ಕೈ ಎತ್ತಿ ಮುಗಿಯುವ ನಮ್ಮ ಅಣ್ಣಾವ್ರಿಗೆ, ಒಂದು ಕಾಲದಲ್ಲಿ ಬೆತ್ತದ ಏಟುಗಳು ಬೀಳುತ್ತಿದ್ದವು. ಕಾರಣ?

0
980

ನೋಡೋಕೆ ಬಲು ಸರಳ ವ್ಯಕ್ತಿ. ಇವರ ವ್ಯಕ್ತಿತ್ವ ನೋಡಿದ್ರೆ, ಎಂಥವರಿಗೂ ಆಶ್ಚರ್ಯವಾಗುತ್ತೆ. ಯಾಕಂದ್ರೆ, ಇವರಿಗಿರುವ ಸ್ಥಾನಕ್ಕೆ, ಇವರು ಯಾವ ರೀತಿ ಬೇಕಾದರೂ ಇರಬಹುದು. ಆದ್ರೆ ಇವರು ತುಂಬಾ ಸರಳವಾಗಿ ಬದುಕೋಕೆ ಇಷ್ಟ ಪಡುತ್ತಿದ್ದ ವ್ಯಕ್ತಿ.

ಹೌದು. ನಮ್ಮ ಅಣ್ಣಾವ್ರಿಗಿರುವ ಸ್ಥಾನಕ್ಕೆ ಅವರು ಬದುಕುವ ರೀತಿಯೇ ಬೇರೆ ರೀತಿ ಇರಬೇಕಿತ್ತು. ಆದ್ರೆ ಅವರಿಗೆ ಅದೆಲ್ಲಾ ಇಷ್ಟ ಇಲ್ಲ. ಎಲ್ಲರಂತೆ ಸಾಮಾನ್ಯವಾಗಿ ಬದುಕುವ ವ್ಯಕ್ತಿ. ನಾವು ಅಣ್ಣಾವ್ರನ್ನ ನೋಡಿದಾಗ, ಎಂಥ ಗಂಭೀರ ಸ್ವಭಾವದವರು ಅಂತ ಎನಿಸುತ್ತೆ. ಆದ್ರೆ ಇವರು ಚಿಕ್ಕವರಿದ್ದಾಗ, ತಂದೆ, ತಾಯಿ ಗೆ ಕೊಟ್ಟಿರುವ ಕಾಟವನ್ನ ನೋಡಿದರೆ, ನಮ್ಮ ಅಣ್ಣಾವ್ರು ನಿಜಕ್ಕೂ ಈ ರೀತಿ ಇದ್ರಾ ಅಂತ ಎನಿಸುತ್ತೆ. ಹೌದು ಚಿಕ್ಕಂದಿನಲ್ಲಿ ನಮ್ಮ ಅಣ್ಣಾವ್ರು ಬಲು ತುಂಟ ಸ್ವಭಾವದವರಾಗಿದ್ದರು. ಅವರ ತುಂಟತನಕ್ಕೆ  ಪ್ರತಿದಿನ ಬೆತ್ತದ ಏಟುಗಳನ್ನ ತಿನ್ನುತ್ತಿದ್ದರು.

ನಮ್ಮ ಅಣ್ಣಾವ್ರ, ತಂದೆ ಬಹಳ ಕಟ್ಟುನಿಟ್ಟು

ನಮ್ಮ ಅಣ್ಣಾವ್ರ ತಂದೆ ಪುಟ್ಟಸ್ವಾಮಿ ಅವರು ಬಹಳ ಶಿಸ್ತಿನ ವ್ಯಕ್ತಿ. ಆಗಂದ ಮಾತ್ರಕ್ಕೆ ಯಾವಾಗಲು ಕೋಪದಲ್ಲಿ ಇರುತ್ತಿರಲಿಲ್ಲ. ಆದರೆ ಕೆಲವು ನಿಯಮಗಳಿಗನುಸಾರವಾಗಿ ಬದುಕಲು ಇಷ್ಟ ಪಡುತ್ತಿದ್ದರು. ಅವರಂತೆ, ಮನೆಯವರು ಸಹ ಇರಬೇಕಿತ್ತು. ಯಾವುದೇ ಕಾರಣಕ್ಕೂ ಅದನ್ನ ಮೀರುವಂತಿರಲಿಲ್ಲ. ಮೀರಿದರೆ, ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ರೀತಿ ತಂದೆ ಹಾಕಿರುವ ಗೆರೆಯನ್ನ, ನಮ್ಮ ಅಣ್ಣಾವ್ರು ಹಲವು ಬಾರಿ ದಾಟಿದ್ದಾರೆ. ದಾಟಿ, ಅವರ ತಂದೆಯಿಂದ, ಬೆತ್ತ ಮುರಿಯುವಂತೆ ಹೊಡೆಸಿಕೊಂಡಿದ್ದಾರೆ. ಅವರ ಬಿಳಿಗಿರಿರಂಗನ ಕಡೆ ಬೆತ್ತಗಳು ತುಂಬಾ ಪ್ರಸಿದ್ಧಿಯಾಗಿದ್ದವು. ಅಣ್ಣಾವ್ರಿಗೋಸ್ಕರ, ಆ ಬೆತ್ತಗಳು ಯಾವಾಗ್ಲೂ ಅವರ ಮನೆಯಲ್ಲಿ ಸ್ಟಾಕ್ ಇರುತ್ತಿದ್ವು.

ಬೆತ್ತ ಮುರಿಯುವಂತೆ ಏಟು ತಿನ್ನುತ್ತಿದ್ದ ಅಣ್ಣಾವ್ರು

ಅಣ್ಣಾವ್ರು ಚಿಕ್ಕ ವಯಸ್ಸಿನಲ್ಲಿ ತುಂಬಾ ತುಂಟ ಸ್ವಭಾವದವರಾಗಿದ್ದರು. ಅವರ ತಂದೆಗೆ ಇಷ್ಟವಿಲ್ಲದ ಕೆಲಸ ಮಾಡೋದ್ರಲ್ಲಿ ತುಂಬಾ ಮುಂದಿದ್ದರು. ಯಾವಾಗಲೂ ಅವರ ತಂದೆಗೆ ಕೋಪ ಬರುವಂತೆ ನಡೆದುಕೊಳ್ಳುತ್ತಿದ್ದರು. ಹಾಗಾಗಿ ಯಾವಾಗ್ಲೂ ಅವರ ಮೇಲೆ, ಬೆತ್ತದ ಪ್ರಹಾರವಾಗುತ್ತಿತ್ತು. ಆದ್ರೆ ಯಾವತ್ತೂ ಅವರ ತಂದೆ, ಅಣ್ಣಾವ್ರ ಮೈಮೇಲೆ ಒಂದೇಟು ಹೊಡೆದಿರಲಿಲ್ಲ. ಯಾಕಂದ್ರೆ ಮೈಮೇಲೆ ಹೊಡೆದರೆ, ಏನಾದ್ರು ಅಪಾಯವಾಗಬಹುದು ಅಂತ, ಯಾವಾಗ್ಲೂ ಕಾಲುಗಳ ಮೇಲೆ ಹೊಡೆಯುತ್ತಿದ್ರು. ಈ ರೀತಿ ಅವರಿಂದಲೇ, ಅವರ ಮನೆಯಲ್ಲಿದ್ದ ಬೆತ್ತಗಳೆಲ್ಲಾ ಖಾಲಿಯಾಗುತ್ತಿದ್ದವು.

ಅಂಗಡಿಯ ಕುರುಕಲು ತಿಂಡಿ ಆಸೆಯಿಂದ ಏಟು ತಿನ್ನುತ್ತಿದ್ದ ರಾಜಣ್ಣ

ಅಣ್ಣಾವ್ರಿಗೆ ಅಂಗಡಿಯ ಕುರುಕಲು ತಿಂಡಿ ಅಂದ್ರೆ ಬಹಳ ಇಷ್ಟ. ಆದ್ರೆ ಮನೆಯಲ್ಲಿ ದುಡ್ಡು ಕೊಡ್ತಿರ್ಲಿಲ್ಲ. ಅದಕ್ಕೋಸ್ಕರ, ಮನೆಯಲ್ಲಿಡುತ್ತಿದ್ದ ಪುಡಿಕಾಸನ್ನ ಯಾರಿಗೂ ಹೇಳದಂತೆ ತೆಗೆದುಕೊಳ್ಳುತ್ತಿದ್ರು. ಈ ವಿಷಯ ಮನೆಯವರಿಗೆ ಗೊತ್ತಾದ ಮೇಲೆ, ಮನೆಯಲ್ಲಿ ಕಾಸು ಇಡುವುದನ್ನೇ ಬಿಟ್ಟರು. ನಂತರ ಕಾಸು ಸಿಗದಿದ್ದಾಗ, ಮನೆಯಲ್ಲಿದ್ದ ರಾಗಿ, ಜೋಳವನ್ನ ಮಾರಿ, ತಿಂಡಿ ತಿನ್ನುತ್ತಿದ್ದರು. ನಂತರ ಅಪ್ಪನಿಗೆ ಗೊತ್ತಾದಾಗ, ಒಮ್ಮೆ ಬೆತ್ತದ ಏಟು ತಿಂದು ಸುಮ್ಮನಾಗುತ್ತಿದ್ದರು. ಒಂದು ದಿನ ಅಪ್ಪಾಜಿಯಿಂದ, ಏಟು ತಿಂದಿಲ್ಲ ಅಂದ್ರೆ ನಮ್ಮ ಅಣ್ಣಾವ್ರಿಗೆ ಸಮಾಧಾನ ಆಗ್ತಿರ್ಲಿಲ್ಲ ಅನ್ಸುತ್ತೆ. ಅದಕ್ಕೆ, ಪದೇ ಪದೇ ಅಂತ ತಪ್ಪುಗಳನ್ನ ಮಾಡುತ್ತಿದ್ರು.

ಶಿಕ್ಷೆ ನೀಡಿ, ನಂತರ ಮುದ್ದು ಮಾಡುತ್ತಿದ್ದ ಅಣ್ಣಾವ್ರ ತಂದೆ

ಮಗ ಮಾಡುವ ತಪ್ಪನ್ನ ಸಹಿಸಲಾಗದೆ, ಇವರ ತಂದೆ ಪ್ರತಿದಿನ ಶಿಕ್ಷೆ ನೀಡುತ್ತಿದ್ದರು. ಆದರೂ ಅಣ್ಣಾವ್ರು ಮಾಡಿದ ತಪ್ಪನ್ನೇ, ಪದೇ ಪದೇ ಮಾಡುತ್ತಿದ್ದರು. ಆದರೆ ಇವರ ತಂದೆ, ಶಿಕ್ಷೆ ನೀಡಿ, ನಂತರ ಅವರೇ ಹೋಗಿ ಮುದ್ದು ಮಾಡಿ ಸಮಾಧಾನ ಪಡಿಸುತ್ತಿದ್ದರು. ಯಾಕೋ ಮಗನೆ ಈ ರೀತಿ ಮಾಡ್ತೀಯಾ? ನಂಗೆ ಕೋಪ ಬರುವಂತೆ ಮಾಡಬೇಡ ಕಂದ. ಇನ್ಮುಂದೆ, ಒಳ್ಳೆ ರೀತಿಯಲ್ಲಿ ನಡೆದುಕೋ. ನನ್ನನ್ನ ಈ ತರ ಸಂಕಟಕ್ಕೆ ಸಿಲುಕಿಸಬೇಡ ಅಂತ ಉಪದೇಶ ಮಾಡುತ್ತಿದ್ದರು. ಆದ್ರೆ ನಮ್ಮ ಅಣ್ಣಾವ್ರು ಆ ಕ್ಷಣಕ್ಕೆ ಆಯಿತು ಅಂತಿದ್ರು. ಆದ್ರೆ ಮತ್ತೆ ಬೆಳಿಗ್ಗೆ ಅದೇ ಕೆಲಸ ಮಾಡ್ತಿದ್ರು, ಪುನಃ ಬೆತ್ತದ ಏಟು ತಿನ್ನುತ್ತಿದ್ರು.

ಕೆಲವೊಂದು ಸಂದರ್ಶನಗಳಲ್ಲಿ ಘಟನೆಯನ್ನ ನೆನಪಿಸಿಕೊಳ್ಳುತ್ತಿದ್ದ ಅಣ್ಣಾವ್ರು

ಅಣ್ಣಾವ್ರು ಹೋಗುತ್ತಿದ್ದ ಕೆಲವು ಸಂದರ್ಶನಗಳಲ್ಲಿ ಇದರ ಬಗ್ಗೆ ಮೆಲುಕು ಹಾಕುತ್ತಿದ್ದರು. ನಮ್ಮ ತಂದೆ ತುಂಬಾ ಶಿಸ್ತಿನ ವ್ಯಕ್ತಿ. ಮನೆಯಲ್ಲಿ ನಾನು ಕಟ್ಟುನಿಟ್ಟಾಗಿ, ಅವರ ನಿಯಮಗಳಿಗೆ ತಕ್ಕಂತೆ ಇರಬೇಕಿತ್ತು. ಆದ್ರೆ ಅಂಗಡಿಯ ಕುರುಕಲು ತಿಂಡಿ, ನನ್ನನ್ನ ಆ ರೀತಿ ಇರಲು ಬಿಡುತ್ತಿರಲಿಲ್ಲ. ಮನೆಗೆ ತರುತ್ತಿದ್ದ ಬೆತ್ತಗಳೆಲ್ಲಾ, ನನ್ನಿಂದಲೇ ಖಾಲಿಯಾಗುತ್ತಿದ್ದವು ಅಂತ ತಮ್ಮ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಗಳನ್ನ ಹೇಳುತ್ತಿದ್ದರು. ಇದು ಅವರ ಕೆಲವು ಆತ್ಮೀಯರಿಗೂ ತಿಳಿದಿದೆ.

 

ನೋಡಿದವರಿಗೆ ನಮ್ಮ ಅಣ್ಣಾವ್ರು ಎಂಥ ಗಂಭೀರ ಸ್ವಭಾವದವರು ಅಂತ ಎನಿಸುತ್ತೆ. ಆದ್ರೆ ಅವರು ಸಹ ಚಿಕ್ಕಂದಿನಲ್ಲಿ, ತರ್ಲೆ, ತುಂಟ ಹುಡುಗನಾಗಿದ್ದರು. ಒಂದು ದಿನವೂ ಬೆತ್ತದ ಏಟಿಲ್ಲದೆ ಇರುತ್ತಿರಲಿಲ್ಲ. ಈ ಬಗ್ಗೆ ಬಲು ಸಂತಸದಿಂದ, ಆಗ ಇತರರ ಬಳಿ ಹಂಚಿಕೊಳ್ಳುತ್ತಿದ್ದರು.

LEAVE A REPLY

Please enter your comment!
Please enter your name here