ರಶ್ಮಿಕಾಗೆ ಅಸಭ್ಯವಾಗಿ ಕಮೆಂಟ್ ಮಾಡಿದವರ್ಯಾರು? ಫುಲ್ ಕ್ಲಾಸ್ ತೆಗೆದುಕೊಂಡ ಕಿರಿಕ್ ಬೆಡಗಿ

0
840
rashmika childwood photos

ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಸದಾಕಾಲ ಅವರ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಯಾಕಂದ್ರೆ ಸಣ್ಣ ಪುಟ್ಟ ವಿಷಯಗಳಿಗೆ ಕಿರಿಕ್ ಮಾಡಿಕೊಳ್ಳುವುದು ಅಥವಾ ಅಭಿಮಾನಿಗಳಿಗೆ ಬೇಸರವಾಗುವಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಹಾಗಾಗಿ ಅಭಿಮಾನಿಗಳು ಈಗ ರಶ್ಮಿಕಾ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಈಗಲೂ ರಶ್ಮಿಕಾ ವಿರುದ್ಧ ಕೆಂಡಕಾರುತ್ತಿದ್ದಾರೆ. ಆದ್ರೆ ಈ ಮಧ್ಯೆ ರಶ್ಮಿಕಾ ಒಂದು ವಿಷಯಕ್ಕೆ ಜನರ ವಿರುದ್ಧ ಕಿಡಿಕಾರುತ್ತಿದ್ದಾರೆ. ಹೌದು. ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿಕ್ಕ ವಯಸ್ಸಿನ ಫೋಟೋವೊಂದನ್ನು ಹಾಕಿದ್ದಾರೆ. ಇನ್ನು ಆ ಫೋಟೋವನ್ನು ನೋಡಿದ ಜನರ ಅಸಭ್ಯವಾದ ಕಮೆಂಟ್ ಮಾಡುವುದರ ಮೂಲಕ, ಟ್ರೋಲ್ ಮಾಡುತ್ತಿದ್ದಾರೆ. ಹಾಗಾಗಿ ರಶ್ಮಿಕಾ ಅಂಥವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೆಟ್ಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ರಶ್ಮಿಕಾ

ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಬಾಲ್ಯದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇನ್ನು ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಮನಬಂದಂತೆ ಕಮೆಂಟ್ ಮಾಡಿದ್ದಾರೆ. ಜೊತೆಗೆ ರಶ್ಮಿಕಾ ಅವರ ಬಾಲ್ಯದ ಫೋಟೋ ಮೇಲೆ ಟ್ರೋಲಾಯ ನಮಃ ಎಂಬ ಲೋಗೋ ಇದೆ. ಈ ರೀತಿ ಇಲ್ಲ ಸಲ್ಲದ ಕಮೆಂಟ್ ಗಳನ್ನು ಮಾಡುತ್ತಾ, ಟ್ರೋಲ್ ಮಾಡುತ್ತಿರುವವರಿಗೆ ರಶ್ಮಿಕಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಜೊತೆಗೆ ಅಸಭ್ಯ ಪದವನ್ನು ಬಳಕೆ ಮಾಡಿದ್ದಾರೆ. ಹಾಗಾಗಿ ಕಿಡಿಗೇಡಿಗಳ ಈ ರೀತಿಯ ವರ್ತನೆಯಿಂದ ರಶ್ಮಿಕಾ ಮಂದಣ್ಣ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಕಲಾವಿದರು ಅಂದ್ರೆ ಯಾರು? ಅವರಿಗೂ ಒಂದು ಮನಸ್ಸಿದೆ ಎಂಬುದನ್ನು ರಿಪ್ಲೇ ಮಾಡುವುದರ ಮೂಲಕ ತಿಳಿಸಿದ್ದಾರೆ.

ಕಲಾವಿದರ ಬಗ್ಗೆ ನೆಟ್ಟಿಗರಿಗೆ ಮನದಟ್ಟು ಮಾಡಿದ ರಶ್ಮಿಕಾ

ಇನ್ನು ರಶ್ಮಿಕಾ, ನೆಟ್ಟಿಗರಿಗೆ ಬಹಳ ಖಾರವಾಗಿಯೇ ಉತ್ತರ ನೀಡಿದ್ದಾರೆ. ಹೌದು. ನಾನು ಇಷ್ಟುದಿನ ಬರುತ್ತಿದ್ದ ಕಮೆಂಟ್ ಗಳನ್ನು ಹಾಗು ಆಗುತ್ತಿದ್ದ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕಂದ್ರೆ ಕಲಾವಿದರು ಅಂದ್ಮೇಲೆ ಇವೆಲ್ಲಾ ಕಾಮನ್ ಎಂದು ಸುಮ್ಮನಾಗಿದ್ದೆ. ಅಲ್ಲದೆ ಆ ಕಮೆಂಟ್ ಗಳು ಕೇವಲ ನನ್ನ ವೃತ್ತಿ ಪರ ಇರುತ್ತಿದ್ದವು. ಆದ್ರೆ ಈಗ ಮಾಡಿರುವ ಕಮೆಂಟ್ ಗಳು ನನ್ನ ವೈಯಕ್ತಿಕ ಜೀವನ ಹಾಗು ನನ್ನ ಕುಟುಂಬಕ್ಕೆ ಸೇರಿದ್ದಾಗಿದೆ. ಹಾಗಾಗಿ ಇದೆಲ್ಲಾ ಮಿತಿ ಮೀರುತ್ತಿದೆ. ನಮ್ಮನ್ನು ಸುಲಭವಾಗಿ ಟಾರ್ಗೆಟ್ ಮಾಡಬಹುದು ಎಂದು ಟ್ರೋಲ್ ಮಾಡುತ್ತೀರಾ. ಈ ರೀತಿ ಯಾವ ಕಲಾವಿದರಿಗೂ ಮಾಡಬಾರದು. ಒಬ್ಬ ಕಲಾವಿದೆಯಾಗುವುದು ಅಷ್ಟು ಸುಲಭ ಅಲ್ಲ ಎಂದು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ನಮ್ಮ ಕೆಲಸದ ಬಗ್ಗೆ ಏನಾದರೂ ಹೇಳಬೇಕು ಎನ್ನಿಸಿದರೆ ಹೇಳಿ. ಏಕೆಂದರೆ ನಿಮಗೆ ಹೇಳಲು ಹಕ್ಕಿದೆ. ಆದರೆ ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಪ್ರತಿ ವೃತ್ತಿಗೂ ಒಂದು ಗೌರವ ಇದೆ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ರಶ್ಮಿಕಾ, ನೆಟ್ಟಿಗರು ಮಾಡುತ್ತಿದ್ದ ಟ್ರೋಲ್ ಗೆ ಖಡಕ್ ಆಗಿಯೇ ಉತ್ತರವನ್ನು ನೀಡಿದ್ದಾರೆ. ಜೊತೆಗೆ ಕಲಾವಿದರ ಮಹತ್ವವನ್ನು ತಿಳಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ಈ ರೀತಿಯಾದರೆ, ಅದಕ್ಕೆ ತಕ್ಕ ಉತ್ತರ ಸಿಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

LEAVE A REPLY

Please enter your comment!
Please enter your name here