ನಿಜಕ್ಕೂ ಎಂತಹ ಬದಲಾವಣೆ – ಟ್ರೋಲಿಗರ ಬಾಯಿಗೆ ಆಹಾರವಾದ ರಾನು ಮೊಂಡಲ್

0
434
raanu mondal

ರಾನು ಮೊಂಡಲ್. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪ್ರತಿಯೊಬ್ಬರಿಗೂ ಗೊತ್ತು. ಯಾಕಂದ್ರೆ ತಮ್ಮ ಹಾಡು ಹಾಗು ಧ್ವನಿಯ ಮೂಲಕ ರಾತ್ರೋ ರಾತ್ರಿ ಸೆಲೆಬ್ರಿಟಿಯಾದರು. ಹೌದು. ಕೆಲವು ದಿನಗಳವರೆಗೆ ರಾನು ಮೊಂಡಲ್ ಯಾರು? ಏನು? ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಯಾವಾಗ ಅವರು ರೈಲ್ವೆ ಸ್ಟೇಷನ್ ನಲ್ಲಿ ಕೂತು ಒಂದು ಹಾಡನ್ನು ಹೇಳಿದರೋ, ಆಗ ಅವರ ದೆಸೆ ಬದಲಾಗಿತ್ತು. ಅದಾದ ಬಳಿಕ ಅವರು ಬಾಲಿವುಡ್ ಗೆ ಹಾರಿ ಅಲ್ಲಿ ಗಾಯಕಿಯಾಗಿದ್ದಾರೆ. ಆದ್ರೆ ಈಗ ಅವರು ಗಾಯಕಿ ಆಗಿರುವುದು ಹೆಚ್ಚು ಜನಪ್ರಿಯವಾಗುತ್ತಿಲ್ಲ. ಬದಲಿಗೆ ಅವರ ಮಾತು ಹಾಗು ಅವರ ವರ್ತನೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಓವರ್ ಮೇಕಪ್ ನಲ್ಲಿ ರಾನು ಮೊಂಡಲ್

ರಾನು ಮೊಂಡಲ್ ಅಂದಾಗ ಇಷ್ಟುದಿನ ಸಾಮಾನ್ಯ ಮಹಿಳೆ. ಆದ್ರೆ ತನ್ನ ಧ್ವನಿಯ ಮೂಲಕ ಅವರ ದೆಸೆ ಬದಲಾಗಿತ್ತು. ಆದ್ರೆ ಈಗ ಅವರ ವರ್ತನೆಯಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಹೌದು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾನು ಓವರ್ ಮೇಕಪ್ ಮಾಡಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಆ ಫೋಟೋ ನೋಡಿದ ನೆಟ್ಟಿಗರು, ಮನಬಂದಂತೆ ಕಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ರಾನು ಸೀರೆಯಿಂದ, ಲೆಹೆಂಗಾ ಗೆ ಶಿಫ್ಟ್ ಆಗಿರೋದು, ಜೊತೆಗೆ ತಮ್ಮ ಮುಖದ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಂಡಿರುವುದು ನೆಟ್ಟಿಗರ ಟ್ರೋಲ್ ಗೆ ಕಾರಣವಾಗಿದೆ.

ಅಭಿಮಾನಿಯೊಬ್ಬರ ಮೇಲೆ ಸಿಡುಕಿದ್ದ ರಾನು

ಇನ್ನು ರಾನು ತಮ್ಮ ಧ್ವನಿಯ ಮೂಲಕ ಖ್ಯಾತಿ ಪಡೆದ ನಂತರ ಅವರದ್ದೇ ಆದ ಕೆಲವು ಅಭಿಮಾನಿಗಳನ್ನು ಪಡೆದರು. ಹಾಗಾಗಿ ರಸ್ತೆಯಲ್ಲಿ ಸಿಕ್ಕ ರಾನು ಮೊಂಡಲ್ ಅವರನ್ನು ನೋಡಿದ ಅಭಿಮಾನಿಯೊಬ್ಬರು ಅವರನ್ನು ಮುಟ್ಟಿ ಮಾತನಾಡಿಸಿದಾಗ, ರಾನು ಮೊಂಡಲ್ ಅವರ ಮೇಲೆ ಸಿಡುಕಿದ್ದರು. ಹೌದು. ನನ್ನನ್ನು ಮುಟ್ಟಿ ಮಾತನಾಡಿಸಬೇಡಿ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದರು. ಆಗಲು ಸಹ ರಾನು ಇದೇ ರೀತಿ ಟ್ರೋಲ್ ಆಗಿದ್ದರು. ಆದರೆ ಈ ಬಾರಿಯ ಅವರ ಉಡುಗೆಯಿಂದ ಇನ್ನಷ್ಟು ಹೆಚ್ಚು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ನಿಜಕ್ಕೂ ಕೆಲವರು ಎಷ್ಟು ಬೇಗ ಬದಲಾಗುತ್ತಾರೆ ಅನ್ನೋದಕ್ಕೆ ರಾನು ಮೊಂಡಲ್ ಉತ್ತಮ ಉದಾಹರಣೆಯಾಗಿದ್ದಾರೆ. ಒಂದು ಕಾಲದಲ್ಲಿ ಯಾರಿಗೂ ತಿಳಿಯದ ಈಕೆ, ಈಗ ಜನಪ್ರಿಯವಾಗಿರುವುದರ ಜೊತೆಗೆ, ತಮ್ಮನ್ನೇ ತಾವು ಸಂಪೂರ್ಣವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here