ಪರೀಕ್ಷೆಯಲ್ಲಿ ಅಮ್ಮ ಪಾಸ್, ಮಗ ಫೇಲ್. ಆಗ ರವಿ ಬೆಳಗೆರೆ ಅವರ ತಾಯಿ ತೆಗೆದುಕೊಂಡ ಆ ನಿರ್ಧಾರ

0
238

ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಮುಖ್ಯ ಆಕರ್ಷಣೆಯಾಗಿರುವುದು ಬರಹಗಾರ ರವಿ ಬೆಳಗೆರೆ. ಬಿಗ್ ಬಾಸ್ ನಲ್ಲಿ ರವಿ ಬೆಳಗೆರೆ ಅವರು ಬಾಸ್ ಇದ್ದ ಹಾಗೆ ಇದ್ದರು ಅಂತಾನೆ ಹೇಳಬಹುದಾಗಿದೆ. ಯುವಕರಿಗೆ ಮತ್ತು ಜನರಿಗೆ ಗೊತ್ತಿಲ್ಲದ ಕುತೂಹಲಕಾರಿಯಾದ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಿಗ್ ಬಾಸ್ ಗುಟ್ಟಿನ ಟಾಸ್ಕ್ ಸ್ಪರ್ಧಿಗಳಿಗೆ ನೀಡಿದ್ದರು. ಅದರಲ್ಲಿ ಒಂದು ಗುಟ್ಟು ಅಮ್ಮ ಮಗ ಒಟ್ಟಿಗೆ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬರೆದಿದ್ದರು. ಪರೀಕ್ಷೆಯ ಫಲಿತಾಂಶ ಬಂದಾಗ ಅಮ್ಮ ಪಾಸ್, ಮಗ ಫೇಲ್ ಆಗಿದ್ದನು. ಹೌದು, ಅದು ರವಿ ಬೆಳಗೆರೆ ಅವರ ಜೀವನದಲ್ಲಿ ನಡೆದಂತಹ ಘಟನೆಯಾಗಿತ್ತು. ಮುಂದೆ ಓದಿ

ಅಮ್ಮ, ಮಗ ಇಬ್ಬರು ಒಟ್ಟಿಗೆ ಪರೀಕ್ಷೆಯನ್ನು ಬರೆದಿದ್ದರು

ಇದನ್ನು ಸ್ವತಃ ರವಿ ಬೆಳಗೆರೆ ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಪಾಸ್ ಮಾಡಿದರೆ, ಅಮ್ಮನಿಗೆ 15 ರೂಪಾಯಿ ಹೆಚ್ಚು ಸಂಭಾವನೆ ಸಿಗುತ್ತಿತ್ತು. ಆದ್ದರಿಂದ ಪರೀಕ್ಷೆಯನ್ನು ಕಟ್ಟಿದ್ದರು. ಅದೆ ಸಮಯಕ್ಕೆ ಬೆಳಗೆರೆ ಅವರ ಪರೀಕ್ಷೆಯು ಬಂದಿರುವುದರಿಂದ ಅಮ್ಮ, ಮಗ ಇಬ್ಬರು ಒಟ್ಟಿಗೆ ಪರೀಕ್ಷೆಯನ್ನು ಬರೆದಿದ್ದರು. ಒಂದು ದಿನ ಪರೀಕ್ಷೆಯ ಫಲಿತಾಂಶ ಬಂದಿತ್ತು. ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಬಾ ಅಂತ ಅಮ್ಮ ರವಿ ಅವರಿಗೆ ಹೇಳಿದ್ದರು. ರವಿ ಅವರು ಸೈಕಲ್ ನಲ್ಲಿ ಹೋಗಿ ರಿಸಲ್ಟ್ ನೋಡಿಕೊಂಡು ಬಂದೆ. ಅಮ್ಮ ಶಾಲೆಯಲ್ಲಿ ಕಿಟಕಿ ಪಕ್ಕ ನಿಂತುಕೊಂಡು ಪಾಠವನ್ನು ಮಾಡುತ್ತಿದ್ದರು. ಮುಂದೆ ಓದಿ

ಸಿನಿಮಾ ನೋಡಿಕೊಂಡು ಬಾ ಮಗನೆ ಎಂದು ಕಳಿಸಿದರು

ಅಮ್ಮ ನೀನು ಪಾಸ್ ಎಂದು ಹೇಳಿದೆ, ಆಗ ಅಮ್ಮ ನಿಂದೇನಾಯಿತೋ ಎಂದರು ನಾನು ಫೇಲ್ ಎಂದು ಹೇಳಿದೆ. ಆಗ ಅಮ್ಮ ನನಗೆ ದುಡ್ಡನ್ನು ಕೊಟ್ಟು ಸಿನಿಮಾ ನೋಡಿಕೊಂಡು ಬಾ ಮಗನೆ ಎಂದು ಕಳಿಸಿದರು. ನಾನು ಸಿನಿಮಾಗಳನ್ನು ನೋಡುವುದರ ಜೊತೆಗೆ ಬೀಡಿಗಳನ್ನು ಸುಟ್ಟು ಭಸ್ಮವನ್ನು ಮಾಡಿದೆ.

ನಂತರ ಅಮ್ಮ ನನಗೆ ಗ್ರಂಥಾಲಯಕ್ಕೆ ಕರೆದುಕೊಂಡು ಹೋದರು. ನಿನಗೆ ಯಾವುದು ಇಷ್ಟವಾಗುತ್ತದೆ ಆ ಪುಸ್ತಕಗಳನ್ನು ಓದು ಎಂದರು. ನಾನು ಇಡಿ ಕನ್ನಡ ಸಾಹಿತ್ಯವನ್ನು ಓದಿ ಮುಗಿಸಿದ್ದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇತಿಹಾಸದಲ್ಲಿಯೆ ಇದೆ ಮೊದಲು ಅಮ್ಮ ಮತ್ತು ಮಗ ಒಟ್ಟಿಗೆ ಪರೀಕ್ಷೆಯನ್ನು ಬರೆದಿದ್ದರು. ಇದು ಒಂದು ರೆಕಾರ್ಡ್ ಅಂತಾನೆ ಹೇಳಬಹುದಾಗಿದೆ.

LEAVE A REPLY

Please enter your comment!
Please enter your name here