ರವಿ ಡಿ ಚೆನ್ನಣ್ಣನವರ್ ಅವರ ಅಭಿಮಾನಿಗಳಿಂದ ಡಿಸಿಪಿಗೆ ತೊಂದರೆ

0
385

ರವಿ ಡಿ ಚೆನ್ನಣ್ಣನವರ್ ಅವರ ಹೆಸರು ಯಾರಿಗೆ ತಾನೇ ಗೊತಿಲ್ಲ ಹೇಳಿ ಇಡೀ ಕರ್ನಾಟಕದ ಜನತೆಗೆ ಇವರು ಚಿರಪರಿಚಿತರು, ಸಿನೆಮಾದಲ್ಲಿ ರೌಡಿಗಳನ್ನು ಹಿಡಿಯುವುದು ನೀವು ನೋಡಿರಬಹುದು ಆದರೆ ಇವರು ನಿಜ ಜೀವನದಲ್ಲಿ ರೌಡಿಗಳನ್ನು ಹಿಡಿದು ಬೆಂಡೆತ್ತಿದ್ದಾರೆ. ಸಾಕಷ್ಟು ಯುವಕರಿಗೆ, ಸಾಧನೆ ಮಾಡಲು ಹೊರಟವರಿಗೆ ಮಾದರಿ ಆಗಿದ್ದಾರೆ. ಇವರ ಬಗ್ಗೆ ಹೇಳಲು ಪದಗಳೆ ಸಾಲೋದಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಆಸನರಾಗಿದ್ದರು.

ರವಿ ಡಿ ಚೆನ್ನಣ್ಣನವರ್ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ

ಬೆಂಗಳೂರು ದಕ್ಷಿಣ ಗ್ರಾಮಾಂತರ ಕ್ಷೇತ್ರದಲ್ಲಿ ರಮೇಶ್ ಬಾನೋತ್ ಡಿಸಿಪಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೊದಲು ಖಡಕ್ ಪೊಲೀಸ್ ಅಧಿಕಾರಿಯೆಂದೆ ಗುರುತಿಸಿಕೊಂಡಿದ್ದ ರವಿ ಡಿ ಚೆನ್ನಣ್ಣನವರ್ ಅವರು ಈ ಕ್ಷೇತ್ರದ ಡಿಸಿಪಿಯಾಗಿ ಕಾರ್ಯವನ್ನು ಸಲ್ಲಿಸಿದ್ದರು. ಇವರ ಜಾಗಕ್ಕೆ ಈಗ ರಮೇಶ್ ಅವರು ಬಂದಿದ್ದಾರೆ. ರವಿ ಡಿ ಚೆನ್ನಣ್ಣನವರ್ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಇವರ ಅಭಿಮಾನಿಗಳಿಂದ ಹೊಸ ಡಿಸಿಪಿಗೆ ತೊಂದರೆಯಾಗುತ್ತಿದೆಯಂತೆ. ಮುಂದೆ ಓದಿ

ಅಭಿಮಾನಿಗಳಿಂದ ಕರೆ

ಈ ಹಿಂದೆ ಆ ಕ್ಷೇತ್ರದಲ್ಲಿ ರವಿ ಅವರು ಡಿಸಿಪಿಯಾಗಿದ್ದರು. ಇವರಿಗಾಗಿ ಇಲಾಖೆಯವರು ಫೋನ್ ನಂಬರ್ ನೀಡಿದ್ದರು. ರವಿ ಅವರು ವರ್ಗಾವಣೆ ಆದ ನಂತರವೂ ಅದೆ ಫೋನ್ ನಂಬರ್ ಅನ್ನು ರಮೇಶ್ ಅವರಿಗೆ ನೀಡಲಾಗಿತ್ತು.

ಹೀಗಾಗಿ ರಮೇಶ್ ಅವರಿಗೆ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿತ್ತಂತೆ. ಚೆನ್ನಣ್ಣನವರ್ ಅವರ ಹೆಸರನ್ನು ಕೇಳಿಕೊಂಡು ಸಾಕಷ್ಟು ಕರೆಗಳು ಬರುತ್ತಿದ್ದ ಕಾರಣದಿಂದಾಗಿ, ರಮೇಶ್ ಅವರು ತಮ್ಮ ಫೋನ್ ನಂಬರ್ ಅನ್ನು ಬದಲಾಯಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here