ರಶ್ಮಿಕಾ ಬಿಟ್ಟು, ಮತ್ತೊಬ್ಬ ನಟಿ ಜೊತೆ ಕಾಣಿಸಿಕೊಳ್ಳುತ್ತಿರುವ ವಿಜಯ್ ದೇವರಕೊಂಡ

0
560
rashmika and vijay

ಸೌತ್ ಇಂಡಸ್ಟ್ರಿಯಲ್ಲಿ ಈಗ ಮಿಂಚುತ್ತಿರುವ ಜೋಡಿ ಅಂದ್ರೆ ಅದು ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ. ಹೌದು. ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ನಟಿಸುವ ಮೂಲಕ, ಈ ಜೋಡಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಾದ ನಂತರ ಕೆಲವು ವಿಚಾರಗಳಲ್ಲೂ ಸಹ ಈ ಜೋಡಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೌದು. ರಶ್ಮಿಕಾ ಕನ್ನಡದಲ್ಲಿ ನಟಿಸುವಾಗ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡು, ನಂತರ ಅವರ ಜೊತೆ ಬ್ರೇಕ್ ಅಪ್ ಆಗಿ, ಅಲ್ಲಿಂದ ದಕ್ಷಿಣ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅದಾದ ಬಳಿಕ, ಅವರು ಹಾಗು ವಿಜಯ್ ದೇವರಕೊಂಡ ಪ್ರೀತಿಸುತ್ತಿದ್ದಾರಾ ಅನ್ನೋ ಪ್ರಶ್ನೆಗಳು ಸಹ ಎದುರಾಗಿತ್ತು. ಆದ್ರೆ ರಶ್ಮಿಕಾ ಆ ರೀತಿ ಏನು ಇಲ್ಲ ಎಂದು ಹೇಳಿದ್ದರು. ಆದ್ರೆ ರಶ್ಮಿಕಾ, ವಿಜಯ್ ಗೆ ತಲೆ ಬಾಚುವುದು ಈ ರೀತಿಯ ವಿಡಿಯೋಗಳೆಲ್ಲ ವೈರಲ್ ಆಗುತ್ತಿತ್ತು. ಹಾಗಾಗಿ ಅಭಿಮಾನಿಗಳು ಈ ಜೋಡಿಗೆ ಒಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ ಈಗ ವಿಜಯ್ ರಶ್ಮಿಕಾರನ್ನು ಬಿಟ್ಟು, ಬಾಲಿವುಡ್ ಗೆ ಹಾರಿದ್ದಾರಂತೆ.

ರಶ್ಮಿಕಾರನ್ನು ಬಿಟ್ಟು ಬಾಲಿವುಡ್ ಗೆ ಹಾರಲಿರುವ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಜೋಡಿ ಬಹಳಷ್ಟು ಸದ್ದು ಮಾಡಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಈ ಜೋಡಿಯ ಮಧ್ಯೆ ಲವ್ ಆಗುವ ಎಲ್ಲ ಚಾನ್ಸಸ್ ಇದೆ ಎಂದು ಎಲ್ಲರು ಹೇಳುತ್ತಿದ್ದರು. ಅಲ್ಲದೆ ಸೌತ್ ಇಂಡಸ್ಟ್ರಿಯಲ್ಲಿ ಇವರಿಬ್ಬರು ಸರಿ ಸಮನಾಗಿ ತಮ್ಮ ಹೆಜ್ಜೆಯನ್ನು ಇಡುತ್ತಿದ್ದರು. ಆದ್ರೆ ಈಗ ವಿಜಯ್, ರಶ್ಮಿಕಾಗಿಂತ ಬಹಳ ಮುಂದೆ ಹೋಗಿದ್ದಾರೆ. ಹೌದು. ವಿಜಯ್ ದೇವರಕೊಂಡ ಈಗ ಬಾಲಿವುಡ್ ಗೆ ಹಾರಲಿದ್ದಾರಂತೆ. ವಿಜಯ್ ಬಾಲಿವುಡ್ ಗೆ ಹೋಗುತ್ತಿರೋದು ಒಂದು ದೊಡ್ಡ ವಿಷಯಾನ? ಎಂದು ನೀವು ಅನ್ಕೋಬಹುದು. ಆದರೆ ಅದು ಮುಖ್ಯವಲ್ಲ. ವಿಜಯ್, ರಶ್ಮಿಕಾರನ್ನು ಬಿಟ್ಟು, ಇನ್ನೊಬ್ಬ ನಾಯಕಿ ಜೊತೆ ಬಾಲಿವುಡ್ ಗೆ ಹೋಗುತ್ತಿರೋದೇ ಮುಖ್ಯವಾಗಿದೆಯಂತೆ.

ಕಿಯಾರ ಅಡ್ವಾನಿ ಜೊತೆ ನಟಿಸಲಿರುವ ವಿಜಯ್

ವಿಜಯ್ ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೊತೆ ಕಾಣಿಸಿಕೊಂಡಿದ್ದಾರೆ. ಯಾಕಂದ್ರೆ ಈಗ ವಿಜಯ್ ನಟಿಸುತ್ತಿರೋದೇ ಕರಣ್ ಜೋಹರ್ ಸಿನಿಮಾದಲ್ಲಿ. ಹಾಗಾಗಿ ಅದೇ ಸಮಯದಲ್ಲಿ ಕರಣ್ ಜೋಹರ್, ವಿಜಯ್ ಗೆ ಬಾಲಿವುಡ್ ನಟಿ ಕಿಯಾರ ಅಡ್ವಾನಿ ಅವರನ್ನು ಭೇಟಿ ಮಾಡಿಸಿದ್ದಾರೆ. ಆ ಸಮಯದಲ್ಲಿ ಇವರಿಬ್ಬರು ಕೆಲವು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಈಗ ವಿಜಯ್ ಮತ್ತು ಕಿಯಾರ ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾಗಿ ಕರಣ್ ಸಿನಿಮಾದಲ್ಲಿ ವಿಜಯ್ ಮತ್ತು ಕಿಯಾರ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ನಲ್ಲಿ ಮಿಂಚಲಿರುವ ವಿಜಯ್

ಕರಣ್ ಜೋಹರ್ ಗೆ ಅವರ ಸಿನಿಮಾದಲ್ಲಿ ವಿಜಯ್ ನಟಿಸಬೇಕು ಅನ್ನೋ ಆಸೆ ಬಹಳಷ್ಟಿದೆಯಂತೆ. ಹಾಗಾಗಿ ಅವರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ವಿಜಯ್ ಅವರನ್ನು ಒಪ್ಪಿಸಿದ್ದಾರೆ. ಅಲ್ಲದೆ ಈ ಮೊದಲು ವಿಜಯ್ ಹಿಂದಿಯಲ್ಲಿ ನಟಿಸುತ್ತೇನೆ ಎಂದು ಮಾತ್ರ ಹೇಳಿದ್ದರು. ಆದ್ರೆ ಯಾವ ಸಿನಿಮಾಗೂ ಓಕೆ ಎಂದಿರಲಿಲ್ಲ. ಆದ್ರೆ ಈಗ ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಲು ನಿರ್ಧಾರ ಮಾಡಿದ್ದಾರಂತೆ. ಆದ್ರೆ ಈ ವಿಷಯದ ಬಗ್ಗೆ ಯಾರೊಬ್ಬರೂ ಸಹ ಸಣ್ಣ ಸುಳಿವನ್ನು ಸಹ ಬಿಟ್ಟುಕೊಟ್ಟಿರಲಿಲ್ಲ. ಈಗಲೂ ಸಹ ಇದು ಇನ್ನು ಪಕ್ಕ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಹೌದು. ಈ ಬಗ್ಗೆ ವಿಜಯ್ ಆಗಲಿ ಅಥವಾ ಕರಣ್ ಜೋಹರ್ ಆಗಲಿ ತುಟಿ ಬಿಚ್ಚುತ್ತಿಲ್ಲ. ಆದರೆ ನಟಿಸುತ್ತಾರೆ ಅನ್ನೋದು ಮಾತ್ರ ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ರಶ್ಮಿಕಾ ಹಾಗು ವಿಜಯ್ ದೇವರಕೊಂಡ ಜೋಡಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೆ ಈಗ ವಿಜಯ್ ಹಾಗು ಕಿಯಾರ ಫೋಟೋಗಳು ವೈರಲ್ ಆಗುತ್ತಿರೋದ್ರಿಂದ, ಎಲ್ಲರು ಅವರ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ರಶ್ಮಿಕಾ ಕಥೆ ಇಲ್ಲಿಗೆ ಮುಗಿಯಿತು ಎಂದು ಎಲ್ಲರು ಹೇಳುತ್ತಿದ್ದಾರಂತೆ.

LEAVE A REPLY

Please enter your comment!
Please enter your name here