ಪ್ರೇಮ್ ತಮ್ಮ ಹೊಸ ಚಿತ್ರಕ್ಕೆ ಕಾಲಿವುಡ್ ಹಾಗೂ ಟಾಲಿವುಡ್ ನಟಿಯರನ್ನ ಕರೆ ತರಲಿದ್ದಾರೆ.

0
1211
prem directed movie

ನಮ್ಮ ಚಂದನವನವೇ ಹಾಗೆ. ತುಂಬಾ ಪ್ರತಿಭೆಗಳನ್ನ ಹೊಂದಿದೆ. ಏನಾದ್ರು ಹೊಸದನ್ನ ಮಾಡಬೇಕು, ಹೊಸದನ್ನ ತೆರೆ ಮೇಲೆ ತರಬೇಕು ಅನ್ನೋದು ನಮ್ಮಲ್ಲಿರುವ ಕೆಲವು ನಿರ್ದೇಶಕರ ಆಸೆ. ಹಾಗಾಗಿ ಹೊಸದನ್ನ ಹುಡುಕುತ್ತಾರೆ. ಕೆಲವರಂತೂ ಹೊಸ ಮುಖಗಳು ಹೆಚ್ಚಾಗಿ ತೆರೆ ಮೇಲೆ ಬಂದರೆ, ಒಳ್ಳೆಯದು ಎಂದು ಭಾವಿಸುತ್ತಾರೆ. ಹಾಗಾಗಿ ಬೇರೆ ಭಾಷೆಯಲ್ಲಿರೋ ನಟ ಅಥವಾ ನಟಿಯರನ್ನ ಕರೆಸುತ್ತಾರೆ.

ನಮ್ಮ ನೆಚ್ಚಿನ ನಿರ್ದೇಶಕ ಜೋಗಿ ಪ್ರೇಮ್ ಈ ರೀತಿಯ ವಿಷಯಗಳಲ್ಲಿ ಬಹಳ ಮುಂದು. ಅಂದ್ರೆ ಹೊಸದೇನಾದ್ರು ತರಬೇಕು ಅನ್ನೋದನ್ನ ಇವರನ್ನ ನೋಡಿ ಕಲಿಬೇಕು ಅಂತಾರೆ ಕೆಲವರು. ಹೌದು. ಬೇರೆ ಭಾಷೆಯ ನಟಿಯರನ್ನ ಚಂದನವನಕ್ಕೆ ಕರೆ ತರೋದ್ರಲ್ಲಿ ಪ್ರೇಮ್ ಮೊದಲಿಗರು. ಇವರು ಈಗಾಗಲೇ ಅನೇಕ ನಾಯಕಿಯರನ್ನ ಕರೆಸಿದ್ದಾರೆ. ಈಗ ಮತ್ತೆ ಇದೆ ರೀತಿ ಬೇರೆ ಭಾಷೆಯ ದೊಡ್ಡ ನಟಿಯರನ್ನ ಸ್ಯಾಂಡಲ್ ವುಡ್ ಗೆ ಕರೆ ತರಲಿದ್ದಾರೆ.

ಜೋಗಿ ಪ್ರೇಮ್

ಪ್ರೇಮ್ ಬೇರೆ ಭಾಷೆಯ ದೊಡ್ಡ ನಟಿಯರನ್ನು ಕನ್ನಡಕ್ಕೆ ಕರೆ ತರುವಲ್ಲಿ ಫೇಮಸ್. ಈಗಾಗಲೇ, ಮಲ್ಲಿಕಾ ಶರಾವತ್, ಸನ್ನಿ ಲಿಯೋನ್, ಆಮಿ ಜಾಕ್ಸನ್ ಹೀಗೆ ಸಾಕಷ್ಟು ಚಂದದ ನಟಿಯರನ್ನು ಚಂದನವನಕ್ಕೆ ತಂದ ಖ್ಯಾತಿ ಅವರಿಗೆ ಇದೆ. ಹಾಗಾಗಿ ಅವರ ಇತ್ತೀಚಿನ ಕೆಲವು ಚಿತ್ರಗಳಲ್ಲಿ ಬೇರೆ ಭಾಷೆಯ ದೊಡ್ಡ ನಟಿಯರೇ ಕಾಣಿಸಿಕೊಳ್ಳಲಿದ್ದಾರೆ. ಈಗ ಅದೇ ರೀತಿ ಇದೀಗ ಮತ್ತಿಬ್ಬರು ನಾಯಕಿಯರನ್ನು ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ.

ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರೆ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಅಂದ್ರೆ ಈಗ ಯಾರು ಗೊತ್ತಿಲ್ಲ ಅಂತ ಹೇಳಲ್ಲ. ಯಾಕಂದ್ರೆ ಇವರು ಅಭಿನಯಿಸಿದ ರೌಡಿ ಬೇಬಿ ಸಾಂಗ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಯಾಕಂದ್ರೆ ಆ ಸಾಂಗ್ ಅಷ್ಟರ ಮಟ್ಟಿಗೆ ಹಿಟ್ ಆಗಿದೆ. ಹೌದು. ಪ್ರೇಮಂ ಖ್ಯಾತಿಯ ನಟಿ ಈ ಸಾಯಿ ಪಲ್ಲವಿ. ಇವರನ್ನ ಸ್ಯಾಂಡಲ್ ವುಡ್ ಗೆ ಕರೆ ತರಬೆಕು ಅಂತ ಪ್ರೇಮ್ ಅವರು ಡಿಸೈಡ್ ಮಾಡಿದ್ದಾರೆ. ಪ್ರೇಮ್ ಈಗ ಹೊಸದೊಂದು ಚಿತ್ರಕ್ಕೆ ಚಾಲನೆ ನೀಡ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಬೇಕು ಅಂತ ಪ್ರೇಮ್ ಅಂದುಕೊಂಡಿದ್ದರೆ. ಈಗಾಗಲೇ ಅವರ ಬಳಿ ಮಾತಾಡಿದ್ದು, ಸಾಯಿ ಪಲ್ಲವಿ ಸಹ ಬರೋದಾಗಿ ಒಪ್ಪಿಗೆ ನೀಡಿದ್ದಾರೆ ಅಂತ ತಿಳಿದುಬಂದಿದೆ.

ಕೀರ್ತಿ ಸುರೇಶ್ ನ ಕರೆಸಲಿದ್ದಾರೆ ಪ್ರೇಮ್

ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೇನಕಾ ಅವರ ಪುತ್ರಿ ಈ ಕೀರ್ತಿ ಸುರೇಶ್. ಇವರಿಗೆ ಬಾಲ್ಯದಿಂದಲೂ ನಟನೆ ಬಗ್ಗೆ ಆಸಕ್ತಿ ಇದ್ದಿದ್ದರಿಂದ ತೆರೆ ಮೇಲೆ ಆದಷ್ಟು ಬೇಗ ಕಾಣಿಸಿಕೊಂಡರು. ಈಗ ಇವರನ್ನ ಸ್ಯಾಂಡಲ್ ವುಡ್ ಗೆ ಕರೆತರಬೇಕು ಅಂತ ಪ್ರೇಮ್ ಅಂದುಕೊಂಡಿದ್ದಾರೆ. ಕೀರ್ತಿ ಸುರೇಶ್ ಮಹಾನಟಿ ಸಿನಿಮಾದ ಮೂಲಕ ಇಡೀ ಸೌತ್ ಇಂಡಿಯಾದಲ್ಲಿ ಹೆಸರು ಮಾಡಿದ್ದರು. ಈ ಚಿತ್ರದಲ್ಲಿ ಕೀರ್ತಿಯ ಅದ್ಭುತ ನಟನೆ ಇಷ್ಟ ಪಟ್ಟಿರುವ ಪ್ರೇಮ್ ತಮ್ಮ ಹೊಸ ಸಿನಿಮಾಗೆ ನಾಯಕಿಯಾಗಿ ಮಾಡಿದ್ದಾರೆ. ಈ ಹಿಂದೆಯೇ ಕೀರ್ತಿ ಸುರೇಶ್ ಬೇರೆ ಬೇರೆ ಚಿತ್ರಗಳ ಮೂಲಕ ಕನ್ನಡಕ್ಕೆ ಬರ್ತಾರೆ ಎಂಬ ಸುದ್ದಿ ಇದ್ದರೂ ಯಾವುದು ನಿಜ ಆಗಿರಲಿಲ್ಲ. ಆದ್ರೆ ಈ ಬಾರಿ ಪ್ರೇಮ್ ಅವರಿಗೆ, ಬರುವುದಾಗಿ ತಿಳಿಸಿದ್ದಾರೆ.

ಪ್ರೇಮ್ ಅಂದುಕೊಂಡಂತೆ ಕೆಲಸ ಮಾಡುವವರು. ಇದಕ್ಕೂ ಮೊದಲು ತನ್ನ ಸಿನಿಮಾಗೆ ಇಂತ ನಟಿಯೇ ಅಭಿನಯಿಸಬೇಕು ಅಂತ ಅಂದುಕೊಂಡಂತೆ ಕರೆಸಿದ್ದರು. ಹಾಗೆ ಈಗ ಸಾಯಿ ಪಲ್ಲವಿ ಹಾಗೂ ಕೀರ್ತಿ ಸುರೇಶ್ ಅವರನ್ನ ಕರೆಸಬೇಕೆಂದುಕೊಂಡಿದ್ದಾರೆ. ಹಾಗಾದ್ರೆ ಪ್ರೇಮ್ ಅವರ ಮುಂದಿನ ಸಿನಿಮಾ ಯಾವುದು. ಯಾವ ಸಿನಿಮಾಗೆ ಯಾವ ನಟಿ, ನಟಿಸುತ್ತಾರೆ ಅಂತ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here