ರಾಜ್ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವ ಅಭಿಮಾನಿಗೆ ಅಭಿನಂದನೆ ತಿಳಿಸಿದ ಅಪ್ಪು

0
462
raj fan

ಡಾ. ರಾಜ್ ಕುಮಾರ್ ನಮ್ಮನ್ನ ಅಗಲಿ ಅನೇಕ ವರ್ಷಗಳು ಕಳೆದಿವೆ. ಆದರೆ ಈಗಲೂ ಸಹ ಅವರ ಅಭಿಮಾನಿಗಳು ಅವರನ್ನು ಅಗಲಿದ್ದಾರೆ ಅಂದ್ರೆ ಅದನ್ನು ಒಪ್ಪುವುದಿಲ್ಲ. ಹೌದು. ಅವರು ಕೇವಲ ದೈಹಿಕವಾಗಿ ನಮ್ಮಿಂದ ದೂರಾಗಿದ್ದಾರೆ ವಿನಃ ಮಾನಸಿಕವಾಗಲ್ಲ ಎಂದು ಹೇಳುತ್ತಾರೆ. ಯಾಕಂದ್ರೆ ಅಭಿಮಾನಿಗಳು ಅವರನ್ನು ಅಷ್ಟರ ಮಟ್ಟಿಗೆ ಇಷ್ಟ ಪಡುತ್ತಾರೆ. ಹೌದು. ಹಾಗಾಗಿ ಹಲವು ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದಾರೆ. ಈಗ ಅದೇ ರೀತಿ ಒಬ್ಬರು ರಾಜ್ ಅಭಿಮಾನಿಯನ್ನು, ಪುನೀತ್ ರಾಜ್ ಕುಮಾರ್ ಅವರು ಅಭಿನಂದಿಸಿದ್ದಾರೆ. ಹೌದು. ರಾಜ್ ಅವರನ್ನು ದೇವರಂತೆ ಕಣೋ ಈ ಅಭಿಮಾನಿ ಅವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾರೆ. ಹಾಗಾಗಿ ಇದನ್ನು ನೋಡಿದ, ಪುನೀತ್ ಅವರ ಅಭಿಮಾನಕ್ಕೆ ಮಾರು ಹೋಗಿದ್ದಾರೆ.

ರಾಜ್ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಿರುವ ಅಭಿಮಾನಿ

ಕಳೆದ ಕೆಲವು ದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ಯುವರತ್ನ ಶೂಟಿಂಗ್ ಗಾಗಿ ಮೈಸೂರಿಗೆ ಹೋಗಿದ್ದರು. ಅಲ್ಲಿಗೆ ಹೋದ ಅವರು, ಯುವರಾಜ ಮಹಾರಾಜಾ ಕಾಲೇಜಿನಲ್ಲಿ ಶೂಟಿಂಗ್ ಮಾಡುತ್ತಿದ್ದರು. ಆ ಸಮಯದಲ್ಲಿ ಅನೇಕರು ಅವರ ಬಳಿ ಆಟೋಗ್ರಾಫ್ ಪಡೆದು, ಫೋಟೋವನ್ನು ತೆಗೆಸಿಕೊಂಡಿದ್ದರು. ಆದ್ರೆ ಒಬ್ಬ ಅಭಿಮಾನಿ ಮಾತ್ರ, ಪುನೀತ್ ಅವರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಹೌದು. ಅವರು ರಾಜ್ ಅವರ ಅಪ್ಪಟ ಅಭಿಯಾಮಣಿ. ಹಾಗಾಗಿ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿದ ಕೂಡಲೇ, ಅವರನ್ನು ಮನೆಗೆ ಕರೆದುಕೊಂಡು ಹೋಗುವವರೆಗೂ ಬಿಟ್ಟಿಲ್ಲ. ಹೌದು. ಪುನೀತ್ ಅವರನ್ನು ತಮ್ಮ ಮನೆಗೆ ಕರೆದುಕೊಂಡ ಹೋದ ಅಭಿಮಾನಿ, ನನಗೆ ಅಪ್ಪಾಜಿ ಮೇಲೆ ಎಂಥ ಅಭಿಮಾನ ಇದೆ ಎಂಬುದನ್ನು ತೋರಿಸಿದ್ದಾರೆ. ಅವರ ಅಭಿಮಾನವನ್ನು ನೋಡಿ, ಪುನೀತ್ ಗೆ ಮಾತೇ ನಿಂತುಹೋಗಿದೆ.

ಮನೆಯಲ್ಲಿ ಎತ್ತ ನೋಡಿದರು ರಾಜ್ ಫೋಟೋಗಳು

ಇನ್ನೂ ಅಭಿಮಾನಿ ಕರೆದ ಕೂಡಲೇ ಅವರ ಮನೆಗೆ ಹೋದ ಪುನೀತ್ ಗೆ ಅವರ ಮನೆಯನ್ನು ನೋಡಿದ ಕೂಡಲೇ ಆಶ್ಚರ್ಯವಾಗಿದೆ. ಯಾಕಂದ್ರೆ ಮನೆಯ ಮುಖ್ಯದ್ವಾರದಿಂದಲೇ ರಾಜ್ ಫೋಟೋಗಳನ್ನು ಅಂಟಿಸಿ ಅವರ ಹೆಸರನ್ನು ಬರೆದಿದ್ದಾರೆ. ಹೌದು ಆ ಅಭಿಮಾನಿ ತನ್ನ ಮನೆಗೆ ಕಸ್ತೂರಿ ನಿಲಯ ಎಂಬ ಹೆಸರನ್ನು ಇಟ್ಟಿದ್ದಾರೆ. ಅಲ್ಲದೆ ಒಳ ಹೋಗಿ ನೋಡಿದರೆ, ಎಲ್ಲಾ ಗೋಡೆಗಳ ಮೇಲೂ ರಾಜ್ ಕುಮಾರ್ ಅವರ ಪ್ಹ್ಹೊಂಟೋಗಳನೆ ಅಂಟಿಸಿದ್ದಾರೆ. ಅಲ್ಲದೆ ದೇವರ ಮನೆಯಲ್ಲಿ ದೇವರ ಫೋಟೋ ಜೊತೆ, ರಾಜ್ ಫೋಟೋ ಕೂಡ ಇಟ್ಟು ಪೂಜೆ ಮಾಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದ ಕೂಡಲೇ ಒಂದು ಕ್ಷಣ ಪುನೀತ್ ಗೆ ಆಶ್ಚರ್ಯವಾಗಿದೆ. ಯಾಕಂದ್ರೆ ಇಷ್ಟು ಪ್ರೀತಿಸೋ ಅಭಿಮಾನಿಗಳನ್ನು ನನ್ನ ತಂದೆ ಹೊಂದಿದ್ದಾರೆ ಎಂದು ಬೆರಗಾಗಿದ್ದಾರೆ.

ಅಭಿಮಾನಿಗೆ ಧನ್ಯವಾದ ಹೇಳಿದ ಅಪ್ಪು

ತಮ್ಮ ತಂದೆಯ ಮೇಲೆ ಇಷ್ಟೊಂದು ಅಭಿಮಾನ ಇಟ್ಟಿರುವ ಅಭಿಮಾನಿಗೆ ಅಪ್ಪು, ಧನ್ಯವಾದ ತಿಳಿಸಿದ್ದಾರೆ. ಹೌದು. ನಮ್ಮ ತಂದೆ ಯಾವಾಗಲು ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ಅವರಲ್ಲೇ ದೇವರನ್ನು ಕಾಣುತ್ತಿದ್ದರು. ಆದ್ರೆ ನೀವು ಅವರನ್ನು ದೇವರಂತೆ ಪೂಜೆ ಮಾಡುತ್ತಿರೋದನ್ನು ನೋಡಿದರೆ ನಿಜಕ್ಕೂ ತುಂಬಾ ಸಂತೋಷವಾಗುತ್ತದೆ. ನಿಮ್ಮ ಅಭಿಮಾನ ಹಾಗೂ ಪ್ರೀತಿ ಸದಾಕಾಲ ನಮ್ಮ ಮೇಲೆ ಹೀಗೆ ಇರಬೇಕು ಎಂದು ಹೇಳಿ, ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯಾಕಂದ್ರೆ ಎಲ್ಲರು ಅವರ ಮನೆಯವರ ಫೋಟೋಗಳನ್ನು ಮನೆಯಲ್ಲಿ ಇಟ್ಟಿರುತ್ತಾರೆ. ಜೊತೆಗೆ ರಾಮ, ಕೃಷ್ಣ ಅಂತ ದೇವರ ಫೋಟೋಗಳಿಗೆ ಪೂಜೆ ಮಾಡ್ತಾರೆ. ಆದ್ರೆ ನೀವು ನಮ್ಮ ತಂದೆಯ ಫೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡ್ತಿರೋದನ್ನು ನೋಡಿದರೆ ನಿಜಕ್ಕೂ ಬಹಳ ಖುಷಿಯಾಗುತ್ತದೆ ಎಂದು ಹೇಳಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳು ಈ ಕ್ಷಣಕ್ಕೂ ರಾಜ್ ಅವರನ್ನು ಮರೆತಿಲ್ಲ. ಅವರು ದೈಹಿಕವಾಗಿ ನಮ್ಮಿಂದ ದೂರಾದರೂ, ಮಾನಸಿಕವಾಗಿ ದೂರವಾಗಿಲ್ಲ. ಅವರು ಸದಾಕಾಲ ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದು ಅಭಿಮಾನಿಗಳು ರಾಜ್ ಅವರನ್ನು ನೆನೆಯುತ್ತಲೇ ಇರುತ್ತಾರೆ.

LEAVE A REPLY

Please enter your comment!
Please enter your name here