ತಮ್ಮ ನಡುವಿನ ಮನಸ್ತಾಪದ ಗುಟ್ಟನ್ನು ಬಹಿರಂಗಪಡಿಸಿದ ರಕ್ಷು ಹಾಗೂ ರಚ್ಚು

0
567
rakshu and rachhu

ಸ್ಯಾಂಡಲ್ ವುಡ್ ನಲ್ಲಿ ಆಗಾಗ ಕೆಲವು ಮಾತುಕತೆಗಳು ಹಾಗು ಸ್ಟಾರ್ ವಾರ್ ಗಳು ನಡೆಯುತ್ತಲೇ ಇರುತ್ತವೆ. ಹೌದು. ನಾ ಮುಂದು ತಾ ಮುಂದು ಅನ್ನೋ ಮಾತುಕತೆಗಳು ಕೇಳಿ ಬರುತ್ತಲೇ ಇರುತ್ತವೆ. ಯಾಕಂದ್ರೆ ಸಿನಿಮಾರಂಗದಲ್ಲಿ ಇದೆಲ್ಲಾ ಸಾಮಾನ್ಯ. ಹಾಗಾಗಿ ಕೆಲವು ಸ್ಟಾರ್ ಕಲಾವಿದರ ವಾರ್ ಗಳು ಬಹಳಷ್ಟು ಸದ್ದು ಮಾಡುತ್ತವೆ. ಆದ್ರೆ ಇನ್ನು ಕೆಲವು ಕಲಾವಿದರ ನಡುವೆ ಯಾವುದೇ ರೀತಿಯ ಮನಸ್ತಾಪ ಇರುವುದಿಲ್ಲ. ಆದ್ರೆ ಕೆಲವರು ಇಲ್ಲ ಸಲ್ಲದ ಗೊಂದಲಗಳನ್ನು ಸೃಷ್ಟಿ ಮಾಡುತ್ತಾರೆ. ಹೌದು. ಉದಾಹರಣೆಗೆ ಯಾವುದೊ ಕಾರ್ಯಕ್ರಮದಲ್ಲಿ ಇಬ್ಬರು ಕಲಾವಿದರು ಮಾತಾಡಿಲ್ಲ ಅಂದ ಕೂಡಲೇ, ಅವರ ನಡುವೆ ಮನಸ್ತಾಪ ಉಂಟಾಗಿದೆ ಅನ್ನೋ ಗಾಳಿ ಸುದ್ದಿ ಹರಡುತ್ತೆ. ಅದೇ ರೀತಿ ಈಗ ಇಬ್ಬರು ನಟಿಯರ ಮಧ್ಯೆ ಸುದ್ದಿ ಕೇಳಿ ಬಂದಿದೆ. ಹೌದು. ಕ್ರೇಜಿ ಕ್ವೀನ್ ರಕ್ಷಿತಾ ಹಾಗು ಡಿಂಪಲ್ ಕ್ವೀನ್ ರಚಿತಾ ಮಧ್ಯೆ ಬಿರುಕುಂಟಾಗಿದೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೆ ಅದರ ಬಗ್ಗೆ ಈಗ ಆ ನಟಿಮಣಿಯರೇ ಉತ್ತರವನ್ನು ನೀಡಿದ್ದಾರೆ.

ರಕ್ಷಿತಾ ಹಾಗೂ ರಚಿತಾ ನಡುವೆ ಮನಸ್ತಾಪ

ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಹೌದು. ಅವರು ಐ ಲವ್ ಯು ಸಿನಿಮಾದಲ್ಲಿ ನಟಿಸಿದಾಗಿನಿಂದ ಅವರ ಹವಾ ಸಿಕ್ಕಾಪಟ್ಟೆ ಶುರುವಾಗಿದೆ. ಆದ್ರೆ ಇದೇ ಸಿನಿಮಾ ವಿಚಾರವಾಗಿ ರಚಿತಾ ಒಂದು ಮಾತನ್ನು ಹೇಳಿದ್ದರು. ಅವರು ಉಪೇಂದ್ರ ಅವರ ಸೂಚನೆಯಂತೆ ನಾನು, ಬೋಲ್ಡ್ ಆಕ್ಟ್ ಮಾಡಿದೆ ಎಂದು ಹೇಳಿದ್ದರು. ಆದ್ರೆ ಈ ವಿಷಯ ಎಲ್ಲಾ ಕಡೆ ತುಂಬಾ ಸುದ್ದಿ ಮಾಡಿತ್ತು. ಅದೇ ಸಮಯದಲ್ಲಿ ರಕ್ಷಿತಾ ಅವರು ಸಹ ಕೆಲವೊಂದು ಮಾತನ್ನು ಹೇಳಿದ್ದರಂತೆ. ಆದ್ರೆ ಆ ಮಾತು ಆಗ ಯಾರಿಗೂ ಗೊತ್ತಾಗಿಲ್ಲ. ಆದ್ರೆ ಆ ವಿಷಯ ಈಗ ಎಲ್ಲರಿಗೂ ತಿಳಿದಿದೆ. ಹೌದು. ಸಿನಿಮಾ ಅಂದ್ಮೇಲೆ ಇದೆಲ್ಲಾ ಕಾಮನ್. ಇದನ್ನೆಲ್ಲಾ ದೊಡ್ಡ ಸುದ್ದಿ ಮಾಡಿದ್ದಾರೆ ಅಂತ ಹೇಳಿದ್ದರಂತೆ. ಆಗಿಂದ ರಚಿತಾ ಹಾಗೂ ರಕ್ಷಿತಾ ಮಧ್ಯೆ ಬಿರುಕುಂಟಾಗಿದೆ ಎಂದು ಎಲ್ಲರು ತಿಳಿದಿದ್ದರು. ಆದ್ರೆ ಈಗ ಆ ವಿವಾದದ ಗೊಂದಲದ ಬಗ್ಗೆ ಇವರೇ ತೆರೆ ಎಳೆದಿದ್ದಾರೆ.

ರಚ್ಚುಗೆ ಕೊಕ್ ಕೊಟ್ಟ ರಕ್ಷು

ಇನ್ನು ರಚಿತಾ ಈ ಉಪೇಂದ್ರ ಅವರನ್ನು ಕುರಿತು ಆ ಮಾತನ್ನು ಹೇಳಿದ ಮೇಲೆ, ಆ ವಿಷಯ ಎಲ್ಲಾ ಕಡೆ ಹಬ್ಬಿತು. ಆಗ ಎಲ್ಲರು ತಮ್ಮ ಮನಸ್ಸಿಗೆ ಬಂದಂತೆ ಒಂದೊಂದು ಮಾತನ್ನು ಹೇಳಿದರು. ಆಗ ಅದೇ ಸಮಯದಲ್ಲಿ ರಕ್ಷಿತಾ ಕೂಡ, ಟಾಂಗ್ ನೀಡಿದ್ದರು. ಹೌದು. ರಕ್ಷಿತಾ ಅವರ ಸಹೋದರ ರಾಣಾ ಜೊತೆ ಈಗ ರಚಿತಾ ಸಿನಿಮಾ ಮಾಡಬೇಕಾಗಿದೆ. ಹಾಗಾಗಿ ರಕ್ಷಿತಾ, ರಚಿತಾಗೆ ಕೆಲವು ವಿಷಯಗಳನ್ನು ಹೇಳಿದ್ದರು. ಸಿನಿಮಾ ಅಂದ್ಮೇಲೆ ಇದೆಲ್ಲಾ ಕಾಮನ್. ಏನು ಮಾಡಲು ಆಗುವುದಿಲ್ಲ. ಆದರೆ ಅದನ್ನು ನಿರ್ಧಾರ ಮಾಡುವುದು, ಬಿಡುವುದು ನಿಮಗೆ ಬಿಟ್ಟಿದ್ದು. ನಿಮಗೆ ಇಷ್ಟವಿಲ್ಲ ಅಂದ್ಮೇಲೆ ಮೊದಲೇ ಹೇಳಬೇಕಿತ್ತು. ಆದ್ರೆ ಈಗ ಹೇಳೋದು ಸರಿಯಲ್ಲ ಎಂದಿದ್ದರು. ಆಗಿಂದ ಅವರ ಮಧ್ಯೆ ಸ್ವಲ್ಪ ಮಾತುಕತೆ ನಿಂತಿತ್ತು. ಆಗ ಎಲ್ಲರು ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದರು. ಆದ್ರೆ ಈಗ ಅವರೇ ನಮ್ಮ ಮಧ್ಯೆ ಯಾವುದೇ ಬಿರುಕುಂಟಾಗಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ

ಈಗ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಬಗ್ಗೆ ರಚ್ಚು ಹಾಗೂ ರಕ್ಷುವನ್ನು ಕೇಳಿದಾಗ ಅವರು ಇದಕ್ಕೆ ಸರಿಯಾದ ಉತ್ತರ ನೀಡುವುದರ ಮೂಲಕ, ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೌದು. ನಮ್ಮ ಮಧ್ಯೆ ಯಾವುದೇ ಬಿರುಕುಂಟಾಗಿಲ್ಲ. ಅನಿಸಿದ್ದನ್ನು ಮಾತಾಡಿದ್ದೇವೆ ಅಷ್ಟೇ. ಇದರ ವಿಚಾರವಾಗಿ ನಾವು ಒಂದು ದಿನ ಮಾತಾಡಿದ್ವಿ. ಅದನ್ನು ಬಿಟ್ಟರೆ, ನಮ್ಮ ಮಧ್ಯೆ ಮತ್ತೆ ಅಂತ ಮಾತುಕತೆ ಯಾವತ್ತೂ ನಡೆದಿಲ್ಲ. ಆದ್ರೆ ನೋಡಿದವರಿಗೆ ಅ ರೀತಿ ಎನಿಸಿದರೆ ನಾವು ಏನು ಮಾಡಲು ಆಗುವುದಿಲ್ಲ. ಆದ್ರೆ ನಾವು ಚೆನ್ನಾಗಿ ಇದ್ದಿವಿ. ನನ್ನ ಸಿನಿಮಾದಲ್ಲಿ ರಚಿತಾ ನಟಿಸುತ್ತಿದ್ದಾರೆ ಅಂತ ರಕ್ಷಿತಾ ಹೇಳಿದ್ದಾರೆ. ಇತ್ತ ರಚಿತಾ ಕೂಡ, ಸೇಮ್ ಡೈಲಾಗ್ ನಾ ಹೇಳುವುದರ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಒಟ್ಟಿನಲ್ಲಿ ಕೆಲವು ಗಾಳಿ ಸುದ್ದಿಗೆ ನಮ್ಮ ಕಲಾವಿದರು ಆಗಾಗ ತುತ್ತಾಗುತ್ತಿದ್ದಾರೆ. ಹೌದು. ಆಗದೆ ಇರುವ ಮನಸ್ತಾಪದ ಬಗ್ಗೆ ಕೆಲವರು ನಿಜವೆಂದು ತಿಳಿಸುತ್ತಾರೆ. ಆದ್ರೆ ನಮ್ಮ ಕಲಾವಿದರು ಅದರ ಹಿಂದಿನ ಸತ್ಯವನ್ನು ತಿಳಿಸುವುದರ ಮೂಲಕ ಆ ಗೊಂದಲಕ್ಕೆ ತೆರೆ ಎಳೆಯುತ್ತಾರೆ.

LEAVE A REPLY

Please enter your comment!
Please enter your name here