ಮೋಹಕ ತಾರೆ ಮದುವೆ ಕುರಿತು ನವರಸನಾಯಕ ಹೇಳಿರುವ ಹೇಳಿಕೆಯಿಂದ ಆಶ್ಚರ್ಯ ಚಕಿತರಾದ ಜನ

0
672
ramya maduve jaggesh tvit

ಸ್ಯಾಂಡಲ್ ವುಡ್ ನಲ್ಲಿ ಎಷ್ಟೇ ನಾಯಕಿಯರು ಬಂದರು, ಎಲ್ಲರಿಗು ರಮ್ಯಾ ಅಂದ್ರೆ ತುಂಬಾ ಇಷ್ಟ. ಹೌದು. ಸ್ಯಾಂಡಲ್ ವುಡ್ ಕ್ವೀನ್ ಆಗಿರುವ ಮೋಹಕ ತಾರೆ ತಮ್ಮ ೧೦ ವರ್ಷದ ಸಿನಿ ಪಯಣದಲ್ಲಿ ಎಣಿಕೆ ಮಾಡಲಾಗದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ಸ್ಯಾಂಡಲ್ ವುಡ್ ನಲ್ಲಿ ಅಷ್ಟೆಲ್ಲಾ ಮಿಂಚಿದ ರಮ್ಯಾ ಇದ್ದಕ್ಕಿದ್ದಂತೆ ಸಿನಿಮಾ ರಂಗ ತೊರೆದು, ರಾಜಕೀಯ ಜೀವನಕ್ಕೆ ಕಾಲಿಡುತ್ತಾರೆ. ನಂತರ ಅವರ ಮದುವೆ ಅನ್ನೋ ವಿಚಾರ ಕೇಳಿಬರುತ್ತದೆ. ಆದ್ರೆ ಅದು ಆಗ ಅಷ್ಟಕ್ಕೇ ನಿಲ್ಲುತ್ತದೆ. ಆದ್ರೆ ಈಗ ರಮ್ಯಾ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿರುವ ವಿಷಯ ಎಲ್ಲರಿಗು ಗೊತ್ತು. ಈ ವಿಚಾರ ಎಲ್ಲ ಕಡೆ ಹರಿದಾಡುತ್ತಿದೆ. ಹಲವರು ರಮ್ಯಾ ಗೆ ಶುಭಾಶಯ ತಿಳಿಸುತ್ತಿದ್ದಾರೆ. ಆದ್ರೆ ಇತ್ತ ನಟ ಜಗ್ಗೇಶ್ ರಮ್ಯಾ ಅವರ ಮದುವೆ ವಿಚಾರ ಕುರಿತು ಟ್ವೀಟ್ ಮಾಡಿರುವ ಸುದ್ದಿ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ರಮ್ಯಾ ಮದುವೆ ಸುದ್ದಿ ಕೇಳಿ ಟ್ವೀಟ್ ಮಾಡಿದ ನವರಸ ನಾಯಕ

ಗಾಂಧಿನಗರದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಸುದ್ದಿ ಅಂದ್ರೆ ರಮ್ಯಾ ಮದುವೆ ವಿಚಾರ. ಹೌದು. ರಮ್ಯಾ ಮದುವೆ ಆಗುತ್ತಿದ್ದಾರೆ ಅನ್ನೋ ವಿಷಯ ಇಡೀ ಚಂದನವನದ ಸುತ್ತ ಸುತ್ತುವರೆದಿದೆ. ಅದೇ ವಿಚಾರವಾಗಿ ಎಲ್ಲರೂ ರಮ್ಯಾ ಗೆ ಶುಭಾಶಯ ತಿಳಿಸುತ್ತಿದ್ದಾರೆ. ಆದ್ರೆ ಈಗ ನಟ ಜಗ್ಗೇಶ್ ಟ್ವೀಟ್ ಮಾಡಿರುವುದೇ ದೊಡ್ಡ ವಿಷಯವಾಗಿದೆ. ಯಾಕಂದ್ರೆ ಜಗ್ಗೇಶ್ ಹಾಗು ರಮ್ಯಾ ಅಂದ್ರೆ ಹಾವು, ಮುಂಗುಸಿಗಳಿದ್ದಂತೆ ಅಂತ ಎಲ್ಲರೂ ಹೇಳುತ್ತಿರುತ್ತಾರೆ. ಹೀಗಿರುವಾಗ ಜಗ್ಗೇಶ್ ರಮ್ಯಾ ಗೆ ಶುಭಾಶಯ ಕೋರಿದ್ದಾರಾ? ಎಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಹೌದು. ರಮ್ಯಾ ಮದುವೆ ವಿಚಾರ ತಿಳಿದ ನಂತರ ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ದೀರ್ಘಸುಂಮಗಲಿಯಾಗಿ ನೂರ್ಕಾಲ ಸುಖವಾಗಿ ಬಾಳಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದ್ದಾರೆ.

ಜಗ್ಗೇಶ್ ಹಾಗು ರಮ್ಯಾ ನಡುವೆ ಬಿರುಕು

ಇನ್ನು ಗಾಂಧಿನಗರದಲ್ಲಿ ಆಗಾಗ ಸ್ಟಾರ್ ವಾರ್ ಗಳು ನಡೆಯುತ್ತಲೇ ಇರುತ್ತವೆ. ಅವರ ಸಾಲಿನಲ್ಲಿ ಜಗ್ಗೇಶ್ ಹಾಗು ರಮ್ಯಾ ಕೂಡ ಸೇರುತ್ತಾರೆ. ಹೌದು. ನವರಸ ನಾಯಕ ಜಗ್ಗೇಶ್ ಹಾಗು ಮೋಹಕ ತಾರೇ ರಮ್ಯಾ ಗೆ ಒಬ್ಬರನ್ನು ಕಂಡರೆ, ಮತ್ತೊಬ್ಬರಿಗೆ ಆಗೋಲ್ಲ ಅನ್ನೋದು ಎಲ್ಲರಿಗು ಗೊತ್ತಿದೆ. ಅದು ಇತ್ತೀಚಿನ ದಿನಗಳದಲ್ಲ. ಬದಲಿಗೆ ಜಗ್ಗೇಶ್ ಅವರ ನೀರ್ ದೋಸೆ ಸಿನಿಮಾ ಕಾಲದಿಂದಲೂ ಇವರಿಬ್ಬರ ನಡುವೆ ವಾರ್ ನಡೆಯುತ್ತಲೇ ಇದೆ. ಯಾಕಂದ್ರೆ ಈ ಸಿನಿಮಾ ವಿಚಾರವಾಗಿ ರಮ್ಯಾ ಕೆಲವು ಹೇಳಿಕೆಗಳನ್ನು ನೀಡಿದ್ದರು. ಆಗ ಅದಕ್ಕೆ ಜಗ್ಗೇಶ್ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆಗಿಂದ ಇವರಿಬ್ಬರ ನಡುವೆ ಮಾತುಕತೆ ನಡೆದಿರಲಿಲ್ಲ. ಆದ್ರೆ ಈಗ ಜಗ್ಗೇಶ್, ರಮ್ಯಾ ಗೆ ಶುಭಾಶಯ ತಿಳಿಸಿದ್ದಾರೆ.

ಬಾಲ್ಯದ ಗೆಳೆಯನ್ನು ವರಿಸುತ್ತಿರುವ ರಮ್ಯಾ

ರಮ್ಯಾ ತಮ್ಮ ಮದುವೆಯನ್ನು ತಮ್ಮ ಬಹುಕಾಲದ ಗೆಳೆಯನೊಂದಿಗೆ ಮಾಡಿಕೊಳ್ಳುತ್ತಿದ್ದಾರೆ. ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್​ ಹಾಗು ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ ಎನ್ನಲಾಗಿದೆ. ಒಂದು ವೇಳೆ ಅಂದುಕೊಂಡಂತೆ ಎಲ್ಲವೂ ನಡೆದರೆ ದುಬೈನಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದಾರಂತೆ. ಅಲ್ಲದೆ ಇದು ಇವರ ತಾಯಿ ರಂಜಿತಾ ಅವರ ಆಸೆಯೂ ಕೂಡ ಇದೇ ಅಂತೆ. ಯಾಕಂದ್ರೆ ರಮ್ಯಾ ಅವರ ತಾಯಿ ರಂಜಿತಾ ಅವರು ಕಳೆದ ವರ್ಷವೇ ತಮ್ಮ ಮಗಳ ಮದುವೆಯಾಗುವುದಾಗಿ ತಿಳಿಸಿದ್ದರು. ಆದ್ರೆ ಅದು ಆಗಿರಲಿಲ್ಲ. ಆದ್ರೆ ಈ ವರ್ಷ ಯಾವುದೇ ಕಾರಣಕ್ಕೂ ನನ್ನ ಮಗಳ ಮದುವೆ ಮಿಸ್ ಆಗುವುದಿಲ್ಲ. ನಡೆದೇ ನಡೆಯುತ್ತದೆ ಎಂದು ಹೇಳಿದ್ದರು. ಅದರಂತೆ ಈಗ ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆಯಂತೆ.

ಒಟ್ಟಿನಲ್ಲಿ ರಮ್ಯಾ ಅಂದುಕೊಂಡಂತೆ ಎಲ್ಲವೂ ನಡೆದರೆ ರಾಫೆಲ್ ಅವರೊಂದಿಗೆ ದುಬೈನಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹಾಗಾಗಿ ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಆದ್ರೆ ಜಗ್ಗೇಶ್ ಶುಭಾಶಯ ತಿಳಿಸಿರುವುದೇ ಎಲ್ಲರಿಗು ಆಶ್ಚರ್ಯದ ವಿಷಯವಾಗಿದೆಯಂತೆ.

LEAVE A REPLY

Please enter your comment!
Please enter your name here