ಅಂದು ಕಿಚ್ಚನ ಕುರಿತು ಡಾ ರಾಜ್ ಕುಮಾರ್ ಅವರು ನುಡಿದ ನುಡಿ ಇಂದು ನಿಜವಾಗಿದೆ

0
4396

ಕನ್ನಡ ಚಿತ್ರರಂಗದಲ್ಲಿ ಹುಚ್ಚ ಸಿನಿಮಾ ಹೊಸ ದಾಖಲೆಯನ್ನು ಬರೆದಿತ್ತು. ಸುದೀಪ್ ಸಿನಿವೃತ್ತಿಯಲ್ಲಿ ಹುಚ್ಚ ಸಿನಿಮಾ ಟರ್ನಿಂಗ್ ಪಾಯಿಂಟ್ ಆಗಿತ್ತು. ಓಂ ಪ್ರಕಾಶ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಸುದೀಪ್ ಮತ್ತು ರೇಖ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸುದೀಪ್ ಗೆ ಇದು ದೊಡ್ಡ ಬ್ರೇಕ್ ಕೊಟ್ಟ ಚಿತ್ರವಾಗಿತ್ತು. ಮೊದಲು ಶಿವಣ್ಣ ಮತ್ತು ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಇಬ್ಬರು ಸಹ ಹುಚ್ಚ ಸಿನಿಮಾ ಮಾಡಲು ನಿರಾಕರಿಸಿದ್ದರು. ಕೊನೆಗೆ ಕಿಚ್ಚ ಸುದೀಪ್ ಅವರನ್ನು ಹಾಕಿಕೊಂಡು ಮಾಡಿದ್ದು, ಚಿತ್ರ ಭರ್ಜರಿ ಯಶಸ್ವಿಯಾಗಿತ್ತು.

ನಾನು ಹುಚ್ಚ ಸಿನಿಮಾವನ್ನು ನೋಡಬೇಕು

ಹುಚ್ಚ ಸಿನಿಮಾ ರಿಲೀಸ್ ಆಗುವವರೆಗೂ ಚಿತ್ರದ ಕುರಿತು ನಕಾರಾತ್ಮಕವಾದ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಚಿತ್ರ ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗಿತ್ತು. ಸುದೀಪ್ ಅವರ ನಟನೆಗೆ ಜನರು ಮಾರು ಹೋಗಿದ್ದರು. ಅಂದು ಡಾ ರಾಜ್ ಕುಮಾರ್ ಅವರು ಹುಚ್ಚ ಸಿನಿಮಾ ಮತ್ತು ಸುದೀಪ್ ಅವರ ನಟನೆಯನ್ನ ಮೆಚ್ಚಿಕೊಂಡಿರುವ ವಿಷಯ ಈಗ ಹೊರ ಬಿದ್ದಿದೆ. ಹುಚ್ಚ ಸಿನಿಮಾವು 50 ದಿನಗಳ ಕಾಲ ಪ್ರದರ್ಶನ ಕಂಡ ನಂತರ ರಾಜ್ ಕುಮಾರ್ ಅವರು ಚಿತ್ರದ ನಿರ್ಮಾಪಕರಿಗೆ ಕರೆ ಮಾಡಿ, ನಾನು ಹುಚ್ಚ ಸಿನಿಮಾವನ್ನು ನೋಡಬೇಕು ಎಂದು ಹೇಳಿದ್ದರಂತೆ.

ಅಣ್ಣಾವ್ರ ಕಾಲಿಗೆ ಬಿದ್ದು ಕಿಚ್ಚ ಆಶೀರ್ವಾದವನ್ನು ಪಡೆದಿದ್ದರಂತೆ

ಆಮೇಲೆ ಅಣ್ಣಾವ್ರು ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರವನ್ನು ವೀಕ್ಷಿಸಿದ್ದರಂತೆ. ಸಿನಿಮಾ ನೋಡಿದ ಬಳಿಕ ರಾಜ್ ಕುಮಾರ್ ಅವರಿಗೆ ಖುಷಿ ಆಗಿತ್ತಂತೆ. ಸಿನಿಮಾ ಮುಗಿದ ನಂತರ ಅಣ್ಣಾವ್ರು ಸುದೀಪ್ ಅವರನ್ನು ಹತ್ತಿರ ಕರೆದು ತುಂಬಾ ಚೆನ್ನಾಗಿ ಅಭಿನಯಿಸಿದ್ದೀಯಾ, ನೀನು ದೊಡ್ಡ ಕಲಾವಿದ ಆಗುತ್ತೀಯಾ ಎಂದು ಹರಸಿದ್ದರಂತೆ.

ಅಣ್ಣಾವ್ರ ಕಾಲಿಗೆ ಬಿದ್ದು ಕಿಚ್ಚ ಆಶೀರ್ವಾದವನ್ನು ಪಡೆದಿದ್ದರಂತೆ. ಆಗ ನಡೆದ ಘಟನೆಗಳ ಕುರಿತು ನಿರ್ಮಾಪಕ ರೆಹಮಾನ್ ಅವರು ಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಅವರ ಮಾತಿನಂತೆ ಇಂದು ಸುದೀಪ್ ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಕಲಾವಿದರಾಗಿ  ಸುದೀಪ್ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here