ಪೋಷಕರ ಮಾತನ್ನು ಮೀರಿ ಸಿನಿಮಾ ರಂಗಕ್ಕೆ ಕಾಲಿಟ್ಟ ಕಿರಿಕ್ ಹುಡುಗಿ

0
777
rashmika mandanna

ರಶ್ಮಿಕಾ ಮಂದಣ್ಣ ಕರ್ನಾಟಕದ ಕ್ರಶ್ ಎಂದು ಕರೆಸಿಕೊಂಡಿದ್ದಾರೆ. ಹೌದು. ಕೊಡಗಿನ ಬೆಡಗಿಯಾದ ರಶ್ಮಿಕಾ ಮಂದಣ್ಣ ಎಲ್ಲರ ನೆಚ್ಚಿನ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಒಂದೇ ಸಿನಿಮಾದಲ್ಲಿ ಹಿಟ್ ಆದರು. ಆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ, ಹೆಸರು ಮಾಡಿದರು. ಅಲ್ಲಿಂದ ಪರಭಾಷಾ ಚಿತ್ರಕ್ಕೂ ಲಗ್ಗೆ ಇಟ್ಟರು. ಪರಭಾಷೆಗೆ ಲಗ್ಗೆ ಇಟ್ಟ ರಶ್ಮಿಕಾ ಅವರ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ಹೆಮ್ಮೆ ಪಟ್ಟಿದ್ದರು. ಯಾಕಂದ್ರೆ ಇಷ್ಟು ಬೇಗ, ನಮ್ಮ ಕನ್ನಡದ ನಟಿ ಹೆಸರು ಪಡೆಯುತ್ತಿದ್ದಾರೆ ಅಂತ. ಆದ್ರೆ ಯಾವಾಗ ರಶ್ಮಿಕಾ ನನಗೆ ಕನ್ನಡ ಮಾತನಾಡಲು ಕಷ್ಟ ಎನ್ನುವ ಹೇಳಿಕೆ ನೀಡಿದರೋ, ಆಗಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಗಿಂದ ರಶ್ಮಿಕಾ ಬಗ್ಗೆ ಒಂದಲ್ಲಾ ಒಂದು ಮಾತುಗಳು ಕೇಳಿಬರುತ್ತಿವೆ. ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು. ರಶ್ಮಿಕಾ ತಮ್ಮ ತಂದೆ ತಾಯಿಯ ವಿರೋಧದ ಮದ್ಯೆ ಸಿನಿಮಾ ರಂಗಕ್ಕೆ ಕಾಲಿಟ್ಟರಂತೆ.

ಚಿತ್ರರಂಗಕ್ಕೆ ಹೋಗುವುದು ಬೇಡ ಎಂದಿದ್ದ ರಶ್ಮಿಕಾ ತಂದೆ-ತಾಯಿ

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಲಗ್ಗೆ ಇಟ್ಟ ರಶ್ಮಿಕಾ ಒಂದೇ ಸಿನಿಮಾದಲ್ಲಿ ಎಲ್ಲರ ಮನೆ ಮಾತಾದರು. ಆದ್ರೆ ರಶ್ಮಿಕಾ ಸ್ಯಾಂಡಲ್ ವುಡ್ ಗೆ ಬರಲು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರಂತೆ. ಹೌದು. ರಶ್ಮಿಕಾ ಸಿನಿಮಾ ರಂಗಕ್ಕೆ ಕಾಲಿಡುವುದು ಅವರ ಮನೆಯವರಿಗೆ ಇಷ್ಟವಿರಲಿಲ್ಲವಂತೆ. ಹೌದು. ಯಾವುದೇ ಕಾರಣಕ್ಕೂ ಸಿನಿಮಾ ರಂಗಕ್ಕೆ ಕಾಲಿಡಬೇಡ ಎಂದು ರಶ್ಮಿಕಾ ಮನೆಯವರು ಹೇಳಿದ್ದರಂತೆ. ಆದರೂ ರಶ್ಮಿಕಾ ಎಲ್ಲರ ಮಾತನ್ನು ಧಿಕ್ಕರಿಸಿ, ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರಂತೆ. ಈ ಬಗ್ಗೆ ಸ್ವತಃ ರಶ್ಮಿಕಾ ಅವರೇ ಹೇಳಿದ್ದಾರೆ. ಹೌದು. ಸಿನಿಮಾ ರಂಗಕ್ಕೆ ಹೋಗುವದು ನನ್ನ ಮನೆಯವರಿಗೆ ಇಷ್ಟ ಇರಲಿಲ್ಲ. ಆದರೂ ನಾನು ಬಂದೆ. ಆದ್ರೆ ಈಗ ಇಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ಮನನೊಂದು ಮಾತನಾಡಿದ್ದಾರೆ.

ಸಿನಿಮಾ ಇಂಡಸ್ಟ್ರಿ ಸರಿಯಿಲ್ಲ ಎಂದಿದ್ದ ರಶ್ಮಿಕಾ ಕುಟುಂಬ

ರಶ್ಮಿಕಾಗೆ ಸಿನಿಮಾ ರಂಗಕ್ಕೆ ಕಾಲಿಡುವ ಮೊದಲಿಗೆ ಎಲ್ಲರು ಬುದ್ದಿ ಹೇಳಿದ್ದರಂತೆ. ಯಾಕಂದ್ರೆ ಈ ಸಿನಿಮಾ ಅನ್ನೋದು ನಮ್ಮಂತವರಿಗಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಹೋಗಬೇಡ. ಅದರಲ್ಲೂ ಈ ಸಿನಿಮಾ ಇಂಡಸ್ಟ್ರಿ ಸರಿಯಿಲ್ಲ. ಜೊತೆಗೆ ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಪ್ರೀತಿ – ಪ್ರೇಮ, ರಿಲೇಷನ್ ಷಿಪ್ ಎಲ್ಲವೂ ನಡೆಯುತ್ತದೆ. ಹಾಗಾಗಿ ಇದರ ಸಹವಾಸ ಬೇಡ ಎಂದು ಹೇಳಿದ್ದರು. ಆದರೂ ನಾನು ಬಂದೆ. ಆದ್ರೆ ಮನೆಯವರು ಹೇಳಿದಂತೆಯೇ ನನ್ನ ಜೀವನ ಆಗೋಯ್ತು. ಮೊದಲು ಪ್ರೀತಿ ನಂತರ ನಿಶ್ಚಿತಾರ್ಥ, ಅಲ್ಲಿಂದ ಬ್ರೇಕ್ ಅಪ್ ಈ ರೀತಿ ಎಲ್ಲವೂ ನನ್ನ ಜೀವನದಲ್ಲಿ ನಡೆದು ಹೋಯ್ತು. ಆದ್ರೂ ನಾನು ಯಾವುದಕ್ಕೂ ಹೆದರಲಿಲ್ಲ. ಆದ್ರೆ ಈಗ ಕೆಲವು ವಿಷಯಗಳು ನನ್ನನ್ನು ಬಹಳ ಚುಚ್ಚುತ್ತಿದೆ ಎಂದು ಹೇಳಿದ್ದಾರಂತೆ.

ಬಹುಬೇಡಿಕೆಯ ನಟಿ ರಶ್ಮಿಕಾ

ಇನ್ನು ರಶ್ಮಿಕಾ ಈಗ ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಅದು ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಅವರು ಹೇಳಿದ್ದ ಮಾತೊಂದು ಅವರನ್ನು ಸಿಕ್ಕಾಪಟ್ಟೆ ಗೊಂದಲಕ್ಕೆ ಸಿಲುಕಿಸಿತ್ತು. ಅದೇ ವಿಚಾರ ಈಗಲೂ ನಡೆಯುತ್ತಿದೆ. ಹೌದು. ಕನ್ನಡ ಮಾತನಾಡಲು ಕಷ್ಟ ಎಂದಿದ್ದ ರಶ್ಮಿಕಾ ಅವರ ಸಿನಿಮಾಗಳು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಎಂದು ಕನ್ನಡ ಪರ ಸಂಘಟನೆಯವರು ಚಲನ ಚಿತ್ರ ಮಂಡಳಿಗೆ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಈಗಲೂ ಮಾತುಕತೆ ನಡೆಯುತ್ತಿದೆ. ಆದ್ರೆ ರಶ್ಮಿಕಾ ಮಾತ್ರ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅವರ ಪಾಡಿಗೆ ಅವರು ಇದ್ದಾರೆ. ಅದು ಅಲ್ಲದೆ ರಶ್ಮಿಕಾ ಈಗ ಎಲ್ಲ ಭಾಷೆಗಳಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುವುದರ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡುತ್ತಿದ್ದಾರೆ. ಆದ್ರೆ ಕೆಲವೊಂದು ವಿಚಾರಗಳಿಂದ ಮಾತ್ರ ಆಗಾಗ ಮನ ನೊಂದುಕೊಳ್ಳುತ್ತಿದ್ದಾರಂತೆ.

ಒಟ್ಟಿನಲ್ಲಿ ಸಿನಿಮಾ ರಂಗಕ್ಕೆ ಕಾಲಿಡೋದು ರಶ್ಮಿಕಾ ಮನೆಯವರಿಗೆ ಇಷ್ಟವಿರಲಿಲ್ಲವಂತೆ. ಆದರೂ ಮನೆಯವರ ಮಾತನ್ನು ದಿಕ್ಕರಿಸಿ ರಶ್ಮಿಕಾ ಸಿನಿಮಾ ರಂಗಕ್ಕೆ ಕಾಲಿಟ್ಟರಂತೆ. ಆದ್ರೆ ಈಗ ಮನೆಯವರ ಮಾತುಗಳೆಲ್ಲ ಸತ್ಯವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here