ಪ್ರಹ್ಲಾದ್ ಜೋಷಿ ಅವರಿಗೆ ಕಲ್ಲಿದ್ದಲು ಹಾಗೂ ಗಣಿಕಾರಿಕೆ ಅಧಿಕಾರ ನೀಡಿದ್ದಾದ್ರೂ ಏಕೆ?

0
763
prahlad joshi

ಸೋಲು, ಗೆಲುವು ಎಲ್ಲಿರಲ್ಲ ಹೇಳಿ. ಎಲ್ಲಾ ಕ್ಷೇತ್ರದಲ್ಲಿ ಅದು ಸಾಮಾನ್ಯ. ಆದರೆ ಈ ರಾಜಕೀಯದಲ್ಲಿ ನಡೆಯೋ ಚದುರಂಗದ ಆಟ ಮಾತ್ರ, ಬಹಳ ವಿಶೇಷವಾಗಿರುತ್ತದೆ. ಹೌದು. ಸೋಲು, ಗೆಲುವು ಅಂದ್ರೆ ಹೇಗಿರುತ್ತೆ ಅಂತ ರಾಜಕೀಯದಲ್ಲಿ ನೋಡಿ, ತಿಳಿಯಬೇಕು. ಯಾಕಂದ್ರೆ ನಿಜವಾದ ಸೋಲು, ಗೆಲುವು ತಿಳಿಯುವುದು ಇದರಲ್ಲೇ. ರಾಜಕಾರಣಿಗಳಿಗೆ ಇರೋದು ಒಂದೇ ಆಸೆ. ಜೀವನದಲ್ಲಿ ಸೋತರು ಪರವಾಗಿಲ್ಲ, ಆದರೆ ಚುನಾವಣೆಯಲ್ಲಿ ಮಾತ್ರ ಸೋಲಬಾರದು ಅಂತಾರೆ. ಹಾಗಾಗಿ ಬಹಳಷ್ಟು ಕಷ್ಟ ಪಟ್ಟು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆದ್ರೆ ಸೋಲು, ಗೆಲುವು ಮಾತ್ರ ಮತದಾರನಿಗೆ ಸೇರಿರುತ್ತದೆ.

ಅದೇ ರೀತಿ ನಮ್ಮಲ್ಲಿ ಸೋಲನ್ನೇ ಕಾಣದಿರುವಂತಹ ಸರದಾರರು ಇದ್ದಾರೆ. ಆದ್ರೆ ಅವರೆಲ್ಲಾ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲನ್ನ ಕಾಣುವುದರ ಮೂಲಕ, ಸೋಲು ಅಂದ್ರೆ ಹೇಗಿರುತ್ತದೆ ಎಂದು ತಿಳಿದಿದ್ದಾರೆ. ಆದ್ರೆ ಇನ್ನೂ ಕೆಲವರು ಈಗಲೂ ವಿಜಯ ಪತಾಕೆ ಹಾರಿಸಿದ್ದಾರೆ. ಹೌದು. ಸೋಲನ್ನ ಕಾಣದಿರುವ ಇನ್ನೂ ಕೆಲವರು ಈ ಬಾರಿಯೂ ಸಹ ಗೆದ್ದು ನಗುವಿನ ಮುಖ ಬೀರಿದ್ದಾರೆ. ಅವರ ಸಾಲಿಗೆ ಪ್ರಹ್ಲಾದ್ ಜೋಷಿ ಸೇರುತ್ತಾರೆ.

ಸೋಲಿಲ್ಲದ ಸರದಾರ ಎಂಬ ಬಿರುದನ್ನ ಪಡೆದಿರುವ ನಾಯಕ

ತಮ್ಮ ನಾಯಕ ಯಾರಿದ್ದರೆ ನಮ್ಮ ದೇಶ ಅಭಿವೃದ್ಧಿಯಾಗುತ್ತದೆ ಅನ್ನೋದು ಜನರಿಗೆ ಗೊತ್ತಿರುತ್ತದೆ. ಹಾಗಾಗಿ ಜನರು ಅಂಥವರನ್ನೇ ಆಯ್ಕೆ ಮಾಡುತ್ತಾರೆ. ಅದರಂತೆ ದೇಶದ ಪ್ರಧಾನಿಯಾಗಿ ಮೋದಿಯವರನ್ನ ಆಯ್ಕೆ ಮಾಡಿ, ಅವರನ್ನ ಗೆಲ್ಲಿಸಿದ್ದಾರೆ. ಯಾಕಂದ್ರೆ ಮೋದಿಯವರು ನಿಜಕ್ಕೂ ಸಮಾಜದ ಒಳಿತಿಗಾಗಿ ಶ್ರಮಿಸುವ ವ್ಯಕ್ತಿ ಎಂಬುದು ಜನರ ಅನಿಸಿಕೆ. ಹಾಗಾಗಿ ದೇಶದ ಉದ್ಧಾರಕ್ಕಾಗಿ ಅವರನ್ನ ಗೆಲ್ಲಿಸಿದ್ದಾರೆ. ಇನ್ನೂ ದೇಶದ ಉದ್ಧಾರಕ್ಕೇನೋ ಅವರಾದರೂ, ಆದ್ರೆ ಊರು ಉದ್ದಾರಕ್ಕೂ ಯಾರಾದ್ರೂ ಒಬ್ರು ಬೇಕಾಗುತ್ತೆ ಅಲ್ವಾ, ಹಾಗಾಗಿ ಒಂದೊಂದು ಜಿಲ್ಲೆಯು ಸಹ ತಮಗೆ ಬೇಕಾದ ನಾಯಕನನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಧಾರವಾಡದಲ್ಲೂ ಸಹ ಒಬ್ಬ ಜನನಾಯಕರಿದ್ದಾರೆ. ಅವರೇ ಈ ಪ್ರಹ್ಲಾದ್ ಜೋಷಿ. ಇವರನ್ನ ಇಲ್ಲಿನ ಜನತೆ ಸೋಲಿಲ್ಲದ ಸರದಾರ ಎಂದು ಕರೆಯುತ್ತಾರೆ. ಯಾಕಂದ್ರೆ ಇವರಿಗೆ ಇಲ್ಲಿನ ಜನತೆ ಸೋಲನ್ನ ತಿಳಿಯುವುದಕ್ಕೆ ಬಿಟ್ಟಿಲ್ಲ.

ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ ಸ್ಥಾನ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನವಲಗುಂದ ಜನತೆ ಪ್ರಹ್ಲಾದ್ ಜೋಷಿ ಅವರನ್ನ ಭಾರಿ ಮತಗಳಿಂದ ಗೆಲ್ಲಿಸಿದ್ದಾರೆ. ಯಾಕಂದ್ರೆ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವವರು ಅವರಾಗಿದ್ದಾರೆ. ಹಾಗಾಗಿ ಜನತೆ ಅವರನ್ನ ಕೈ ಹಿಡಿದಿದೆ. ಆದರೆ ಅದಕ್ಕಿಂತ ಸಂತೋಷ ಏನಂದ್ರೆ, ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದು. ಹೌದು. ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ ಮಂತ್ರಿ ಅವರಾಗಿದ್ದಾರೆ. ಇಂದು ಸಚಿವರ ಹೆಸರನ್ನ ಬಹಿರಂಗಪಡಿಸುವಾಗ, ಪ್ರಹ್ಲಾದ್ ಜೋಷಿ ಅವರಿಗೆ ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ ಸ್ಥಾನ ನೀಡಿರುವುದು, ನಿಜಕ್ಕೂ ಅವರಿಗೆ ಸಂತಸದ ಸುದ್ದಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಮಂತ್ರಿ ಸ್ಥಾನ ಪಡೆದುಕೊಂಡಿರುವುದು ಎಲ್ಲಕ್ಕಿಂತ ಹೆಮ್ಮೆಯ ವಿಷಯವಾಗಿದೆ

ಈ ಬಾರಿಯ ಮಂತ್ರಿಗಿರಿ ಪಡೆದ ಹೆಗ್ಗಳಿಕೆಗೆ ಪ್ರಹ್ಲಾದ್ ಜೋಷಿ ಅವರು ಸಹ ಪಾತ್ರರಾಗಿದ್ದಾರೆ. ಈ ಮೊದಲು ಅವರು ಎಷ್ಟರ ಮಟ್ಟಿಗೆ ಜನರ ಉದ್ಧಾರಕ್ಕಾಗಿ ಶ್ರಮಿಸಿದ್ದರೋ, ಅದೇ ರೀತಿ ಇನ್ಮುಂದೆಯೂ ಶ್ರಮಿಸುತ್ತಾರೆ ಅನ್ನೋ ನಂಬಿಕೆ ಜನತೆ ಅವರ ಮೇಲೆ ಇಟ್ಟಿದ್ದಾರೆ.

LEAVE A REPLY

Please enter your comment!
Please enter your name here