ವಿಚಿತ್ರವಾದ ಗೆಟಪ್ ನಲ್ಲಿ ಲಾಂಗ್ ಹಿಡಿದ ಉಪ್ಪಿ

0
462

ಕನ್ನಡ ಚಿತ್ರರಂಗದಲ್ಲಿ ಭಿನ್ನ ವಿಭಿನ್ನವಾದ ಚಿತ್ರಗಳನ್ನು ನಿರ್ದೇಶಿಸಿವುದರ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ ಅವರ ಹೆಸರು ಸೇರ್ಪಡೆಯಾಗುತ್ತದೆ. ಈ ಜಗತ್ತು ಹೇಗಿದೆ, ಜನರ ಮನಸ್ಥಿತಿ ಹೇಗಿರುತ್ತದೆ, ಪ್ರೀತಿ-ಪ್ರೇಮ, ದೇಶ ಹೀಗೆ ಇನ್ನು ಅನೇಕ ವಿಷಯಗಳನ್ನು ಉಪ್ಪಿ ತೆರೆ ಮೇಲೆ ಚಿತ್ರದ ಮೂಲಕ ತೋರಿಸಿದ್ದಾರೆ. ಉಪ್ಪಿ -2 ಚಿತ್ರದ ನಂತರ ಉಪೇಂದ್ರ ಅವರು ಯಾವ ಸಿನಿಮಾವನ್ನು ನಿರ್ದೇಶಿಸಿರಲಿಲ್ಲ. ಇದೆ ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೊನೆಯ ಸಿನಿಮಾವಾಗಿತ್ತು. ಇತ್ತೀಚಿಗಷ್ಟೆ ಉಪೇಂದ್ರ ಅವರು ನಟಿಸಿದ ಐ ಲವ್ ಯು ಚಿತ್ರ ಬಿಡುಗಡೆಯಾಗಿದ್ದು, ಉಪೇಂದ್ರರವರ ಪ್ರಾಚೀನ ಸಿನಿಮಾಗಳ ಒಂದು ಶೈಲಿಯನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು.

ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು

ಆಗಿನ ಕಾಲದಲ್ಲಿ ಉಪೇಂದ್ರ ಓಂ ಚಿತ್ರವನ್ನು ನಿರ್ದೇಶಿಸಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಶಿವಣ್ಣನ ಕೈ ಅಲ್ಲಿ ಲಾಂಗ್ ಕೊಡಿಸಿ ರೌಡಿಸಂ ಮತ್ತು ಪ್ರೀತಿಯ ಅಂಶಗಳನ್ನು ಇಟ್ಟುಕೊಂಡು ಸಿನಿಮಾವನ್ನಾಗಿ ಮಾಡಿದರು. ಇಂದಿಗೂ ನಾನು ಮತ್ತೊಮ್ಮೆ ಓಂ ತರಹದ ಚಿತ್ರವನ್ನು ಮಾಡಲಾರೆ ಎಂದು ಸ್ವತಃ ಉಪೇಂದ್ರ ಅವರು ಹೇಳಿದ್ದರು. ಭೂಗತ ಲೋಕದ ಆಧಾರಿತವಾದ ಚಿತ್ರ ಓಂ ಆಗಿದ್ದು, ಅಭಿಮಾನಿಗಳು ಹತ್ತು ಹಲವಾರು ಸಾರಿ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಹೆಚ್ಚು ಬಾರಿ ಮರು ಬಿಡುಗಡೆಯಾದ ಚಿತ್ರ ಇದಾಗಿದೆ. ನಂತರ ಬಾರಿ ಮೊತ್ತಕ್ಕೆ ಸ್ಯಾಟಿಲೈಟ್ ಹಕ್ಕುಗಳು ಮಾರಾಟವಾಗಿತ್ತು.

ಭೂಗತ ಲೋಕದ ಕಥೆಯಲ್ಲಿ ಉಪ್ಪಿ

ಐ ಲವ್ ಯು ಚಿತ್ರಕ್ಕೆ ಆರ್ ಚಂದ್ರು ಆಕ್ಷನ್ ಹೇಳಿದ್ದು, ಮುಖ್ಯ ಭೂಮಿಕೆಯಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ಅವರು ಬಣ್ಣ ಹಚ್ಚಿದ್ದರು. ಈಗ ಆರ್ ಚಂದ್ರು ಅವರು ಮತ್ತೊಮ್ಮೆ ಉಪೇಂದ್ರ ಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅಂಡರ್ ವರ್ಲ್ಡ್ ಕಥೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಮೇಲೆ ಆರ್ ಚಂದ್ರು ಅವರು ಕೆಲಸ ಮಾಡುತ್ತಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಇನ್ನು ಅನೇಕ ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆಯಂತೆ. ಅಧಿಕವಾದ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸದ್ಯಕ್ಕೆ ಉಪೇಂದ್ರ ಬುದ್ಧಿವಂತ 2 ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮತ್ತೊಮ್ಮೆ ಬುದ್ದಿವಂತರಾಗಲಿದ್ದಾರೆ ಉಪ್ಪಿ

ಪಂಚತಂತ್ರ ಚಿತ್ರದಲ್ಲಿ ನಟಿಸಿರುವ ಸೋನೆಲ್ ಹಾಗು ಮೇಘನಾ ರಾಜ್ ರಿಯಲ್ ಸ್ಟಾರ್ ಗೆ ನಾಯಕಿಯರಾಗಲಿದ್ದಾರೆ. ಬುದ್ದಿವಂತ ಚಿತ್ರದಲ್ಲಿ ಯಾವ ರೀತಿ ಕುತೂಹಲವಿತ್ತು, ಅದೆ ರೀತಿಯ ಕುತೂಹಲ ಪಾರ್ಟ್ 2 ನಲ್ಲೂ ಇರಲಿದೆಯಂತೆ. ಒಟ್ಟಿನಲ್ಲಿ ಉಪ್ಪಿ ಅಭಿಮಾನಿಗಳು ಬಹಳ ಖುಷಿ ಕೊಡುವ ಸುದ್ದಿ ಇದಾಗಿದೆ ಎಂದು ಹೇಳಬಹುದಾಗಿದೆ. ಮೌರ್ಯ ಎನ್ನುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಗುರುಕಿರಣ್ ಅವರ ಸಂಗೀತ ಈ ಚಿತ್ರಕ್ಕಿದೆ. ಬುದ್ಧಿವಂತ -2 ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

LEAVE A REPLY

Please enter your comment!
Please enter your name here