ನನ್ನ ಎಲ್ಲ ಸಂಭಾವನೆಯನ್ನು ಹಿಂದಿರುಗಿಸುತ್ತೇನೆ ಎಂದು ರಜನಿಕಾಂತ್ ಹೇಳಿದ್ದಾದ್ರು ಯಾರಿಗೆ?

0
441
rajanikanth sanbhavane

ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ರಜನಿಕಾಂತ್ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಹಾಗಾಗಿ ಅವರಿಗೆ ಎಣಿಕೆ ಮಾಡಲಾಗದಷ್ಟು ಅಭಿಮಾನಿಗಳಿದ್ದಾರೆ. ಅವರಿಗೆ ತಮಿಳಿನಲ್ಲಿ ಮಾತ್ರವಲ್ಲದೆ, ಇಡೀ ಭಾರತದಲ್ಲೂ ಸಹ ಫ್ಯಾನ್ಸ್ ಇದ್ದಾರೆ. ಇನ್ನು ಇವರ ಸಿನಿಮಾಗಳು ಅಷ್ಟೇ ಎಲ್ಲವು ಅದ್ಭುತವಾಗಿವೆ. ಆದ್ರೆ ಇವರ ವಿಚಾರವಾಗಿ ಇಡೀ ದೇಶದ ಜನತೆಗೆ ಒಂದು ಗೊಂದಲವಿತ್ತು. ಏನಂದ್ರೆ ಚಿತ್ರರಂಗದ ಎಲ್ಲ ನಟರ ಸಂಭಾವನೆಯೂ ಸಹ ತಿಳಿದಿದೆ. ಆದರೆ ತಲೈವಾನ ಸಂಭಾವನೆ ಮಾತ್ರ ಯಾರಿಗೂ ತಿಳಿದಿಲ್ಲ. ಇನ್ನು ಈ ಬಗ್ಗೆ ಅನೇಕರು ಇವರನ್ನು ಕೇಳಿದ್ದರು. ಆದ್ರೆ ಯಾರಿಗೂ ಸಹ ತಮ್ಮ ಸಂಭಾವನೆ ಬಗ್ಗೆ ತಿಳಿಸಿರಲಿಲ್ಲ. ಯಾಕಂದ್ರೆ ತಲೈವಾ ಕೆಲವೊಂದು ಸಾರಿ ತೆಗೆದುಕೊಳ್ಳುವಷ್ಟೇ ಸಂಭಾವನೆಯನ್ನು ಹಿಂದಿರುಗಿ ನೀಡಿದ್ದಾರಂತೆ. ಹಾಗಾಗಿ ತಮ್ಮ ಸಂಭಾವನೆಯ ಬಗ್ಗೆ ಯಾರಿಗೂ ತಿಳಿಸಿಲ್ಲ. ಅದೇ ರೀತಿ ಈಗ ಅವರು 27 ವರ್ಷಗಳ ಹಿಂದೆ ಹೇಳಿದ್ದ ಹೇಳಿಕೆಯ ವಿಡಿಯೋವೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಂಭಾವನೆ ಕುರಿತು ಹೇಳಿಕೆ ನೀಡಿದ್ದ ತಲೈವಾ

ಭಾರತದಲ್ಲಿರುವ ಎಲ್ಲ ನಟರ ಸಂಭಾವನೆಯನ್ನು ತಿಳಿದಿರುವ ಜನರಿಗೆ ರಜನಿಕಾಂತ್ ಸಂಭಾವನೆ ಎಷ್ಟು ಎನ್ನುವುದು ಕುತೂಹಲವಾಗಿತ್ತು. ಆದ್ರೆ ತಮ್ಮ ಸಂಭಾವನೆ ಬಗ್ಗೆ ಈಗ ಅವರೇ ತಿಳಿಸಿದ್ದಾರೆ. ಹೌದು. ರಜನಿಕಾಂತ್ ತಮ್ಮ ಸಿನಿಮಾಗೆ, ತಮಗನಿಸಿದಷ್ಟು ಸಂಭಾವನೆಯನ್ನು ಪಡೆಯುತ್ತಾರಂತೆ. ಯಾಕಂದ್ರೆ ಸಿನಿಮಾ ಯಶಸ್ವಿ ಕಾಣುತ್ತದಾ? ಅಥವಾ ಇಲ್ಲವಾ? ಅನ್ನೋದು ತಲೈವಾನಿಗೆ ಮೊದಲೇ ತಿಳಿಯುತ್ತಿತ್ತಂತೆ. ಹಾಗಾಗಿ ತಮಗೆ ಆ ಸಿನಿಮಾದಲ್ಲಿ ಎಷ್ಟು ಸಂಭಾವನೆ ಪಡೆಯುವ ಅರ್ಹತೆಯಿರುತ್ತದೋ, ಅಷ್ಟು ಸಮಭಾವನೆ ಪಡೆಯುತ್ತಿದ್ದರಂತೆ. ಇನ್ನು ಇದು ನಿನ್ನೆ ಮೊನ್ನೆಯಿಂದ ನಡೆಯುತ್ತಿಲ್ಲ. ಬದಲಿಗೆ ಸುಮಾರು 27 ವರ್ಷಗಳ ಹಿಂದೆಯಿಂದಲೂ ನಡೆಯುತ್ತಿದೆ. ಹೌದು. ತಮ್ಮ ಸಂಭಾವನೆಯನ್ನು ತಲೈವಾ 27 ವರ್ಷಗಳ ಹಿಂದೆಯೇ ನಿರ್ಧರಿಸುತ್ತಿದ್ದರಂತೆ. ಇದರ ಬಗೆಗಿನ ರಹಸ್ಯವನ್ನು ಈಗ ತಲೈವಾ ಬಿಚ್ಚಿಟ್ಟಿದ್ದಾರೆ.

27 ವರ್ಷಗಳಿಂದಲೂ ನಾನೇ ನಿರ್ಧಾರ ಮಾಡುತ್ತಿದ್ದೇನೆ

27 ವರ್ಷಗಳ ಹಿಂದೆ ನಿರ್ಮಾಪಕರಿಂದ ರಜನಿಕಾಂತ್ ಬಗ್ಗೆ ಒಂದು ದೂರು ಕೇಳಿಬರುತ್ತಲೇ ಇರುತ್ತಿತ್ತು. ಹೌದು. ರಜನಿಕಾಂತ್ ತಮ್ಮ ಸಂಭಾವನೆಯನ್ನು ಹೆಚ್ಚು ಪಡೆಯುತ್ತಾರೆ ಅನ್ನೋದು ಹೇಳುತ್ತಲೇ ಇದ್ದರು. ಆಗ ರಜನಿಕಾಂತ್ ಒಂದು ಮಾತನ್ನು ಹೇಳಿದ್ದರಂತೆ. ನಾನು ಅಭಿನಯಿಸುವ ಸಿನಿಮಾ ಬಗ್ಗೆ ನನಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಜೊತೆಗೆ ನನ್ನ ಶ್ರಮವನ್ನು ಮೀರಿ ಸಿನಿಮಾದಲ್ಲಿ ಕೆಲಸ ಮಾಡಿರುತ್ತೇನೆ. ಹಾಗಾಗಿ ಆ ಸಿನಿಮಾ ಎಷ್ಟರ ಮಟ್ಟಿಗೆ ಪ್ರದರ್ಶನ ಕಾಣುತ್ತದೆ ಅನ್ನೋದು ನನಗೆ ತಿಳಿದಿದೆ. ಹಾಗಾಗಿ ನನ್ನ ಸಂಭಾವನೆಯನ್ನು ನಾನು ಕೇಳಿದಷ್ಟು ಕೊಡಿ. ನಾನು ಸಹ ಯೋಗ್ಯತೆ ಮೀರಿ ಕೇಳುವುದಿಲ್ಲ. ಎಷ್ಟು ಕೇಳಬೇಕೋ ಅಷ್ಟನ್ನೇ ಕೇಳುತ್ತೇನೆ. ಒಂದು ವೇಳೆ ನಿಮ್ಮ ಸಿನಿಮಾ ನಷ್ಟ ಆದರೆ ಅಷ್ಟು ಹಣವನ್ನು ನಾನು ನಿಮಗೆ ಹಿಂದಿರುಗಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದಿಗೂ ಸಹ ನಡೆದುಕೊಳ್ಳುತ್ತಿದ್ದಾರೆ.

ಕೊಟ್ಟ ಮಾತಿನಂತೆ ನಡೆದುಕೊಂಡಿರುವ ರಜನಿ

ಇನ್ನು ಸಿನಿಮಾ ನಷ್ಟ ಆದರೆ ಹಣ ವಾಪಾಸ್ ನೀಡುವುದಾಗಿ ರಜನಿ ಹೇಳಿದ್ದರು. ಜೊತೆಗೆ ಲಾಭ ಬಂದಾಗಲೂ ಅದರ ವಿವರ ಕೇಳುತ್ತಿದ್ದರು. ಆದರೆ ಸಂಭಾವನೆಯನ್ನು ಮೀರಿ, ಯಾವುದೇ ಲಾಭ ಅವರು ಪಡೆಯುತ್ತಿರಲಿಲ್ಲ. ಬದಲಿಗೆ ಲಾಭದ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಜೊತೆಗೆ ಸಿನಿಮಾದ ನಷ್ಟದ ಬಗ್ಗೆ ಹೇಳೋದಾದ್ರೆ, ರಜನಿ ಕೊಟ್ಟ ಮಾತಿನಂತೆಯೇ ನಡೆದುಕೊಂಡಿದ್ದಾರೆ. ಹೌದು. ಬಾಬಾ ಸಿನಿಮಾ ಮಾಡಿದಾಗ ಸಿನಿಮಾ ಸೋಲು ಕಂಡಿತು. ಈ ವೇಳೆ ವಿತರಕರಿಗೆ ಕೈಯಿಂದ ದುಡ್ಡು ವಾಪಸ್ ನೀಡಿ ಮೆಚ್ಚುಗೆ ಗಳಿಸಿದ್ದರು. ‘ಲಿಂಗಾ’ ಸಿನಿಮಾ ಸೋತಾಗಲೂ ವಿತರಕರಿಗೆ ನಷ್ಟ ಭರಿಸಿಕೊಟ್ಟಿದ್ದರು. ಈ ರೀತಿ ತಮ್ಮ ಸಂಭಾವನೆಯನ್ನು ಪಡೆಯುವುದು ಮಾತ್ರವಲ್ಲ, ಸಿನಿಮಾ ಸೋತಾಗಲು ಅದನ್ನು ಹಿಂದಿರುಗಿಸಿ ಕೊಟ್ಟಿದ್ದಾರಂತೆ.

ನಿಜಕ್ಕೂ ಕೆಲವರ ಸ್ವಭಾವ ಹೊರಗಿನಿಂದ ನೋಡಿದಾಗ ನಿಜಕ್ಕೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಎನಿಸುತ್ತದೆ. ಆದ್ರೆ ಅವರ ಒಳ ಮನಸ್ಸಿನ ಭಾವನೆ ಎಲ್ಲಕ್ಕಿಂತ ಮೀರಿದ್ದಾಗಿರುತ್ತದೆ. ಅದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಸಾಕ್ಷಿಯಾಗಿದ್ದಾರೆ. ಹೌದು. ಸಿನಿಮಾ ಮಾಡಲು ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದರೋ, ಅಷ್ಟೇ ಸಂಭಾವನೆಯನ್ನು ಸಿನಿಮಾ ನಷ್ಟವಾದಾಗ ನೀಡುತ್ತಿದ್ದಾರಂತೆ.

LEAVE A REPLY

Please enter your comment!
Please enter your name here