ಜನ ಸಾಮಾನ್ಯರ ಅದೃಷ್ಟವನ್ನೇ ಬದಲಿಸಿತ್ತು ಯಜಮಾನ ಚಿತ್ರ ನಿರ್ಮಾಪಕರು ಹಂಚಿಕೊಂಡ ಕಥೆ

0
1022

ಬಹಳ ವರ್ಷಗಳ ಹಿಂದೆ ಸಾಹಸ ಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಯಜಮಾನ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ನೋಡಲು ಜನರು ಮುಗಿ ಬೀಳುತ್ತಿದ್ದರು ಅಷ್ಟರ ಮಟ್ಟಿಗೆ ಇತ್ತು ಚಿತ್ರದ ಕ್ರೇಜ್. ಕೌಟುಂಬಿಕ ಆಧಾರಿತವಾದ ಚಿತ್ರ ಇದಾಗಿದ್ದು, ಅಣ್ಣ-ತಮ್ಮಂದಿರ ನಡುವೆ ಇರುವ ಬಾಂಧವ್ಯವನ್ನು ಸಾರುವ ಚಿತ್ರವಾಗಿತ್ತು. ವಿಷ್ಣುವರ್ಧನ್ ಅವರ ನಟನೆಯ ಕುರಿತು ಮಾತಾಡುವ ಹಾಗೆ ಇಲ್ಲ ತುಂಬ ಸೊಗಸಾಗಿ ಅಭಿನಯಿಸಿದ್ದರು. ಶಶಿ ಕುಮಾರ್, ಅಭಿಜಿತ್, ಪ್ರೇಮ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು. ಭರ್ಜರಿ ಪ್ರದರ್ಶನ ಕಾಣುವ ಮೂಲಕ ಯಜಮಾನ ಚಿತ್ರ ಸೂಪರ್ ಹಿಟ್ ಆಗಿತ್ತು. ಯಜಮಾನ ಎನ್ನುವ ಚಿತ್ರದ ಶೀರ್ಷಿಕೆ ಫಿಕ್ಸ್ ಆಗಿದ್ದು ಚಿತ್ರಮಂದಿರದಲ್ಲಿ. ಮುಂದೆ ಓದಿ

ಛತ್ತರಿ ಇಟ್ಟುಕೊಂಡಿರುವ ಚಿತ್ರದ ಪೋಸ್ಟರ್ ನೋಡಿದ್ದರು

ಯಜಮಾನ ಚಿತ್ರಕ್ಕಿನ ಮುಂಚೆ ದಾದಾ ಅವರ ಸೂರ್ಯವಂಶ ಚಿತ್ರ ಸಹ ಬಿಗ್ ಹಿಟ್ ಆಗಿತ್ತು. ಯಜಮಾನ ಚಿತ್ರದ ನಿರ್ಮಾಪಕರಾದ ರೆಹಮಾನ್ ಅವರು ಯಜಮಾನ ಚಿತ್ರದ ಹಿಂದೆ ಇರುವ ರೋಚಕ ಕಥೆಯನ್ನು ಹಂಚುಕೊಂಡಿದ್ದಾರೆ. ಯುಗಾದಿ ಸಿನಿಮಾ ಮಾಡಬೇಕೆಂದು ಚಿತ್ರದ ಸ್ಕ್ರಿಪ್ಟ್ ಮಾಡಿಕೊಂಡಿದ್ದರು. ಈ ಚಿತ್ರ ನಿರ್ಮಾಣ ಮಾಡಬೇಕೆನ್ನುವುದು ರೆಹಮಾನ್ ಅವರ ಆಸೆಯಾಗಿತ್ತು. ನಾಯಕಿಯ ಪಾತ್ರಕ್ಕೆ ಖುಸ್ಬು ಅವರನ್ನು ಆಯ್ಕೆ ಮಾಡಿಕೊಂಡಿದ್ದರು, ಅವರ ಜೊತೆ ಚರ್ಚಿಸುವ ಸಲುವಾಗಿ ತಮಿಳು ನಾಡಿಗೆ ಹೋಗಿದ್ದರು. ಇದೆ ಸಮಯದಲ್ಲಿ ರೆಹಮಾನ್ ಅವರು ಒಬ್ಬ ಮನುಷ್ಯ ಛತ್ತರಿ ಇಟ್ಟುಕೊಂಡಿರುವುದು, ಹೀಗೆ ಅನೇಕ ದೃಶ್ಯವಿರುವ ಒಂದು ಪೋಸ್ಟರ್ ಅನ್ನು ನೋಡಿದ್ದರು . ಮುಂದೆ ಓದಿ

ಅಣ್ಣ ತಮ್ಮನ ಸೆಂಟಿಮೆಂಟ್ ಕಥೆ ಖಂಡಿತವಾಗಿ ಜನರಿಗೆ ಇಷ್ಟವಾಗುತ್ತದೆ

ರೆಹಮಾನ್ ನೋಡಿರುವ ಪೋಸ್ಟರ್ ತಮಿಳು ಭಾಷೆಯ ಚಿತ್ರದಾಗಿತ್ತು. ಇದನ್ನು ನೋಡಿದ ತಕ್ಷಣ ಕನ್ನಡ ಭಾಷೆಗೆ ಅನುಗುಣವಾಗಿ ಪೋಸ್ಟರ್ ಇದೆ ಎಂದು ಆಲೋಚಿಸುತ್ತಾರೆ. ಚಿತ್ರ ಹೌಸ್ಫುಲ್ ಆಗಿದ್ದರಿಂದ ಲೊ ಕ್ಲಾಸ್ ಕ್ಲಾಸ್ ಟಿಕೆಟ್ ತೆಗೆದುಕೊಂಡು ಚಿತ್ರವನ್ನು ವೀಕ್ಷಿಸಿದ್ದರು. ತಮಿಳು ಭಾಷೆಯಲ್ಲಿ ವಿಕ್ರಂ ಎನ್ನುವವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ರೈಟರ್ ಆದ ರವಿ ಶ್ರೀವಾತ್ಸವ್ ಅವರ ಜೊತೆಗೆ ರೆಹಮಾನ್ ಚಿತ್ರವನ್ನು ನೋಡಿದ್ದರು. ನಂತರ ಸದ್ಯಕ್ಕೆ ಯುಗಾದಿ ಚಿತ್ರವನ್ನು ಮಾಡುವುದು ಬೇಡ ಇದೆ ಚಿತ್ರವನ್ನು ಕನ್ನಡದಲ್ಲಿ ಮಾಡೋಣ ಎಂದು ನಿರ್ಧರಿಸಿದ್ದರಂತೆ. ಅಣ್ಣ ತಮ್ಮನ ಸೆಂಟಿಮೆಂಟ್ ಕಥೆ ಖಂಡಿತವಾಗಿ ಜನರಿಗೆ ಇಷ್ಟವಾಗುತ್ತದೆ ಎನ್ನುವುದು ಅವರ ಭಾವನೆಯಾಗಿತ್ತು.

ಲೊ ಕ್ಲಾಸ್ ಸೀಟ್ ನಲ್ಲಿ ಫಿಕ್ಸ್ ಆಗಿತ್ತು ಟೈಟಲ್

ಚಿತ್ರಕ್ಕೆ ಯಜಮಾನ ಎನ್ನುವ ಶೀರ್ಷಿಕೆ ಮತ್ತು ಪಾತ್ರಧಾರಿಗಳು ಚಿತ್ರ ಮಂದಿರದಲ್ಲೆ ನಿಗಧಿಯಾಗಿತ್ತು.ನಂತರ ಇವರು ತಮಿಳು ಚಿತ್ರದ ನಿರ್ದೇಶಕರನ್ನು ಭೇಟಿ ಮಾಡಿ 11 ಲಕ್ಷಕ್ಕೆ ರಿಮೇಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದರು. ರೆಹಮಾನ್ ಅವರು ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿದ್ದು, ಯಜಮಾನ ಚಿತ್ರದಲ್ಲಿ ನೀವು ನಟಿಸಬೇಕೆಂದು ಕೇಳಿಕೊಂಡಿದ್ದರಂತೆ. ವಿಷ್ಣುವರ್ಧನ್ ಗ್ರೀನ್ ಸಿಗ್ನಲ್ ನೀಡಿದ್ದು ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತದೆ. ಚಿತ್ರ ರಿಲೀಸ್ ಆದ ನಂತರ ನಡೆದಿದ್ದು ಇತಿಹಾಸ. ಮೇನ್ ಥೀಯೇಟರ್ ನವರು ಚಿತ್ರವನ್ನು ತೆಗೆದುಕೊಂಡಿರಲಿಲ್ಲ. ಚಿತ್ರದ ಕಥೆ ಚೆನ್ನಾಗಿದೆ ಎಂದು ಅರಿತ ರೆಹಮಾನ್ ಅಪರ್ಣ ಚಿತ್ರ ಮಂದಿರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಾರೆ. ಮೊದಲ ಮೂರು ದಿನ ಕಲೆಕ್ಷನ್ ಇರಲಿಲ್ಲ.

ನೀವು ದೇವರು ನಾನೆ ದೇವಸ್ಥಾನಕ್ಕೆ ಬರುತ್ತೇನೆ

ಮೂರು ದಿನಗಳ ನಂತರ ಭರ್ಜರಿ ಕಲೆಕ್ಷನ್ ಆಗಿತ್ತು. ಯಜಮಾನ ಚಿತ್ರದಿಂದಾಗಿ ಅಪರ್ಣ ಥೀಯೇಟರ್ ಹೊಸ ತಿರುವನ್ನು ಪಡೆದುಕೊಂಡಿತ್ತು. ಚಿತ್ರ ಶತ ದಿನೋತ್ಸವ ಪೂರೈಸಿದ ನಂತರ ವಿಷ್ಣುವರ್ಧನ್ ಚಿತ್ರ ಮಂದಿರಕ್ಕೆ ಭೇಟಿ ನೀಡಿದ್ದರು. ದಾದಾ ಆಗಮನದಿಂದ ಚಿತ್ರದ ಕಲೆಕ್ಷನ್ ದುಪ್ಪಟ್ಟು ಹೆಚ್ಚಾಗಿತ್ತು. ಡಾಕ್ಟರ್ ರಾಜ್ ಕುಮಾರ್ ಅವರು ರೆಹಮಾನ್ ಗೆ ಕರೆ ಮಾಡಿ ನಾನು ಯಜಮಾನ ಚಿತ್ರವನ್ನು ನೋಡಬೇಕು ಎಂದು ಹೇಳಿದ್ದರಂತೆ. ಚಿತ್ರ ನೋಡಿದ ರಾಜ್ ಕುಮಾರ್ ಕೂಡಲೇ ವಿಷ್ಣುಗೆ ಕರೆ ಮಾಡಿ ತಕ್ಷಣ ನಾನು ನಿಮ್ಮ ಮನೆಗೆ ಬರಲಿದ್ದೇನೆ ಎಂದು ಹೇಳಿದ್ದರಂತೆ. ನೀವು ದೇವರು ನಾನೆ ದೇವಸ್ಥಾನಕ್ಕೆ ಬರುತ್ತೇನೆ ಎಂದು ವಿಷ್ಣು ಹೇಳಿದ್ದರು.

ಜನ ಸಾಮಾನ್ಯರ ಅದೃಷ್ಟವನ್ನೇ ಬದಲಿಸಿದ ಚಿತ್ರ

ಬ್ಲಾಕ್ ಟಿಕೆಟ್ ಮಾರುವವರು ಮತ್ತು ಚಿತ್ರಮಂದಿರದತ್ತ ಸೈಕಲ್ ಸ್ಟಾಂಡ್ ನೋಡಿಕೊಳ್ಳುವವರ ಅದೃಷ್ಟ ಈ ಚಿತ್ರದಿಂದ ಬದಲಾಗಿತ್ತು. ಹೌದು, ಯಜಮಾನ ಚಿತ್ರದ ಬ್ಲಾಕ್ ಟಿಕೆಟ್ ಗಳನ್ನು ಮಾರುತ್ತ ಒಬ್ಬ ವ್ಯಕ್ತಿ ಸಣ್ಣ ಮನೆಯನ್ನು ಕಟ್ಟಿಸಿದ್ದರು. ಜನರ ಜೀವನದಲ್ಲಿ ಬೇರೆ ಯಾವ ಚಿತ್ರ ಸೃಷ್ಟಿ ಮಾಡದ ಇತಿಹಾಸ ಮತ್ತು ರೆಕಾರ್ಡ್ ಈ ಚಿತ್ರ ನಿರ್ಮಿಸಿತ್ತು.

ಅಣ್ಣ-ತಮ್ಮಂದಿರು ಒಂದಾಗಿದ್ದರು

ಸಣ್ಣ ಜಗಳದಿಂದ ಅಣ್ಣ ತಮ್ಮಂದಿರ ನಡುವೆ ಬಿರುಕು ಉಂಟಾಗಿದ್ದರಿಂದ ಬೇರೆ ಬೇರೆ ಮನೆಯನ್ನು ಮಾಡಿದ್ದರು. ಆದರೆ ಯಜಮಾನ ಚಿತ್ರವನ್ನು ನೋಡಿದ ನಂತರ ಅದೆಷ್ಟೋ ಅಣ್ಣ-ತಮ್ಮಂದಿರು ಒಟ್ಟಿಗೆ ಒಂದೆ ಮನೆಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

ವರದಣ್ಣ ನಿಜವಾದ ಯಜಮಾನ ನೀವೇ ರೆಹಮಾನ್ ಅವರೇ ಎಂದು ಹೇಳಿದಾಗ, ನನ್ನನ್ನು ಯಜಮಾನ ಎಂದು ಯಾರು ಹೇಳುತ್ತಾರೆ ವಿಷ್ಣುವರ್ಧನ್ ಅವರು ನಿಜವಾದ ಯಜಮಾನ ಎಂದು ರೆಹಮಾನ್ ಹೇಳಿದ್ದರಂತೆ.

LEAVE A REPLY

Please enter your comment!
Please enter your name here