ಒಬ್ಬರನ್ನ ಸೋಲಿಸಿ ಇನ್ನೊಬ್ಬರು ರಾಜ್ಯ ಪಡೆದಿದ್ದರು. ಇವು ನಮ್ಮ ಕರ್ನಾಟಕವನ್ನಾಳಿದ ರಾಜ ಮನೆತನಗಳಾಗಿವೆ.

0
1148

ನಮ್ಮ ಕರ್ನಾಟಕವನ್ನ ನಾವು ಈಗ ನೋಡುತ್ತಿದ್ದೀವಿ. ಅಂದ್ರೆ ಸದ್ಯಕ್ಕೆ ಈಗಿನ ಪರಿಸ್ಥಿತಿಯನ್ನ ನೋಡುತ್ತಿದ್ದೇವೆ. ಆದ್ರೆ ಹಿಂದಿನ ಕಾಲದಲ್ಲಿ ಹೇಗಿತ್ತು ಅನ್ನೋದು ನಮಗೆ ಗೊತ್ತಿಲ್ಲ. ಯಾಕಂದ್ರೆ ಆಗ ಇದ್ದಿದ್ದು, ರಾಜ ಮನೆತನಗಳು. ಈಗಿನ ರಾಜಕಾರಣ ಅಲ್ಲ. ಹಾಗಾಗಿ ಯಾವ ರಾಜರು, ಯಾವ ಕಾಲದಲ್ಲಿ ನಮ್ಮ ಕರ್ನಾಟಕವನ್ನ ಆಳುತ್ತಿದ್ದರೋ, ಯಾರು ಯಾರನ್ನ ಸೋಲಿಸಿದ್ದರೋ ಅನ್ನೋ ವಿಷಯ ತಿಳಿಯುವಲ್ಲಿ ನಾವು ಇನ್ನೂ ಹಿಂದೆ ಉಳಿದಿದ್ದೇವೆ. ಯಾಕಂದ್ರೆ, ಒಂದು ಎರಡು ರಾಜ ಮನೆತನಗಳಿರಲಿಲ್ಲ, ಸುಮಾರು ವಂಶಗಳಿದ್ದವು. ಅವುಗಳ ಮೂಲಗಳ ಬಗ್ಗೆಯೂ ನಮಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಈಗ ಇತಿಹಾಸದಿಂದ ಅಲ್ಪ, ಸ್ವಲ್ಪ ಮಾಹಿತಿಯನ್ನ ತಿಳಿಯುತ್ತಿದ್ದೇವೆ.

ಹೌದು. ನಮಗೆ ಲಭಿಸಿರುವ ಮಾಹಿತಿಯನ್ನ ಪಡೆಯುತ್ತಾ, ನಾವು ಇತಿಹಾಸದ ಬಗ್ಗೆ ತಿಳಿಯ್ತುತ್ತಿದ್ದೇವೆ. ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಎಷ್ಟು ರಾಜ ಮನೆತನಗಳಿದ್ದವು. ಯಾರೆಲ್ಲಾ ನಮ್ಮ ಕರ್ನಾಟಕವನ್ನ ಆಳಿದ್ದರು ಅನ್ನೋದರ ಬಗ್ಗೆ ನಾವು ತಿಳಿಯಲೇ ಬೇಕು. ಯಾಕಂದ್ರೆ ನಮಗೆ ಈ ವಿಚಾರ ಬಹಳ ಮುಖ್ಯವಾಗುತ್ತೆ. ಯಾರು, ಯಾರನ್ನ ಸೋಲಿಸಿ ರಾಜ್ಯ ಪಡೆದರು. ಯಾರು ಯಾರಿಂದ ಹತರಾದರು ಅನ್ನೋದು ತಿಳಿಯಲೇ ಬೇಕಾದ ವಿಷಯವಾಗಿದೆ.

ಕರ್ನಾಟಕದ ರಾಜಮನೆತನಗಳು

ಕೆಳದಿ ರಾಜವಂಶ (1499-1763)

ಕರ್ನಾಟಕ ರಾಜ್ಯವನ್ನಾಳಿದ ಒಂದು ಪ್ರಮುಖ ರಾಜವಂಶ. ಇವರು ವಿಜಯ ನಗರ ಸಾಮ್ರಾಜ್ಯದಂತೆ, ತಮ್ಮ ಸಾಮ್ರಾಜ್ಯವನ್ನ ವಿಸ್ತರಿಸಬೇಕು ಅಂತ ಆಳ್ವಿಕೆ ಆರಂಭಿಸಿದರು. ಹೌದು. 1565 ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನವಾಗುತ್ತೆ. ಆಗಿಂದ ಇವರು ಆಳ್ವಿಕೆ ನಡೆಸುತ್ತಾರೆ. ಶಿವಮೊಗ್ಗ ಸೇರಿದಂತೆ ಕರ್ನಾಟಕದ ಪ್ರಮುಖ ಸ್ಥಳಗಳು ಹಾಗೂ ಕರಾವಳಿ ವಿಭಾಗದಲ್ಲೂ ತಮ್ಮ ಆಳ್ವಿಕೆ ನಡೆಸುತ್ತಾರೆ. ಇನ್ನೂ ಇವರಲ್ಲಿದ್ದ ರಾಜರಗಳು, ಚೌಡಪ್ಪ ನಾಯಕ, ಹಿರಿಯ ವೆಂಕಟಪ್ಪ ನಾಯಕ ಹಾಗೂ ಶಿವಪ್ಪ ನಾಯಕ. ಒಬ್ಬರ ನಂತರ ಇನ್ನೊಬ್ಬರು ಕರ್ನಾಟಕವನ್ನ ಆಳಿದ್ದರು.

ಹೊಯ್ಸಳರು (1006-1346)

ಇವರು ಮಲೆನಾಡಿನ ಮೂಲದವರೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ವಂಶದ ಮುಖ್ಯ ನಾಯಕ ವಿಷ್ಣುವರ್ಧನ. ವಿಷ್ಣುವರ್ಧನನಿಗೆ ಸ್ವತಂತ್ರ್ಯ ಸಾಮ್ರಾಜ್ಯವನ್ನ ಸ್ಥಾಪಿಸಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಅದು ವಿಷ್ಣುವರ್ಧನನಿಂದ ಆಗುವುದಿಲ್ಲ. ಹಾಗಾಗಿ ಅವನ ಆಸೆಯನ್ನ ಅವನ ಮೊಮ್ಮಗನಾದ 2ನೇ ವೀರ ಬಲ್ಲಾಳ ಈಡೇರಿಸುತ್ತಾನೆ. ಇವರ ಕಾಲದಲ್ಲಿ ಹಲವು ಬೆಳವಣಿಗೆಗಳಾಗಿದ್ದವು. ಇವರು ಅನೇಕ ದೇವಾಲಯಗಳನ್ನ ನಿರ್ಮಿಸಿದ್ದಾರೆ. ಹಾಗೂ ಶಾಸನಗಳನ್ನ ರೂಪಿಸುವಲ್ಲಿ ಮುಂದಾಗಿದ್ದರು. ಜೊತೆಗೆ ಹರಿಶ್ಚಂದ್ರ ಕಾವ್ಯ ಎಂಬ ಕನ್ನಡ ಕೃತಿಯ ಮೂಲಕ ರಾಘವಾಂಕ ಮೊದಲ ಬಾರಿಗೆ ಷಟ್ಪದಿಯನ್ನು ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಲ್ಯಾಣಿ ಚಾಲುಕ್ಯರು (ಕ್ರಿ.973)

ಕ್ರಿ.973 ರಲ್ಲಿ, 2ನೇ ತೈಲಪ, ರಾಷ್ಟ್ರಕೂಟ ರಾಜವಂಶದ ಸಾಮಂತ, ತನ್ನ ಅಧಿಪತಿಗಳ ಸೋಲಿಸಿ ಮಾನ್ಯಖೆಟವನ್ನು ತನ್ನ ರಾಜಧಾನಿಯನ್ನಾಗಿಸುತ್ತಾನೆ. ನಂತರ ಈ ರಾಜವಂಶ ತನ್ನ ರಾಜಧಾನಿಯನ್ನು ಕಲ್ಯಾಣಿಗೆ ಸ್ಥಳಾಂತರಿಸುತ್ತೆ. ಇವರಲ್ಲಿ ವಿಕ್ರಮಾದಿತ್ಯನ ಆಳ್ವಿಕೆ ಪ್ರಮುಖವಾಗಿದೆ. ಯಾಕಂದ್ರೆ ಈತನ 50 ವರ್ಷದ ಆಳ್ವಿಕೆ ಕರ್ನಾಟಕದ ಇತಿಹಾಸದಲ್ಲೇ ಬಹಳ ಪ್ರಮುಖವಾಗಿದೆ. ಇಡೀ ಭರತಖಂಡವೇ ಕಂಡ, ಸೋಲನ್ನೇ ಅರಿಯದ ಏಕೈಕ ರಾಜ ಅಂದ್ರೆ ಅದು ವಿಕ್ರಮಾದಿತ್ಯ. ಈತನು ಕೇವಲ ಪರಾಕ್ರಮಿಯಾಗಿರಲಿಲ್ಲ. ಹೃದಯವಂತ, ಪ್ರಜೆಗಳಿಗೆ ಸುಲಭವಾಗಿ ಸಿಗುತ್ತಿದ್ದನು, ತನ್ನ ಅಧಿಕಾರಿಗಳನ್ನ ಅಂಕೆಯಲ್ಲಿ ಇಟ್ಟಿದ್ದನು, ಎಲ್ಲಾ ಧರ್ಮವನ್ನ ಸಮಾನ ಎಂದು ಹೇಳುತ್ತಿದ್ದನು. ಹಾಗೂ ಮಹಿಳೆಯರಿಗೆ ಗೌರವದ ಸ್ಥಾನಮಾನ ಮತ್ತು ಕಲೆಗೆ ಆಶ್ರಯ ನೀಡಿದ್ದನು.

ರಾಷ್ಟ್ರಕೂಟ (8 ರಿಂದ 10ನೇ ಶತಮಾನ)

ಕ್ರಿ.. 8 ರಿಂದ 10ನೇ ಶತಮಾನದವರೆಗೆ ಆಳಿದ ರಾಜವಂಶ ಇದಾಗಿದೆ. ದಂತಿದುರ್ಗನು ಚಾಲುಕ್ಯರ ಕೀರ್ತಿವರ್ಮನನ್ನು ಸೋಲಿಸಿ ಗುಲ್ಬರ್ಗವನ್ನು ಕೇಂದ್ರವಾಗಿಸಿ ಈ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ. ರಾಷ್ಟ್ರಕೂಟರಲ್ಲೇ ಪ್ರಸಿದ್ಧವಾದವನು ಎಂದರೆ, ಅಮೋಘವರ್ಷ ನೃಪತುಂಗ. ಈತನನ್ನ ಕನ್ನಡಿಗರ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ಮಾಡಿದ ರಾಜನೆಂದು ಹೇಳುತ್ತಾರೆ. ಕಲೆ, ಸಾಹಿತ್ಯ ಹಾಗೂ ಧರ್ಮಗಳನ್ನ ಸಮೃದ್ಧಿಗೊಳಿಸಿದ್ದು ಇವರ ಕಾಲದಲ್ಲೇ. ಹಾಗಾಗಿ ಇವರು ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾದಾಮಿ ಚಾಲುಕ್ಯರು (ಕ್ರಿ.350 – 999)

ಇವರ ರಾಜಲಾಂಛನ ವರಾಹ ಹಾಗೂ ಇವರ ರಾಜಧಾನಿ ಬಾದಾಮಿ. ಒಂದನೇ ಪುಲಕೇಶಿಯನ್ನ ಚಾಲುಕ್ಯ ವಂಶದ ನಿಜವಾದ ಸ್ಥಾಪಕ ಎಂದು ಹೇಳಾಗುತ್ತದೆ. ಆದ್ರೆ ಇಮ್ಮಡಿ ಪುಲಕೇಶಿ, ಈ ಮನೆತನದ ಪ್ರಸಿದ್ಧ ಅರಸ ಎಂಬ ಹೆಸರನ್ನ ಪಡೆದಿದ್ದಾನೆ. ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖವಾದ ಮೈಲುಗಲ್ಲಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವೆಂದು ಇತಿಹಾಸ ತಜ್ಞರು ಪರಿಗಣಿಸಿದ್ದಾರೆ. ಇವರ ಆಳ್ವಿಕೆಯಲ್ಲಿ ಸಂಸ್ಕೃತದೊಂದಿಗೆ, ಕನ್ನಡವು ಒಂದು ಪ್ರಮುಖ ಭಾಷೆಯಾಗಿ ಹೊಮ್ಮಿಬಂದಿತ್ತು. ಅನೇಕ ದೇವಾಲಯಗಳನ್ನ ನಿರ್ಮಿಸಿರುವ ಹೆಸರಿಗೆ ಇವರು ಪಾತ್ರರಾಗಿದ್ದಾರೆ.

ಗಂಗರು (4 ರಿಂದ 10ನೇ ಶತಮಾನ )

ಸುಮಾರು 4ನೇ ಶತಮಾನದಿಂದ 10ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರಲ್ಲಿ ಹಲವು ರಾಜರು ಬರುತ್ತಾರೆ. ಒಬ್ಬೊಬ್ಬ ರಾಜನ ಕಾಲದಲ್ಲೂ, ಒಂದೊಂದು ಸ್ಥಳವನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದಾರೆ. ಹೌದು. ಗಂಗರ ಮನೆತನದ ಮೊದಲ ಅರಸನಾದ ಕೊಂಗಣಿವರ್ಮ ಮಾಧವನು ಕೋಲಾರವನ್ನು ತನ್ನ ಮೊದಲ ರಾಜಧಾನಿಯಾಗಿ ಮಾಡಿ 20 ವರ್ಷ ರಾಜ್ಯವನ್ನು ಆಳಿದನು. ನಂತರ ಹರಿವರ್ಮನು ತಲಕಾಡನ್ನು ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಆದ್ರೆ ಇವರಲ್ಲಿ ಎಷ್ಟೇ ರಾಜರು ಬಂದರು, ಮುಖ್ಯವಾದ ಹಾಗೂ ಪ್ರಸಿದ್ದವಾದ ಅರಸನೆಂದರೆ ಅದು ದುರ್ವಿನಿತ. ಈತ ಗಂಗರ ರಾಜ ಮನೆತನವನ್ನ ಮುಖ್ಯವಾಗಿ ನಡೆಸಿದವನು.

ಕದಂಬ ( ಕ್ರಿ.345)

ಕಂಚಿಯ ಪಲ್ಲವರನ್ನು ಸೋಲಿಸುವುದರೊಂದಿಗೆ ಕದಂಬ ಸಾಮ್ರಾಜ್ಯವನ್ನು ಮಯೂರವರ್ಮ ಕ್ರಿ.345ರಲ್ಲಿ ಸ್ಥಾಪಿಸಿದನು. ಇವರ ರಾಜಧಾನಿ ಬನವಾಸಿ. ಇವರ ರಾಜ ವಂಶದ ಮುಖ್ಯ ರಾಜನೆಂದರೆ, ಮಯೂರವರ್ಮ. ತಾಳಗುಂದ, ಗುಂಡನುರ್, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ರಾಜಮನೆತನದ ಬಗ್ಗೆ ತಿಳಿಸುತ್ತವೆ. ಕನ್ನಡವನ್ನು ಆಡಳಿತಾತ್ಮಕ ಭಾಷೆಯಾಗಿ ಉಪಯೋಗಿಸಿದ ಮೊದಲ ರಾಜರು ಕದಂಬರೆನ್ನಲು ದೊರಕಿದ ಹಲವಾರು ನಾಣ್ಯಗಳು ಸಾಕ್ಷಿಯಿವೆ. ಇವರು ಜಾರಿಗೆ ತಂದಿರುವ ಹಲವು ಶಾಸನಗಳು ಹಾಗೂ ನಿಯಮಗಳು ಈಗಲೂ ಜಾರಿಯಲ್ಲಿವೆ.

ಇವು ನಮ್ಮ ಕರ್ನಾಟಕದ ರಾಜಮನೆತನಗಳಾಗಿವೆ. ಇನ್ನೂ ಅನೇಕ ರಾಜಮನೆತನಗಳಿವೆ. ಆದ್ರೆ ಮುಖ್ಯವಾದ ಪಟ್ಟಿಯಲ್ಲಿ ಇವು ಮೊದಲು ಸೇರಿಕೊಳ್ಳುತ್ತವೆ. ಅವ್ರು ಎಲ್ಲಿಂದ ಬಂದರು, ಆ ರಾಜ ಮನೆತನದ ಮುಖ್ಯ ರಾಜನರು? ಎಂಬುದರ ಬಗೆಗಿನ ಮಾಹಿತಿ ಇದಾಗಿದೆ.

LEAVE A REPLY

Please enter your comment!
Please enter your name here