ರಾಘಣ್ಣನ ಪತ್ನಿ, ನಂಜುಡಿ ಕಲ್ಯಾಣ ಸಿನಿಮಾ ನೋಡುತ್ತಿದ್ದರೆ ತೀವ್ರ ಕೋಪಕ್ಕೆ ಒಳಗಾಗುತ್ತಾರಂತೆ. ಕಾರಣ?

0
889
raghannana patni

ಸಿನಿಮಾ ಅಂದ್ರೆ ಅದೇನೋ ಒಂಥರಾ ಹುಚ್ಚು. ಹಾಗೆ ಅದು ಒಂದು ರೀತಿಯ ವಿಶೇಷವೂ ಹೌದು. ಯಾಕಂದ್ರೆ ಒಂದು ಸಿನಿಮಾ ಮಾಡಬೇಕು ಅಂದ್ರೆ, ಅದು ಎಲ್ಲಾ ಅಂಶಗಳನ್ನ ಒಳಗೊಂಡಿರಬೇಕು. ಯಾಕಂದ್ರೆ, ಸಿನಿಮಾ ನೋಡುವ ಸಿನಿ ರಸಿಕರು ವಿಶೇಷ ಪಾತ್ರ ಹಾಗೂ ವಿಶೇಷ ದೃಶ್ಯಗಳನ್ನ ನಿರೀಕ್ಷಿಸಿರುತ್ತಾರೆ. ಹಾಗಾಗಿ ನಿರ್ದೇಶಕರಾದವರು ಒಂದು ಸಿನಿಮಾಗೆ ಏನೆಲ್ಲಾ ಇದ್ರೆ, ಚೆನ್ನಾಗಿರುತ್ತೆ ಅನ್ನೋದನ್ನ ತಿಳಿದು, ಸಿನಿಮಾ ಮಾಡ್ತಾರೆ.

ಇದೇ ರೀತಿ ಎಲ್ಲಾ ಅಂಶಗಳನ್ನ ಒಳಗೊಂಡಿರುವ ಸಿನಿಮಾಗಳು ಕೂಡ, ಕೆಲವರಿಗೆ ಇಷ್ಟ ಆಗಲ್ಲ. ಯಾಕಂದ್ರೆ, ಅದರಲ್ಲಿ ಏನಾದ್ರು, ಕೊರತೆ ಅಥವಾ ತಮಗಿಷ್ಟವಾಗದ ಸೀನ್ ಗಳು ಇರುತ್ತವೆ ಅನ್ನೋ ಕಾರಣಕ್ಕಾಗಿ. ಈಗ ಅದೇ ರೀತಿಯಲ್ಲಿ ನಮ್ಮ ರಾಘವೇಂದ್ರ ರಾಜ್ ಕುಮಾರ್ ಅವರ ಪತ್ನಿಗೆ, ನಂಜುಡಿ ಕಲ್ಯಾಣ ಸಿನಿಮಾ ಅಂದ್ರೆ ಆಗೋದಿಲ್ವಂತೆ. ಆ ಸಿನಿಮಾ ಅಂದ್ರೆ, ಎಲ್ಲಿಲ್ಲದ ಕೋಪ ಬರುತ್ತಂತೆ. ಹಾಗಾದ್ರೆ ಆ ಕೋಪಕ್ಕೆ ಕಾರಣವಾದ್ರು ಏನು ಅಂತ ತಿಳಿಸ್ತೀವಿ ನೋಡಿ.

ರಾಘಣ್ಣ ಅವರ ನೆಚ್ಚಿನ ಚಿತ್ರ ನಂಜುಡಿ ಕಲ್ಯಾಣ

ವರನಟ ಡಾ. ರಾಜಕುಮಾರ್ ಅವರ ಪುತ್ರ, ರಾಘವೇಂದ್ರ ರಾಜ್ ಕುಮಾರ್ ಅವರು, ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟಿದ್ದರು. ಆದ್ರೆ ಇವರಿಗೆ ಹೆಸರು ತಂದುಕೊಟ್ಟ ಸಿನಿಮಾ ಅಂದ್ರೆ, ಅದು ನಂಜುಡಿ ಕಲ್ಯಾಣ. ಹೌದು. ನಂಜುಡಿ ಕಲ್ಯಾಣ ಸಿನಿಮಾವನ್ನ ಈ ಕ್ಷಣಕ್ಕೂ ಯಾರಿಂದಲೂ ಮರೆಯೋಕೆ ಆಗಲ್ಲ. ಯಾಕಂದ್ರೆ ಆ ಚಿತ್ರ ಆ ಕಾಲಕ್ಕೆ ಸಖತ್ ಸೌಂಡ್ ಮಾಡಿತ್ತು. ಅಲ್ಲದೆ, ಸಿನಿರಸಿಕರ ಮನಸ್ಸನ್ನ ಗೆದ್ದಿತ್ತು. ಇನ್ನೂ ನಮ್ಮ ರಾಘಣ್ಣ ಕೂಡ ಸಿನಿಮಾದಲ್ಲಿ ಸಖತ್ ಆಗಿ ಮಿಂಚಿದ್ದರು. ಹಾಗಾಗಿ ರಾಘಣ್ಣನಿಗೂ ಸಹ ಇದು ನೆಚ್ಚಿನ ಸಿನಿಮಾ. ಆದ್ರೆ ಈ ಸಿನಿಮಾ ಅಂದ್ರೆ ನಮ್ಮ ರಾಘಣ್ಣನ ಪತ್ನಿ,, ಮಂಗಳಮ್ಮ ಅವರಿಗೆ ಇಷ್ಟ ಇಲ್ಲ. ಸಿನಿಮಾ ಹೆಸರು ಕೇಳಿದರೆ ಕೋಪ ಬರುತ್ತಂತೆ.

ನಂಜುಡಿ ಕಲ್ಯಾಣ ಅಂದ್ರೆ ಇಷ್ಟವಿಲ್ಲವಂತೆ

ಹೌದು. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳ ಅವರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ. ರಾಘಣ್ಣನ ನಂಜುಡಿ ಕಲ್ಯಾಣ ಸಿನಿಮಾ ಬರುವ ಸಮಯದಲ್ಲೇ, ಅವರ ವಿವಾಹವಾಗಿತ್ತು. ಹಾಗಾಗಿ ಆಗಷ್ಟೇ ಮದುವೆಯಾಗಿದ್ದ ಮಂಗಳ ಅವರಿಗೆ, ಸಿನಿಮಾದಲ್ಲಿ ರಾಘಣ್ಣ ಹಾಗೂ ಮಾಲಾಶ್ರೀ ಅವರ ಮದುವೆ ಆಗಿದ್ದು, ಸಹಿಸೋಕೆ ಆಗಿಲ್ಲವಂತೆ. ಹೌದು. ಸಿನಿಮಾದಲ್ಲಿ ಮದುವೆಯಾಗೋದು, ಕೇವಲ ದೃಶ್ಯ ಮಾತ್ರ ಅನ್ನೋದು ಗೊತ್ತಿದ್ದರೂ, ಮಂಗಳ ಅವರಿಗೆ ಅದು ಇಷ್ಟ ಆಗಲಿಲ್ಲವಂತೆ. ಆ ಸಮಯದಲ್ಲಿ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರಂತೆ.

ಚಿತ್ರದಲ್ಲಿ ತಬ್ಬಿಕೊಳ್ಳುವ ಸೀನ್ ಗಳು ಹೆಚ್ಚಾಗಿದ್ದವಂತೆ

ಸಿನಿಮಾದಲ್ಲಿ ತಬ್ಬಿಕೊಳ್ಳುವ ಸೀನ್ ಗಳು ಹಾಗೂ ಲವ್ ಸೀನ್ ಗಳು ಹೆಚ್ಚಾಗಿದ್ದವಂತೆ. ಹಾಗಾಗಿ ಆಗಷ್ಟೇ ಮದುವೆಯಾದ ಮಂಗಳ ಅವರಿಗೆ ಅದನ್ನೆಲ್ಲಾ ನೋಡಿದಾಗ ಕೋಪ ಬರುತ್ತಿತ್ತಂತೆ. ನನ್ನ ಗಂಡ, ಇನ್ನೊಬ್ಬ ಹುಡುಗಿಯನ್ನ ತಬ್ಬಿಕೊಳ್ಳೋದು ಅಂದ್ರೆ ಏನು? ಅಂತ ಕೋಪ ಮಾಡಿಕೊಳ್ಳುತ್ತಿದ್ದರಂತೆ. ಯಾಕಂದ್ರೆ ಪ್ರಾರಂಭದಲ್ಲಿ ಮಂಗಳ ಅವರಿಗೆ ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲವಂತೆ, ಕೇವಲ ಸಿನಿಮಾ ದೃಶ್ಯಗಳನ್ನ, ನಿಜವಾಗಿ ಎಂದು ತಿಳಿದು, ಬೇಸರ ಮಾಡಿಕೊಳ್ಳುತ್ತಿದ್ದರಂತೆ.

ರಾಘಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಮಂಗಳ

ರಾಘಣ್ಣ ಸಿನಿಮಾ ಮುಗಿಸಿಕೊಂಡು ಮನೆಗೆ ಬಂದಾಗ, ಮಂಗಳ ಅವರು, ರಾಘಣ್ಣನನ್ನ ಫುಲ್ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ. ಇನ್ನೊಂದು ಸಾರಿ ಇಂಥ ಸಿನಿಮಾಗಳನ್ನ ಮಾಡಿದ್ರೆ, ನನಗೆ ಇಷ್ಟ ಆಗಲ್ಲ. ಹಾಗಾಗಿ ಮತ್ತೊಮ್ಮೆ ಇಂಥ ಸಿನಿಮಾಗಳನ್ನ ಮಾಡಬೇಡಿ ಅಂತ ಫುಲ್ ಕ್ಲಾಸ್ ತಗೋತಿದ್ರಂತೆ. ಜೊತೆಗೆ, ಸಿನಿಮಾಗೆ ಹೋಗುವ ಮೊದಲೇ ವಾರ್ನಿಂಗ್ ಕೊಡುತ್ತಿದ್ದರಂತೆ. ಇವತ್ತು ಶೂಟಿಂಗ್ ಗೆ ಹೋಗುತ್ತಿದ್ದೀರಾ, ಆದ್ರೆ ಅದರಲ್ಲಿ ಹೆಚ್ಚಾಗಿ ಲವ್ ಸೀನ್ ಗಳು ಹಾಗೂ ತಬ್ಬಿಕೊಳ್ಳುವ ಸೀನ್ ಗಳು ಇರಬಾರದು ಅಂತ ಮೊದಲೇ, ಹೇಳಿ ಕಳಿಸುತ್ತಿದ್ದರಂತೆ.

ಈ ರೀತಿ ನಮ್ಮ ರಾಘಣ್ಣನ ಪತ್ನಿ, ಮಂಗಳ ಅವರು ಆಗಿನ ಕಾಲದಲ್ಲೇ, ನಮ್ಮ ರಾಘಣ್ಣನನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ. ಅದು ನಂಜುಡಿ ಕಲ್ಯಾಣದಲ್ಲಿರುವ ಕೆಲವು ದೃಶ್ಯಗಳನ್ನ ನೋಡಿ. ಇದರಿಂದಲೇ ಅವರಿಗೆ ನಂಜುಡಿ ಕಲ್ಯಾಣ ಸಿನಿಮಾ ಅಂದ್ರೆ ಇಷ್ಟವಿಲ್ಲವಂತೆ. ಆದರೆ ಈಗ ಅದನ್ನೆಲ್ಲಾ ನೆನಪಿಸಿಕೊಂಡರೆ, ನನಗೆ ನಗು ಬರುತ್ತೆ ಅಂತ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here