ರಾಮ ಮಂದಿರ ನಿರ್ಮಾಣಕ್ಕಾಗಿ ಲಕ್ಷಗಟ್ಟಲೇ ದೇಣಿಗೆ ನೀಡುತ್ತಿರುವ ಮುಸಲ್ಮಾನರು

0
476

ಶತಮಾನಗಳ ಕಾಲದಿಂದ ಬಗೆಹರಿಯದಿದ್ದ ವಿಷಯಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ. ಹೌದು. ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಶತಮಾನಗಳಿಂದಲೂ ಗೊಂದಲ ಹಾಗು ಗಲಭೆ ನಡೆಯುತ್ತಿತ್ತು. ಇಲ್ಲಿಯವರೆಗೂ ಸಹ ಅದಕ್ಕೆ ಫುಲ್ ಸ್ಟಾಪ್ ಬಿದ್ದಿರಲಿಲ್ಲ. ಆದ್ರೆ ನಿನ್ನೆ ಅದರ ವಿಚಾರವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ಹೊರಹಾಕಿದೆ. ಹೌದು. ಅಯೋಧ್ಯೆಯ ವಿವಾದಿತ ಸ್ಥಳವನ್ನು ರಾಮಲಲ್ಲಾಗೆ ನೀಡಿ ಸುನ್ನಿ ವಕ್ಫ್​ ಬೋರ್ಡ್​ಗೆ ಬೇರೆ ಕಡೆ 5 ಎಕರೆ ಜಾಗ ನೀಡಲು ಸುಪ್ರೀಂಕೋರ್ಟ್​ ಸೂಚಿಸಿದೆ. ಇನ್ನು ಇದನ್ನು ಎರಡು ಸುಮುದಾಯದವರು ಒಪ್ಪಿಕೊಂಡಿರುವುದರಿಂದ ಯಾವುದೇ ಗಲಭೆ ನಡೆದಿಲ್ಲ. ಜೊತೆಗೆ ಮಂದಿರ ನಿರ್ಮಾಣಕ್ಕೆ ಮುಸಲ್ಮಾನರು ಸಹ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡುತ್ತಿರುವ ಮುಸಲ್ಮಾನರು

ನಿನ್ನೆಯ ದಿನವನ್ನು ಯಾವೊಬ್ಬ ಹಿಂದೂ ಸಹ ಮರೆಯಲು ಆಗುವುದಿಲ್ಲ. ಯಾಕಂದ್ರೆ ಮರ್ಯಾದಾ ಪುರುಷೋತ್ತಮನ ಜನ್ಮ ಭೂಮಿಯಾಗಿರುವ ಅಯೋಧ್ಯೆ ವಿಚಾರವಾಗಿ ತೀರ್ಪನ್ನು ಸುಪ್ರೀಂ ಕೋರ್ಟ್ ಹೊರಹಾಕಿದೆ. ಹೌದು. ಶತಮಾನಗಳಿಂದ ಸಿಗದಿದ್ದ ಉತ್ತರ ನಿನ್ನೆ ಸಿಕ್ಕಿದೆ. ಹಾಗಾಗಿ ಅದನ್ನು ಪ್ರತಿಯೊಬ್ಬರೂ ಸಹ ಒಪ್ಪಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹಾಗು ಮುಸ್ಲಿಂ ಸಮುದಾಯದ ನಡುವೆ ಯಾವುದೇ ಗಲಭೆ ನಡೆದಿಲ್ಲ. ಬದಲಿಗೆ, ಮುಸ್ಲಿಂ ಸಮುದಾಯದವರು ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಹೌದು. ಅಸ್ಸಾಂನ ಮುಸ್ಲಿಂ ಸಮುದಾಯಗಳು 21 ಸಂಘಟನೆಗಳನ್ನು ಹೊಂದಿದ್ದು, 5 ಲಕ್ಷ ರೂಪಾಯಿ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡುವುದಾಗಿ ಹೇಳಿವೆ.

ಸೌಹಾರ್ದತೆ ಕಾಪಾಡುತ್ತಿರುವ ಜನರು

ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರ ರಚಿಸುವ ಟ್ರಸ್ಟ್​ನಿಂದ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸಿಗುತ್ತಿದ್ದಂತೆ ನಿರ್ಮಾಣ ಕಾರ್ಯಗಳು ಆರಂಭವಾಗಲಿವೆ. ಆದ್ರೆ ಈ ಮಧ್ಯೆ ಮುಸಲ್ಮಾನ ಸಮುದಾಯದವರು ದೇಣಿಗೆ ನೀಡುತ್ತಿರುವುದೇ ಎಲ್ಲರ ಸಂತಸಕ್ಕೆ ಕಾರಣವಾಗಿದೆ. ಹೌದು. ಈ ಐತಿಹಾಸಿಕ ತೀರ್ಪಿನ ಭಾಗವಾಗಲು ನಾವು ಇಚ್ಛಿಸುತ್ತೇವೆ. ಹೀಗಾಗಿ, ರಾಮ ಮಂದಿರ ನಿರ್ಮಾಣಕ್ಕೆ ನಾವೂ 5 ಲಕ್ಷ ದೇಣಿಗೆ ನೀಡಲು ಮುಂದಾಗಿದ್ದೇವೆ. ನಮ್ಮ ಈ ನಡೆ ಹಿಂದು-ಮುಸ್ಲಿಂ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಜೊನೋಗುಸ್ತ್ಯ ಸೊಮೊನ್ನೊಯ್ ಪರಿಷದ್ ಅಸೋಮ್ (ಜೆಎಸ್​ಪಿಎ) ಚೇರ್ಮನ್ ಸೈಯದ್ ಮುಮಿನುಲ್ ಅವಾಲ್ ಹೇಳಿದ್ದಾರೆ.

ನಿಜಕ್ಕೂ ಕೆಲವೊಂದು ಘಟನೆಗಳು ಎಲ್ಲರನ್ನು ಸಂತಸವಾಗುವಂತೆ ಮಾಡುತ್ತವೆ. ಯಾಕಂದ್ರೆ ಈ ಒಂದು ತೀರ್ಪಿಗಾಗಿ ಇಷ್ಟು ವರ್ಷ ಕಾಯಬೇಕಾಗಿತ್ತು. ಅಲ್ಲದೆ ನ್ಯಾಯಾಲಯ ನೀಡುವ ತೀರ್ಪಿನಿಂದ ಏನಾದ್ರು ತೊಂದರೆ ಆಗಬಹುದು ಎಂಬ ವಿಚಾರ ಎಲ್ಲರ ತಲೆಯಲ್ಲಿತ್ತು. ಆದ್ರೆ ಅದನ್ನು ಸುಳ್ಳು ಮಾಡಿ, ನಾವೆಲ್ಲರೂ ಒಂದೇ ಎಂಬುದನ್ನು ಸಾರಿದ್ದಾರೆ.

LEAVE A REPLY

Please enter your comment!
Please enter your name here