ್ದು, ಖಾಸಗಿ ವಾಹಿನಿಯೊಂದಿಗೆ ಈ ರೀತಿಯಾಗಿ ಮಾತನಾಡಿದ್ದಾನೆ. ಮಾಜಿ ಕ್ರಿಕೆಟಿಗ ಜಾವಿದ್ ಮಿಯಾಂದಾದ್ ಭಾರತ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರವನ್ನು ಖಂಡಿಸಿದ್ದಾರೆ. ಪಾಕಿಸ್ತಾನ ದೇಶದ ಹತ್ತಿರವು ಅಸ್ತ್ರಗಳಿವೆ. ಆದ್ದರಿಂದ ನೀವು ಮೊದಲು ದಾಳಿ ಮಾಡಬೇಕು. ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಯಾರನ್ನು ಬೇಕಾದರು ಸಾಯಿಸಬಹುದೆನ್ನುವ ನಿಯಮದ ಉಲ್ಲೇಖ ವಿಶ್ವಾದ್ಯಂತ ಇದೆ ಎಂದು ಭಾರತ ದೇಶ ವಿರುದ್ಧ ಮಾತನಾಡಿದ್ದಾರೆ.

ಈ ಹಿಂದೆ ಹಲವು ಮಾಜಿ ಕ್ರಿಕೆಟಿಗರು ಟ್ವೀಟ್ ಮಾಡಿದ್ದರು

ಇದೇ ವೇಳೆಯಲ್ಲಿ ನರೇಂದ್ರ ಮೋದಿ ಅವರ ಕುರಿತು ಏನು ಹೇಳುತ್ತೀರಾ? ಎಂದು ಸುದ್ದಿಗಾರರು ಕೇಳಿದಾಗ ನಾನು ಮೊದಲೆ ಹೇಳಿದ್ದೆ, ಭಾರತ ಒಂದು ಕುತಂತ್ರಿ ದೇಶವೆಂದು. ನಾವು ಅಣುಬಾಂಬ್ ಗಳನ್ನೂ ಕೇವಲ ಪ್ರದರ್ಶನಕ್ಕೆಂದು ಇಡಬಾರದು ಅದನ್ನು ಉಪಯೋಗಿಸಕೊಳ್ಳಬೇಕು. ಒಂದೇ ಒಂದು ಅಣುಬಾಂಬ್ ಮೂಲಕ ಭಾರತ ದೇಶವನ್ನು ಸ್ವಚ್ಛ ಮಾಡಿ ಬಿಡುತ್ತೇವೆ ಎಂದು ಮಿಯಾನಂದ್ ಹೇಳಿದ್ದಾನೆ. ಈ ವಿಷಯಕ್ಕೆ ಸಂಬಂಧ ಪಟ್ಟ ಹಾಗೆ ಅನೇಕ ಆಟಗಾರರು ಟ್ವೀಟ್ ಮಾಡಿದ್ದರು. ಕಾಶ್ಮೀರ ಸಹೋದರರೊಂದಿಗೆ ಇಡೀ ಪಾಕಿಸ್ತಾನ ನಿಲ್ಲುತ್ತದೆ. ಇಂತಹದೊಂದು ದುಸ್ಥಿತಿಯಲ್ಲಿ ಕಾಶ್ಮೀರಿ ಪ್ರಜೆಗಳನ್ನು ಕಾಪಾಡಿಕೊಳ್ಳಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದರು.

ನಿಮ್ಮ ಸ್ವಾತಂತ್ರಕ್ಕಾಗಿ ನಾವು ಪ್ರಾರ್ಥಿಸುತ್ತೇವೆ

ಕಾಶ್ಮೀರಿ ಜನತೆಗೆ ಅವರ ಹಕ್ಕನ್ನು ನೀಡಬೇಕು. ಆದ್ದರಿಂದ ವಿಶ್ವ ಸಂಸ್ಥೆ ಮತ್ತು ವಿಶ್ವಸಮುದಾಯ ಮಧ್ಯೆ ಲಗ್ಗೆ ಇಡಬೇಕು. ಸ್ವಾತಂತ್ರದ ರೈಟ್ಸ್ ಎಲ್ಲಾರಿಗು ಇದೆ. ವಿಶ್ವಸಂಸ್ಥೆ ಯಾಕೆ ರಚನೆಯಾಗಿದ್ದು, ಏನು ಮಾಡುತ್ತಿದ್ದಾರೆ? ಅವರು ಈ ಸಂದರ್ಭದಲ್ಲಿ ಎಂದು ಹೇಳಿದ್ದರು. ಇನ್ನು ವೇಗಿ ಬೌಲರ್ ಆದ ಶೋಯಬ್ ಅಖ್ತರ್ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮ ಸ್ವಾತಂತ್ರಕ್ಕಾಗಿ ನಾವು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದರು.

LEAVE A REPLY

Please enter your comment!
Please enter your name here