ಮಕ್ಕಳಿಗೆ ಬ್ರೆಡ್ಡು, ತರಕಾರಿ ನೀಡ್ತಿದ್ದ ವ್ಯಕ್ತಿ, ಖರ್ಚಿಲ್ಲದೆ ಸಂಸದರಾಗಿದ್ದಾದ್ರೂ ಹೇಗೆ?

0
1239

ರಾಜಕೀಯ ಅಂದ್ರೆ ಹೆಚ್ಚಾಗಿ ಅದರಲ್ಲಿ ಓಡಾಡೋದು ಹಣ. ಹೌದು. ರಾಜಕೀಯದಲ್ಲಿ ಹಣ ಇಲ್ಲ ಅಂದ್ರೆ ಏನು ಆಗಲ್ಲ. ಆದ್ರೆ ಹಿಂದಿನ ಕಾಲದಲ್ಲಿ ಈ ರೀತಿ ಇರಲಿಲ್ಲ. ಮೊದಲು ಯಾರಾದ್ರೂ ಚುನಾವಣೆಗೆ ನಿಲ್ಲಬೇಕು ಅಂದ್ರೆ, ಅವರಿಗಿರುವ ಗುಣವೊಂದೇ ಸಾಕಾಗಿತ್ತು. ಯಾಕಂದ್ರೆ ಆಗಿನ ನಾಯಕರು ಒಳಿತು ಮಾಡುವ ವಿಷಯದಲ್ಲಿ ತುಂಬಾ ಮುಂದಿದ್ದರು . ಹಾಗಾಗಿ ಜನರು ಯೋಚನೆ ಮಾಡದೇ, ಮತ ಹಾಕಿ, ತಮ್ಮ ನಾಯಕನನ್ನ ಗೆಲ್ಲಿಸುತ್ತಿದ್ದರು. ಆದ್ರೆ ಈಗ ಹೇಗಾಗಿದೆ ಅಂದ್ರೆ, ನಮ್ಮ ನಾಯಕನನ್ನ ಆರಿಸಬೇಕು ಅಂದ್ರೆ, ಅದಕ್ಕೆ ನೂರು ಬಾರಿ ಅಲ್ಲ, ಸಾವಿರ ಬಾರಿ ಯೋಚನೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಅಂತ ಚುನಾವಣೆ ನಮ್ಮಲ್ಲಿ ನಡೆಯುತ್ತೆ. ಈಗಿನ ಕಾಲದ ಚುನಾವಣೆಯಲ್ಲಿ ಮನುಷ್ಯನಿಗಿಂತ, ದುಡ್ಡು, ಕಾಸು ಹೆಚ್ಚಾಗಿ ಓಡಾಡೋದೇ ಆಗ್ತಿದೆ.

ಹೌದು. ಈಗಿನ ಕಾಲದಲ್ಲಿ ಹಣವಿಲ್ಲ ಅಂದ್ರೆ, ಯಾರಿಗೆ, ಯಾರು ಬೆಲೆ ಕೊಡಲಾರದಂತ ಪರಿಸ್ಥಿತಿ ಬಂದಿದೆ. ಇನ್ನೂ ರಾಜಕೀಯದಲ್ಲಿ ನೋಡೋಕೋದ್ರೆ, ಹಣ ಇರಲೇ ಬೇಕು. ಇಲ್ಲ ಅಂದ್ರೆ ಯಾರು ಅವರನ್ನ ಹತ್ತಿರಕ್ಕೂ ಸೇರಿಸುವುದಿಲ್ಲ. ಆದರೆ ಎಲ್ಲೋ ಕೆಲವರು ಗುಣಕ್ಕೆ ಬೆಲೆ ಕೊಡುವವರು ಇರ್ತಾರೆ. ಅವರು ಮನುಷ್ಯನ ಮನಸ್ಸನ್ನ ಮಾತ್ರ ನೋಡುತ್ತಾರೆ. ಅಂಥವರಿಗೆ ಒಂದು ಅವಕಾಶ ಕೊಟ್ಟು, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡ್ತಾರೆ. ಅವರನ್ನ ಗೆಲ್ಲಿಸಿ, ತಮ್ಮ ನಾಯಕನನ್ನಾಗಿ, ಮಾಡಿ, ತಮ್ಮ ಕಷ್ಟ ಕಾರ್ಪಣ್ಯಗಳನ್ನ ಹಂಚಿಕೊಳ್ಳುತ್ತಾರೆ. ಈಗ ಅದೇ ರೀತಿ ಇಲ್ಲೊಬ್ಬರು ಒಂದು ರೂಪಾಯಿ ದುಡ್ಡು ಖರ್ಚು ಮಾಡದೇ, ದೊಡ್ಡ ಶ್ರೀಮಂತ ರಾಜಕಾರಣಿಯನ್ನ ಸೋಲಿಸಿ, ಇವರು ಗೆದ್ದಿದ್ದಾರೆ.

ಶ್ರೀಮಂತ ಅಭ್ಯರ್ಥಿಯನ್ನ ಸೋಲಿಸಿದ ಸನ್ಯಾಸಿ

ನಿಜಕ್ಕೂ ಈ ಬಾರಿಯ ಲೋಕಸಭಾ ಚುನಾವಣೆ ಎಲ್ಲರಿಗೂ ವಿಶೇಷವಾಗಿದೆ. ಯಾಕಂದ್ರೆ ಸೋಲನ್ನೇ ಕಾಣದಿರುವಂತಹ ಘಟಾನುಘಟಿಗಳು ಸೋಲನ್ನ ಕಂಡಿದ್ದಾರೆ. ಅಲ್ಲದೇ ಎರಡು ರಾಷ್ಟೀಯ ಪಕ್ಷಗಳು ಒಟ್ಟಿಗೆ ಇದ್ದರೂ, ಕೇವಲ 2 ಮತಗಳನ್ನ ಮಾತ್ರ ಪಡೆದಿವೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆ ಬಹಳ ವಿಶೇಷವಾಗಿದೆ. ಈಗ ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯು ಕೂಡ, ವಿಶೇಷವಾಗಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೌದು. ನೋಡೋಕೆ ಸನ್ಯಾಸಿಯಂತಿರುವ ಇವರು, ದೊಡ್ಡ ಶ್ರೀಮಂತ ರಾಜಕಾರಣಿಯನ್ನ ಸೋಲಿಸಿದ್ದಾರೆ. ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಖರ್ಚಿಲ್ಲದೆ ಚುನಾವಣೆಯಲ್ಲಿ ಗೆದ್ದಿರುವ ಸನ್ಯಾಸಿ

ಇವರ ಹೆಸರು ಪ್ರತಾಪ್ ಚಂದ್ರ ಸಾರಂಗಿ. ಇವರು ಮೂಲತಃ ಒಡಿಸ್ಸಾದ ಬಾಲಾಸೋರ್ ಜಿಲ್ಲೆಯವರು. ಮೊದಲು ಇವರು ಇಲ್ಲಿ, ಒಬ್ಬ ಸಾಮಾನ್ಯ ವ್ಯಕ್ತಿ. ಎಲ್ಲರ ಜೊತೆ, ಕೂತು ಕಷ್ಟ, ಸುಖ ಮಾತಾಡ್ತಿದ್ರು. ಜೊತೆಗೆ ತನ್ನ ಕೆಲಸ ತಾನೇ ಮಾಡಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ ಮಕ್ಕಳಿಗೆ ತರಕಾರಿ, ಬ್ರೆಡ್ಡು ಇನ್ನಿತರ ತಿನ್ನುವ ವಸ್ತುಗಳನ್ನ ನೀಡಿ, ಜನಸೇವೆ ಮಾಡುತ್ತಿದ್ದರು. ಇವರಿಗೆ ಜನಸೇವೆ ಒಂದು ಬಿಟ್ಟರೆ ಬೇರೆ ಏನು ಗೊತ್ತಿರಲಿಲ್ಲ. ಅದರಲ್ಲೂ ಈ ಚುನಾವಣೆ ಅನ್ನೋದೆಲ್ಲ ಇವರಿಗೆ ದೂರದ ಮಾತು. ಹೀಗಿರುವಾಗ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತದೆ. ಹೌದು. ಬಿಜೆಪಿ ಅಭ್ಯರ್ಥಿಯಾಗಿ ಬಾಲಾಸೋರ್ ನಲ್ಲಿ ಕಣಕ್ಕೆ ಇಳಿಯುತ್ತಾರೆ. ಇವರ ಬಳಿ ಒಂದು ರೂಪಾಯಿಯೂ ಸಹ ಇರುವುದಿಲ್ಲ. ಆದರೂ ಚುನಾವಣೆಗೆ ನಿಲ್ಲುತ್ತಾರೆ.

ಸತತ ಗೆಲುವು ಕಾಣುತ್ತಿದ್ದ ವ್ಯಕ್ತಿಯನ್ನ ಸೋಲಿಸಿದ್ದಾರೆ

ಬಾಲಾಸೋರ್ ನಲ್ಲಿ ಸಾಮಾನ್ಯವಾಗಿ ಯಾವಾಗಲೂ ಬೀಜು ಜನತಾ ದಳ ಅಧಿಕಾರಕ್ಕೆ ಬರುತ್ತಿತ್ತು. ಅದರಲ್ಲಿ ರಬಿನ್ದ್ರ ಕುಮಾರ್ ಜೇನಾ ಅವರು ಗೆಲ್ಲುತ್ತಿದ್ದರು. ಆದ್ರೆ ಈ ಬಾರಿ ಇವರ ವಿರೋಧವಾಗಿ ನಿಂತಿದ್ದವರು ಈ ಪ್ರತಾಪ್ ಚಂದ್ರ ಸಾರಂಗಿ ಅವರು. ಇಂತ ಒಬ್ಬ ಶ್ರೀಮಂತ ಅಭ್ಯರ್ಥಿಯನ್ನ, ಒಂದು ರೂಪಾಯಿಯೂ ಇಲ್ಲದೆ, ಸುಮಾರು 15 ಸಾವಿರ ಮತಗಳ ಅಂತರದಿಂದ ಸೋಲಿಸಿ, ದಾಖಲೆ ಸೃಷ್ಟಿಸಿದ್ದಾರೆ. ಹೌದು. ಇವರನ್ನ ಕಣಕ್ಕೆ ಇಳಿಸಿದ್ದು, ಸ್ವತಃ ಮೋದಿಯವರೇ. ಇವರು ಮಾಡುವ ಜನಸೇವೆಯನ್ನ ನೋಡಿದ ಮೋದಿಯವರು, ಇವರನ್ನ ಕಣಕ್ಕಿಳಿಸಿ ಗೆಲುವಿನ ನಗೆ ಬೀರಿದ್ದಾರೆ. ಜೊತೆಗೆ ಎಲ್ಲರಲ್ಲೂ ಆಶ್ಚರ್ಯ ಹುಟ್ಟಿಸಿದ್ದಾರೆ.

ನಿಜಕ್ಕೂ ಇದನ್ನೆಲ್ಲಾ ನೋಡಿದಾಗ ಒಂದು ಕ್ಷಣ ಆಶ್ಚರ್ಯವಾಗುತ್ತೆ. ಯಾಕಂದ್ರೆ ಬ್ರೆಡ್ಡು, ತರಕಾರಿ ನೀಡುತ್ತಾ ಸಾಮಾನ್ಯವಾಗಿದ್ದ ವ್ಯಕ್ತಿ ಈಗ ಸಂಸದರಾಗಿದ್ದಾರೆ. ಅದು ಮೋದಿಯವರೇ ಆಸೆ ಪಟ್ಟು ಕಣಕ್ಕಿಳಿಸಿದ್ದಾರೆ. ಜೊತೆಗೆ ಅವರಿಗೆ ಗೆಲ್ಲುವಂತೆ ಪ್ರೋತ್ಸಾಹ ನೀಡಿದ್ದಾರೆ

LEAVE A REPLY

Please enter your comment!
Please enter your name here