ಡಾಕ್ಟರ್ ರಾಜ್ ಕುಮಾರ್ ಅವರಿಗೆ ಹೊಸ ಬಿರುದನ್ನು ನೀಡಿದ ರವಿ ಬೆಳಗೆರೆ

0
497

ನಿನ್ನೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದು ರಸಮಂಜರಿಯ ಸಂಚಿಕೆಯನ್ನು ನಡೆಸಿದ್ದರು. ಹೌದು ಆ ಸಂಚಿಕೆಯ ಹೆಸರು ಎಂದೂ ಮರೆಯದ ಹಾಡು. ಕೆಲ ವರ್ಷಗಳ ಹಿಂದೆ ಎಂದೂ ಮರೆಯದ ಹಾಡು ಎನ್ನುವ ಕಾರ್ಯಕ್ರಮವನ್ನು ರವಿ ಬೆಳಗೆರೆ ಅವರು ನಿರೂಪಣೆಯನ್ನು ಮಾಡಿದ್ದರು. ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಅದೆ ಕಾರ್ಯಕ್ರಮವನ್ನ ಬಿಗ್ ಬಾಸ್ ಮನೆಯಲ್ಲಿ ಮರು ಸೃಷ್ಟಿಸಲಾಗಿತ್ತು. ರವಿ ಬೆಳಗೆರೆ ಈ ಸಂಚಿಕೆಗೆ ಹೊಸ ರೂಪವನ್ನು ನೀಡಿದ್ದರು. ಸಾಹಿತಿಗಳ ಕವನಗಳನ್ನು ಓದುತ್ತ, ಅದರ ಅರ್ಥವನ್ನು ಜನರಿಗೆ ತಿಳಿಸಿದ್ದರು. ಸುಮಧುರವಾದ ಮತ್ತು ಅರ್ಥಪೂರ್ಣವಾದ ಭಾವ ಗೀತೆಗಳನ್ನು ನಿನ್ನೆಯ ಸಂಚಿಕೆಯಲ್ಲಿ ನೋಡಬಹುದಾಗಿತ್ತು. ಇದೆ ವೇಳೆಯಲ್ಲಿ ಬೆಳಗೆರೆ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಕುರಿತು ಮಾತನಾಡಿದ್ದರು.

ಎಂದೂ ಮರೆಯಲಾರದ ಹಾಡು ಮರೆಯಾಲಾರದ ಸಂಚಿಕೆ

ವಾಸುಖಿ ವೈಭವ್ ಬಹಳ ಸೊಗಸಾಗಿ ಭಾವಗೀತೆಗಳನ್ನು ಹಾಡುವ ಮೂಲಕ ಮನೆಯ ಸದಸ್ಯರನ್ನು ರಂಜಿಸಿದ್ದರು. ಖ್ಯಾತ ಸಾಹಿತಿಗಳಾದ ಕೆ ಎಸ್ ನರಸಿಂಹ ಸ್ವಾಮಿ, ಗಿರೀಶ್ ಕಾರ್ನಾಡ್ ಇನ್ನು ಮುಂತಾದ ಸಾಹಿತಿಗಳು ಬರೆದಿರುವ ಹಾಡುಗಳನ್ನು ವಾಸುಖಿ ವೈಭವ್ ಅವರು ಹಾಡಿದ್ದರು. ಭಾವ ಗೀತೆಗಳನ್ನು ಹಾಡಿದ ನಂತರ ಚಿತ್ರ ಗೀತೆಗಳನ್ನು ಹಾಡಲು ಶುರು ಮಾಡಿದರು. ಶಂಕರ್ ನಾಗ್ ಅವರ ಸಂತೋಷಕ್ಕೆ ಹಾಡು ಸಂತೋಷಕ್ಕೆ, ರಾಜ್ ಕುಮಾರ್ ಅವರ ನೀ ಬಂದು ನಿಂತಾಗ ಹಾಡುಗಳನ್ನು ಹಾಡಿದರು. ಮುಂದೆ ಓದಿ

ರಾಜ್ ಕುಮಾರ್ ಅವರಿಗೆ ಹೊಸ ಬಿರುದು ಕೊಟ್ಟ ರವಿ ಬೆಳಗೆರೆ 

ರಾಜ್ ಕುಮಾರ್ ಅವರ ಹಾಡನ್ನು ಹೇಳುವ ಸಂದರ್ಭದಲ್ಲಿ, ಬೆಳಗೆರೆ ಅವರು ರಾಜ್ ಕುರಿತು ಹೇಳಿರುವಂತಹ ಕೆಲ ಮಾತುಗಳು ನಿಜಕ್ಕೂ ಅದ್ಬುತವಾಗಿದ್ದವು. ಹೌದು. ಪ್ರತಿಯೊಬ್ಬ ಕನ್ನಡಿಗರಿಗೆ ಕನ್ನಡ ಭಾಷೆಯನ್ನು ಕಲಿಸಿಕೊಟ್ಟ ಕನ್ನಡದ ಮೇಷ್ಟ್ರು ಅಣ್ಣಾವ್ರು ಎಂದು ಹೇಳಿದ್ದಾರೆ. ನಂತರ ಶಂಕರ್ ನಾಗ್ ಅವರ ಕುರಿತು ಮಾತನಾಡಿದ್ದಾರೆ.

ಮಂಜುಳಾ ಅವರ ದೇಹವನ್ನು ತಂದಿದ್ದು ಶಂಕರ್ ನಾಗ್

ಆಗಿನ ಕಾಲದಲ್ಲಿ ನಟಿ ಮಂಜುಳಾ ಅವರು ಅತ್ಯಂತ ಉತ್ತುಂಗ ಸ್ಥಾನದಲ್ಲಿದ್ದ ಸ್ಟಾರ್ ನಟಿಯಾಗಿದ್ದರು. ಬಹುಷಃ ಅದು ಸೀತಾ ರಾಮು ಸಿನಿಮಾ ಅಂತ ಕಾಣಿಸುತ್ತದೆ. ಮಂಜುಳಾ ಅವರ ಎದುರು ಶಂಕರ್ ನಾಗ್ ಅವರನ್ನು ತಂದು ನಿಲ್ಲಿಸಿದ್ದರಂತೆ. ನೋಡಿ ಈ ಚಿತ್ರಕ್ಕೆ ಇವರೆ ಹೀರೋ ಎಂದು ಹೇಳಿದರು.

ಆಗ ಮಂಜುಳಾ ಕೋತಿ ಮುಖವನ್ನು ತಂದು ಹೀರೋ ಮಾಡಲು ಹೊರಟ್ಟಿದ್ದೀರಲ್ಲ ಎಂದು ಹೇಳಿದ್ದರಂತೆ. ಆದರೆ ಮಂಜುಳಾ ಅವರು ಆತ್ಮಹತ್ಯೆ ಮಾಡಿಕೊಂಡಾಗ, ಅವರ ದೇಹವನ್ನು ತಂದಿದ್ದು ಶಂಕರ್ ನಾಗ್ ಎಂದು ಬೆಳಗೆರೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here