ದೇಶದ ಪ್ರಧಾನಿ ಮತ್ತು ಗೃಹ ಸಚಿವರನ್ನ ಟಾರ್ಗೆಟ್ ಮಾಡಿದ ಹಿಂದಿ ಗಾಯಕಿ

0
399

ಸ್ವಲ್ಪ ದಿನಗಳ ಹಿಂದೆ ಲೋಕಸಭಾ ಚುನಾವಣೆ ನಡೆದಿತ್ತು. ಭಾರತದ ಎಲ್ಲ ರಾಜ್ಯಗಳಲ್ಲು ಬಿಜೆಪಿಯದ್ದೇ ದರ್ಬಾರ್ ಆಗಿತ್ತು. ಮೋದಿ ಹವಾ ಇದ್ದ ಕಾರಣದಿಂದಾಗಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಗೆಲುವನ್ನು ಸಾಧಿಸಿತ್ತು. ಮತ್ತೊಮ್ಮೆ ಮೋದಿ ಎಂದು ಹೇಳುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಆಗಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಪಕ್ಷ ರಚನೆ ಆಗಿದ್ದು, ಎರಡನೆ ಬಾರಿ ಪ್ರಧಾನ ಮಂತ್ರಿಯಾಗಿ ಮೋದಿಯವರು ಪ್ರಮಾಣವಚನವನ್ನು ಸ್ವೀಕರಿಸಿದ್ದರು. ಕರ್ನಾಟಕದಲ್ಲು ಬಿಜೆಪಿ ಹೆಚ್ಚು ಸೀಟ್ಸ್ ಗಳನ್ನು ಪಡೆದುಕೊಂಡಿದ್ದು, ಇದಕ್ಕು ಕಾರಣ ಮೋದಿ ಅಂತಾನೆ ಹೇಳಬಹುದಾಗಿದೆ. ಹೌದು ಚುನಾವಣೆಯ ಸಂದರ್ಭದಲ್ಲಿ. ಮೋದಿ ಆವರು ಕರ್ನಾಟಕದಲ್ಲಿ ಹೆಚ್ಚು ಪ್ರಚಾರವನ್ನು ಮಾಡಿದ್ದರು. ಕೊನೆಗು ದೇಶದ ಜನತೆ ಮೋದಿಯವರ ಕೈ ಬಿಡಲಿಲ್ಲ. ಕಮಲ ಬಹುಮತಗಳಿಂದ ದೇಶಾದ್ಯಂತ ಅರಳಿತ್ತು.

ಪ್ರಧಾನಿ ಮತ್ತು ಗೃಹ ಸಚಿವರನ್ನು ನಿಂದಿಸಿದಕ್ಕೆ  ಟ್ವಿಟ್ಟರ್ ಅಕೌಂಟ್ ರದ್ದು

ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ 370 ಮತ್ತು 35ಎ ಆರ್ಟಿಕಲ್ ಗಳನ್ನೂ ರದ್ದು ಗೊಳಿಸಿದ್ದರು. ಅಖಂಡ ಭಾರತ ಆಗಬೇಕೆಂದು ಸುಮಾರು ವರ್ಷಗಳ ಹಿಂದೆ ಅದೆಷ್ಟೊ ರಾಜಕಾರಣಿಗಳು ಹೋರಾಟವನ್ನು ಮಾಡಿದ್ದರು. ಆದರೆ ಇಂದು ಅವರ ಕನಸು ಮೋದಿ ಮತ್ತು ಅಮಿತ್ ಶಾ ಈಡೇರಿಸಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ದೇಶದ ಜನತೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನ ಮಾನವನ್ನು ತೆಗೆದುಹಾಕುವ ಮೂಲಕ ಐತಿಹಾಸಿಕ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಸಾಕ್ಷಿಯಾಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ಬೆಂಬಲವನ್ನು ನೀಡಿದ್ದರು. ಹಾರ್ಡ್ ಕೌರ್ ಎನ್ನುವ ಹಿಂದಿ ಭಾಷೆಯ ಗಾಯಕಿ ಅವಾಚ ಪದಗಳನ್ನು ಬಳಸಿ ಮೋದಿ ಮತ್ತು ಅಮಿತ್ ಶಾ ಅವರನ್ನು ನಿಂದಿಸಿದ್ದಾರೆ. ಮುಂದೆ ಓದಿ

ಖಾಲಿಸ್ತಾನ್ ಹೆಸರಿನಲ್ಲಿ ಸಿಖ್ಖರಿಗೆ ಪ್ರತ್ಯೇಕವಾದ ನೆಲೆಯ ಬೇಡಿಕೆ

ತನ್ನ ಮುಂದಿನ ಆಲ್ಬಮ್ ನ ಪ್ರೋಮೋಷನಲ್ ಗೀತೆಗಾಗಿ ಒಂದು ವೀಡಿಯೊ ಮಾಡಲಾಗಿದ್ದು, (we are warriors on instagram) ಎನ್ನುವ ಶೀರ್ಷಿಕೆ ಹಾಡಿಗಿದೆ. ಇದರಲ್ಲಿ ಖಾಲಿಸ್ತಾನ್ ಸುಪ್ಪೋರ್ಟರ್ಸ್ ಸಹ ಭಾಗಿಯಾಗಿದ್ದಾರೆ. ಕೆಲವು ಸಿಖ್ ಗುಂಪುಗಳು ನಮಗೊಂದು ಪ್ರತ್ಯೇಕವಾದ ದೇಶ ಬೇಕು ಪಂಜಾಬ್ ನಲ್ಲಿ ಖಾಲಿಸ್ತಾನ್ ಹೆಸರಿನಲ್ಲಿ ಸಿಖ್ ಅವರಿಗೆಂದೆ ನೆಲೆಬೇಕಾಗಿದೆ ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಈ ವೀಡಿಯೊ ಟ್ವಿಟ್ಟರ್ ನಲ್ಲಿ ಪೋಸ್ಟ್ ಆಗುತ್ತಿದ್ದಂತೆ, ಗಾಯಕಿಯ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿದ್ದಾರೆ. ಜೂನ್ ತಿಂಗಳಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ಆರ್ ಎಸ್ ಎಸ್ ಸಂಘದ ಅಧ್ಯಕ್ಷರಾದ ಮೋಹನ್ ಭಾಗವತ್ ಅವರ ಮೇಲೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಳು. ದೇಶದ ವಿರುದ್ಧ ಮಾತನಾಡಿರುವದರಿಂದ ಸೆಕ್ಷನ್ 124 ಎ 153 ಎ, 500, 505 ಪ್ರಕಾರ ಕಾನೂನು ವತಿಯಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗಿತ್ತು.

ದೇಶ ದ್ರೋಹಿಗಳಿಗೆ ಈ ರೀತಿ ಮಾಡಿದರೆ ಮಾತ್ರ ಬುದ್ದಿ ಬರುವುದು

ಹಾರ್ಡ್ ಕೌರ್ ಕೆಲವು ಪ್ರಸಿದ್ದವಾದ ಗೀತೆಗಳಿಗೆ ಹೆಸರುವಾಸಿಯಾಗಿದ್ದಳು. 2011 ರಲ್ಲಿ ಅಕ್ಷಯ್ ಕುಮಾರ್ ಜೊತೆ ಪಟಿಯಾಲ ಹೌಸ್ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದರು. ತನ್ನ ಅಸಭ್ಯವಾದ ವರ್ತನೆಯಿಂದ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಮೊದಲು ದೇಶದ ಪ್ರಜಾಪ್ರಭುತ್ವ ಮತ್ತು ಉತ್ತಮವಾದ ಕೆಲಸಗಳನ್ನು ಮಾಡುವ ರಾಜಕಾರಣಿಗಳನ್ನು ಗೌರವಿಸಬೇಕು.

ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೇವಲ ಒಂದು ಹಾಡಿಗಾಗಿ ದೇಶದ ಪ್ರಧಾನಿಯನ್ನು ಮತ್ತು ಗೃಹ ಸಚಿವರನ್ನು ನಿಂದಿಸಿರುವುದು ಸರಿಯಲ್ಲ. ಟ್ವಿಟ್ಟರ್ ನವರು ಅಕೌಂಟ್ ರದ್ದು ಮಾಡಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ದೇಶ ದ್ರೋಹಿಗಳಿಗೆ ಈ ರೀತಿ ಮಾಡಿದರೆ ಮಾತ್ರ ಬುದ್ದಿ ಬರುವುದು.

LEAVE A REPLY

Please enter your comment!
Please enter your name here