ರಶ್ಮಿಕ ಸಂಭಾವನೆ ಎಷ್ಟು? ಡಿಯರ್ ಕಾಮ್ರೇಡ್ ಚಿತ್ರಕ್ಕಾಗಿ ಪಟ್ಟ ಕಷ್ಟವಾದರು ಏನು?

0
609
rashmika mandanna

ಸಿನಿಮಾದಲ್ಲಿ ನಮ್ಮ ಪಾತ್ರ ಅದ್ಭುತವಾಗಿ ಮೂಡಿ ಬರಬೇಕೆಂದರೆ ಮೊದಲು ನಾವು ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಬಹಳ ಶ್ರಮ ಪಟ್ಟು, ಪಾತ್ರಕ್ಕಾಗಿ ತಯಾರಿ ನಡೆಸಬೇಕಾಗುತ್ತದೆ. ಡಿಯರ್ ಕಾಮ್ರೇಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಲಿಲ್ಲಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತುಂಬಾ ಕಷ್ಟ ಪಟ್ಟು ಪಾತ್ರಕ್ಕೆ ಅನುಸಾರವಾಗಿ ಹೊಂದುಕೊಂಡಿದ್ದಾರೆ. ಲಲ್ಲಿ ಈ ಸಿನಿಮಾದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯ ಪಾತ್ರವನ್ನು ನಿಭಾಯಿಸುತ್ತಿದ್ದಾಳೆ. ಆದ್ದರಿಂದ ರಶ್ಮಿಕಾ ಕ್ರಿಕೆಟ್ ಆಟವನ್ನು ಕಲಿಯುತ್ತಿದ್ದಾರೆ. ಮೊದಲು ಇವರಿಗೆ ಬ್ಯಾಟ್ ಸರಿಯಾಗಿ ಹಿಡಿಯುವುದಕ್ಕೆ ಬರುತ್ತಿರಲಿಲ್ಲ, ಆದರೆ ಈಗ ಬೌಂಡರಿ ಹೊಡಿಯುತ್ತಿದ್ದಾರಂತೆ. ಇದಕೆಲ್ಲ ಕಾರಣ ಡಿಯರ್ ಕಾಮ್ರೇಡ್ ಚಿತ್ರ.

 ಬೆಳಿಗ್ಗೆ ಎದ್ದು ಕ್ರಿಕೆಟ್ ಪ್ರಾಕ್ಟಿಸ್ ಮಾಡುತ್ತಿದ್ದರಂತೆ

ಸಿನಿಮಾದಲ್ಲಿ ಕ್ರಿಕೆಟ್ ದೃಶ್ಯ ಕೇವಲ 5 ರಿಂದ 10 ನಿಮಿಷ ಮಾತ್ರವಿರುವವುದು. ಆದರೆ ಈ ದೃಶ್ಯಕ್ಕಾಗಿ ರಶ್ಮಿಕಾ ಬಹಳ ಒದ್ದಾಡಿದ್ದರಂತೆ. ಮೂರು ನಾಲಕ್ಕು ತಿಂಗಳಿನವರೆಗು ಬೆಳಿಗ್ಗೆ ಎದ್ದು ಕ್ರಿಕೆಟ್ ಪ್ರಾಕ್ಟಿಸ್ ಮಾಡುತ್ತಿದ್ದರಂತೆ. ಚಿತ್ರದಲ್ಲಿ ಕ್ರಿಕೆಟ್ ದೃಶ್ಯ ಸ್ವಲ್ಪ ಅವಧಿಯಿದ್ದರು ಅದು ಚೆನ್ನಾಗಿ ಬರಬೇಕೆಂದು ಸಿಕ್ಕಾ ಪಟ್ಟೆ ಇದರ ಮೇಲೆ ಕೆಲಸ ಮಾಡಿದ್ದಾರೆ ರಶ್ಮಿಕಾ. ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಆಗಿದ್ದರು ಸಹ ಕ್ರಿಕೆಟ್ ನ ಪ್ರತಿ ಅಂಶ 100% ಇರಬೇಕಿತ್ತಂತೆ.

ಸಂಭಾವನೆ ಹೆಚ್ಚಿಕೊಳ್ಳುವುದು ಸಾಮಾನ್ಯ ಎಂದು ಉತ್ತರ ನೀಡಿದ್ದಾರೆ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕರ್ನಾಟಕದ ಕ್ರಶ್ ಆಗಿದ್ದರು ಕೊಡಗಿನ ಬೆಡಗಿ ರಶ್ಮಿಕಾ. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತಿತ್ತು. ಈ ವಿಷಯದ ಕುರಿತು ರಶ್ಮಿಕಾ ಮಂದಣ್ಣ ಅವರೆ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಇವರು ಡಿಯರ್ ಕಾಮ್ರೇಡ್ ಚಿತ್ರದ ಪ್ರಮೋಷನ್ ನಲ್ಲಿ ನಿರತರಾಗಿದ್ದು, ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದರು. ಇದೆ ಸಮಯದಲ್ಲಿ ಪತ್ರಕರ್ತರು ಸಂಭಾವನೆಯನ್ನು ಯಾಕೆ ನೀವು ಹೆಚ್ಚಿಸಿಕೊಂಡಿದ್ದೀರಿ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಪ್ರಶ್ನೆಗೆ ಸ್ಪಂದಿಸಿದ ರಶ್ಮಿಕಾ ಸಂಭಾವನೆ ಹೆಚ್ಚಿಕೊಳ್ಳುವುದು ಸಾಮಾನ್ಯ ಎಂದು ಉತ್ತರ ನೀಡಿದ್ದಾರೆ.

ಹಿಟ್ ಚಿತ್ರಗಳನ್ನು ನೀಡಿದ ಮೇಲೆ 60 ರಿಂದ 80 ಲಕ್ಷ ತೆಗೆದುಕೊಳ್ಳುತ್ತಿದ್ದಾರೆ

ನಾನು ಎರಡು ವರ್ಷದಿಂದ ಸಿನಿ ರಂಗದಲ್ಲಿದ್ದೀನಿ, ಫಿಲಂ ಇಂಡಸ್ಟ್ರಿ ಯಲ್ಲಿ ನಾನು ಬೆಳೆಯುತ್ತಿದ್ದೇನೆ. ಆದ್ದರಿಂದ ನನ್ನ ಸಂಭಾವನೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ನೀವು ಒಳ್ಳೆಯ ಸಂಭಾವನೆ ಕೇಳುವುದಿಲ್ಲವೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ. ನಾನು ಕಡಿಮೆ ಸಂಬಳಕ್ಕೆ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಮೊದಲು ರಶ್ಮಿಕಾ ಒಂದು ಸಿನಿಮಾಗೆ 40 ಲಕ್ಷ ಹಣವನ್ನು ಪಡೆಯುತ್ತಿದ್ದರು. ಒಂದಾದ ನಂತರ ಹಿಟ್ ಚಿತ್ರಗಳನ್ನು ನೀಡಿದ ಮೇಲೆ 60 ರಿಂದ 80 ಲಕ್ಷಕದವರೆಗು ಇವರ ಸಂಭಾವನೆ ಬಂದು ನಿಂತಿದೆ. ಪೊಗರು ಚಿತ್ರಕ್ಕಾಗಿ 60 ಲಕ್ಷ ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದುಡ್ಡನ್ನು ಪಡೆಯುವ ನಟಿ ಎಂದರೆ ಅದು ರಶ್ಮಿಕಾ.

LEAVE A REPLY

Please enter your comment!
Please enter your name here