ಕ್ರೇಜಿಸ್ಟಾರ್, ಶಂಕರ್ ನಾಗ್ ಅವರನ್ನು ಈಗಲೂ ನೆನೆಯುತ್ತಾರೆ ಇಲ್ಲಿದೆ ಸ್ಟೋರಿ

0
1043

ಶಂಕರ್ ನಾಗ್ ಪ್ರತಿಯೊಬ್ಬ ಹೃದಯದಲ್ಲಿ ಮಿಡಿಯುವ ಹೆಸರಾಗಿದೆ. ಕರಾಟೆ ಕಿಂಗ್ ನಮ್ಮನ್ನು ಅಗಲಿ ಮೂರು ದಶಕಗಳು ಆಗುತ್ತ ಬಂದಿದ್ದರು ಸಹ ಇನ್ನು ಜನರು ಅವರನ್ನು ಆರಾಧಿಸುತ್ತಾರೆ. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ನಿರ್ದೇಶಕ, ನಟರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ. ಇವರು ಸರಳ ಸ್ವಭಾವದ ವ್ಯಕ್ತಿ ಅಂತಾನೆ ಹೇಳಬಹುದಾಗಿದೆ. ಶಂಕರ್ ನಾಗ್ ಇಂದು ಜೀವಂತವಾಗಿದ್ದರೆ, ಕನ್ನಡ ಚಿತ್ರರಂಗ ಇನ್ನು ಉನ್ನತ ಸ್ಥಾನದಲ್ಲಿ ಇರುತ್ತಿತ್ತು. ಸದಾಕಾಲ ಯಾವುದಾದರೊಂದು ಚಟುವಟಿಕೆಯಲ್ಲಿ ಇವರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಸುಮ್ಮನೆ ಕಾಲಹರಣ ಮಾಡುತ್ತಿರಲಿಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಷ್ಟದ ಸಮಯದಲ್ಲಿ ಶಂಕರ್ ನಾಗ್ ಸಹಾಯಕ್ಕೆಂದು ಬಂದಿದ್ದರು. ಮುಂದೆ ಓದಿ

ಶಂಕರ್ ನಾಗ್ ಅವರ ಬಗ್ಗೆ ಮಾತನಾಡುವಾಗ ಮೈ ಜುಮ್ಮ್ ಎನ್ನುತ್ತೆ

ಶಂಕರ್ ನಾಗ್ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಸಮಾಜದ ಹಿತಾಶಕ್ತಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ಒಂದು ದೊಡ್ಡ ವಿವಾದದಲ್ಲಿ ರವಿಚಂದ್ರನ್ ಸಿಕ್ಕಿ ಹಾಕಿಕೊಂಡಿದ್ದಾಗ ಸಾಂತ್ವನ ಹೇಳಲು ಶಂಕರ್ ನಾಗ್ ಅವರು ಬಂದಿದ್ದರು. ಇದನ್ನು ಕ್ರೇಜಿ ಸ್ಟಾರ್ ಸದಾ ನೆನಪಿಸಿಕೊಳ್ಳುತ್ತಾರೆ. ಶಂಕರ್ ನಾಗ್ ಅವರ ಬಗ್ಗೆ ಮಾತನಾಡುವಾಗ ಮೈ ಜುಮ್ಮ್ ಎನ್ನುತ್ತೆ. ಸಮಯವನ್ನು ಹಿಂಬಾಲಿಸುವಂತಹ ವ್ಯಕ್ತಿ ಇವರಾಗಿದ್ದರು. ಇವರನ್ನು ಕಂಡರೆ ಬಹುಶ ಸಮಯಕ್ಕು ಹೊಟ್ಟೆ ಉರಿಯುತ್ತದೆ. ನಾನು ಭಾಷೆಯ ವಿಚಾರದಲ್ಲಿ ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೆ. ಭಾಷೆ ಕುರಿತು ಮಾತನಾಡಿದೆ ಅಂತ ನಾನು ತುಂಬ ಗೊಂದಲಕ್ಕೆ ಒಳಗಾಗಿದ್ದೆ.

ರವಿಚಂದ್ರನ್ ಗೆ ಸಾಂತ್ವನ ಹೇಳಿದ ಕರಾಟೆ ಕಿಂಗ್

ನನಗೆ ಅದು ಬಹಳ ಡಿಸ್ಟರ್ಬಿಂಗ್ ಪಿರಿಯಡ್ ಆಗಿತ್ತು. ಹೊರಗಡೆ ಹೋಗಲಾರದಂತಹ ಪರಿಸ್ಥಿತಿ ಎದುರಾಗಿತ್ತು. ತೊಂದರೆ ಉಂಟಾದಾಗ ಪರಿಚಯದವರು ಸಹ ಕಷ್ಟಕ್ಕೆ ಮುಂದಾಗುವುದಿಲ್ಲ. ಭಾಷೆಯ ವಿಚಾರದಲ್ಲಿ ಸಮಸ್ಯೆ ಏನಾದರು ಉಂಟಾದರೆ ಅದನ್ನು ಬಗೆ ಹರಿಸುವುದು ತುಂಬ ಕಷ್ಟ ಅದನ್ನು ನಿಭಾಯಿಸುವುದು ಸಹ ದೊಡ್ಡ ಟೆನ್ಶನ್. ಆಗ ನಾನು ಮೈಸೂರಿನಲ್ಲಿ ಶೂಟಿಂಗ್ ನಲ್ಲಿದ್ದೆ ಶಂಕರ್ ನಾಗ್ ನನ್ನನ್ನು ಹುಡುಕಿಕೊಂಡು ಬಂದಿದ್ದರು. ಯಾಕೆ ಹೆದರಿಕೊಳ್ಳುತ್ತಿದ್ದೀಯಾ ಧೈರ್ಯವಾಗಿ ಬಾ ನೀನು. ಜನರು ನಿನ್ನ ಇಷ್ಟ ಪಡುತ್ತಾರೆ. ನಿನ್ನಲ್ಲಿ ಏನಿದೆಯೋ ಅದನ್ನು ಜನರ ಹತ್ತಿರ ಹೇಳು. ಎಂದು ಹೇಳಿ ನನಗೆ ಧೈರ್ಯ ತುಂಬಿದ್ದರು. ನಾನು ನಂಬಿದವರು ನನ್ನ ಬಳಿ ಬಂದಿಲ್ಲ ಆದರೆ ಶಂಕರ್ ನಾಗ್ ಅವರು ಬಂದಿದ್ದರು.

ನಂದಿ ಹಿಲ್ಸ್ ಗೆ ಕೇಬಲ್ ಕನೆಕ್ಷನ್ ನೀಡಬೇಕೆಂದು ಹೇಳುತ್ತಿದ್ದರು

ಸಮಾಜದ ಹಿತಾದೃಷ್ಟಿಗಾಗಿ ಮುಂದಾಲೋಚನೆಯನ್ನು ಮಾಡುತ್ತಿದ್ದರು. ಆಗಲೆ ನಂದಿ ಹಿಲ್ಸ್ ಗೆ ಕೇಬಲ್ ಕನೆಕ್ಷನ್ ನೀಡಬೇಕೆಂದು ಹೇಳುತ್ತಿದ್ದರು. ಮೂವತ್ತು ಸಾವಿರ ಬಜೆಟ್ ನಲ್ಲಿ ಮನೆ ಕಟ್ಟುವ ಯೋಜನೆಯನ್ನು ಮಾಡಿದ್ದರು.

ಅವರ ಎಷ್ಟೋ ಯೋಜನೆಗಳು ಕಾರ್ಯರೂಪಕ್ಕೆ ಬಂದಿರಲಿಲ್ಲ. ನಮಗೆಲ್ಲ ಅವರು ಪಾಠ ಮಾಡಿದವರು ಎಂದು ತಕಧಿಮಿತಾ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಎನ್ನುವ ಸ್ಪೆಷಲ್ ರೌಂಡ್ ನಲ್ಲಿ ಶಂಕರ್ ನಾಗ್ ಅವರನ್ನು ನೆನಯುತ್ತ ರವಿಚಂದ್ರನ್ ಹಳೆ ಘಟನೆಗಳ ಮೆಲುಕನ್ನು ಹಾಕಿದ್ದಾರೆ.

LEAVE A REPLY

Please enter your comment!
Please enter your name here