ರವಿಮಾಮನ ಸಿನಿಮಾದಲ್ಲಿ ಬಣ್ಣ ಹಚ್ಚಲಿರುವ ಆಶಿಕಾ ರಂಗನಾಥ್

0
756

ಚಂದನವನದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ರವಿಚಂದ್ರನ್ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಹೌದು. ೧೬ ರಿಂದ ೫೦ ವರ್ಷದವರು ಸಹ ರವಿಮಾಮನನ್ನ ಇಷ್ಟ ಪಡ್ತಾರೆ. ಅವರ ಸಿನಿಮಾಗಳು ಎಂದಿಗೂ ಸಹ ಮರೆಯಲಾಗುವುದಿಲ್ಲ. ಯಾಕಂದ್ರೆ ರವಿಮಾಮ ತಮ್ಮ ನಟನೆಯ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೌದು. ಒಂದು ಕಾಲದಲ್ಲಿ ಪ್ರೇಮಲೋಕ ಮೂಲಕ, ಹಿಟ್ ಆದ ರವಿಚಂದ್ರನ್ ಅವರು, ಈಗಲೂ ಕನ್ನಡದ ಕ್ರೇಜಿ ಸ್ಟಾರ್ ಆಗಿದ್ದಾರೆ. ನಮ್ಮ ರವಿಮಾಮ, ಮೊದಲು ಯಾವ ಎನರ್ಜಿಯಲ್ಲಿ ಸಿನಿಮಾ ಮಾಡುತ್ತಿದ್ದರೋ, ಈಗಲೂ ಸಹ ಅದೇ ಎನರ್ಜಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ರವಿಚಂದ್ರನ್ ಅವರ ನಟನೆ ಮಾತ್ರ ಚಂದವಲ್ಲ, ಅವರ ನಿರ್ದೇಶನವು ಸಹ ಚಂದ. ಹಾಗಾಗಿ ಇತ್ತೀಚಿಗೆ ಅವರು ನಟನೆ ಹಾಗೂ ನಿರ್ದೇಶನ ಎರಡನ್ನು ಮಾಡುತ್ತಿದ್ದಾರೆ. ಈಗ ಅವರದ್ದೇ ನಿರ್ದೇಶನದ ಮತ್ತೊಂದು ಸಿನಿಮಾ ಸಜ್ಜಾಗುತ್ತಿದೆ. ಆ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ

ರವಿಚಂದ್ರನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಆಶಿಕಾ

ಸ್ಯಾಂಡಲ್ ವುಡ್ ನಲ್ಲಿ ಆಶಿಕಾ ರಂಗನಾಥ್ ಸಾಕಷ್ಟು ಸಿನಿಮಾಗಳನ್ನು ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡಿರುವ ನಟಿ. ಈಗಾಗಲೇ ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ರವಿಚಂದ್ರನ್ ಅವರು ಸಿನಿಮಾದಲ್ಲಿ ನಟಿಸುವಂತೆ ಕೇಳಿದಾಕ್ಷಣ ಯೋಚನೆ ಮಾಡದೇ ಒಪ್ಪಿಕೊಂಡಿದ್ದಾರೆ. ಹೌದು. ರವಿಚಂದ್ರನ್ ಅವರ ಮುಂದಿನ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್ ಅವರ ಸಿನಿಮಾ ಅಂದ್ರೆ ಸಾಕಷ್ಟು ವಿಶೇಷತೆಗಳಿರುತ್ತವೆ. ಅದು ಅಲ್ಲದೆ, ಅವರು ಆಯ್ಕೆಯು ಸಹ ಬಹಳ ವಿಭಿನ್ನವಾಗಿರುತ್ತದೆ. ಯಾವ ಕಥೆಗೆ, ಯಾವ ನಟಿ ಇದ್ದರೆ ಚೆನ್ನಾಗಿರುತ್ತದೆ ಅನ್ನೋದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ತಮ್ಮ ಮುಂದಿನ ಸಿನಿಮಾಗೆ ಆಶಿಕಾನೇ ನಾಯಕಿಯಾಗಬೇಕೆಂದು ನಿರ್ಧಾರ ಮಾಡಿದ್ದಾರೆ.

ಸ್ಟಾರ್ ನಟರ ಸಿನಿಮಾದಲ್ಲಿ ನಟಿಸೋಕೆ ಯೋಚನೆ ಮಾಡಬಾರದು

ಆಶಿಕಾ ಈಗಾಗಲೇ ಸಾಕಷ್ಟು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಸ್ವಲ್ಪವೂ ಸಹ ಬಿಡುವಿಲ್ಲದಂತಹ ಪರಿಸ್ಥಿತಿಯಲ್ಲಿ ಅವರಿದ್ದಾರಂತೆ. ಆದರೂ ರವಿಚಂದ್ರನ್ ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದು ಆಶ್ಚರ್ಯ. ಇದರ ಬಗ್ಗೆ ಸ್ವತಃ ಅವರೇ ಕೆಲವು ಮಾತುಗಳನ್ನ ಹೇಳಿದ್ದಾರೆ. ಹೌದು. ನಾನು ಯಾವ ಸಿನಿಮಾದಲ್ಲಿ ನಟಿಸುತ್ತೇನೆ ಅನ್ನೋದು ಮುಖ್ಯವಲ್ಲ. ಆದರೆ ಇಂಥ ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಸಿಗೋದೇ ಕಡಿಮೆ. ಹೀಗಿರುವಾಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಯೋಚನೆ ಮಾಡಬಾರದು ಎಂದು ಹೇಳಿದ್ದಾರೆ. ಜೊತೆಗೆ ರವಿಚಂದ್ರನ್ ಅವರ ಸಿನಿಮಾಗಳು ಅಂದ್ರೆ ಏನಾದ್ರು ಒಂದು ವಿಶೇಷತೆ ಇರುತ್ತದೆ. ಹಾಗಾಗಿ, ಬ್ಯುಸಿಯ ನಡುವೆಯು ಡೇಟ್ಸ್ ಹೊಂದಿಸಿಕೊಂಡು ಸಿನಿಮಾದಲ್ಲಿ ಬಣ್ಣಹಚ್ಚಲು ನಿರ್ಧಾರ ಮಾಡಿದ್ದಾರಂತೆ.

ನಿರ್ದೇಶನದ ಜೊತೆಗೆ ನಾಯಕನಾಗಲಿದ್ದಾರಾ ರವಿಚಂದ್ರನ್?

ರವಿಚಂದ್ರನ್ ಅವರ ನಿರ್ದೇಶನದ ಮುಂದಿನ ಸಿನಿಮಾಗೆ ನಾಯಕಿಯನ್ನೇನೋ ನಿರ್ಧಾರ ಮಾಡಿದ್ದಾಯ್ತು. ಆದ್ರೆ ನಾಯಕನ ಬಗ್ಗೆ ಹಾಗೂ ಸಿನಿಮಾ ಟೈಟಲ್ ಬಗ್ಗೆ ಯಾವುದೇ ರೀತಿಯಲ್ಲಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಜನರಿಗೆ ಹಾಗೂ ಅಭಿಮಾನಿಗಳಿಗೆ ಒಂದು ರೀತಿ ಗೊಂದಲವಾಗಿದೆ. ಯಾಕಂದ್ರೆ ನಟಿಯ ಬಗ್ಗೆ ತಿಳಿಸಿದ ರವಿಮಾಮ, ನಟನ ಬಗ್ಗೆ ಯಾಕೆ ತಿಳಿಸುತ್ತಿಲ್ಲ. ಒಂದು ವೇಳೆ, ಈ ಸಿನಿಮಾಗೆ ರವಿಚಂದ್ರನ್ ಅವರೇ ನಾಯಕನಾಗಿ ಬಣ್ಣ ಹಚ್ಚುತ್ತಾರಾ ಅನ್ನೋ ಗೊಂದಲ ಶುರುವಾಗಿದೆ. ಒಂದು ವೇಳೆ ರವಿಚಂದ್ರನ್ ಅವರೇ ನಾಯಕನಾಗಿ ಬಣ್ಣ ಹಚ್ಚಿದರೆ, ಅವರ ಅಭಿಮಾನಿಗಳಿಗೆ ಇದೊಂದು ಸಂತಸದ ಸುದ್ದಿಯಾಗುತ್ತದೆ.

ಒಟ್ಟಿನಲ್ಲಿ ರವಿಚಂದ್ರನ್ ಅವರ ಮತ್ತೊಂದು ಸಿನಿಮಾ ತೆರೆ ಬರಲು ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ. ಆದ್ರೆ ಸಿನಿಮಾ ಬಗ್ಗೆ ಮಾತ್ರ ಯಾವ ಸುಳಿವನ್ನು ನೀಡುತ್ತಿಲ್ಲ. ಒಂದು ವೇಳೆ ಅವರೇ ನಾಯಕನಾಗಿ ಮಿಂಚುತ್ತಾರಾ ಅಥವಾ ಕೇವಲ ಆಕ್ಷನ್ ಕಟ್ ಮಾತ್ರ ಹೇಳುತ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here