ಶಿವಣ್ಣನ ಹೊಸ ಚಿತ್ರಕ್ಕೆ ಆರ್ ಚಂದ್ರು ಆಕ್ಷನ್ ಕಟ್

0
203

ಶಿವಣ್ಣನ ವಯಸ್ಸಿನ ಸರಿಸಮಾನರಾದ ನಟರು ನಿವೃತ್ತಿ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ಇತ್ತ ಶಿವಣ್ಣ ಸಿನಿಮಾಗಳಲ್ಲಿ ಅಭಿನಯಿಸಿ ಮಿಂಚುತ್ತಿದ್ದಾರೆ. ಇತ್ತೀಚಿಗೆ ಶಿವಣ್ಣನ ನಟಿಸಿರುವ ಚಿತ್ರಗಳು ಬಿಡುಗಡೆಯಾಗಿಲ್ಲ. ಆದರೆ ಶಿವಣ್ಣ ಬಹುತೇಕ ಸಿನಿಮಾಗಳ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿದ್ದಾರೆ ಆದರೆ ಬಿಡುಗಡೆಯ ಅವಕಾಶ ಇನ್ನು ಒದಗಿ ಬಂದಿಲ್ಲ.

ಮೂರು ತಿಂಗಳ ಬಳಿಕ ಶಿವಣ್ಣ ಸೆಟ್ ನಲ್ಲಿ ಕಾಣಿಸಿಕೊಳ್ಳಬಹುದಾಗಿದೆ

ಭುಜದ ಸರ್ಜರಿ ಆದ ನಂತರ ಮೂರು ತಿಂಗಳ ಕಾಲ ಶಿವಣ್ಣ ವಿಶ್ರಾಂತಿ ಪಡೆಯಬೇಕಾಗಿದೆ. ಸೆಪ್ಟೆಂಬರ್ ತಿಂಗಳಿನವರೆಗು ಯಾವುದೆ ಚಿತ್ರೀಕರಣದಲ್ಲಿ ಭಾಗಿಯಾಗುವಂತಿಲ್ಲ. ಮೂರು ತಿಂಗಳ ಕಾಲ ಚಿತ್ರೀಕರಣದಿಂದ ದೂರ ಸರೆಯಬೇಕಾಗುತ್ತದೆ. ಆಕ್ಷನ್ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ಹಾಗೆ ಇಲ್ಲ. ಮೂರು ತಿಂಗಳ ಬಳಿಕ ಶಿವಣ್ಣ ಸೆಟ್ ನಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಭಜರಂಗಿ ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ನಿರತರಾಗಿದ್ದು, ಕೆಲವು ದೃಶ್ಯದ ಚಿತ್ರೀಕರಣ ಪೂರ್ಣಗೊಂಡಿದೆ. ಎ.ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಪಿ.ವಾಸು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೆಸರಿಡದ ಚಿತ್ರದ ಶೂಟಿಂಗ್ ಸಹ ಕಂಪ್ಲೀಟ್ ಆಗಿದೆ. ದ್ರೋಣ ಎಸ್ ಆರ್ ಕೆ ಇನ್ನು ಸಾಕಷ್ಟು ಚಿತ್ರಗಳು ಶಿವಣ್ಣನ ಹತ್ತಿರವಿದೆ. ಇತ್ತೀಚಿಗಷ್ಟೆ ಶಿವಣ್ಣ ಅಭಿನಯಿಸಿದ ರುಸ್ತುಂ ಚಿತ್ರ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

shivanna

ಶಿವಣ್ಣನ ಹೊಸ ಚಿತ್ರಕ್ಕೆ ಆರ್ ಚಂದ್ರು ಆಕ್ಷನ್ ಕಟ್

ಹ್ಯಾಟ್ರಿಕ್ ಹೀರೊ ಶಿವ ರಾಜ್ ಕುಮಾರ್ ಅವರ ಹತ್ತಿರ ಈಗ ಸಾಕಷ್ಟು ಸಿನಿಮಾಗಳಿವೆ. ಈಗ ಮತ್ತೊಂದು ಸಿನಿಮಾಗೆ ಶಿವಣ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಿವಣ್ಣನ ಹೊಸ ಚಿತ್ರಕ್ಕೆ ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್ ನಲ್ಲಿ ಐ ಲವ್ ಯು ಚಿತ್ರ ಬಿಡುಗಡೆ ಆಗಿತ್ತು. ಈ ಚಿತ್ರದ ನಂತರ ಮತ್ತೊಂದು ಸಿನಿಮಾವನ್ನು ಶಿವ ರಾಜ್ ಕುಮಾರ್ ಅವರನ್ನು ಹಾಕಿಕೊಂಡು ಮಾಡಲು ಸಿದ್ದರಾಗಿದ್ದಾರೆ. ಐ ಲವ್ ಯು ಚಿತ್ರ ಯಶಸ್ಸು ಕಂಡ ಮೇಲೆ ಮತ್ತೊಂದು ಸಿನಿಮಾ ಉಪ್ಪಿಯ ಜೊತೆಗೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಶಿವಣ್ಣನ ಜೊತೆ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದಾರೆ. ಈ ಹಿಂದೆ ಆರ್ ಚಂದ್ರು ಮತ್ತು ಶಿವಣ್ಣನ ಕಾಂಬಿನೇಶನ್ ನಲ್ಲಿ ಮೈಲಾರಿ ಚಿತ್ರ ಮೂಡಿ ಬಂದಿತ್ತು.

ಹೊಸ ಚಿತ್ರಕ್ಕೆ ಜಂಗಮ ಎಂದು ಹೆಸರಿಡಲಾಗಿದೆ

ಮೈಲಾರಿ ಚಿತ್ರದ ನಂತರ ಆರ್ ಚಂದ್ರು ಮತ್ತು ಕರುನಾಡ ಚಕ್ರವರ್ತಿ ಒಂದಾಗಿದ್ದಾರೆ. ಹೊಸ ಚಿತ್ರಕ್ಕೆ ಜಂಗಮ ಎಂದು ಹೆಸರಿಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಶಿವಣ್ಣನ ಹುಟ್ಟು ಹಬ್ಬ 12 ನೆ ತಾರೀಕು ಇರುವದರಿಂದ, ಆ ದಿನದಂದೆ ಚಿತ್ರ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರಂತೆ. ಐ ಲವ್ ಯು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಕಿರಣ್ ತೋಟಂಬೈಲು ಅವರ ಸಂಗೀತ ಜಂಗಮ ಚಿತ್ರಕ್ಕಿದೆ. ಸದ್ಯಕ್ಕೆ ಶಿವಣ್ಣ ಭುಜದ ಸರ್ಜರಿಗಾಗಿ ಲಂಡನ್ ಗೆ ಹೋಗಿದ್ದು, ಸರ್ಜರಿಯ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈಗ ಶಿವ ರಾಜ್ ಕುಮಾರ್ ರೆಸ್ಟ್ ನಲ್ಲಿದ್ದಾರೆ. ಸಂಪೂರ್ಣವಾಗಿ ಗುಣವಾದ ಮೇಲೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಭಜರಂಗಿ. ದ್ರೋಣ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದು, ಭಜರಂಗಿ 2 ಚಿತ್ರದ ಬಹುತೇಕ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸೆಪ್ಟೆಂಬರ್ ನಿಂದ ಮತ್ತೆ ಶಿವಣ್ಣ ಭಜರಂಗಿ 2 ಶೂಟಿಂಗ್ ಸ್ಪಾಟ್ ಗೆ ಹಾಜರಾಗುವ ಸಾಧ್ಯತೆಗಳು ಹೆಚ್ಚಾಗಿದೆ.

LEAVE A REPLY

Please enter your comment!
Please enter your name here