ಪ್ರವಾಹದಲ್ಲಿ ಕಷ್ಟ ಪಡುತ್ತಿರುವ ಜನರ ಮಧ್ಯೆ ಫೋಟೋ ಶೂಟ್ ಮಾಡಿಸಿಕೊಂಡ ನಟಿ

0
882
pravahadalli photo

ಇತ್ತೀಚೆಗೆ ವರುಣನ ಅಬ್ಬರದಿಂದಾಗಿ ಎಲ್ಲ ಕಡೆ ಪ್ರವಾಹ ಉಂಟಾಗಿದ್ದು, ಜನರೆಲ್ಲರೂ ಬಹಳಷ್ಟು ಕಷ್ಟಪಡುತ್ತಿದ್ದಾರೆ. ಹೌದು. ಪ್ರವಾಹದಿಂದಾಗಿ ಮನೆಯನ್ನು ಕಳೆದುಕೊಂಡು, ಬೀದಿಗೆ ಬಿದ್ದಿದ್ದಾರೆ. ಜೊತೆಗೆ ಒಂದು ತುತ್ತು ಅನ್ನ ತಿನ್ನುವುದಕ್ಕೂ ಒದ್ದಾಡುತ್ತಿದ್ದಾರೆ. ಇನ್ನು ಈ ಬಾರಿಯ ಮಳೆಗೆ ಅನೇಕ ರಾಜ್ಯಗಳು, ಜಿಲ್ಲೆಗಳು ತುತ್ತಾಗಿವೆ. ಅದರಲ್ಲಿ ಬಿಹಾರ ಕೂಡ ಒಂದು. ಹೌದು. ಬಿಹಾರದಲ್ಲಿ ಉಂಟಾದ ಅತಿಯಾದ ಪ್ರವಾಹದಿಂದ ಅಲ್ಲಿನ ಜನರು ಈಗ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಅಲ್ಲಿ ವರುಣನ ಆರ್ಭಟವೇನು ಕಡಿಮೆ ಆಗಿಲ್ಲ. ಬದಲಿಗೆ ಪ್ರತಿದಿನ ಮಳೆ ಬರುತ್ತಲೇ ಇದೆ. ಅಲ್ಲದೆ ಒಮ್ಮೊಮ್ಮೆ ಮಳೆ ಹೆಚ್ಚಾಗಿ, ಪ್ರವಾಹದ ಭೀತಿ ಸೃಷ್ಠಿಸುತ್ತಿದೆ. ಈ ಮಧ್ಯೆ ಅಲ್ಲಿನ ಜನರು ಜೀವ ಉಳಿಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಆದ್ರೆ ಈ ನಟಿ ಮಾತ್ರ ಪ್ರವಾಹದ ಮಧ್ಯೆಯೂ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಹದ ಮಧ್ಯೆಯೂ ಫೋಟೋ ಶೂಟ್ ಮಾಡಿಸಿಕೊಂಡ ಮಾಡೆಲ್

ಪ್ರವಾಹದಿಂದಾಗಿ ಪಾಟ್ನಾದ ಜನರೆಲ್ಲರೂ ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಆದರೆ ಈ ನಟಿ ಮಾತ್ರ ಪ್ರವಾಹದ ಮಧ್ಯೆಯೂ ಫೋಟೋ ಶೂಟ್ ಮಾಡಿಸಿಕೊಂಡಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು. ನಟಿ ಹಾಗು ಮಾಡೆಲ್ ಆಗಿರುವ ಅದಿತಿ ಸಿಂಗ್ ಈ ರೀತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದಿತಿ ಸಿಂಗ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿದ್ಯಾರ್ಥಿನಿ ಆಗಿದ್ದು, ನಡುರಸ್ತೆಯಲ್ಲಿಯೇ ಪ್ರವಾಹದ ನೀರಿನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಆಕೆಯ ಫೋಟೋವನ್ನು ಫೋಟೋಗ್ರಾಫರ್ ಸುರಭ್ ಅನುರಾಜ್ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಎಲ್ಲರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರ ಕಷ್ಟದ ಮಧ್ಯೆ ಫೋಟೋ ಶೂಟ್ ಬೇಕಿತ್ತಾ?

ಇನ್ನು ಇವರ ಫೋಟೋವನ್ನು ನೋಡಿದ ಜನರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಯಾಕಂದ್ರೆ ಅಲ್ಲಿನ ಜನರು ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಆದ್ರೆ ಇವರು ಫೋಟೋ ಶೂಟ್ ಮಾಡಿಸಿರೋದಕ್ಕೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಯಾಕಂದ್ರೆ ಮನುಷ್ಯನಿಗೆ ಸ್ವಲ್ಪವಾದರೂ ಮಾನವೀಯತೆ ಇರಬೇಕು. ಆದ್ರೆ ಇವರು ಜನರ ಕಷ್ಟವನ್ನು ತಿಳಿಯುವ ಬದಲು, ಅಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಹರಿಯುವ ನೀರಿನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಅಗತ್ಯವಾದರೂ ಏನಿತ್ತು. ಇದು ಯಾವ ರೀತಿಯ ಶೋಕಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರಂತೆ.

ಫೋಟೋ ಶೂಟ್ ಮಾಡಲು ಕಾರಣ ತಿಳಿಸಿದ ಫೋಟೋಗ್ರಾಫರ್

ಇನ್ನು ಈ ರೀತಿಯ ಫೋಟೋ ಶೂಟ್ ಅನ್ನು ನೋಡಿದ ಜನರು, ಇವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈ ಫೋಟೋ ಶೂಟ್ ಮಾಡಿಸಲು ಒಂದು ಮುಖ್ಯ ಕಾರಣವಿದೆ ಎಂದು ಫೋಟೋಗ್ರಾಫರ್ ಸುರಭ್ ತಿಳಿಸಿದ್ದಾರೆ. ಹೌದು. ಬಿಹಾರದಲ್ಲಿ ಈಗಿನ ಸ್ಥಿತಿಯನ್ನು ವಿಭಿನ್ನವಾಗಿ ತೋರಿಸಲು ಸುರಭ್ ಈ ಫೋಟೋಶೂಟ್ ಮಾಡಿದ್ದಾರಂತೆ. ಹಾಗಾಗಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕೆಲವರು ಸುರಭ್ ಅವರ ಕಾನ್ಸೆಪ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದು ನೈಸರ್ಗಿಕ ವಿಪತ್ತನ್ನು ವೈಭವೀಕರಿಸುತ್ತದೆ ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ನಟಿ ಅದಿತಿ ಸಿಂಗ್ ಹಾಗು ಫೋಟೋಗ್ರಾಫರ್ ಸುರಭ್ ತಮಗನಿಸಿದ ಅಭಿಪ್ರಾಯವನ್ನು ಫೋಟೋ ಮೂಲಕ ಜನರಿಗೆ ತಿಳಿಸಲು ಮುಂದಾಗಿದ್ದಾರಂತೆ. ಆದರೆ ಅದನ್ನು ನೋಡಿದ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here