ನೋಡುಗರನ್ನ ತನ್ನತ್ತ ಆಕರ್ಷಿಸುವ ಸ್ಥಳ, ಆದ್ರೆ ಅಲ್ಲಿಗೆ ಹೋದರೆ ಹಿಂದಿರುಗಿ ಬರೋದು ಅನುಮಾನ.

0
924
kuldar rajasthan

ಜಗತ್ತಿನಲ್ಲಿ ಹಲವು ವಿಸ್ಮಯಕಾರಿ ಸ್ಥಳಗಳಿವೆ. ಅಲ್ಲಿಗೆ ಹೋಗ್ಬೇಕು ಅಂತ ಕುತೂಹಲ, ಆಸೆ ಇದ್ದರೂ, ಹೋಗುವುದಕ್ಕೆ ಮಾತ್ರ ಆಗುವುದಿಲ್ಲ. ಯಾಕಂದ್ರೆ ಎಲ್ಲರಿಗೂ ಅವರ ಜೀವದ ಭಯ ಅನ್ನೋದು ಇದ್ದೇ ಇರುತ್ತೆ. ಹಾಗಾಗಿ ಸಣ್ಣ ಹೆಜ್ಜೆ ಇಡಬೇಕು ಅಂದ್ರೂನು ಯೋಚನೆ ಮಾಡ್ತಾರೆ.

ಯಾರಿಗೂ ಸಹ ಹುಟ್ಟಿದಂಗಿನಿಂದಲೇ ಭಯ ಅನ್ನೋದು ಬರಲ್ಲ. ಬೆಳೆಯುತ್ತ, ವಾತಾವರಣದ ಜೊತೆಗೆ ಭಯ, ಭೀತಿ ಅನ್ನೋದು ಬರುತ್ತದೆ. ಆದ್ರೆ ಕೆಲವೊಂದು ವಿಸ್ಮಯಕಾರಿ ಸ್ಥಳಗಳಲ್ಲಿ, ಹುಟ್ಟಿದಾಗಿನಿಂದಲೇ ಭಯ ಅನ್ನೋದು ಶುರುವಾಗುತ್ತೆ. ಯಾಕಂದ್ರೆ ಅಲ್ಲಿನ ವಾತಾವರಣ ಹಾಗೂ ವಿಚಿತ್ರಗಳ ಆ ರೀತಿ ಇರುತ್ತವೆ. ಇದೇ ರೀತಿ ಇರುವಂತಹ ಸ್ಥಳ ಒಂದಿದೆ. ನಿಜಕ್ಕೂ ಅಲ್ಲಿಗೋದರೆ, ಸಾವಿನ ಮನೆಗೆ ಬಾಗಿಲು ತಟ್ಟಿದ್ದೀವಿ ಅಂತಾನೆ ಅರ್ಥ.

ಮನುಷ್ಯರೇ ಇಲ್ಲದ ಊರು

ಒಂದು ಕಾಲದಲ್ಲಿ ಈ ಊರು ಜನಜಂಗುಳಿಯಿಂದ ತುಂಬಿತ್ತು. ಆದ್ರೆ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಬೆಳಿಗ್ಗೆ ಆಗೋ ಅಷ್ಟರಲ್ಲಿ ಅಲ್ಲಿ ಒಂದು ನರ ಪಿಳ್ಳೆಯೂ ಇರಲಿಲ್ಲ. ಯಾಕಂದ್ರೆ ಅಲ್ಲಿ ಇದ್ದರೆ ನಮ್ಮ ಸಾವು ಖಚಿತ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ಹಾಗಾಗಿ ಇದ್ದಕ್ಕಿದ್ದಂತೆ ಆ ಊರನ್ನ ಬಿಟ್ಟು ಹೋಗಿದ್ದರು. ಅಲ್ಲಿ ನಡೆದಿರುವ ಘಟನೆ ಏನು ಎಂಬುದು ಅಲ್ಲಿರುವ ಎಲ್ಲರಿಗೂ ಗೊತ್ತಿತ್ತು. ಆದರೂ ಅವರೆಲ್ಲ, ಅದೆಲ್ಲ ಸುಳ್ಳು ಎಂದುಕೊಂಡು ಜೀವನ ನಡೆಸ್ತಿದ್ರು. ಆದ್ರೆ ಆ ಘಟನೆ ನಡೆದ ಮೇಲೆ, ಪ್ರತಿದಿನ ರಾತ್ರಿ ಆಗಿ ಬೆಳಗ್ಗೆ ಆಗೋ ಅಷ್ಟರಲ್ಲಿ ಯಾರಾದರೂ ಒಬ್ಬರು ಸಾವನ್ನಪ್ಪುತ್ತಿದ್ದರು. ಇದೇ ರೀತಿ ಹಲವು ತಿಂಗಳು ಕಳೆದವು, ದಿನಕ್ಕೊಬ್ಬರು ಅಲ್ಲಿ ಸಾಯುತ್ತಿದ್ದರು. ನಂತರ ವಿಷಯದ ಬಗ್ಗೆ ಅರಿತ ಜನರು ಆ ಸುಂದರ ಪಟ್ಟವನವನ್ನ ತ್ಯಜಿಸಿದರು.

ಒಂದು ಕಾಲದಲ್ಲಿ ಸುಂದರ ಪಟ್ಟಣ. ಈಗ ಸ್ಮಶಾನ

ರಾಜಸ್ಥಾನದ ಸಾಂಸ್ಕೃತಿಕ ವಿರಾಸತ್‌ಗೆ ತನ್ನದೇ ಆದ ವಿಶೇಷತೆ ಇದೆ. ಇಲ್ಲಿನ ಸೌಂದರ್ಯ, ಸಂಸ್ಕೃತಿ, ಅರಮನೆ, ಎಲ್ಲವೂ ರಾಜಸ್ಥಾನವನ್ನು ಒಂದು ಅದ್ಭುತ ಲೋಕವಾಗಿಸಿದೆ. ಒಮ್ಮೆಯಾದರೂ ರಾಜಸ್ಥಾನಕ್ಕೆ ಭೇಟಿ ನೀಡಲೇ ಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ. ಆದ್ರೆ ಇದೇ ರಾಜ್ಯದ ಜೈಸಲ್ಮೇರ್ ಜಿಲ್ಲೆಯಲ್ಲಿ ಕುಲ್ದಾರಾ ಎಂಬ ಪಟ್ಟಣವಿದೆ. ಇದೇ ಪಟ್ಟಣದಲ್ಲಿ ನಿಗೂಢ ರಹಸ್ಯ ಅಡಗಿರುವುದು. ಈ ರಹಸ್ಯ ಯಾತ್ರಿಗಳನ್ನ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ರಾಜಸ್ಥಾನದ ಜೈಸಲ್ಮೇರ್‌ನ ಕುಲ್ಧಾರಾ ಹಳ್ಳಿ ಕಳೆದ 170 ವರ್ಷಗಳಿಂದ ಪೂರ್ತಿಯಾಗಿ ಖಾಲಿಯಾಗಿದೆ. ಒಂದು ಮನೆಯೂ ಇಲ್ಲ. ಏಕಂದರೆ ಇದು ಸಾವಿನ ಹಳ್ಳಿ ಎಂಬ ಕುಖ್ಯಾತವಾಗಿದೆ. ಇಲ್ಲಿನ ಜನರು ಒಂದೇ ರಾತ್ರಿಯಲ್ಲಿ ಈ ಊರನ್ನು ಖಾಲಿ ಮಾಡಿದ್ದಾರೆ. ಕೆಲವರು ಇಲ್ಲಿ ಕೆಟ್ಟ ಶಕ್ತಿ ಅಡಗಿದೆ ಎನ್ನುತ್ತಾರೆ.

ರಹಸ್ಯ ಕಥೆ

1291ರಲ್ಲಿ ಮೂಲತಃ ಈ ಹಳ್ಳಿಯನ್ನು ಸ್ಥಾಪಿಸಿದ್ದು ಪಲಿವಾಲ ಬ್ರಾಹ್ಮಣರು. ಕೃಷಿಯಲ್ಲಿ ವಿಪರೀತ ಜ್ಞಾನ ಹೊಂದಿದ್ದ ಈ ಬ್ರಾಹ್ಮಣರು ಮರಭೂಮಿಯಲ್ಲೂ ಹೆಚ್ಚಿನ ಫಸಲು ತೆಗೆಯುತ್ತಿದ್ದರು. 1825ರ ಕಾಲದಲ್ಲಿ ದಿವಾನ್ ಸಲೀಂ ಸಿಂಗ್ ಎಂಬಾತ ಇಲ್ಲಿ ತೆರಿಗೆ ಸಂಗ್ರಹಕ್ಕೆ ಬರುತ್ತಿದ್ದನಂತೆ. ಇವನಿಗೆ ಈ ಗ್ರಾಮದ ಮುಖಂಡನ ಸ್ಫುರದ್ರೂಪಿ ಮಗಳ ಮೇಲೆ ಪ್ರೀತಿ ಹುಟ್ಟಿತ್ತಂತೆ. ಆದರೆ ಅಲ್ಲಿದ್ದವರೆಲ್ಲ ಬ್ರಾಹ್ಮಣರಾದ ಕಾರಣ ಆ ಊರಿನವರಿಗೆಲ್ಲ ಆತ ಈ ಊರಿಗೆ ಬಂದರೆ ಹೆಚ್ಚು ತೆರಿಗೆ ಪಾವತಿಸಬೇಕಾಗಬಹುದು ಎಂದು ಹೇಳಿ ಮುಖಂಡನಿಗೆ ಹೆದರಿಸಿದ್ದರು. ಆದ್ರೆ ದಿವಾನ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಆ ಹುಡುಗಿಯನ್ನ ವಿವಾಹವಾಗಿ, ಅಲ್ಲೇ ವಾಸಿಸೋಕೆ ಶುರು ಮಾಡ್ತಾನೆ.

ಅದೇ ದಿನ ಶಾಪ ನೀಡಿ ಊರು ಬಿಟ್ಟ ಬ್ರಾಹ್ಮಣರು

ದಿವಾನ್ ಆ ಊರಿಗೆ ಬಂಡ ಕೂಡಲೇ, ಅವ್ನಿಗೆ ತೆರಿಗೆ ಜಾಸ್ತಿ ಕೊಡಬೇಕು, ಅವನೊಬ್ಬ ನರರಾಕ್ಷಸ ಅಂತ ಎಲ್ಲರು ಹೆದರುತ್ತಾರೆ. ಜೊತೆಗೆ ದಿವಾನ್ ತನ್ನ ಊರಿನ ಜನರನ್ನೆಲ್ಲಾ ಇಲ್ಲಿಗೆ ಕರೆದುಕೊಂಡು, ಬರಬೇಕು ಅನ್ನೋ ಪ್ಲಾನ್ ಮಾಡ್ತಾನೆ. ಇದೆಲ್ಲ ತಿಳಿದ ಜನರು ನಾವು ಇಲ್ಲಿಂದ ಹೊರತು ಹೋಗೋಣ. ಇಲ್ಲ ಅಂದ್ರೆ, ಇವ್ನು ನಮ್ಮನ್ನ ಹಿಂಸೆ ನೀಡಿ ಸಾಯಿಸುತ್ತಾನೆ ಅಂತ. ಹಾಗಾಗಿ ಅದೇ ದಿನ ಗ್ರಾಮಸ್ಥರೆಲ್ಲರೂ ಸಭೆ ಸೇರಿ ಗ್ರಾಮ ತೊರೆಯುವ ಯೋಚನೆ ಮಾಡಿ, ರಾತ್ರೋರಾತ್ರಿ ಇದಕ್ಕಿದ್ದಂತೆ ಹಳ್ಳಿ ತೊರೆದರು. ಅಲ್ಲದೇ ಇಲ್ಲಿ ಯಾರೇ ಬಂದು ನೆಲೆಸಿದರೂ ಅವರಿಗೆ ಸಾವು ಬರಲಿ ಎಂದು ಪಲಿವಾಲ ಬ್ರಾಹ್ಮಣರು ಶಾಪವನ್ನಿಟ್ಟರು.

ಆಗಿಂದ ಈ ಊರಿನಲ್ಲಿ ಯಾರೊಬ್ಬರೂ ಉಳಿದುಕೊಳ್ಳಲು ಆಗುತ್ತಿಲ್ಲ. ಈಗ ಇದರ ಇತಿಹಾಸ ತಿಳಿದ ನಂತರ, ಇದು ಒಂದು ಪ್ರವಾಸಿ ತಾಣವಾಗಿದೆ. ಆದ್ರೆ ರಾತ್ರಿ ಸಮಯದಲ್ಲಿ ಮಾತ್ರ ಇಲ್ಲಿ ಯಾರೊಬ್ಬರೂ ಉಳಿದುಕೊಳ್ಳುವ ಆಗಿಲ್ಲ. ಯಾಕಂದ್ರೆ ಒಂದು ರಾತ್ರಿ ಉಳಿದುಕೊಂಡರೆ, ಮರುದಿನ ಬೆಳಗ್ಗೆ ಅವರ ಸಾವಾಗಿರುತ್ತದೆ. ಹಾಗಾಗಿ ಇಲ್ಲಿ ಎಷ್ಟೇ ನೋಡುವಂತಹ ಸ್ಥಳಗಳಿದ್ದರೂ, ಸಂಜೆ ಅಷ್ಟರಲ್ಲೇ ನೋಡಿ, ಹಿಂದಿರುಗಬೇಕು.. ಇಲ್ಲವಾದರೆ ಸಾವು ಕಟ್ಟಿಟ್ಟ ಬುತ್ತಿ. ಇದೇ ಇಲ್ಲಿನ ವಿಸ್ಮಯವಾಗಿದೆ.

LEAVE A REPLY

Please enter your comment!
Please enter your name here