ನಿರೂಪಕರಲ್ಲಿ ಯಾರು ಇಷ್ಟ ಎನ್ನುವ ಪ್ರಶ್ನೆಗೆ ಅಪ್ಪು ಕೊಟ್ಟ ಉತ್ತರ

0
693

ಬೆಳ್ಳಿತೆರೆಯಲ್ಲಿ ನಟನೆ ಮಾಡುವುದಲ್ಲದೆ ಸ್ಟಾರ್ ನಟರು ಕಿರುತೆರೆಯಲ್ಲು ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ಕಾರ್ಯಕ್ರಮಗಳನ್ನು ಅದ್ಬುತವಾಗಿ ನಡೆಸಿಕೊಡುತ್ತಿದ್ದಾರೆ. ರಮೇಶ್ ಅರವಿಂದ್ ಅವರು ನಿರೂಪಿಸುತ್ತಿರುವ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಸಾಧಕರ ಜೊತೆ ಮಾತನಾಡುವ ರೀತಿ, ಅವರನ್ನು ಕೇಳುವ ಪ್ರಶ್ನೆಗಳು, ಸನ್ನಿವೇಶಗಳನ್ನು ವಿವರಿಸುವ ಒಂದು ಶೈಲಿ ನೋಡುಗರರನ್ನು ಆಕರ್ಷಿಸುತ್ತದೆ. ಸ್ಟಾರ್ ನಟರನ್ನು ಹೊರತು ಪಡಿಸಿ ಖ್ಯಾತರಾಗುವ ನಿರೂಪಕರೆಂದರೆ ಅನುಶ್ರೀ. ಸರಿಗಮಪ ಸಂಗೀತ ಕಾರ್ಯಕ್ರಮವನ್ನು ಬಹಳ ವರ್ಷಗಳಿಂದ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಸಂಗೀತ ಕಾರ್ಯಕ್ರಮ ಜನಪ್ರಿಯವಾದ ಕಾರ್ಯಕ್ರಮವೆಂದೆ ಗುರುತಿಸಿಕೊಂಡಿದೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಕರಾಗಿ ಕೆಲಸ ಮಾಡಿದ್ದರು

ಅಕೂಲ್ ಬಾಲಾಜಿ ಅವರು ಸಹ ಅನೇಕ ಟಿ‌ವಿ ಶೋ ಗಳನ್ನು ನಡೆಸಿಕೊಟ್ಟಿದ್ದಾರೆ. ಪ್ಯಾಟೆ ಹುಡುಗೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೆಗ್ ಬಂದ, ಡ್ಯಾನ್ಸಿಂಗ್ ಸ್ಟಾರ್ ಹೀಗೆ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಇತ್ತೀಚಿಗಷ್ಟೆ ಅನುಶ್ರೀ ಹೊಸ ಯು ಟ್ಯೂಬ್ ಚಾನಲ್ ಅನ್ನು ತೆರೆದಿದ್ದಾರೆ. ಸ್ಟಾರ್ ನಟ ನಟಿಯರನ್ನು, ಸಿನಿಮಾದ ಕಲಾವಿದರನ್ನು ಸಂದರ್ಶನ ಮಾಡಿರುವಂತಹ ವೀಡಿಯೋ ಗಳನ್ನು ಚಾನಲ್ ಗೆ ಅಪ್ಲೋಡ್ ಮಾಡಿದ್ದು, ಹೆಚ್ಚು ಜನರು ಈ ಚಾನಲ್ ಅನ್ನು ಫಾಲೋ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಕರಾಗಿ ಕೆಲಸ ಮಾಡಿದ್ದರು. ಆನಂತರ ರಮೇಶ್ ಅರವಿಂದ್ ಈ ಕಾರ್ಯಕ್ರಮದ ನಿರೂಪಕರ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ.

ಯಾರ ನಿರೂಪಣೆ ನಿಮಗೆ ಇಷ್ಟವಾಗುತ್ತದೆ

ಕನ್ನಡದ ಕೋಟ್ಯಾಧಿಪತಿಯ ಹೊಸ ಆವೃತ್ತಿಯ ಮುಖಾಂತರ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಕಮ್ ಬ್ಯಾಕ್ ಮಾಡಿದ್ದಾರೆ. ಈಗಾಗಲೆ ಕಾರ್ಯಕ್ರಮದ ಪ್ರೋಮೊ ಹೊರ ಬಿದ್ದಿದ್ದು, ಅಪ್ಪು ಮತ್ತೆ ಅದೇ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಸ್ಪರ್ಧಿಗಳ ಹತ್ತಿರ ಸಂತಸದಿಂದ ಮಾತನಾಡುತ್ತಿರುವ ಕೆಲ ದೃಶ್ಯಗಳು ಟಿ‌ವಿ ನಲ್ಲಿ ಪ್ರಸಾರವಾಗುತ್ತಿದೆ. ಹೀಗೆ ಹಲವಾರು ಸ್ಟಾರ್ ನಟರು ಅಥವಾ ನಿರೂಪಕರು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಆದರೆ ಈಗಿನ ನಿರೂಪಕರಲ್ಲಿ ಯಾರ ನಿರೂಪಣೆ ನಿಮಗೆ ಇಷ್ಟವಾಗುತ್ತದೆ ಎನ್ನುವ ಪ್ರಶ್ನೆ ಪುನೀತ್ ಅವರಿಗೆ ಎದುರಾಗಿದೆ. ಪುನೀತ್ ಅವರು ಬಹಳ ಚೆನ್ನಾಗಿ ಉತ್ತರವನ್ನು ನೀಡಿದ್ದಾರೆ.

ಯಾವುದೆ ಭೇದ ಭಾವವಿಲ್ಲದೆ ಆರೋಗ್ಯಕರವಾಗಿ ಉತ್ತರವನ್ನು ನೀಡಿದ್ದಾರೆ

ನಾನು ಎಲ್ಲರ ಆಂಕರಿಂಗ್ ನೋಡಿದ್ದೇನೆ. ಸುದೀಪ್ ಮತ್ತು ರಮೇಶ್ ಅರವಿಂದ್ ಅದ್ಬುತ. ಅನುಶ್ರೀ, ಸೃಜನ್ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಯಾವುದೆ ಭೇದ ಭಾವವಿಲ್ಲದೆ ಆರೋಗ್ಯಕರವಾಗಿ ಉತ್ತರವನ್ನು ನೀಡಿದ್ದಾರೆ. ಹೀಗೆ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಹಲವಾರು ಪ್ರಶ್ನೆಗಳು ಅಪ್ಪು ಗೆ ಸ್ಪರ್ದಿಗಳು ಕೇಳುತ್ತಲೇ ಇರುತ್ತಾರೆ. ಅಪ್ಪು ಸಹ ಸ್ಪರ್ದಿಗಳು ಕೇಳಿದ ಪ್ರಶ್ನೆಗಳಿಗೆ ಸಂತಸದಿಂದ ಉತ್ತರವನ್ನು ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here