ರಂಗ ಶಂಕರ 15 ವರ್ಷಗಳು ಪೂರೈಸಲಿದೆ. ಶಂಕರ್ ನಾಗ್ ಅವರು ಕಂಡ ಕನಸು ನನಸಾಗಿದ್ದು ಹೇಗೆ?

0
1008

ಶಂಕರ್ ನಾಗ್ ಅವರನ್ನು ನಾವು ಒಂದು ಭಂಡಾರವಾದ ಶಕ್ತಿಯೆಂದರೆ ತಪ್ಪಾಗಲಾರದು. ಶಂಕರ್ ನಾಗ್ ಅವರು ನಮ್ಮನ್ನು ಆಗಲಿ ಇಷ್ಟು ವರ್ಷಗಳಾದರು ಅಭಿಮಾನಿಗಳು ಇಂದಿಗೂ ಅವರನ್ನು ನೆನೆಯುತ್ತಾರೆ. ಇದಕ್ಕೆ ಬಿಗ್ ಬಾಸ್ ಮನೆಯು ಸಾಕ್ಷಿಯಾಗಿತ್ತು. ಅರುಂಧತಿ ನಾಗ್ ಅವರು ಶಂಕರ್ ನಾಗ್ ಅವರ ಹೆಸರಿನಲ್ಲಿ ರಂಗ ಶಂಕರ ಎನ್ನುವ ನಾಟಕ ಮಂದಿರವನ್ನು ಸ್ಥಾಪಿಸಿದ್ದರು. ಆಗಿನ ಕಾಲದಲ್ಲಿ ಬಾಲಿವುಡ್ ನಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿದ್ದವರು ಶಶಿ ಕಪೂರ್. ಇದೆ ವೇಳೆಯಲ್ಲಿ ಶಶಿ ಕಪೂರ್ ಅವರು ನಾಟಕ ಮಂದಿರಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ತಂದೆ ಪೃಥ್ವಿ ರಾಜ್ ಕಪೂರ್ ಅವರ ನೆನಪಿನಲ್ಲಿ ಶುರುವಾಗಿತ್ತು ಪೃಥ್ವಿರಾಜ್ ಥೀಯೇಟರ್. 1978 ರಲ್ಲಿ ಈ ಥೀಯೇಟರ್ ನಿರ್ಮಾಣವಾಗಿದ್ದು, ಇದರಿಂದ ಶಂಕರ್ ನಾಗ್ ಹಾಗು ಅರುಂಧತಿ ನಾಗ್ ಪ್ರೇರಿತರಾಗಿದ್ದರು. ಮುಂದೆ ಓದಿ

ರಂಗ ಶಂಕರ ಸ್ಥಾಪನೆ ಆಗಿದ್ದು ಹೀಗೆ

ಆಗ ಕರ್ನಾಟಕದಲ್ಲಿ ನಾಟಕಗಳ ಪ್ರದರ್ಶನಕ್ಕೆ ಇದ್ದ ಏಕೈಕ ಸ್ಥಳವೆಂದರೆ ಅದು ರವೀಂದ್ರ ಕಲಾಕ್ಷೇತ್ರ ಮಾತ್ರ. ಇಲ್ಲಿ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚು ನಾಟಕಗಳು ಪ್ರದರ್ಶನವಾಗುತ್ತಿರಲಿಲ್ಲ. ನಾಟಕ್ಕಾಗಿ ಪ್ರತ್ಯೇಕವಾದ ಜಾಗ ಬೇಕು, ಮತ್ತು ಅಲ್ಲಿ ಕೇವಲ ನಾಟಕಗಳು ಪ್ರದರ್ಶನವಾಗಬೇಕೆನ್ನುವುದು ಶಂಕರ್ ನಾಗ್ ಅವರ ಕನಸಾಗಿತ್ತು. ಆ ಕನಸನ್ನು ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಅವರು ಸಾಕಾರ ಮಾಡಿದ್ದರು. ಅರುಂಧತಿ ನಾಗ್ ಅವರಿಗೆ ನಾಟಕ ಮಂದಿರವನ್ನು ಸ್ಥಾಪಿಸಲು ಗಿರೀಶ್ ಕಾರ್ನಾಡ್ ಮತ್ತು ಶಂಕರ್ ನಾಗ್ ಅವರ ಸ್ನೇಹಿತರು ಸಹಕಾರವನ್ನು ನೀಡಿದ್ದರು. 1994 ರಲ್ಲಿ ಸಂಕೇತ್ ಟ್ರಸ್ಟ್ ಗೆ, ಜನ ಸಾಮಾನ್ಯರ ಉಪಯೋಗಕ್ಕೆಂದು ಮೀಸಲಿಟ್ಟಿದ್ದ ಜಮೀನನ್ನು ಸರ್ಕಾರ 30 ವರ್ಷಗಳ ಕಾಲ ಭೋಗ್ಯಕ್ಕೆ ನೀಡಿತ್ತು.

ಸಂಸ್ಥೆ ನಡೆಸುವುದರಲ್ಲಿ ಸಂಕಷ್ಟ ಮತ್ತು ಸಂಭ್ರಮವನ್ನು ಕಂಡಿದ್ದೇನೆ

ಜಮೀನಿನಲ್ಲಿ ಕಟ್ಟಡವನ್ನು ಕಟ್ಟಿ ರಂಗ ಶಂಕರ ನಿರ್ಮಿಸುವುದಕ್ಕೆ ಬರೋಬ್ಬರಿ 10 ವರ್ಷಗಳ ಕಾಲ ತೆಗೆದುಕೊಂಡಿತ್ತು. 5 ರೂಪಾಯಿನಿಂದ ಹಿಡಿದು ಉದ್ಯಮಿಗಳು ನೀಡಿದ ಹಣದವರೆಗೂ ದೇಣಿಗೆ ಸಂಗ್ರಹಿಸಲಾಗಿತ್ತು. 2004 ಆಗಸ್ಟ್ 28 ರಂದು ರಂಗ ಶಂಕರ ನಿರ್ಮಾಣಕ್ಕೆ ಅದ್ದೂರಿಯಾದ ಚಾಲನೆಯನ್ನು ನೀಡಲಾಗಿತ್ತು. ಆಗಸ್ಟ್ 27 ಕ್ಕೆ ರಂಗ ಶಂಕರ ನಾಟಕ ಮಂದಿರ 15 ವರ್ಷಗಳನ್ನು ಪೂರೈಸಲಿದೆ. ಇದರ ಕುರಿತು ಅರುಂಧತಿ ನಾಗ್ ಅವರು ಮಾತನಾಡಿದ್ದಾರೆ. ಈ ಸಮಯದಲ್ಲಿ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಸಂಸ್ಥೆ ನಡೆಸುವುದರಲ್ಲಿ ಸಂಕಷ್ಟ ಮತ್ತು ಸಂಭ್ರಮವನ್ನು ಕಂಡಿದ್ದೇನೆ. ಸಂಸ್ಥೆಯನ್ನು ನಾನೊಬ್ಬಳೆ ನಡೆಸುತ್ತಿಲ್ಲ, ಬೇರೆಯವರ ಪಾತ್ರವು ಎಷ್ಟು ಮಹತ್ವ ಹೊಂದಿದೆ ಎನ್ನುವುದರ ಕುರಿತು ಅರಿವಾಗಿದೆ.

ಸಂಭ್ರಮಾಚರಣೆಯಲ್ಲಿ ಗಿರೀಶ್ ಕಾರ್ನಾಡ್ ಇಲ್ಲ ಎನ್ನುವ ಕೊರಗು ನನಗಿದೆ

ರಂಗ ಶಂಕರ ನಾಟಕ ಸಂಸ್ಥೆಯವರು 15 ವರ್ಷದ ಸಂಭ್ರಮದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ನನಗೆ ದುಃಖದ ಸಂಗತಿ ಇದೆ. ಹೌದು ಈ ಸಂಭ್ರಮಾಚರಣೆಯಲ್ಲಿ ಗಿರೀಶ್ ಕಾರ್ನಾಡ್ ಇಲ್ಲ ಎನ್ನುವ ಕೊರಗು ನನಗಿದೆ ಎಂದು ಅರುಂಧತಿ ನಾಗ್ ಅವರು ತಿಳಿಸಿದ್ದಾರೆ. ಗಿರೀಶ್ ಅವರು ಇದ್ದಾಗ ನಾನು ನೆಮ್ಮದಿಯಾಗಿದ್ದೆ. ಯಾಕೆಂದರೆ ದಿನ ನಿತ್ಯದ ಚಟುವಟಿಕೆಗಳ ಕುರಿತು ನಾವೆಲ್ಲರೂ ಸೇರಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆವು.

ಸಂಸ್ಥೆ ಯಾವ ದಿಕ್ಕಿನ ಕಡೆಗೆ ಸಾಗಬೇಕೆನ್ನುವುದರ ಕುರಿತು ಅವರು ನೀಡಿದ ಸಲಹೆ, ಮಾರ್ಗದರ್ಶನ, ವಿವಿಧ ವಿಷಯಗಳ ಕುರಿತು ನಡೆಸಿದ ಚರ್ಚೆಗಳು ಸಂಸ್ಥೆಯ ಯಶಸ್ಸಿಗೆ ಕಾರಣವಾಗಿತ್ತು. 6,036 ನಾಟಕ ಪ್ರದರ್ಶನಗಳು, 10,50, 495 ಪ್ರೇಕ್ಷಕರು, 47 ಭಾಷೆಯ ನಾಟಕಗಳು, 217 ಕನ್ನಡ ನಾಟಕ ತಂಡಗಳ ಪ್ರದರ್ಶನ, 340 ಇತರ ಭಾಷೆಯ ನಾಟಕ ತಂಡಗಳು, 87 ಅಂತಾರಾಷ್ಟ್ರೀಯ ತಂಡಗಳ ಪ್ರದರ್ಶನ ರಂಗ ಶಂಕರ ನಾಟಕ ಮಂದಿರದ ಸಾಧನೆಯಾಗಿದೆ.

ಕಲಾವಿದರಿಗೆ ಬದುಕು ಕಟ್ಟಿಕೊಳ್ಳುವ ಮಟ್ಟಕ್ಕೆ ರಂಗ ಶಂಕರ ಬೆಳೆಯಬೇಕು

ಬಹುಮುಖ್ಯವಾಗಿ ಹವ್ಯಾಸಿ ರಂಗ ಭೂಮಿ ಕಲಾವಿದರಿಗೆ ಬದುಕು ಕಟ್ಟಿಕೊಳ್ಳುವ ಮಟ್ಟಕ್ಕೆ ರಂಗ ಶಂಕರ ಬೆಳೆಯಬೇಕು. ಪ್ರಸಿದ್ದವಾದ ಸಂಸ್ಥೆಗಳಿಂದ ಹೊರ ಬರುವ ಕಲಾವಿದರು ನಾಟಕ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಅವಕಾಶಗಳು ಸಿಗಬೇಕಾಗಿದೆ.

ಇಲ್ಲದಿದ್ದರೆ ಕೆಟ್ಟ ಧಾರಾವಾಹಿಗಳಿಗೆ ನಟಿಸುವುದು ಅನಿವಾರ್ಯವಾಗುತ್ತದೆ. ರಂಗಶಂಕರವನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ಹೊಸ ತಂಡವನ್ನು ನಾವು ಕಟ್ಟಬೇಕಿದೆ ಎಂದು ಅರುಂಧತಿ ನಾಗ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here