ಅಣ್ಣಾವ್ರಿಗೋಸ್ಕರ ಮಹಾನ್ ತ್ಯಾಗ ಮಾಡಿದ ವ್ಯಕ್ತಿಯಾದ್ರು ಯಾರು?

0
448
raj and ashvath

ಕನ್ನಡ ಚಿತ್ರರಂಗದಲ್ಲಿ ಸದಾಕಾಲ ನೆನಪಿನಲ್ಲಿರುವ ಹೆಸರು ಅಂದ್ರೆ ಅದು ಡಾ.ರಾಜ್ ಕುಮಾರ್ ಅವರದ್ದು. ಯಾಕಂದ್ರೆ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲದೆ, ತಮ್ಮಲ್ಲಿರುವ ವಿಶೇಷ ಗುಣಗಳಿಂದ ಅವರು ಎಲ್ಲರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಹೌದು. ಅಣ್ಣಾವ್ರು ಅಂದ್ರೆ ಸಿನಿಮಾ ಮಾಡುವುದರಲ್ಲಿ ಮಾತ್ರ ಮೊದಲಿಗರಲ್ಲ. ಸಹಾಯ ಮಾಡುವುದರಲ್ಲೂ ಸಹ ಅವರು ಎತ್ತಿದ ಕೈ. ಹೀಗಾಗಿ ಅವರನ್ನು ಬಹಳಷ್ಟು ಮಂದಿ ಇಷ್ಟ ಪಡುತ್ತಾರೆ. ಇನ್ನು ಕೆಲವರಂತೂ ಅವರಿಗೋಸ್ಕರ ತಮ್ಮ ಜೀವನದ ದಾರಿಗಳನ್ನು ಬದಲಾಯಿಸಿಕೊಂಡಿದ್ದಾರೆ. ಇನ್ನು ಕೆಲವರು ತಮ್ಮ ಸಂಪ್ರದಾಯ ಹಾಗು ಆಚಾರ ವಿಚಾರಗಳನ್ನು ಸಹ ಬದಲಾಯಿಸಿಕೊಂಡಿದ್ದಾರೆ. ಅವರ ಸಾಲಿಗೆ ಅಶ್ವಥ್ ಕೂಡ ಸೇರುತ್ತಾರೆ.

ಅಣ್ಣಾವ್ರಿಗಾಗಿ ತಮ್ಮ ಕುಟುಂಬದ ಸಂಪದ್ರಾಯವನ್ನೇ ಮುರಿದ ಅಶ್ವಥ್

ಹಿರಿಯ ನಟ ಅಶ್ವಥ್ ಹಾಗು ರಾಜ್ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಹಾಗಾಗಿ ಅಶ್ವಥ್ ಕುಟುಂಬದವರು ಆಗಾಗ ಕೆಲವೊಂದು ಸನ್ನಿವೇಶಗಳ ಬಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಒಂದು ಕಾಲದಲ್ಲಿ ಅಶ್ವಥ್ ಹಾಗು ರಾಜ್ ಕುಟುಂಬದ ನಡುವಿನ ಸಂಬಂಧ ಬಹಳ ಚೆನ್ನಾಗಿತ್ತು. ಅದೇ ಸಮಯದಲ್ಲೇ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಕೂಡ ಆಗಾಗ ಅಣ್ಣಾವ್ರ ಮನೆಗೆ ಹೋಗುತ್ತಿದ್ದರು. ಅದರಿಂದ ಅವರು ಕೂಡ ಆ ಮನೆಯ ಸದ್ಯಸನಂತೆ ಆದರು. ಹೀಗಿರುವಾಗ ಒಂದು ಸಮಯದಲ್ಲಿ ರಾಜ್ ಅವರಿಗೋಸ್ಕರ ಅಶ್ವಥ್ ತಮ್ಮ ಮನೆಯ ಸಂಪ್ರದಾಯವನ್ನೇ ಮೀರುತ್ತಾರೆ. ಹೌದು. ಶಂಕರ್ ಅಶ್ವಥ್ ಮದುವೆಯ ಸಮಯದಲ್ಲಿ ತಮ್ಮ ಮನೆಯ ಸಂಪ್ರದಾಯವನ್ನೇ ಮೀರಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದರಂತೆ.

ನೂರಾರು ಜನರ ಮುಂದೆ ತಮ್ಮ ಸಂಪ್ರದಾಯವನ್ನು ಮೀರಿದ ಅಶ್ವಥ್ 

ಅಶ್ವಥ್ ಅವರ ಮನೆಯಲ್ಲಿ ಮೊದಲಿನಿಂದಲೂ ಒಂದು ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೌದು. ತಮ್ಮ ಕುಟುಂಬದಲ್ಲಿ ಯಾರದ್ದೇ ಮದುವೆ ಆದರು, ಕುಟುಂಬದವರು ಮಾತ್ರ ಧಾರೆ ಎರೆಯಬೇಕಿತ್ತು. ಇತರರಿಗೆ ಅದರ ಅವಕಾಶವಿರಲಿಲ್ಲವಂತೆ. ಆದ್ರೆ ಶಂಕರ್ ಅಶ್ವಥ್ ಅವರ ಮದುವೆಗೆ ಡಾ. ರಾಜ್ ಕುಮಾರ್ ಹಾಗು ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಇಬ್ಬರು ಬಂದಿದ್ದರು. ಆ ಸಮಯದಲ್ಲಿ ಅವರು ಧಾರೆ ಎರೆಯಲು ಮುಂದೆ ಬಂದಿದ್ದಾರೆ. ಆಗ ಅಶ್ವಥ್ ಅವರ ಕುಟುಂಬದವರು ವಿರೋಧ ವ್ಯಕ್ತಪಡಿಸಿದರಂತೆ. ಆದ್ರೆ ಅಶ್ವಥ್ ನಮಗೆ ಎಲ್ಲರಿಗಿಂತ ಅಣ್ಣಾವ್ರೇ ಮುಖ್ಯ ಎಂದು ಹೇಳಿ, ಅವರ ಮನೆಯ ಸಂಪ್ರದಾಯವನ್ನು ಮುರಿದು, ಅವರಿಂದ ಧಾರೆ ಎರೆಸಿದರಂತೆ.

ಸಾಮಾಜಿಕ ಜಾಲತಾಣದಲ್ಲಿ ನೆನಪು ಹಂಚಿಕೊಂಡ ಶಂಕರ್ ಅಶ್ವಥ್

ಇನ್ನು ಈ ಬಗ್ಗೆ ನಟ ಶಂಕರ್ ಅಶ್ವಥ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು. ಸದಾಕಾಲ ಫೇಸ್ ಬುಕ್ ನಲ್ಲಿ ಆಕ್ಟಿವ್ ಆಗಿರುವ ಶಂಕರ್ ಅಶ್ವಥ್ ಅವರು ಆಗಾಗ ರಾಜ್ ಕುಟುಂಬದ ಜೊತೆ ಇದ್ದ ಒಡನಾಟವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದ್ರೆ ಈಗ ಅಪ್ಪಾಜಿಯವರಿಗೋಸ್ಕರ ನಮ್ಮ ತಂದೆ, ನಮ್ಮ ಮನೆಯ ಸಂಪ್ರದಾಯವನ್ನೇ ಮುರಿದಿದ್ದರು. ಇದರಿಂದ ನಮ್ಮ ತಂದೆ ಅವರನ್ನು ಎಷ್ಟು ಇಷ್ಟ ಪಡುತ್ತಿದ್ದರು, ಹಾಗು ಅವರ ಮೇಲೆ ಎಷ್ಟು ಗೌರವ ಇಟ್ಟಿದ್ದರು ಎಂಬುದು ಇದರಲ್ಲೇ ತಿಳಿಯುತ್ತದೆ ಎಂದು ಫೋಟೋ ಜೊತೆ, ನಡೆದ ಘಟನೆಯನ್ನು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶಂಕರ್ ಅಶ್ವಥ್ ಅವರು ಆಗಾಗ ರಾಜ್ ಕುಟುಂಬದ ವಿಚಾರಗಳನ್ನು ತಿಳಿಸುತ್ತಲೇ ಇರುತ್ತಾರೆ. ಯಾಕಂದ್ರೆ ಅವರು ರಾಜ್ ಕುಟುಂಬದ ಮೇಲೆ ಅಷ್ಟೊಂದು ಗೌರವ ಇಟ್ಟಿದ್ದಾರೆ. ಹಾಗಾಗಿ ಅವರ ಜೊತೆ ನಡೆದ ಕೆಲವು ಘಟನೆ ಹಾಗು ಕೆಲವು ಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

LEAVE A REPLY

Please enter your comment!
Please enter your name here