ರಾಜಕೀಯಕ್ಕೆ ಬ್ರೇಕ್ ಹಾಕಿ, ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

0
658
rahul gandhi cricket

ಕಾಂಗ್ರೆಸ್ ನ ನಾಯಕನಾಗಿರುವ ರಾಹುಲ್ ಗಾಂಧಿ ಅವರು ಸದಾಕಾಲ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ. ಜೊತೆಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಂಡ ನಂತರ, ಮುಂದಿನ ಗೆಲುವಿಗಾಗಿ ಚಿಂತನೆ ನಡೆಸುತ್ತಿದ್ದಾರೆ. ಹಾಗಾಗಿ ಜನರ ಭೇಟಿ ಹಾಗು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ, ಜನರಿಗೆ ಹತ್ತಿರವಾಗಲು ಬಯಸುತ್ತಿದ್ದಾರೆ. ಆದ್ರೆ ಇತ್ತ ಬಿಜೆಪಿ ತನ್ನ ಅಧಿಕಾರವನ್ನು ನಡೆಸಿಕೊಂಡು ಹೋಗುತ್ತಿದೆ. ಆದ್ರೆ ಆ ಅಧಿಕಾರವನ್ನು ಪಡೆಯಲು, ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಈ ಮಧ್ಯೆ ಅವರು ಅನೇಕ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದು, ಈ ಗ್ಯಾಪ್ ನಲ್ಲಿ ಕ್ರಿಕೆಟ್ ಕೂಡ ಆಡಿದ್ದಾರೆ. ಹೌದು. ಅವರು ರೇವರಿಯಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ

ಪ್ರಚಾರದ ಸಲುವಾಗಿ ರಾಹುಲ್ ಗಾಂಧಿ ಅವರು ರಾವೇರಿಗೆ ಭೇಟಿ ನೀಡಿದ್ದರು. ಆದರೆ ಅಲ್ಲಿಂದ ಪ್ರಚಾರ ಮುಗಿಸಿ, ಮರಳುವಾಗ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ದೆಹಲಿಗೆ ಲ್ಯಾಂಡ್ ಆಗುವುದನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಮರಳಿ ಹರ್ಯಾಣಕ್ಕೆ ತೆರಳುವಂತೆ ಮರುನಿರ್ದೇಶಿಸಲಾಯಿತು. ಹರ್ಯಾಣದ ಮಹೇಂದ್ರಘಢನಲ್ಲಿ ಚುನಾವಣಾ ರ್ಯಾಲಿ ಮುಗಿಸಿದ ನಂತರ ರಾಹುಲ್ ಗಾಂಧಿ ದೆಹಲಿಗೆ ಮರಳುತ್ತಿದ್ದರು. ಈ ವೇಳೆ ರೇವಾರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಯಿತು. ನಂತರ ರಸ್ತೆ ಮೂಲಕ ರಾಹುಲ್ ಗಾಂಧಿ ಮರಳಿದರು ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ

ಮಹೇಂದ್ರಘಢನಲ್ಲಿ ನಡೆದ ಸಾರ್ವಜನಿಕ ಸಭೆಯ ನಂತರ ದೆಹಲಿಗೆ ತೆರಳುತ್ತಿದ್ದ ರಾಹುಲ್ ಗಾಂಧಿಯವರ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದಾಗಿ ಟೇಕ್ ಆಫ್ ಆಗಲಿಲ್ಲ. ಹೀಗಾಗಿ ಹವಾಮಾನವು ಸಾಮಾನ್ಯ ಸ್ಥಿತಿಗೆ ಮರಳುವ ವರೆಗೆ ರಾಹುಲ್ ಅವರು ಮಕ್ಕಳೊಂದಿಗೆ ರೇವಾರಿಯಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ ಎಂಬ ಸಾಲುಗಳನ್ನು ಮಹಿಳಾ ಕಾಂಗ್ರೆಸ್‍ನ ಟ್ವೀಟ್ ನಲ್ಲಿ ಬರೆಯಲಾಗಿದೆ. ಈಗಾಗಲೇ ವಿಡಿಯೋ 3,000ಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿದೆ. 1,500ಕ್ಕೂ ಅಧಿಕ ಲೈಕ್‍ಗಳನ್ನು ಗಳಿಸಿದೆ. ಅಲ್ಲದೆ ಇದಕ್ಕೆ ಹಲವು ಜನ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಒಟ್ಟಿನಲ್ಲಿ ರಾಹುಲ್ ಗಾಂಧಿ ಅವರು ರಾಜಕೀಯದ ಚಿಂತೆಯಿದ್ದರೂ, ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಾ, ಕಾಲ ಕಳೆಯುತ್ತಿದ್ದಾರೆ. ಇನ್ನು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಕಮೆಂಟ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here