ಬೀದಿನಾಯಿಗಳಿಗೆ ಆಶ್ರಯ ನೀಡುವಂತೆ ಅಭಿಯಾನ ಶುರುಮಾಡಿದ ರಕ್ಷಿತ್ ಶೆಟ್ಟಿ

0
539
rakshith and dog

ಸಿನಿಮಾ ಕಲಾವಿದರು ಅಂದ್ರೆ ಕೇವಲ ಸಿನಿಮಾದಲ್ಲಿ ಮಾತ್ರ ಬ್ಯುಸಿಯಾಗಿರಲ್ಲ. ಸಾಮಾಜಿಕ ಕಾರ್ಯಗಳತ್ತ ಕೂಡ ಗಮನ ಹರಿಸುತ್ತಾರೆ ಅನ್ನೋದಕ್ಕೆ ನಟ ರಕ್ಷಿತ್ ಶೆಟ್ಟಿ ಈಗ ಉದಾಹರಣೆಯಾಗಿದ್ದಾರೆ. ಹೌದು. ಕಿರಿಕ್ ಪಾರ್ಟಿ ಸಿನಿಮಾದಿಂದ ಅಭಿಮಾನಿಗಳ ಮನದಲ್ಲಿ ಆಳವಾಗಿ ಉಳಿದಿರುವ ರಕ್ಷಿತ್ ಈಗ ಸಿನಿಮಾ ಜೊತೆಗೆ ಸಾಮಾಜಿಕ ಕಳಕಳಿಗಳತ್ತ ಗಮನ ನೀಡುತ್ತಿದ್ದಾರೆ. ಹೌದು. ಬೀದಿ ನಾಯಿಗಳಿಗೆ ಆಶ್ರಯ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಯಾಕಂದ್ರೆ ಬೀದಿ ನಾಯಿಗಳಿಗೂ ಸಹ ಒಂದು ಜೀವನವಿದೆ. ಆದರೆ ಎಲ್ಲರು ಅವುಗಳನ್ನು ಬಹಳ ನಿಕೃಷ್ಟವಾಗಿ ಕಾಣುತ್ತೇವೆ. ಹಾಗಾಗಿ ಅವು ಕೂಡ ಮನುಷ್ಯರನ್ನು ದ್ವೇಷಿಸುತ್ತವೆ. ಹಾಗಾಗಿ ಇನ್ಮುಂದೆ ಯಾವುದೇ ಕಾರಣಕ್ಕೂ ಅ ರೀತಿ ಆಗಬಾರದು ಎಂದು ಬೀದಿ ನಾಯಿಗಳಿಗೆ ಆಶ್ರಯ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದು, ಅದರ ಬಗ್ಗೆ ಜನರಿಗೂ ಸಹ ಅರಿವು ಮೂಡಿಸುತ್ತಿದ್ದಾರೆ.

ಬೀದಿನಾಯಿಗಳನ್ನು ದತ್ತು ಪಡೆಯುವ ಅಭಿಯಾನ ಶುರು

ನಮ್ಮ ಜನರು ಬೀದಿ ನಾಯಿಗಳನ್ನು ಬಹಳಷ್ಟು ನಿಕೃಷ್ಟವಾಗಿ ಕಾಣುತ್ತಾರೆ. ಹೌದು. ನಾಯಿಗಳನ್ನು ಎಲ್ಲರು ಪ್ರೀತಿಸಬೇಕು. ಆದ್ರೆ ಮನುಷ್ಯ ಅವುಗಳ ಜೊತೆ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾನೆ. ಹಾಗಾಗಿ ನಾಯಿಗಳು ಸಹ ಮನುಷ್ಯನ ಜೊತೆ, ಅಷೆಟೀ ಒರಟಾಗಿ ವರ್ತಿಸುತ್ತವೆ. ಆದ್ರೆ ಇನ್ಮುಂದೆ ಇದೆಲ್ಲಾ ಇಲ್ಲಿಗೆ ನಿಲ್ಲಬೇಕು. ಯಾಕೆನ್ದರೆ ಅವುಗಳಿಗೆ ಒಂದು ಜೀವನ ಇರುತ್ತದೆ. ಹಾಗಾಗಿ ಅವುಗಳ ಶ್ರಯಕ್ಕೆ ನಾವು ಮುಂದಾಗಬೇಕು ಎಂದು ತಿಳಿಸಿದ್ದಾರೆ. ಕೇರ್ ಎಂಬ ಎನ್‍ಜಿಓದ ಜೊತೆ ರಕ್ಷಿತ್ ಕೈಜೊಡಿಸಿ ಬೀದಿ ನಾಯಿಗಳಿಗೆ ಆಶ್ರಯ ನೀಡುವ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಅಭಿಯಾನಕ್ಕೆ ಕರೆ ನೀಡಿದ್ದಾರೆ.

ಬ್ರೀಡ್ ನಾಯಿಗಳ ಬದಲು ಬೀದಿ ನಾಯಿಗೆ ಆಶ್ರಯ ನೀಡಿ

ಇನ್ನು ತಮ್ಮ ಅಭಿಪ್ರಾಯವನ್ನು ತಿಳಿಸಿರುವ ರಕ್ಷಿತ್ ಕೆಲವೊಂದು ಹೇಳಿಕೆಗಳನ್ನು ಸಹ ನೀಡಿದ್ದಾರೆ. ಹೌದು. ನಮ್ಮ ದೇಶದಲ್ಲಿ ಪ್ರತಿಬೀದಿಯಲ್ಲೂ ಹಲವಾರು ನಾಯಿಗಳಿವೆ. ಆದರೆ ಮನುಷ್ಯ ಮಾತ್ರ ಮನೆಯಲ್ಲಿ ಸಾಕಲು ಬ್ರೀಡ್ ನಾಯಿಗಳನ್ನು ಕೊಂಡುಕೊಳ್ಳುತ್ತಾನೆ. ಅದರ ಬದಲು ಇವೇ ನಾಯಿಗಳನ್ನು ಸಾಕಿದರೆ ಒಳ್ಳೆಯದು. ಯಾಕಂದ್ರೆ ಬೀದಿ ನಾಯಿಗಳೇನು, ಯಾವ ಬ್ರೀಡ್ ನಾಯಿಗಳಿಗಿಂತಲೂ ಕಡಿಮೆ ಇಲ್ಲ. ಆದ್ರೆ ಅವು ಬೆಳೆಯುವ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆ. ಅದರಂತೆ ನಾವು ಕೂಡ ಬೀದಿ ನಾಯಿಗಳನ್ನು ತಂದು, ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ, ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಹಾಗಾಗಿ ಎಲ್ಲರು ಬೀದಿ ನಾಯಿಗಳಿಗೆ ಆಶ್ರಯ ನೀಡಿ ಎಂದು ಮನವಿ ಮಾಡಿದ್ದಾರೆ.

ರಕ್ಷಿತ್ ಮುಂದಿನ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ವಾನ

ಇದೇ ಆಗಸ್ಟ್ 11 ರಂದು ಕೇರ್ ಸಂಸ್ಥೆ ನೇತೃತ್ವದಲ್ಲಿ ‘ಇಂಡಿಪೆಂಡೆನ್ಸ್ ಅಡಾಪ್‍ಕ್ಷನ್ ಡ್ರೈವ್’ ಆಯೋಜಿಸಲಾಗಿದೆಯಂತೆ. ಇನ್ನು ಈ ಕಾರ್ಯಕ್ರಮ ಬೆಳಗ್ಗೆ 12 ರಿಂದ 3 ಗಂಟೆವರೆಗೆ ನಡೆಯಲಿದ್ದು, ನಾಯಿಗಳನ್ನು ಸಾಕಬೇಕು, ಎಂದು ಇಚ್ಛಿಸುವವರು ಬೀದಿ ನಾಯಿಯನ್ನು ಇಲ್ಲಿ ಬಂದು ದತ್ತು ಪಡೆಯಬಹುದಾಗಿದೆಯಂತೆ. ಎಲ್ಲಕ್ಕಿಂತ ಹೆಚ್ಚಾಗಿ ರಕ್ಷಿತ್ ಅವರ ಮುಂದಿನ ಸಿನಿಮಾದಲ್ಲಿ ನಾಯಿಯೇ ಪ್ರಮುಖ ಪಾತ್ರ ವಹಿಸಿದೆಯಂತೆ. ಹೌದು. ರಕ್ಷಿತ್ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ನಾಯಿಯ ಪಾತ್ರ ಮುಖ್ಯವಾಗಿದೆ. ಹಾಗಾಗಿ ಶ್ವಾನಕ್ಕೆ ನಾವು ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಸಿನಿಮಾ ಮೂಲಕ ರಕ್ಷಿತ್ ತಿಳಿದಿದ್ದಾರಂತೆ. ಅದಕ್ಕೋಸ್ಕರ ಎಲ್ಲರು ಬೀದಿ ನಾಯಿಗಳಿಗೆ ಆಶ್ರಯ ನೀಡಿ ಎಂಬ ಮನವಿ ಮಾಡುವುದರ ಜೊತೆಗೆ, ಅಭಿಯಾನ ಕೂಡ ಶುರು ಮಾಡಿದ್ದಾರೆ.

ಒಟ್ಟಿನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಮಾಡುವುದರ ಜೊತೆಗೆ, ಸಾಮಾಜಿಕ ಅಭಿಯಾನಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈಗ ಬೀದಿ ನಾಯಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಅಭಿಯಾನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here