ಬೆಳಗ್ಗಿನ ತಿಂಡಿಗೆ ಹೆಸರುವಾಸಿಯಾಗಿರೋ ರವೆ ಇಡ್ಲಿ ಮೂಲದ ಬಗ್ಗೆ ನಿಮಗೆಷ್ಟು ಗೊತ್ತಿದೆ.

0
1239

ಬೆಳಿಗ್ಗೆ ಎದ್ದ ಕೂಡಲೇ ಕೆಲವ್ರು ಏನೇನೋ ತಿಂಡಿಗಳನ್ನ ಕೇಳ್ತಾರೆ. ಆದ್ರೆ ತಿಂಡಿಗಳಲ್ಲಿ ಎಲ್ಲರಿಗೂ ಪ್ರಿಯವಾದದ್ದು ಅಂದ್ರೆ ಇಡ್ಲಿ. ಯಾಕಂದ್ರೆ ಎಷ್ಟೋ ವರ್ಷಗಳಿಂದಲೂ ತಿಂಡಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿದೆ ಈ ಇಡ್ಲಿ. ಹೌದು ಹಬೆಯಾಡುವ ಬಿಸಿ ಬಿಸಿ ಇಡ್ಲಿ ಮತ್ತೆ ಚಟ್ನಿ,, ಸಾಂಬಾರ್ ಕಾಂಬಿನೇಷನ್ ಅಂದ್ರೆ ಎಲ್ಲರಿಗೂ ಇಷ್ಟ. ಈ ಇಡ್ಲಿ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳ ರೆಸ್ಟೋರೆಂಟ್‌ಗಳಲ್ಲೂ ಸ್ಥಾನ ಪಡೆದಿದೆ.

ಮಾರ್ಚ್ 30ರಂದು ವಿಶ್ವ ಇಡ್ಲಿ ದಿನಾಚರಣೆ. ಈ ಇಡ್ಲಿ ನೋಡೋಕೆ ತುಂಬಾ ಪುಟ್ಟದಾಗಿದೆ. ಆದ್ರೆ ಇದರ ಮಹತ್ವ ಮಾತ್ರ ಸಾಮಾನ್ಯದ್ದಲ್ಲ. ಹಾಗಾಗಿ ಇಂತ ಇಡ್ಲಿಗೆ ಹೆಚ್ಚಿನ ಜನಪ್ರಿಯತೆ ಸಿಗಲೆಂದು ಈ ದಿನಾಚರಣೆ ಮಾಡುತ್ತಿದ್ದಾರೆ. ಇಡ್ಲಿ ದಿನಾಚರಣೆಯನ್ನ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ವರ್ಷದ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ನೆಚ್ಚಿನ ರವೆ ಇಡ್ಲಿ

ಜನರಿಗೆ ಈ ರವೆ ಇಡ್ಲಿ ಮೇಲೆ ಅದೇನೋ ಒಂಥರ ವ್ಯಾಮೋಹ. ಇಡ್ಲಿಯಲ್ಲಿ ವಿಭಿನ್ನ ರೀತಿಯ ಇಡ್ಲಿಗಳಿವೆ. ಆದರೆ ಈ ರವೆ ಇಡ್ಲಿ ಜನರನ್ನ ಸೆಳೆದಿರೋ ಅಷ್ಟು, ಯಾವುದೂ ಸೆಳೆದಿಲ್ಲ. ಹೌದು. ಕೆಲವರಂತೂ ಯಾವುದೇ ಹೋಟೆಲ್ ಗೆ ಹೋದರು ರವೆ ಇಡ್ಲಿ ಕೊಡಿ ಅಂತ ಕೇಳ್ತಾರೆ. ಯಾಕಂದ್ರೆ ಬಿಸಿ ಬಿಸಿ ರವೆ ಇಡ್ಲಿ ಜೊತೆ, ಚಟ್ನಿ ಹಾಗೂ ಸಾಂಬಾರ್ ಇದ್ರೆ, ಸಾಕು ಅಂದಿನ ಟಿಫನ್ ಸೂಪರ್.

 

ಇತಿಹಾಸ

ಇಷ್ಟು ಚೆನ್ನಾಗಿರೋ ರವೆ ಇಡ್ಲಿಯನ್ನ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ರವೆ ಇಡ್ಲಿ ಇತಿಹಾಸದ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಹೌದು. ರವೆ ಇಡ್ಲಿ ಬಂದಿದ್ದಾದರೂ ಹೇಗೆ, ಅದನ್ನ ಕಂಡುಹಿಡಿದವರು ಯಾರು ಅಂತ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲ. ಈ ಇಡ್ಲಿಯನ್ನ, ಜನಪ್ರಿಯ ಉಪಹಾರ ಗೃಹ ಸಂಸ್ಥೆಯಾಗಿರೋ ಎಂಟಿಆರ್ ಆವಿಷ್ಕರಿಸಿದೆ. ಎಂಟಿಆರ್ ಪ್ರಕಾರ, ಎರಡನೇ ವಿಶ್ವಯುದ್ಧದ ಅವಧಿಯಲ್ಲಿ ಇಡ್ಲಿ ತಯಾರಿಕೆಯಲ್ಲಿ ಮುಖ್ಯ ವಸ್ತುವಾದ ಅಕ್ಕಿಯ ಸರಬರಾಜು ಕಡಿಮೆಯಿತ್ತು. ಹಾಗಾಗಿ ರವೆಯನ್ನ ಬಳಸಿ ಇಡ್ಲಿ ತಯಾರಿಕೆಯನ್ನ ಪ್ರಯೋಗ ಮಾಡಲಾಯಿತು. ಆಗ ರುಚಿಯಾದ ಇಡ್ಲಿ ತಯಾರಾಯಿತು. ಅಂದಿನಿಂದ ರವೆ ಇಡ್ಲಿ ಅಂತ ಘೋಷಣೆ ಮಾಡಲಾಯಿತು.

 

ಈ ರೀತಿ ಅಕ್ಕಿ ಉತ್ಪಾದನೆ ಕಡಿಮೆ ಇದ್ದಂತಹ ಸಮಯದಲ್ಲಿ ರವೆ ಇಂದ ಮಾಡಿದ್ರೆ ಹೇಗಿರುತ್ತೆ ಅಂತ ಪ್ರಯತ್ನ ಪಡ್ತಾರೆ. ಆಗ ರುಚಿಯಾದ ಇಡ್ಲಿ ತಯಾರಾಗುತ್ತೆ. ಅಂದಿನಿಂದ ಇಡ್ಲಿ ಬಹಳಷ್ಟು ಪ್ರಸಿದ್ದಿಯಾಗಿದೆ. ಬೆಳಗ್ಗಿನ ಉಪಹಾರಕ್ಕೆ ಹೇಳಿ ಮಾಡಿಸಿದಂತಿದೆ ಈ ರವೆ ಇಡ್ಲಿ .

LEAVE A REPLY

Please enter your comment!
Please enter your name here